Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!

February 3, 2024 | Siddesh

ಇನ್ನು ಮುಂದೆ ವಿವಾಹ ನೋಂದಣಿಯನ್ನು(Marriage registration) ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ಮಾಡದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಹಿಂದೂ ವಿವಾಹ ನೋಂದಣಿ ಕಾಯ್ದೆಗೆ ರಾಜ್ಯ ಸರಕಾರದಿಂದ ತಿದ್ದುಪಡಿ ಮಾಡಲಾಗಿದೆ.

ಈ ತಿದ್ದುಪಡಿಯನ್ವಯ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಕೊಳ್ಳಲು ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ್ ಒನ್ ಮತ್ತು ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.

ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ಹಂಚಿಕೊಂಡಿರುವ ಕಾನೂನು ಸಚಿವ ಹೆಚ್ ಕೆ ಪಾಟೀಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ವಿವಾಹ ನೋಂದಣಿಯನ್ನು ಸರಳವಾಗಿ ನೋಂದಣಿ ಮಾಡಿಸಿಕೊಳ್ಳುವ ದೇಸೆಯಲ್ಲಿ ಹಿಂದೂ ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟವು ಒಪ್ಪಿದೆ ನೀಡಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Cancelled ration card-2024: ಜನವರಿ-2024 ತಿಂಗಳ ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

Marriage registration-2024: ಹೊಸ ಯೋಜನೆ ವಿಶೇಷವೇನು?

ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಲು ಆಸಕ್ತಿಯಿರುವವರು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರದಲ್ಲಿ ಅಥವಾ ಗ್ರಾಮ್ ಒನ್ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಕಾವೇರಿ-2 ಸಾಫ್ಟವೇರ್ ಬಳಕೆ ಮಾಡಿಕೊಂಡು  ಈ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ.

ಆಧಾರ್ ಕಾರ್ಡ ದೃಡೀಕರಣವನ್ನು ಬಳಸಿಕೊಂದು ವಿವಾಹವನ್ನು ನೋಂದವಣೆ ಮಾಡಲಾಗುತ್ತದೆ.

ಇದನ್ನೂ ಓದಿ: Budget highlights-2024: ಕೇಂದ್ರ ಸರಕಾರದ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಹಿಂದೆ ಇದ್ದ ನಿಯಮ ಯಾವುದು?

ಈ ಮೊದಲು ಜಾರಿಯಲ್ಲಿದ ವಿಶೇಷ ವಿವಾಹ ಕಾಯಿದೆ 1954ರ ಪ್ರಕಾರ ದಂಪತಿ ಮದುವೆಯ ನೊಂದಣಿ ದಿನಾಂಕಕ್ಕೂ ಒಂದು ತಿಂಗಳ ಮೊದಲೇ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸೂಚನೆ ನೀಡಿ ಬಳಿಕ ಸಬ್ ರಿಜಿಸ್ಟ್ರಾರ್  ಮುಂದೆ ವಧು ಮತ್ತು ವರ ಕಡ್ಡಾಯವಾಗಿ ಉಪಸ್ಥಿತಿಯಲ್ಲಿದು ನೋಂದಣಿ ಮಾಡಿಸಬೇಕಿತ್ತು.

ವಿವಾಹ ಕಾಯ್ದೆಯ ಕುರಿತು ವಾರ್ತಾ ಇಲಾಖೆಯ ಪ್ರಕಟಣೆ ವಿವರ ಹೀಗಿದೆ: 

ವಿವಾಹ ನೋಂದಣಿ ಇನ್ನೂ ಸುಲಭವಾಗಿದ್ದು, ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸುವ 'ಹಿಂದೂ ವಿವಾಹಗಳ ನೋಂದಣಿ (ತಿದ್ದುಪಡಿ) ನಿಯಮಗಳು - 2024' ಅನ್ನು ಸಚಿವ ಸಂಪುಟ ಸಭೆ ಅನುಮೋದಿಸಿತು. ಇದರಿಂದಾಗಿ ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ-1 ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: village administrative officer- ಕಂದಾಯ ಇಲಾಖೆಯಿಂದ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: