HomeNew postsSolar Pumpset subsidy: 1.5 ಲಕ್ಷ ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸಿಸಲು ಅರ್ಜಿ ಆಹ್ವಾನ!

Solar Pumpset subsidy: 1.5 ಲಕ್ಷ ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸಿಸಲು ಅರ್ಜಿ ಆಹ್ವಾನ!

ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ, ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್‍ಸೆಟ್ ಅಳವಡಿಸಲು ಸಹಾಯಧನ ಒದಗಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪ.ಜಾತಿ ಮತ್ತು ಪ.ಪಂಗಡ ಫಲಾನುಭವಿ ರೈತರಿಗೆ ಶೇ.50 ರಷ್ಟು ಸಹಾಯಧನ ಪಡೆಯಬಹುದು ಮತ್ತು 3 ಹೆಚ್.ಪಿ. ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ.1.00 ಲಕ್ಷ, 5 ಹೆಚ್.ಪಿ. ಹಾಗೂ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ. 1.50 ಲಕ್ಷ ಸಹಾಯಧನ ಪಡೆಯಬವುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:

1)ಆಧಾರ್ ಕಾರ್ಡ ಪ್ರತಿ
2)ಪಹಣಿ, 
3)ಬೆಳೆ ದೃಢೀಕರಣ, 
4)ಜಮೀನಿನ ಚೆಕ್‍ಬಂದಿ, 
5) ಬ್ಯಾಂಕ್ ಪಾಸ್‍ಬುಕ್ ಪ್ರತಿ, 
6)ಜಾತಿ ಪ್ರಮಾಣ ಪತ್ರ
7)ಅರ್ಜಿದಾರರ ಪೋಟೋ
8)20/- ರೂ ಬಾಂಡ್ ಪೇಪರ್

ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತ ರೈತ ಫಲಾನುಭವಿಗಳು ನಿಮ್ಮ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು. ಗುರಿಗೆ ಅನುಗುಣವಾಗಿ ಮಾರ್ಗಸೂಚಿಯನುಸಾರ ಫಲಾನುಭವಿಗಳನ್ನು ಜೇಷ್ಟತಾ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು.

ಇದನ್ನೂ ಓದಿ: Ration card news: ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆ ಕುರಿತು ಸಿಹಿ ಸುದ್ದಿ ನೀಡಿದ ಆಹಾರ ಇಲಾಖೆ!

ಸೋಲಾರ್ ಪಂಪ್ ಸೆಟ್ ಅನ್ನು ರೈತರಿಗೆ ನೀಡಲು ತೋಟಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಅನುಮೋದನೆ ಗೊಂಡಿರುವ ಕಂಪನಿಗಳ ವಿವರ ಹೀಗಿದೆ:

ಇದನ್ನೂ ಓದಿ: October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.

ಸೋಲಾರ್ ಪಂಪ್ ಸೆಟ್ ನೊಂದಿಗೆ ಈ ಕೆಳಕಂಡ ಸಾಮಾಗ್ರಿಗಳನ್ನು ಅಳವಡಿಸುವುದು ಕಡ್ಡಾಯವಾಗಿರುತ್ತದೆ:

ಇದನ್ನೂ ಓದಿ: load shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

1) 3HP ಯ ಸೋಲಾರ್ ಪಂಪ್‌ ಸೆಟಗಳಿಗೆ ಘಟಕ ವೆಚ್ಚ ರೂ 1.98 ಲಕ್ಷಗಳ ಶೇ.50 ರಂತೆ ರೂ.0.99 ಲಕ್ಷಗಳಿಗೆ ಮಿತಿಗೊಳಿಸಿ ಸಹಾಯಧನ ನೀಡುವುದು ಹಾಗೂ 5 HP & above ಸೋಲಾರ್ ಪಂಪ್‌ ಸೆಟ್‌ಗಳಿಗೆ ರೂ 3.00 ಲಕ್ಷಗಳ ಶೇ.50 ರಂತೆ ರೂ.1.50 ಲಕ್ಷಗಳಿಗೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.

2) ಸೋಲಾರ್ ಪಂಪ್ ಸೆಟಿಗಳಿಗೆ ವಿಮೆ ಮಾಡಿಸುವುದು ಕಂಪನಿಯ ಜವಾಬ್ದಾರಿಯಾಗಿದ್ದು, ಅವರಿಂದ ಸೂಕ್ತ ದಾಖಲೆಗಳನ್ನು ಪಡೆಯಲಾಗುತ್ತದೆ.

ಸೋಲಾರ್ ಪಂಪ್ ಸೆಟ್ ವಿಸ್ಯಾಸ:

ಇದನ್ನೂ ಓದಿ: sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

Most Popular

Latest Articles

Related Articles