- Advertisment -
HomeNew postsMatru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!

Matru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!

ಕೇಂದ್ರ ಸರಕಾರದಿಂದ ಮಾತೃವಂದನಾ ಯೋಜನೆಯಡಿ(Matru Vandana Yojana) ಅರ್ಹ ಗರ್ಭಿಣಿ ಮಹಿಳೆಯರಿಗೆ ₹11,000 ರೂ ಅರ್ಥಿಕ ನೆರವು ಪಡೆಯಲು ಅವಕಾಶವಿದ್ದು ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಗರ್ಭಿಣಿ ಮಹಿಳೆಯರಿಗೆ ಉತ್ತಮ ಪೌಷ್ಟಿಕ ಆಹಾರವನ್ನು ದಿನನಿತ್ಯ ಸೇವನೆ ಮಾಡಲು ಅರ್ಥಿಕವಾಗಿ ನೆರವು ನೀಡಲು ಮಾತೃವಂದನಾ ಯೋಜನೆಯಡಿ ಹಣಕಾಸಿನ(Matru Vandana Yojana Application) ನೆರವನ್ನು ನೀಡಲಾಗುತ್ತದೆ ಒಂದಲ ಮತ್ತು ಎರಡನೇ ಮಗು ಪ್ರಸವದಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!

ಕೇಂದ್ರ ಸರಕಾರದ ಮಾತೃವಂದನಾ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲೆಗಳೇನು? ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಮಾತೃವಂದನಾ ಯೋಜನೆಯಡಿ ಎಷ್ಟು ಹಣ ಪಡೆಯಬಹುದು?

ಮಾತೃವಂದನಾ ಯೋಜನೆಯಡಿ ಅರ್ಹ ಅರ್ಜಿದಾರರು ದಾಖಲೆಗಳನ್ನು ಸಲ್ಲಿಸಿ ಮೊದಲ ಮಗುವಿವ ಸಮಯದಲ್ಲಿ ₹5,000 ರೂ ಮತ್ತು ಎರಡನೇ ಮಗುವಿನ ಹೆರಿಗೆ ಸಂದರ್ಭದಲ್ಲಿ ₹6,000 ರೂ ಒಟ್ಟು ₹11,000 ಸಾವಿರ ಹಣಕಾಸಿನ ನೆರವನ್ನು ತೆಗೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಅರ್ಹರು:

(A) ಅರ್ಜಿದಾರರು ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
(B) ಸರಕಾರಿ ನೌಕರಿಯಲ್ಲಿರುವರು ಮತ್ತು ಅರ್ಥಿಕವಾಗಿ ಸಬಲರಾಗಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ.
(C) ಈ ಮೇಲಿನ ವರ್ಗಕ್ಕೆ ಸೇರಿದವರನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಬೇಕಾಗುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿರು ಅಂಗನವಾಡಿ ಕಾರ್ಯಕರ್ತೆಯರನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸುವುದರ ಕುರಿತು ಮಾಹಿತಿಯನ್ನು ಪಡೆದು ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Drip Irrigation-ರಾಜ್ಯ ಸರಕಾರದಿಂದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ₹255 ಕೋಟಿ ಅನುದಾನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ಅರ್ಜಿ ಸಲ್ಲಿಸಲು ದಾಖಲೆಗಳು:

(1) ಸಂಬಂಧಪಟ್ಟ ಇಲಾಖೆಯಿಂದ ನಿಗದಿಪಡಿಸಿರುವ ಅರ್ಜಿ ನಮೂನೆ
(2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
(3) ಬ್ಯಾಂಕ್ ಪಾಸ್ ಬುಕ್ ಪ್ರತಿ
(4) ಪೋಟೋ
(5) ಮಗುವಿನ ಲಸಿಕೆ ಮಾಹಿತಿಯ ಪ್ರತಿ
(6) ತಾಯಿ ಕಾರ್ಡ ಪ್ರತಿ
(7) ರೇಷನ್ ಕಾರ್ಡ ಪ್ರತಿ

ಇದನ್ನೂ ಓದಿ: Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!

ಮಾತೃವಂದನಾ ಯೋಜನಯ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click here

- Advertisment -
LATEST ARTICLES

Related Articles

- Advertisment -

Most Popular

- Advertisment -