MSP Price-2024: ದೇಶದ ರೈತರಿಗೆ ಗುಡ್ ನ್ಯೂಸ್ ಭತ್ತ,ರಾಗಿ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

April 25, 2024 | Siddesh
MSP Price-2024: ದೇಶದ ರೈತರಿಗೆ ಗುಡ್ ನ್ಯೂಸ್ ಭತ್ತ,ರಾಗಿ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!
Share Now:

ಕೇಂದ್ರ ಸರಕಾರದ ಎರಡನೇ ಸಂಪುಟ ಸಭೆಯಲ್ಲಿ ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಲಾಗಿದ್ದು ಭತ್ತ,ರಾಗಿ,ಮೆಕ್ಕೆಜೋಳ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ(MSP Price-2024) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

ಮೊದಲ ಸಂಪುಟ ಸಭೆಯಲ್ಲಿ 17ನೇ ಕಂತಿನ ಪಿ ಎಂ ಕಿಸಾನ್ ಅರ್ಥಿಕ ನೆರವವನ್ನು ರೈತರಿಗೆ ವರ್ಗಾವಣೆ ಮಾಡಲು ಅನುಮೋದನೆ ನೀಡಲಾಗಿತ್ತು ಈಗ ಎರಡನೇ ಸಂಪುಟ ಸಭೆಯಲ್ಲಿ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು(MSP)ಏರಿಕೆ ಮಾಡಲಾಗಿದೆ.

ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2024-25ರ ಮಾರುಕಟ್ಟೆ  ಮುಂಗಾರು ಹಂಗಾಮುಗಾಗಿ ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ. ಹಿಂದಿನ ವರ್ಷಕ್ಕಿಂತ ಬೆಂಬಲ ಬೆಲೆಯಲ್ಲಿ ಅಧಿಕ ಸಂಪೂರ್ಣ ಹೆಚ್ಚಳವನ್ನು ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗೆ ಶಿಫಾರಸು ಮಾಡಲಾಗಿದೆ. ಉದಾ: ಹುಚ್ಚೆಳ್ಳು (ಕ್ವಿಂಟಲ್‌ಗೆ ರೂ.983/-̧) ಎಳ್ಳು (ಕ್ವಿಂಟಲ್‌ಗೆ ರೂ.632/-) ಮತ್ತು ತೊಗರಿ/ಅರ್ಹರ್ (ಕ್ವಿಂಟಲ್‌ಗೆ ರೂ.550/-).

ಇದನ್ನೂ ಓದಿ: karnataka dam water level-2024: ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ ಹೀಗಿದೆ!

MSP price list-2024: ಯಾವ ಬೆಳೆಗೆ ಎಷ್ಟು ಹೆಚ್ಚಳ ಮಾಡಲಾಗಿದೆ?

ಬೆಳೆಗಳುಬೆಂಬಲ ಬೆಲೆ (2024-25)ಬೆಂಬಲ ಬೆಲೆ (2023-24)ಒಟ್ಟು ಏರಿಕೆ
ಧಾನ್ಯಗಳು
ಭತ್ತಸಾಮಾನ್ಯ23002183117
ಎ ದರ್ಜೆ23202203117
ಜೋಳಹೈಬ್ರಿಡ್33713180191
ಮಾಲ್ದಂಡಿ"34213225196
ಸಜ್ಜೆ26252500125
ರಾಗಿ42903846444
ಮೆಕ್ಕೆಜೋಳ22252090135
ದ್ವಿದಳ ಧಾನ್ಯಗಳು   
ತೊಗರಿ/ಅರ್ಹರ್75507000550
ಹೆಸರುಕಾಳು86828558124
ಉದ್ದಿನ ಕಾಳು74006950450
ಎಣ್ಣೆ ಕಾಳುಗಳು   
ನೆಲಗಡಲೆ67836377406
ಸೂರ್ಯಕಾಂತಿ ಬೀಜ72806760520
ಸೋಯಾಬೀನ್(ಹಳದಿ)48924600292
ಎಳ್ಳು92678635632
ಹುಚ್ಚೆಳ್ಳು87177734983
ವಾಣಿಜ್ಯ   
ಹತ್ತಿಮಧ್ಯಮ ಸ್ಟೇಪಲ್71216620501
ಉದ್ದ ಸ್ಟೇಪಲ್75217020501

