- Advertisment -
HomeNew postsFood Department-ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಕೆ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪತ್ರಿಕಾ ಪ್ರಕಟಣೆ!

Food Department-ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಕೆ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪತ್ರಿಕಾ ಪ್ರಕಟಣೆ!

Last updated on September 30th, 2024 at 03:22 pm

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹೊಸ ಅದ್ಯತಾ ಪಡಿತರ ಚೀಟಿ(Ration card) ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಇಂದು ಒಂದು ದಿನ ಅವಕಾಶ ನೀಡಿ ಈ ಹಿಂದೆ ಇಲಾಖೆಯಿಂದ ಹೊರಡಿಸಿದ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೊಸ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಇದರ ಸಂಪೂರ್ಣ ವಿವರವನ್ನು ಈ ಕೆಳಗೆ ಹಾಕಲಾಗಿದೆ.

ಇದನ್ನೂ ಓದಿ: MSP ragi rate-2023: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಈ ವರ್ಗದ ರೈತರಿಗೂ ಅವಕಾಶ! ಬೆಲೆ ಪ್ರತಿ ಕ್ವಿಂಟಾಲ್ ಗೆ 3846 ರೂ.

Food Department-ಪತ್ರಿಕಾ ಪ್ರಕಟಣೆ ವಿವರ ಹೀಗಿದೆ:

ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಈ ತಿಂಗಳು ದಿನಾಂಕ:29/11/2023 ಮತ್ತು 30/11/2023 ರಂದು ಸಮಯ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಹಾಗೂ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ದಿನಾಂಕ:03/12/2023 ರಂದು ಸಮಯ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿರುತ್ತದೆಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿತ್ತು. 

ಆದರೆ, ಸದರಿ ದಿನಾಂಕಗಳಂದು ತಾಂತ್ರಿಕ ದೋಷದ ಕಾರಣ ಈ ಸೇವೆಗಳು ಲಭ್ಯವಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಂದು ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುವುದೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿರುತ್ತದೆ ಎಂದು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಒಂದು ದಿನ ಅವಕಾಶ ಸಾಲದು:

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಅವಕಾಶ ನೀಡಿದರೆ ಸಾಲದು ಎನ್ನುತ್ತಾರ‍ೆ ಗ್ರಾಮ ಒನ್ ಕೇಂದ್ರದ ಪ್ರತಿ ನಿಧಿಗಳು ಏಕೆಂದರೆ ಏಕ ಕಾಲಕ್ಕೆ ಒಂದು ದಿನ ರಾಜ್ಯದ್ಯಂತ ಅರ್ಜಿ ಸಲ್ಲಿಸಲು ಅವಕಾಶ ನೀಡಿದಾಗ ಹೆಚ್ಚು ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸಲು ಮುಂದಾದಗ ಯಾರಿಗೂ ಅರ್ಜಿ ಸಲ್ಲಿಸಲು ಅಗದೇ ಸರ್ವರ್ ಡೌನ್ ಅಗುವ ಸಮಸ್ಯೆ ತಲೆದೂರುತ್ತದೆ.

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

ವಿಭಾಗವಾರು ದಿನಾಂಕ ನಿಗದಿಪಡಿಸುವುದು ಉತ್ತಮ: 

ಈ ಹಿಂದೆ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ವಿಭಾಗವಾರು ದಿನಾಂಕ ನಿಗದಿಪಡಿಸಿದ ರೀತಿಯಲ್ಲಿ ಹೊಸ ಪಡಿತರ ಚೀಟಿಗೂ ಅರ್ಜಿ ಸಲ್ಲಿಸಲು ವಿಭಾಗವಾರು ದಿನಾಂಕ ಮತ್ತು ಸಮಯ ನಿಗದುಪಡಿಸಿದ್ದರೆ ಯಾರಿಗೂ ಸಮಸ್ಯೆಯಾಗುವುದಿಲ್ಲ ಎನ್ನುತಾರೆ ಗ್ರಾಮ ಒನ್ ಕೇಂದ್ರದ ಪ್ರತಿ ನಿಧಿಗಳು.

ಗೊಂದಲಕ್ಕೆ ಒಳಗಾದ ಅರ್ಜಿದಾರರು:

ಈ ಹಿಂದೆ ದಿನಾಂಕ ನಿಗದಿಪಡಿಸಿ ಈಗ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆಯನ್ನು ಮುಂದಕ್ಕೆ ಹಾಕಿದರಿಂದ ಅರ್ಜಿ ಸಲ್ಲಿಸಲು ದಾಖಲಾತಿಗಳನ್ನು ತಯಾರು ಮಾಡಿಕೊಂಡು ಗ್ರಾಮ ಒನ್ ,ಕರ್ನಾಟಕ ಒನ್ ಇತರೆ  ಕೇಂದ್ರಗಳಿಗೆ ಭೇಟಿ ಮಾಡಿ ಅನಗತ್ಯ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದೆ ಇನ್ನು ಮುಂದೆಯಾದರು ಸರಿ ರೀತಿಯಲ್ಲಿ ವ್ಯವಸ್ಥಿತವಾಗಿ ದಿನಾಂಕ ನಿಗದಿಪಡಿಸಿ ಸುಗಮವಾಗಿ ಅರ್ಜಿ ಸಲ್ಲಿಸಲು ಇಲಾಖೆಯು ಕ್ರಮ ಕೈಗೊಳ್ಳಬೇಕು ಎನ್ನುತಾರೆ ಅರ್ಜಿದಾರರು.

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!

- Advertisment -
LATEST ARTICLES

Related Articles

- Advertisment -

Most Popular

- Advertisment -