HomeNew postsCancelled ration card-2024: ಜನವರಿ-2024 ತಿಂಗಳ ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ...

Cancelled ration card-2024: ಜನವರಿ-2024 ತಿಂಗಳ ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಜನವರಿ-2024 ತಿಂಗಳ ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ(Cancelled ration card-2024) ಬಿಡುಗಡೆ ಮಾಡಲಾಗಿದ್ದು ಪಡಿತರ ಚೀಟಿ ಹೊಂದಿರುವ ಗ್ರಾಹಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಿಲ್ಲೆಯ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ನೋಡಬಹುದಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಪಡಿತರ ಚೀಟಿ ವಿತರಣೆಗೆ ಸರಕಾರದಿಂದ ನಿಗಧಿಪಡಿಸಿರುವ ಮಾರ್ಗಸೂಚಿಯನ್ವಯ ನಿಯಮ ಮೀರಿರುವ ಗ್ರಾಹಕರ ರದ್ದಾದ ರೇಷನ್ ಕಾರ್ಡ ನಂಬರ್ ಸಹಿತ ಜಿಲ್ಲಾವಾರು ಪಟ್ಟಿಯನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: Budget highlights-2024: ಕೇಂದ್ರ ಸರಕಾರದ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಪಟ್ಟಿಯಲ್ಲಿರುವವರಿಗೆ ರೇಷನ್ ಕಾರ್ಡ ಮೇಲೆ ಪಡೆಯಬಹುದಾದ ಯಾವುದೇ ಬಗ್ಗೆಯ ಸರಕಾರಿ ಯೋಜನೆಗಳ ಪ್ರಯೋಜನ/ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Cancelled ration card list- ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ನೋಡುವ ವಿಧಾನ:

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಈ ವೆಬ್ಸೈಟ್ ಭೇಟಿ https://ahara.kar.nic.in/ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಿಲ್ಲೆಯ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ನೋಡಬಹುದಾಗಿದೆ.

Step-1: ಮೊದಲಿಗೆ ಈ ಲಿಂಕ್ Cancelled ration card list ಮೇಲೆ ಕ್ಲಿಕ್ ಮಾಡಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ಬಳಿಕ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: village administrative officer- ಕಂದಾಯ ಇಲಾಖೆಯಿಂದ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!

Step-2: ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿದ ಬಳಿಕ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಕೆಳಗಡೆ ಕಾಣುವ ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ(Cancelled and Suspended List) ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು-January, ವರ್ಷ-2024 ಎಂದು ಆಯ್ಕೆ ಮಾಡಿಕೊಂಡು “GO” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಯ ರದ್ದುಗೊಳಿಸಲಾದ/ತಡೆಹಿಡಿಯಲಾದ ಪಡಿತರ ಚೀಟಿ ಪಟ್ಟಿ(Cancelled and Suspended List) ತೋರಿಸುತ್ತದೆ.

ಇದನ್ನೂ ಓದಿ: agriculture land documents- ನಿಮ್ಮ ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ಎಲ್ಲಿ ಪಡೆಯಬೇಕು? ಇಲ್ಲಿದೆ ಡೌನ್ಲೋಡ್ ಲಿಂಕ್

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಒಮ್ಮೆ ಚೆಕ್ ಮಾಡಿಕೊಂಡು ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ನೀವು ರೇಷನ್ ಕಾರ್ಡ ಪಡೆಯಲು ಸರಕಾರದ ಮಾರ್ಗಸೂಚಿ ಪ್ರಕಾರ ಅರ್ಹರಿದ್ದಲ್ಲಿ ಕೊಡಲೇ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿ(Food inspector office)ಯನ್ನು ಭೇಟಿ ಮಾಡಿ ನಿಮ್ಮ ರದ್ದಾದ ರೇಷನ್ ಕಾರ್ಡ ಅನ್ನು ಮರು ಪರೀಶಿಲನೆಗೆ ಅರ್ಜಿ ಸಲ್ಲಿಸಿ.

ಇದೇ ವೆಬ್ಸೈಟ್ ನಲ್ಲಿ ನಿಮ್ಮ ಹಳ್ಳಿಯ ಅರ್ಹ ಪಡಿತರ ಚೀಟಿಯ ಪಟ್ಟಿಯನ್ನು(ration card list) ಸಹ ನೋಡಬಹುದು ಮೊದಲಿಗೆ ಈ village wise ration card list ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ತದನಂತರ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದೇ ಕಾಲಂ ನಲ್ಲಿ ಕೆಳಗೆ ತೋರಿಸುವ “ಹಳ್ಳಿ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್, ಹಳ್ಳಿ ಅನ್ನು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಅರ್ಹ ರೇಷನ್ ಕಾರ್ಡ ಗ್ರಾಹಕರ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿರುವವರಿಗೆ ಸರಕಾರದ ಪಡಿತರ ಚೀಟಿ ಸಲ್ಲಿಸಿ ಪಡೆಯಬಹುದಾದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Voter Id application-2024: ಹೊಸ ವೋಟರ್ ಐಡಿ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

Most Popular

Latest Articles

Related Articles