HomeNew postskalaburagi news: ಕಲಬುರಗಿಯಲ್ಲಿ ರೈತರ ಜೀವಕ್ಕೆ ಕುತ್ತು ತಂದ ಕ್ರಿಮಿನಾಶಕ ಸಿಂಪರಣೆ! ಕೃಷಿ ಇಲಾಖೆಯಿಂದ ಮುನ್ನೆಚ್ಚರಿಕೆ...

kalaburagi news: ಕಲಬುರಗಿಯಲ್ಲಿ ರೈತರ ಜೀವಕ್ಕೆ ಕುತ್ತು ತಂದ ಕ್ರಿಮಿನಾಶಕ ಸಿಂಪರಣೆ! ಕೃಷಿ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಪ್ರಕಟ.

kalaburagi news: ರೈತರು ತಾವು ಬೆಳೆದ ಬೆಳೆಗಳನ್ನು ಹಲವು ಬಗ್ಗೆಯ ರೋಗಗಳಿಂದ ಮತ್ತು ಕ್ರಿಮಿ-ಕೀಟಗಳಿಂದ ರಕ್ಷಿಸಿಕೊಳ್ಳಲು ಕೀಟ-ರೋಗನಾಶಕದ ಮೊರೆಹೋಗುತ್ತಾರೆ.ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ಕಳೆನಾಶಕಗಳ ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಆದರೆ ಕ್ರಿಮಿನಾಶಕದ ಬಳಕೆ ಮಾಡುವ ಸಂದರ್ಭದಲ್ಲಿ ರೈತರು ಸರಿಯಾಗಿ ಜಾಗೃತಿವಹಿಸದೇ ಇರುವುದರಿಂದ ಅನೇಕ ರೈತರ ಜೀವಕ್ಕೆ ಕುತ್ತು ತರುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ ಓರ್ವ ರೈತ ವಾರದ ಹಿಂದೆ ಮೃತಪಟ್ಟಿದ್ದರೆ, ಇದೀಗ ಮತ್ತೆ ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆರ್​ ಬಿ ನಗರ ತಾಂಡಾದ  ನಾಲ್ವರು ರೈತರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆರ್​ ಬಿ ನಗರ ತಾಂಡಾದ ನಾಲ್ವರು ರೈತರ ದೇಹದೊಳಗೆ ಕ್ರಿಮಿನಾಶಕ ಸೇರಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸುನೀಲ್ ಜಾಧವ್(34), ಅನೀಲ್ ಜಾಧವ್(22), ಕುಮಾರ್(30) ಮತ್ತು ಖೇಮು ರಾಠೋಡ್(32) ಅಸ್ವಸ್ಥರಾಗಿದ್ದಾರೆ. ನಾಲ್ವರು ಕೂಡ ಒಂದೇ ಕುಟುಂಬದವರಾಗಿದ್ದು, ಕಳೆದ ಗುರುವಾರ ತಮ್ಮ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೋಗಿದ್ದರು. ಹತ್ತಿ ಎಲೆಗಳಿಗೆ ಬರುವ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗಾಗಿ ಸಿಂಪಡಣೆ ಮಾಡಿದ್ದರು.

ಇದನ್ನೂ ಓದಿ: Annabhagya DBT Status: “ಅನ್ನಭಾಗ್ಯ ಯೋಜನೆ” ರೂ 240 ಕೋಟಿ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ವರ್ಗಾವಣೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ, ಮಾರನೇ ದಿನದಿಂದ ನಾಲ್ವರಿಗೂ ಕೂಡ ವಾಂತಿ ಭೇದಿ, ತಲೆಸುತ್ತು ಆರಂಭವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡಾ, ಚಿಕಿತ್ಸೆ ಪಲಕಾರಿಯಾಗಿಲ್ಲ. ಹೀಗಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರನ್ನೂ ತೀರ್ವ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ರೈತರಿಗೆ ಕೃಷಿ ಇಲಾಖೆಯಿಂದ ಹೊರಡಿಸಿರುವ ಮುನ್ನೆಚ್ಚರಿಕೆ ಪ್ರಕಟಣೆಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಚಿತ್ತಾಪೂರ,ಕಾಳಗಿ, ಶಹಾಬಾದ ತಾಲ್ಲೂಕಿನ ಎಲ್ಲಾ ಗ್ರಾಮದ ರೈತ ಬಾಂಧವರಲ್ಲಿ ಮನವಿ ಮಾಡಿಕೋಳ್ಳವದೆನೆಂದರೆ ಈಗಾಗಲೆ ಕೆಲವು ಹಳ್ಳಿಗಳಲ್ಲಿ ತೊಗರಿ,ಹತ್ತಿ ಹಾಗೂ ಇತರೆ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷದಿಗಳನ್ನು ಸಿಂಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ರೈತರು ಸಸ್ಯ ಸಂರಕ್ಷಣಾ ಔಷದಿಗಳನ್ನು (ಕಿಟನಾಶಕಗಳನ್ನು) ಸಿಂಪರಣೆ ಮಾಡುವಾಗ ಕಡ್ಡಾಯವಾಗಿ ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಆನುಸರಿಸಬೇಕಾಗಿ ಎಲ್ಲಾ ರೈತ ಬಾಂಧವರಲ್ಲಿ ಕೃಷಿ ಇಲಾಖೆಯಿಂದ ಮನವಿ ಮಾಡಿಕೊಳ್ಳಲಾಗಿದೆ.

