HomeNew postsSheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

Sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

sheep and goat training: ರಾಯಣ್ಣ ಕುರಿ-ಆಡು ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಕಲ್ಲೋಳಿ ವತಿಯಿಂದ ಕುರಿ-ಆಡು ಸಾಕಾಣಿಕೆ ಪ್ರಾರಂಭಿಸಲು ಆಸಕ್ತಿಯಿರುವವರಿಗೆ ತರಬೇತಿ ನೀಡುವುದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಮಾರ್ಗದರ್ಶನ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ ಮಾಡಲಾಗಿದೆ.

sheep and goat training-2023: ಈ ತರಬೇತಿಯ ಪ್ರಮುಖ ಅಂಶಗಳು ಹೀಗಿವೆ: 

* NLM ಕೇಂದ್ರ ಸರ್ಕಾರದ ಸಬ್ಸಿಡಿ  ಸ್ಕಿಮ ಬಗ್ಗೆ ಪರಿಪೂರ್ಣ ಮಾಹಿತಿ ಮತ್ತು ಅಪ್ಲಿಕೇಶನ್ ಹೇಗೆ, ಎಲ್ಲಿ ಯಾವ ರೀತಿ ಹಾಕಬಹುದು ಅಂತ ತಿಳಿಸಲಾಗುವುದು.
* ಕುರಿ ಮತ್ತು ಆಡು ಸಾಕಾಣಿಕೆ ಲಾಭದಾಯಕವೇ?
* ಕುರಿ-ಆಡು ಸಾಗಾಣಿಕೆಯಲ್ಲಿ ಮೇವಿನ ಮತ್ತು ಆಹಾರದಪಾತ್ರ ಎನು?
* ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಆಗುವ ನಷ್ಟ, ನೇರ ಮಾರುಕಟ್ಟೆ ಹೇಗೆ ಒದಗಿಸುವ ಕ್ರಮ?
* ನುರಿತ ಪಶುವೈದ್ಯ ರಿಂದ ಔಷಧೋಪಚಾರದ ಕ್ರಮ.
* ಮುಂದಿನ ದಿನಮಾನಗಳಲ್ಲಿ ಮಾಂದಸ ಕೊರತೆಯನ್ನು ಹೇಗೆ ನಿಭಾಯಿಸುವ ಸಲುವಾಗಿ NLM ಮುಖಾಂತರ  ಯೋಜನೆಗಳನ್ನು ಹೇಗೆ ಪಡೆಯುವುದು?
* ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ. ಕೊನೆಗೆ ರೈತರ ಜೊತೆಗೆ ಸಂವಾದ ಕಾರ್ಯಕ್ರಮ.

ಈ ತರಬೇತಿ ಕುರಿತು  ಸಂಸ್ಥೆಯ ಮುಖ್ಯಸ್ಥ ಮಾರುತಿ ಮರ್ಡಿ ಮೌರ್ಯ ರವರು ಮಾಹಿತಿ ಹಂಚಿಕೊಂಡಿದ್ದಾರೆ.

sheep and goat training application link- ತರಬೇತಿಗೆ ಅರ್ಜಿ ಸಲ್ಲಿಸಲು ಲಿಂಕ್: Apply Now

ತರಬೇತಿ ಕುರಿತು ಹೆಚ್ಚಿನ ಮಾಹಿತಿಗಾಗಿ:
9900991196( ವಾಟ್ಸಾಪ್ ಮೇಸೆಜ್ ಮಾತ್ರ)

Youtube channel: Click here

ತರಬೇತಿ ಶುಲ್ಕ: ರೂ 2,000/-

ತರಬೇತಿ ಅವಧಿ ಮತ್ತು ಊಟದ ವ್ಯವಸ್ಥೆ ಮಾಹಿತಿ: ಈ ತರಬೇತಿಯು ಒಂದು ದಿನ ಆಯೋಜನೆ ಮಾಡಲಾಗಿದ್ದು ಊಟೋಪಚಾರದ ವ್ಯವಸ್ಥೆ ಇರುತ್ತದೆ.

NLM Scheme– ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ:

ಈ ಯೋಜನೆಯಡಿ ಗಾಮೀಣ ಕುರಿ, ಮೇಕೆ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ಪಡೆಯಬವುದುದಾಗಿದೆ. ಈ ತರಬೇತಿಯಲ್ಲಿ ಇದರ ಕುರಿತು ಮಾಹಿತಿ ಮತ್ತು ಸಹಾಯಧನ ಪಡೆಯಲು ಮಾರ್ಗದರ್ಶನ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಮಾರುತಿ ಮರ್ಡಿ ಮೌರ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: free sewing machine scheme-2023: ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

sheep and goat farming subsidy scheme- ಸಹಾಯಧನ ವಿವರ :

ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25) Entrepreneur in small ruminant sector (Sheep and goat farming) ಘಟಕ ವೆಚ್ಚ ರೂ. 87,30,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಗರಿಷ್ಟ ರೂ.50 ಲಕ್ಷದ  ವರೆಗೆ ಪಡೆಯಬವುದಾಗಿದೆ.

ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳು:

1. ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ/ ಪಾನ್ ಕಾರ್ಡ್.

2. ಸ್ವಂತ ಜಮೀನಿನ ಪಹಣಿ ಅಥವಾ ಲೀಜ್ ಪಡೆದ ಜಮೀನಿನ ಪಹಣಿ,(RTC or Lease Land Agreement )

3. ತರಬೇತಿ ಪ್ರಮಾಣ ಪತ್ರ(Trainig Certificate)

4. ಯೋಜನಾ ವರದಿ (DPR).

5. ಜಿ.ಪಿ. ಎಸ್ ಪೋಟೋ (Site Jio tag Photo.)

6. ಆರು ತಿಂಗಳ ಬ್ಯಾಂಕ್‌ ವಹಿವಾಟು ವರದಿ(6 months Bank Statement. )

7. ಅನುಭವದ ಪ್ರಮಾಣ ಪತ್ರ(Experience Certificate. )

8. ರದ್ದುಗೊಳಿಸಿದ ಬ್ಯಾಂಕ್ ಚೆಕ್(Cancelled Chek leaf.)

9. ಬ್ಯಾಂಕಿನಲ್ಲಿ ನಿಮ್ಮ ಖಾತೆ ಇರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಪತ್ರ(Bank Moudtae form (available in Bank) 

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಜಾಲತಾಣ ಭೇಟಿ ಮಾಡಿ: https://nlm.udyamimitra.in/ ಮತ್ತು https://ahf.karnataka.gov.in/

ಇದನ್ನೂ ಓದಿ: FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.

Most Popular

Latest Articles

Related Articles