ಇದನ್ನೂ ಓದಿ: Crop survey- ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ವರದಿ ಬಿಡುಗಡೆ! ಇಲ್ಲಿದೆ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್

2024-25 ರ ಮಾರುಕಟ್ಟೆ ಹಂಗಾಮುಗಾಗಿ ಮುಂಗಾರು ಬೆಳೆಗಳಿಗೆ ಎಂ ಎಸ್‌ ಪಿ ಯಲ್ಲಿನ ಹೆಚ್ಚಳವು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂ ಎಸ್‌ ಪಿ ಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ, ನಿರೀಕ್ಷಿತ ಲಾಭವು ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಅತ್ಯಧಿಕವಾಗಿರುತ್ತದೆ. ಉದಾ: ಸಜ್ಜೆ  (77%), ತೊಗರಿ (59%), ಮೆಕ್ಕೆಜೋಳ (54%) ಮತ್ತು ಉದ್ದಿನಕಾಳು (52%) ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ಅವುಗಳ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ಲಾಭವು ಶೇ.50 ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನದಂತಹ ಧಾನ್ಯಗಳನ್ನು ಹೊರತುಪಡಿಸಿ, ಈ ಬೆಳೆಗಳಿಗೆ ಹೆಚ್ಚಿನ ಎಂ ಎಸ್‌ ಪಿ ಯನ್ನು ನೀಡುವ ಮೂಲಕ ಸರ್ಕಾರವು ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ.

ಇದನ್ನೂ ಓದಿ: PM-Kisan amount- 9.3 ಕೋಟಿ ರೈತರ ಖಾತೆಗೆ ಪಿ ಎಂ ಕಿಸಾನ್ ಹಣ! ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವಿಧಾನ!

ದೇಶದ ಒಟ್ಟು ಉತ್ಪನ್ನಗಳ ಉತ್ಪಾದನೆ ವಿವರ ಹೀಗಿದೆ:

2023-24 ರ ಉತ್ಪಾದನೆಯ 3 ನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 3288.6 ಲಕ್ಷ ಮೆಟ್ರಿಕ್ ಟನ್ (LMT) ಎಂದು ಅಂದಾಜಿಸಲಾಗಿದೆ ಮತ್ತು ಎಣ್ಣೆಕಾಳುಗಳ ಉತ್ಪಾದನೆಯು 395.9 ಲಕ್ಷ ಮೆಟ್ರಿಕ್ ಟನ್ ಅನ್ನು ಮುಟ್ಟುತ್ತಿದೆ. 2023-24ರಲ್ಲಿ, ಅಕ್ಕಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನ ಮತ್ತು ಹತ್ತಿಯ ಮುಂಗಾರು ಹಂಗಾಮಿನ ಉತ್ಪಾದನೆಯು ಕ್ರಮವಾಗಿ 1143.7 ಲಕ್ಷ ಮೆಟ್ರಿಕ್ ಟನ್, 68.6 ಲಕ್ಷ ಮೆಟ್ರಿಕ್ ಟನ್, 241.2 ಲಕ್ಷ ಮೆಟ್ರಿಕ್ ಟನ್, 130.3 ಲಕ್ಷ ಮೆಟ್ರಿಕ್ ಟನ್ ಮತ್ತು 325.2 ಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಬಲ ಬೆಲೆಯ ಅಧಿಕೃತ ಪತ್ರಿಕಾ ಪ್ರಕಟಣೆ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Download Now

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: