PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!

June 30, 2025 | Siddesh
PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!
Share Now:

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪಿಎಂ ಕಿಸಾನ್(PM Kisan) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಕಳೆದ ಮೂರು ವರ್ಷದಲ್ಲಿ ಈ ಯೋಜನೆಯ ಮಾರ್ಗಸೂಚಿಯನ್ವಯ ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಪಡೆಯಲು ಅನರ್ಹರಿರುವ 7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ವರ್ಗಾವಣೆಯನ್ನು ಸ್ಥಿಗಿತಗೊಳಿಸಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN Scheme) ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಮೂಲಕ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ (ಪ್ರತಿ ಕಂತಿಗೆ 2,000 ರೂ.) ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಇತ್ತೀಚಿನ ಕೇಂದ್ರದ ಕೃಷಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, 7 ಲಕ್ಷ ರೈತರಿಗೆ ಈ ಯೋಜನೆಯ ಹಣ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?

ಪ್ರಸ್ತುತ ಈ ಅಂಕಣದಲ್ಲಿ ವರ್ಷವಾರು ಪಿಎಂ ಕಿಸಾನ್ ಹಣ(PM Kisan Amount) ವರ್ಗಾವಣೆ ರೈತರ ಅಂಕಿ-ಅಂಶ, ಪಿಎಂ ಕಿಸಾನ್ ಆರ್ಥಿಕ ನೆರವು ಸ್ಥಗಿತಕ್ಕೆ ಪ್ರಮುಖ ಕಾರಣಗಳೇನು?ಅರ್ಹ ರೈತರು ತಪ್ಪದೇ ಅನುಸರಿಸಬೇಕಾದ ಕ್ರಮಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

PM Kisan Farmers Details-ವರ್ಷವಾರು ಪಿಎಂ ಕಿಸಾನ್ ಹಣ ವರ್ಗಾವಣೆ ಅಂಕಿ-ಅಂಶ:

ವರ್ಷರೈತರ ಸಂಖ್ಯೆಪಾವತಿ ಮೊತ್ತ(ಕೋಟಿಗಳಲ್ಲಿ)
2018-1919,819₹ 3.96
2019-2053,81,184 ₹ 2,769
2020-2153,83,156₹ 3,113
2021-2250,84,524₹ 2,829
2022-2350,84,524₹ 3,272
2023-2449,42,313₹ 2,891
2024-25 47,50,457₹ 2,768

PM Kisan Yojana-2025: ಕಳೆದ ಮೂರು ವರ್ಷದಲ್ಲಿ 7 ಲಕ್ಷಕ್ಕೂ ಅಧಿಕ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ:

2022 ರಿಂದ 2024ರ ವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅನರ್ಹರಿರುವ 7 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಗುರುತಿಸಿ ವಾರ್ಷಿಕ ರೂ 6,000/- ನೆರವನ್ನು ವರ್ಗಾವಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.

PM Kisan Ineligible-ಪಿಎಂ ಕಿಸಾನ್ ಆರ್ಥಿಕ ನೆರವು ಸ್ಥಗಿತಕ್ಕೆ ಪ್ರಮುಖ ಕಾರಣಗಳ ಪಟ್ಟಿ:

ಕರ್ನಾಟಕದಲ್ಲಿ 53.81 ಲಕ್ಷ ರೈತರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೆಲವು ರೈತರು ಈ ಯೋಜನೆಯ ಅರ್ಹತೆಯ ಮಾನದಂಡಗಳನ್ನು ಪೂರೈಸದ ಕಾರಣ 7 ಲಕ್ಷ ರೈತರಿಗೆ ಹಣದ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸ್ಥಗಿತಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ:

1) ಆದಾಯ ತೆರಿಗೆ ಪಾವತಿದಾರರು: ಪಿಎಂ ಕಿಸಾನ್ ಯೋಜನೆಯಡಿ ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಪಡೆಯಲು ಅರ್ಜಿದಾರರು ಆದಾಯ ತೆರಿಗೆಯನ್ನು ಪಾವತಿ ಮಾಡುವಂತಿಲ್ಲ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅಂತಹ ರೈತರನ್ನು ಅನರ್ಹ ಪಟ್ಟಿಗೆ ಸೇರಿಸಲಾಗಿದೆ.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

2) ನಕಲಿ/ಭೂಮಿ ಒಡೆತನದ ಸಮಸ್ಯೆ: ಪಿಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪಾದ ಹಾಗೂ ತಾಳೆಯಾಗದ ಜಮೀನ ಪಹಣಿ/ಊತಾರ್/RTC ಅನ್ನು ಸಲ್ಲಿಸಿದ ರೈತರನ್ನು ಅನರ್ಹ ಪಟ್ಟಿಗೆ ಸೇರಿಸಲಾಗಿದೆ.

3) ಇ-ಕೆವೈಸಿ ಮಾಡಿಸದೇ ಇದ್ದವರು: ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ OTP ಆಧಾರಿತ ಇ-ಕೆವೈಸಿಯನ್ನು ಮಾಡಿಕೊಳ್ಳದ ರೈತರನ್ನು ಸಹ ಅನರ್ಹ ಪಟ್ಟಿಗೆ ಸೇರಿಸಿ ಹಣ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ.

4) ಅರ್ಜಿದಾರರ ಕುಟುಂಬದವರು ಸರ್ಕಾರಿ ನೌಕರಿಯಲ್ಲಿದರೆ: ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರಿಯಲ್ಲಿದು ಸಹ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯಡಿ ಹಣ ಪಡೆಯುತ್ತಿರುವವರು ಗುರುತಿಸಿ ಅನರ್ಹ ಪಟ್ಟಿಗೆ ಸೇರಿಸಿ ಹಣ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

kisan samman

PM Kisan e-KYC-ಅರ್ಹ ರೈತರು ತಪ್ಪದೇ ಈ ಕ್ರಮ ಅನುಸರಿಸಿ:

  • ಇ-ಕೆವೈಸಿ ಮಾಡಿಸಿ:

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯುತ್ತಿರುವ ರೈತರು ಕೃಷಿ ಇಲಾಖೆಯನ್ನು ಭೇಟಿ ಮಾಡಿ ಇಲ್ಲಿಯವರೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಇ-ಕೆವೈಸಿಯನ್ನು ಮಾಡಿಕೊಳ್ಳದವ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಿ.

  • ಪಿಎಂ ಕಿಸಾನ್ ಯೋಜನೆಯ ಅರ್ಜಿಯಲ್ಲಿ ಜಮೀನಿನ ವಿವರ ಸರಿಯಾಗಿ ದಾಖಲಿಸಿ:

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಈ ಯೋಜನೆಯು ಆರಂಭಿಕ ವರ್ಷದಲ್ಲಿಅರ್ಜಿಯನ್ನು ಸಲ್ಲಿಸುವಾಗ ನೀಡಿರುವ ಜಮೀನಿನ ಪಹಣಿಯಲ್ಲಿ ಯಾವುದಾದರು ಸಮಸ್ಯೆಯಿದ್ದರೆ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸರಿಯಾದ ಪಹಣಿ/ಉತಾರ್/RTC ಅನ್ನು ನೀಡಿ ಜಮೀನಿನ ವಿವರವನ್ನು ನವೀಕರಿಸಿ.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್:

ಬ್ಯಾಂಕ್ ಖಾತೆಗೆ NPCI/ಆಧಾರ್ ಕಾರ್ಡ ಲಿಂಕ್ ಮಾಡಿಕೊಳ್ಳದೇ ಇರುವ ರೈತರು ಕೂಡಲೇ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಯನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.

  • 2019ರ ನಂತರ ಪೌತಿ ಖಾತೆಯಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರು:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರವು 2019 ರಲ್ಲಿ ಜಾರಿಗೆ ತರಲಾಗಿದ್ದು ಈ ಸಮಯದಲ್ಲಿ ಕೇಂದ್ರ 2019 ರ ನಂತರ ತಮ್ಮ ಜಮೀನನ್ನು ಹೊಂದಿದವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿತ್ತು ಅದರೆ ತಂದೆ-ತಾಯಿ ಅವರ ಹೆಸರಿನಿಂದ ತಮ್ಮ ಹೆಸರಿಗೆ ಪಿತ್ರಾರ್ಜಿತ ಆಸ್ತಿಯನ್ನು ಪೌತಿ ಖಾತೆ ಮೂಲಕ 2019ರ ನಂತರವು ವರ್ಗಾವಣೆ ಮಾಡಿಕೊಂಡಿದ್ದರೆ ಅಂತಹ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆಯಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

PM Kisan Farmers List 2025: ಅರ್ಹ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ:

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿರುತ್ತದೆ.

Step-1: ರೈತರು ತಮ್ಮ ಮೊಬೈಲ್ ನಲ್ಲಿ ಪ್ರಥಮ ಹಂತದಲ್ಲಿ ಈ PM Kisan Farmers List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪುಟದಲ್ಲಿ ಕಾಣುವ Beneficiary List ಬಟನ್ ಮೇಲೆ ಕ್ಲಿಕ್ ಮಾಡಿ State , District , Sub-District , Block , Village ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಪಟ್ಟಿ ತೋರಿಸುತ್ತದೆ.

WhatsApp Group Join Now
Telegram Group Join Now
Share Now: