Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!

July 1, 2025 | Siddesh
Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!
Share Now:

ಮೆಕ್ಕೆಜೋಳದಲ್ಲಿ ಇತೀಚೆಗೆ ಸರ್ವೆ ಸಾಮಾನ್ಯವಾಗಿ ಕಾಣುವ ಸೈನಿಕ ಹುಳು/ಲದ್ದಿ ಹುಳುವನ್ನು ನಿಯಂತ್ರಣ(Maize pest management) ಮಾಡಲು ಕೃಷಿ ಇಲಾಖೆಯಿಂದ(Krishi Ilake) ಬಿಡುಗಡೆ ಮಾಡಿರುವ ಅಧಿಕೃತ ನಿಯಂತ್ರಣ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣ್ದಲ್ಲಿ ಹಂಚಿಕೊಳ್ಳಲಾಗಿದೆ.

ಮೆಕ್ಕೆಜೋಳವು(Maize pest control) ಭಾರತದಲ್ಲಿ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೈನಿಕ ಹುಳು (Fall Armyworm - Spodoptera frugiperda) ಈ ಬೆಳೆಗೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕೀಟವು ಮೆಕ್ಕೆಜೋಳದ(Sainika hulu) ಎಲೆಗಳು, ಕಾಂಡ, ಗೊಂಗಲಿ ಮತ್ತು ತಿರುಳನ್ನು ತಿಂದು ತೀವ್ರ ಹಾನಿಯನ್ನುಂಟುಮಾಡುತ್ತದೆ. ರೈತರು ಈ ಬಾಧೆಯಿಂದ ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ, ಸೈನಿಕ ಹುಳುವನ್ನು ನಿಯಂತ್ರಿಸಲು ಕೆಲವು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿದರೆ, ಬೆಳೆಯನ್ನು ರಕ್ಷಿಸಬಹುದು. ಈ ಲೇಖನದಲ್ಲಿ ಆ ಕ್ರಮಗಳನ್ನು ತಿಳಿಯೋಣ.

ಇದನ್ನೂ ಓದಿ: Agri Diploma Admission-ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಗ್ರಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

Fall Armyworm-ಸೈನಿಕ ಹುಳು ಗುರುತಿಸುವುದು ಹೇಗೆ?

ಸೈನಿಕ ಹುಳುವಿನ ಲಾರ್ವಾಗಳು ಹಸಿರು-ಕಂದು ಬಣ್ಣದ್ದಾಗಿದ್ದು, ತಲೆಯ ಮೇಲೆ ಒಂದು ಗಾಢ ಕಂದು ಬಣ್ಣದ Y ಆಕಾರದ ಗುರುತು ಇರುತ್ತದೆ. ಈ ಕೀಟವು ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ ಮತ್ತು ಎಲೆಗಳನ್ನು ತಿನ್ನುವ ಮೂಲಕ ಬೆಳೆಗೆ ಹಾನಿಯನ್ನುಂಟುಮಾಡುತ್ತದೆ. ಈ ಕೀಟವು ತನ್ನ ಜೀವನ ಚಕ್ರವನ್ನು 30-40 ದಿನಗಳಲ್ಲಿ ಪೂರ್ಣಗೊಳಿಸುತ್ತದೆ, ಆದ್ದರಿಂದ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ನಿಯಂತ್ರಿಸುವುದು ಅತ್ಯಗತ್ಯ.

Fall armyworm in corn-ಸೈನಿಕ ಹುಳುವಿನ ಜೀವನ ಚರಿತ್ರೆ:

  • ಪತಂಗವು ರಾತ್ರಿ ವೇಳೆ ಚಟುವಟಿಕೆಯಿಂದ ಕೂಡಿದ್ದು ಬೂದು ಮತ್ತು ಕಂದು ಬಣ್ಣದ್ದಾಗಿರುತ್ತದೆ. ಪತಂಗದ ಜೀವನ ಅವೆಯು 17-21 ದಿನಗಳಾಗಿರುತ್ತದೆ.
  • ಹೆಣ್ಣು ಪತಂಗವು 1500-2000 ಮೊಟ್ಟೆಗಳನ್ನು ಗುಂಪು ಗುಂಪಾಗಿ ಪ್ರತಿ ಗುಂಪಿನಲ್ಲಿ 100-200 ಮೊಟ್ಟೆಗಳನ್ನು ಇಡುತ್ತದೆ.
  • 2-3 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬರುತ್ತವೆ. ಇವು ಕಪ್ಪು ಬಣ್ಣದ ತಲೆಯನ್ನು ಹೊಂದಿದ್ದು ಹಸಿರಾಗಿರುತ್ತದೆ.
  • ಸಂಪೂರ್ಣವಾಗಿ ಬೆಳೆಯ ಹುಳುಗಳು ಕಂದು ಬಣ್ಣವಿದ್ದು ತಲೆಯ ಮೇಲೆ ವೈ ಆಕಾರದ ಗುಳಿ ಇರುತ್ತದೆ ಮತ್ತು ಹುಳುವಿನ ಕೊನೆಯ ಸೆಗ್‌ಮೆಂಟ್‌ 4 ಕಪ್ಪು ಚುಕ್ಕೆಗಳು ಸಮಾನಾಂತರದಲ್ಲಿ ಇರುತ್ತವೆ.
  • ಹುಳುವಿನ ಅವಯು 14 (ಬೇಸಿಗೆಯಲ್ಲಿ) ರಿಂದ 30 (ಚಳಿಗಾಲದಲ್ಲಿ) ದಿನಗಳಾಗಿದ್ದು ನಂತರ ಕೋಶಾವಸ್ಥೆಗೆ ಹೋಗುತ್ತದೆ.

ಇದನ್ನೂ ಓದಿ: Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?

Fall armyworm identification -ಸೈನಿಕ ಹುಳುವಿನಿಂದ ಆಗುವ ಹಾನಿ:

ಎಲೆಗಳಿಗೆ ಹಾನಿ: ಲಾರ್ವಾಗಳು ಎಲೆಗಳನ್ನು ತಿಂದು ರಂಧ್ರಗಳನ್ನು ಉಂಟುಮಾಡುತ್ತವೆ.

ಕಾಂಡ ಮತ್ತು ಗೊಂಗಲಿಗೆ ತೊಂದರೆ: ಗಿಡದ ಕಾಂಡ ಮತ್ತು ಗೊಂಗಲಿಯನ್ನು ಒಡದು ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತವೆ.

ಇಳುವರಿ ಕಡಿಮೆ: ತೀವ್ರವಾದ ಹಾನಿಯಿಂದ ಇಳುವರಿಯಲ್ಲಿ ಶೇ.50-70ರಷ್ಟು ನಷ್ಟವಾಗಬಹುದು.

Maize pest management-ಸೈನಿಕ ಹುಳುವನ್ನು ನಿಯಂತ್ರಿಸುವ ಕ್ರಮಗಳು:

ಸೈನಿಕ ಹುಳುವನ್ನು ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ (Integrated Pest Management - IPM) ವಿಧಾನವನ್ನು ಅನುಸರಿಸುವುದು ಉತ್ತಮ. ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು:

ಆರಂಭಿಕ ಗುರುತಿಸುವಿಕೆ ಮತ್ತು ಮೇಲ್ವಿಚಾರಣೆ:ಬೆಳೆಯನ್ನು ನಿಯಮಿತವಾಗಿ ಪರಿಶೀಲಿಸಿ, ಎಲೆಗಳ ಮೇಲೆ Y ಆಕಾರದ ಗುರುತಿನ ಲಾರ್ವಾಗಳನ್ನು ಗುರುತಿಸಿ.

ಇದನ್ನೂ ಓದಿ: PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!