ಕೀಟನಾಶಕಗಳ ಸಿಂಪರಣೆಗೆ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು :

1. ಔಷದಿ ಡಬ್ಬಿಯ ಚೀಟಿಯಲ್ಲಿರುವ ಸಲಹೆಗಳನ್ನು ಎಚ್ಚರಿಕೆಯಿಂದ ಓದಿರಿ. 

2. ಸಿಂಪರಣೆಗೆ ಮುಂಚೆ ಅಗತ್ಯವಿರುವ ಎಲ್ಲಾ ಸೂಚನೆಗಳನ್ನು ಪಡೆದುಕೊಳ್ಳಿ.

3. ಅವಧಿ ಮೀರಿದ ಪೀಡೆನಾಶಕಗಳನ್ನು ಖರೀದಿಸಬಾರದು ಮತ್ತು ಬಳಸಬಾರದು.

4. ಪೀಡೆನಾಶಕಗಳನ್ನು ಖರೀದಿಸುವಾಗ ಪಾವತಿಯನ್ನು ಅಗತ್ಯವಾಗಿ ಪಡೆಯಿರಿ.

5. ಸಿಂಪರಣಾ ನಾಝಲ್ ರಂಧ್ರ ಕಟ್ಟಿದಾಗ ಬಾಯಿಯಿಂದ ಊದಬೇಡಿರಿ.

6. ಸಿಂಪರಣೆಗೆ ಯಾವ ರೀತಿಯಲ್ಲಿ ಕೈಗೊಳ್ಳಬೇಕೆಂಬ ಉಪಾಯವನ್ನು ನಿಶ್ಚಯಿಸಿ,

7. ವಿಷದ ಡಬ್ಬಿಯನ್ನು ಜಾಗರೂಕತೆಯಿಂದ, ಗುಳು ಗುಳು ಶಬ್ದ ಮಾಡದ ಹಾಗೂ ಅದರಿಂದ ವಿಷ ಚೆಲ್ಲದಂತೆ ಎಚ್ಚರವಹಿಸಿ ತೆಗೆಯಿರಿ.

ಇದನ್ನೂ ಓದಿ: Basaraga Ghoshane taluk list-2023: ರಾಜ್ಯ ಸರಕಾರದಿಂದ ಮತ್ತೆ ಹೊಸ 21 ತಾಲೂಕುಗಳ ಬರಪೀಡಿತ ಘೋಷಣೆ ಪಟ್ಟಿ ಬಿಡುಗಡೆ!

8. ವಿಷಯುಕ್ತ ಬಾಟಲಿಯ ಮುಚ್ಚಳವನ್ನು ಎಚ್ಚರದಿಂದ ತೆಗೆಯಿರಿ.

9. ಹೊರ ಆವರಣ (ಅಂಗಳ) ಮತ್ತು ಸರಿಯಾಗಿ ಗಾಳಿಯಾಡುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಮಿಶ್ರ ಮಾಡಿರಿ (ಆ ಸಮಯಕ್ಕೆ ಬೇಕಾದ ಪ್ರಮಾಣದ ವಿಷವನ್ನು ಮಾತ್ರ ಮಿಶ್ರಣ ಮಾಡಿ.)

10. ಹೆಚ್ಚಿನ ಗಾಳಿ ಒತ್ತಡದಿಂದ ಅನಗತ್ಯವಾಗಿ ಗಾಳಿಯಲ್ಲಿ ಹೋಗುವ ವಿಷವಸ್ತು ತಡೆಯಲು ಸಿಂಪರಣೆಗೆ ಸೂಕ್ತ ವಾತಾವರಣ ವಿದೆಯೋ ಇಲ್ಲವೂ ಪರೀಕ್ಷಿಸಿ.

11. ಗಾಳಿ ಇರುವಾಗ ಪೀಡೆ ನಾಶಕಗಳನ್ನು ಮಿಶ್ರಣ ಮಾಡುವುದಾಗಲಿ ಅಥವಾ ಯಂತ್ರದಲ್ಲಿ ತುಂಬುವುದಾಗಲಿ ಮಾಡಬಾರದು.

12 ಎರಡು ಅಥವಾ ಎರಡಕ್ಕಿಂತ ಹೆಚ್ಚು ಕೃಷಿ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಅವು ಯಾವುದೇ ರಾಸಾಯನಿಕ ಕ್ರಿಯೆಗೆ ಒಳಗಾಗದೆ ಹೊಂದಿಕೊಳ್ಳುವಂತಿರಬೇಕು.

13 ನೇರವಾಗಿ ಕೈಯಿಂದ ಪೀಡೆನಾಶಕಗಳನ್ನು ಮಿಶ್ರಣ ಮಾಡಬೇಡಿರಿ ಅದಕ್ಕಾಗಿ ಕೋಲು ಉಪಯೋಗಿಸಿರಿ,

14.ಕೃಷಿ ರಾಸಾಯನಿಕಗಳನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಿರಿ.

15. ಸಿಂಪರಣೆ ಸಮಯದಲ್ಲಿ ತಿನ್ನುವುದಾಗಲಿ, ಕುಡಿಯುವುದಾಗಲಿ ಅಥವಾ ಧೂಮ್ರಪಾನ ಮಾಡಕೂಡದು.

16. ಪೀಡೆನಾಶಕಗಳನ್ನು ಮಕ್ಕಳು ಮಿಶ್ರಣ ಮಾಡದಂತೆ ತಡೆಯಿರಿ.

17. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಅಥವಾ ಧೂಳೀಕರಣ ಮಾಡಬಾರದು.

18. ಮೋಡ ಹಾಗೂ ಅತಿಯಾದ ತೇವಾಂಶವಿದ್ದಲ್ಲಿ ಪೀಡೆನಾಶಕ ಬಳಸುವುದನ್ನು ಮುಂದೂಡಿ.

19. ಪೀಡೆನಾಶಕವನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ ಉಪಯೋಗಿಸಿ

20 .ನಾವು ಸೇವಿಸುವ ದವಸಧಾನ್ಯಗಳು ಹಾಳಾದ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಪೀಡನಾಶಕ ಸಿಂಪಡಿಸಿ ಜಾನುವಾರುಗಳಿಗೆ ಹಾಕಬೇಡಿ

21. ಮೈಮೇಲೆ ಹುಣ್ಣು ಅಥವಾ ಗಾಯಗಳಿದ್ದಲ್ಲಿ ಪೀಡೆನಾಶಕಗಳನ್ನು ಬಳಸಬೇಡಿ.

22. ಪೀಡೆನಾಶಕಗಳ ಸಿಂಪರಣೆ ಅಥವಾ ಧೂಳಿಕರಣ ಮಾಡುವ ಸಮಯದಲ್ಲಿ ಒಂದು ವೇಳೆ ವಿಷಕಾರದ 
ದುಷ್ಪರಿಣಾಮಗಳು ವ್ಯಕ್ತಿಯಲ್ಲಿ ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ

23.ಎಲ್ಲಾ ರೈತರು ಕಡ್ಡಾಯವಾಗಿ ಮಾಸ್ಕ ಹಾಗೂ ಗ್ಲೌಸ್ (Mask and Hand Gloves) ಹಾಕಿಕೋಂಡ ಸಿಂಪರಣೆ ಮಾಡಬೇಕಾಗಿ ವಿನಂತಿಸಿಕೊಳ್ಳಲಾಗಿದೆ

ಮೇಲೆ ತಿಳಿಸಿದ ಎಲ್ಲಾ ಸಲಹೆಗಳನ್ನು ನಮ್ಮ ರೈತ ಬಾಂಧವರು ಪೀಡೆನಾಶಕಗಳ ಬಳಕೆಯಲ್ಲಿ ಅನುಸರಿಸಿದ್ದಾದರೆ ತಮ್ಮ ಆರೋಗ್ಯ ಕಾಪಾಡಿಕೊಳ್ಳವದರ ಜೊತೆಗೆ ಪೀಡೆನಾಶಕಗಳ ಸಮರ್ಪಕ ಬಳಕೆಯೊಂದಿಗೆ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

ಮುನ್ನೆಚ್ಚರಿಕೆ ಪ್ರಕಟಣೆ ಪ್ರತಿ:

Most Popular

Latest Articles

Related Articles