HomeGovt SchemesAgriculture mechanization subsidy: ಕೃಷಿ ಇಲಾಖೆಯಿಂದ ಶೇ 50 ರಷ್ಟು ಸಹಾಯಧನದಲ್ಲಿ ಹಿಟ್ಟಿನ ಗಿರಣಿ, ರೋಟಿ...

Agriculture mechanization subsidy: ಕೃಷಿ ಇಲಾಖೆಯಿಂದ ಶೇ 50 ರಷ್ಟು ಸಹಾಯಧನದಲ್ಲಿ ಹಿಟ್ಟಿನ ಗಿರಣಿ, ರೋಟಿ ಮಷೀನ್, ಎಣ್ಣೆಗಾನ ಮಷೀನ್ ಪಡೆಯಲು ಅರ್ಜಿ ಆಹ್ವಾನ!

ಕೃಷಿ ಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ವಿವಿಧ ಬಗ್ಗೆಯ ಯಂತ್ರಗಳನ್ನು ಸಹಾಯಧನದಲ್ಲಿ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಯಂತ್ರವಾರು  ಸಹಾಯಧನ ಎಷ್ಟು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿ, ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಕೃಷಿಯ ಜೊತೆ ತಾವು ಬೆಳೆಯುವ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಇನ್ನು ಹೆಚ್ಚಿನ ಆದಾಯವನ್ನು ಮಾಡಲು ಆಸಕ್ತಿಯಿರುವ ರೈತರು ಕೂಡಲೇ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬವುದು.

ಇದನ್ನೂ ಓದಿ: New ration card-ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ!

ಯೋಜನೆಯ ಮುಖ್ಯ ಉದ್ದೇಶ:

ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯ ಪ್ರಮುಖ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಉತ್ತಮ ಸಂಸ್ಕರಣೆಗೆ ಒಳಪಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವುದಾಗಿದೆ. 

ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನೂ ಸಹ ಒದಗಿಸಿಕೊಡುವುದರಿಂದ ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳು ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದು ಕೃಷಿ ಇಲಾಖೆಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಯಾವೆಲ್ಲ ಯಂತ್ರಗಳಿಗೆ ಸಹಾಯಧನ ನೀಡಲಾಗುತ್ತದೆ?

ಆತ್ಮೀಯ ರೈತ ಬಾಂಧವರೇ ಈ ಯೋಜನೆಯಡಿ ಸಾಮಾನ್ಯ ವರ್ಗದಲ್ಲಿ ಲಭ್ಯ ಅನುದಾನದ ಅನುಸಾರವಾಗಿ ಈ ಯೋಜನೆಯಲ್ಲಿ ರೈತ ಬಾಂಧವರು ಹಿಟ್ಟಿನ ಗಿರಣಿ, ರೈಸ್ ಮಿಲ್, ಪಲ್ವಲೈಸರ್, ರವಾ ಮಿಲ್, ಕಾರಕುಟ್ಟುವ ಮಿಷನ್, ಶಾವ್ಗಿ ಮಷೀನ್, ರೋಟಿ ಮಷೀನ್ ಗಳು ಲಭ್ಯವಿದ್ದು ಶೇ 50ರ ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. 

ಇದನ್ನೂ ಓದಿ: Ujjwala Yojana-2023: ಉಜ್ವಲ ಯೋಜನೆಯಡಿ ಗ್ಯಾಸ್ ಸಬ್ಸಿಡಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಅದೇ ರೀತಿ ಎಣ್ಣೆಗಾನ 1HP ಯಿಂದ 10 HPವರೆಗೆ ಶೇಕಡ 75ರಷ್ಟು ಸಬ್ಸಿಡಿಯಲ್ಲಿ ಪಡೆಯಬಹುದಾಗಿದೆ. ಆದ್ದರಿಂದ ರೈತ ಬಾಂಧವರು ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಅರ್ಜಿ ಸಲ್ಲಿಸಿ ಮೇಲಿನ ಮಷೀನ್ ಗಳ ಖರೀದಿಗೆ ಸಹಾಯಧನ ಪಡೆಯಬವುದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು?

  • ಆಧಾರ್ ಕಾರ್ಡ ಪ್ರತಿ.
  • ಪಾಸ್ ಪೋರ್ಟ ಅಳತೆಯ ಪೋಟೋ.
  • ಪಹಣಿ/ಉತಾರ್/RTC.
  • ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪ ವರ್ಗದ ರೈತರಿಗೆ ಮಾತ್ರ).
  • ಬ್ಯಾಂಕ್ ಖಾತೆಯ ವಿವರ.
  • ಸವಲತ್ತನ್ನು ಪಡೆಯಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದಲ್ಲಿ, ಸಾಲ ಪಡೆದ ಬ್ಯಾಂಕಿನ ವಿವರ.
  • ರೈತರಿಂದ ರೂ.20/-ರ ಛಾಪಾ ಕಾಗದದ ಮೇಲೆ ಪಡೆದ ಸವಲತ್ತನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲವೆಂದು ಹಾಗೂ ಪರಬಾರೆ ಮಾಡುವುದಿಲ್ಲವೆಂದು ಘೋಷಣಾ ಪತ್ರ(ನಮೂನೆ ಲಭ್ಯತೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿ)
  • ಜಂಟಿ ಖಾತೆಯಿದ್ದಲ್ಲಿ ವಾರಸುದಾರರ ವಂಶವೃಕ್ಷ ಮತ್ತು ನಿರಕ್ಷೇಪಣಾ ಪತ್ರ(ನಮೂನೆ ಲಭ್ಯತೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿ)

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬೇಕು.

ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ನೀವು ಸಲ್ಲಿಸಿದ ಅರ್ಜಿಯನ್ನು ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು K-kisan ಪೋರ್ಟಲ್ ನಲ್ಲಿ ಆನ್ಲೈನ್ ನಲ್ಲಿ ದಾಖಲಿಸುತ್ತಾರೆ ತದನಂತರ ಅನುದಾನ ಲಭ್ಯತೆ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸದ ಫಲಾನುಭವಿಗಳ ಪಟ್ಟಿಯ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರ್ಜಿದಾರರಿಗೆ ರೈತರ ವಂತಿಕೆಯ ಹಣವನ್ನು ಮಶೀನ್ ಸರಬರಾಜು ಕಂಪನಿಯ ಖಾತೆಗೆ ವರ್ಗಾಹಿಸಲು ತಿಳಿಸುತ್ತಾರೆ.

ಇದನ್ನೂ ಓದಿ: PM-kisan state installment-ರಾಜ್ಯ ಸರಕಾರದ ಪಿ ಎಂ ಕಿಸಾನ್ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ಅರ್ಜಿದಾರರು ರೈತರ ವಂತಿಕೆಯನ್ನು ಮಶೀನ್ ಸರಬರಾಜು ಕಂಪನಿಗೆ RTGS ಮಾಡಿದ ಬಳಿಕ ಬ್ಯಾಂಕ್ ಸ್ಲಿಪ್ ಅನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿದ ಬಳಿಕ ಸಹಾಯಧನದಲ್ಲಿ ನಿಮಗೆ ಮಶೀನ್ ನೀಡುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: click here

Most Popular

Latest Articles

Related Articles