Chemical control fall armyworm-ರಾಸಾಯನಿಕ ನಿಯಂತ್ರಣ:

  • ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು ಕೀಟದ ಉಪಸ್ಥಿತಿ ಮತ್ತು ಹರಡುವಿಕೆಯನ್ನು ತಿಳಿದು ಪ್ರತಿ ಎಕರೆಗೆ 3 ರಂತೆ ಮೋಹಕ ಬಲೆಗಳನ್ನು ಅಳವಡಿಸುವುದರ ಮೂಲಕ ನಿಗಾ ವಹಿಸುವುದು.
  • ಗುಂಪಾಗಿ ಇಟ್ಟಿರುವ ಮೊಟ್ಟೆ ಹಾಗೂ ಮರಿ ಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು.
  • ತತ್ತಿ ಪರಾವಲಂಬಿ ಕೀಟಗಳಾದ ಟೈಕೋಗ್ರಾಮಾ ಮತ್ತು ಟೆಲಿಮೋನಸ್ಗಳನ್ನು ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಪಡಿಸುವುದು.
  • ಕೀಟ ಬಾಧೆ ತೀವ್ರತೆ ಕಡಿಮೆ ಇದ್ದಾಗ ಅಥವಾ ಮರಿ ಹುಳುಗಳ ನಿರ್ವಹಣೆಗೆ ಬೇವಿನ ಮೂಲಕ ಕೀಟನಾಶಕವಾದ ಆಜಾಡಿರಕ್ಷಿನ್ 50 ಇ.ಸಿ. 5 ಎಂಎಲ್/ಲೀ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
  • ಕೀಟದ ತೀವ್ರತೆ ಹೆಚ್ಚಾದಲ್ಲಿ ಅಥವಾ ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ಕೀಟನಾಶಕಗಳಾದ ಇಮಾಮೆಕ್ಸಿನ್ ಬೆಂಜೋಯೇಟ್ 5% ಎಸ್‌ಜಿ 0.4 ಗ್ರಾಂ/ಲೀ, ಥಯಾಮೆಥೋಕ್ಸಿಮ್ 12.6%+ಲಾಮಸಹಲೋಡ್ರಿನ್ 9.5% ಝಡ್ ಸಿ. 0.5 ಗ್ರಾಂ/ಲೀ ಬಳಸಿ ಕೀಟಗಳನ್ನು ಹತೋಟ ಮಾಡುವುದು.

ವಿಶೇಷ ಸೂಚನೆ: ಕೀಟನಾಶಕವನ್ನು ಬೆಳಿಗ್ಗೆ ಅಥವಾ ಸಂಜೆ ಸಿಂಪಡಿಸಿ, ಏಕೆಂದರೆ ಈ ಸಮಯದಲ್ಲಿ ಕೀಟಗಳು ಹೆಚ್ಚು ಸಕ್ರಿಯವಾಗಿರುತ್ತವೆ ಒಂದೇ ರಾಸಾಯನಿಕವನ್ನು ಪದೇ ಪದೇ ಬಳಸದಿರಿ, ಇದರಿಂದ ಕೀಟವು ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

mekkejola

Organic pest control maize-ಕೃಷಿ ವಿಧಾನಗಳು:

ಬೆಳೆ ತಿರುಗುವಿಕೆ: ಮೆಕ್ಕೆಜೋಳದ ಜೊತೆಗೆ ಬೇರೆ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು ಇದು ಕೀಟದ ಜನಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಬಿತ್ತನೆ ಸಮಯ: ಆರಂಭಿಕ ಬಿತ್ತನೆಯಿಂದ ಕೀಟದ ದಾಳಿಯನ್ನು ಕಡಿಮೆ ಮಾಡಬಹುದು.

ತೋಟದ ಸ್ವಚ್ಛತೆ: ಕೃಷಿಯ ನಂತರ ಹಳೆಯ ಗಿಡಗಳನ್ನು ತೆಗೆದುಹಾಕಿ, ಇದರಿಂದ ಕೀಟದ ಮೊಟ್ಟೆಗಳು ಮತ್ತು ಲಾರ್ವಾಗಳು ನಾಶವಾಗುತ್ತವೆ.

Maize nutrient management-ಗೋವಿನ ಜೋಳದಲ್ಲಿ ಪೋಷಕಾಂಶಗಳ ನಿರ್ವಹಣೆ:

ಇತ್ತೀಚಿನ ದಿನಗಳಲ್ಲಿ ಗೋವಿನ ಜೋಳದ ಬೆಳೆಯಲ್ಲಿ ಪೋಷಕಾಂಶಗಳ ಕೊರತೆಯು, ಅದರಲ್ಲೂ ಮುಖ್ಯವಾಗಿ ಜಿಂಕ್, ಬೋರಾನ್ ಮತ್ತು ರಂಜಕದ ಕೊರತೆಯ ಲಕ್ಷಣಗಳು ಜಿಲ್ಲೆಯಾದ್ಯಂತ ಕಂಡು ಬರುತ್ತಿದ್ದು, ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಸದರಿ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಈ ಕೆಳಕಂಡ ಕ್ರಮಗಳನ್ನು ರೈತರು ಅನುಸರಿಸಿ ಉತ್ತಮ ಇಳುವರಿ ಪಡೆಯಬಹುದು.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

1) ರಂಜಕ:

ಕೊರತೆಯ ಲಕ್ಷಗಣಗಳು: ಎಲೆಗಳು ಕೆಂಪಾಗಿ, ಅಲ್ಲಲ್ಲಿ ಕೆಂಪು ನೇರಳೆಯ ಪಟ್ಟಿಗಳು ಕಾಣಿಸುತ್ತವೆ.

ನಿರ್ವಹಣೆ: ಬೆಳೆಗಳಲ್ಲಿ ಕೊರತೆಯ ಲಕ್ಷಣಗಳು ಕಂಡು ಬಂದಲ್ಲಿ ಶೇ.2ರಷ್ಟು ಡಿಎಪಿ ದ್ರಾವಣ ಅಥವಾ ಶೇ.1ರಷ್ಟು 19:19:19 ದ್ರಾವಣವನ್ನು 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪರಣೆ ಮಾಡಬೇಕು.

2) ಬೋರಾನ್:

ಕೊರತೆಯ ಲಕ್ಷಣಗಳು: ಕುಡಿಯು ಮದುರಿದಂತಾಗಿ ಗಿಡವು ಸೊಟ್ಟು ಆಗುವುದು. ಕಾಳು ಕಟ್ಟುವಿಕೆ ಕಡಿಮೆಯಾಗುವುದು ಹಾಗೂ ಎಲೆಯ ಮೇಲೆ ಬಿಳಿ ಚುಕ್ಕೆಗಳು ಕಂಡು ಬರುತ್ತವೆ.

ನಿರ್ವಹಣೆ: ಬೆಳೆಗಳಲ್ಲಿ ಕೊರತೆಯ ಲಕ್ಷಣಗಳು ಕಂಡು ಬಂದಲ್ಲಿ ನೀರಿನಲ್ಲಿ ಕರಗುವ ಬೋರಾನ್ (ಸಾಲುಬೋರ್)ನ್ನು ಶೇ.0.2ರ ಸಿಂಪರಣೆ ಮಾಡಬೇಕು.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

3) ಜಿಂಕ್:

ಎಲೆಯ ಮಧ್ಯಭಾಗದ ಬಿಳಿಯ ಪಟ್ಟಿಗಳು ಕಾಣಿಸುತ್ತವೆ. ಗಣ್ಣಿನ ಅಂತರ ಕಡಿಮೆಯಾಗಿ ಗಿಡ ಗಿಡ್ಡದಾಗಿರುತ್ತದೆ.

ನಿರ್ವಹಣೆ: ಬೆಳೆಗಳಲ್ಲಿ ಕೊರತೆಯ ಲಕ್ಷಣಗಳು ಕಂಡು ಬಂದಲ್ಲಿ ಶೇ.0.25ರ ಸತುವಿನ ಸಲೇಟನ್ನು 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪರಣೆ ಮಾಡಬೇಕು.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Share Now: