MY LIC App-ಎಲ್ಐಸಿಯಿಂದ ‘ಮೈ ಎಲ್ಐಸಿ’ ಹೊಸ ಆಪ್ ಬಿಡುಗಡೆ!ಬೆರಳ ತುದಿಯಲ್ಲಿ ಪಾಲಸಿ ಮಾಹಿತಿ!

April 19, 2026 | Siddesh
MY LIC App-ಎಲ್ಐಸಿಯಿಂದ ‘ಮೈ ಎಲ್ಐಸಿ’ ಹೊಸ ಆಪ್ ಬಿಡುಗಡೆ!ಬೆರಳ ತುದಿಯಲ್ಲಿ ಪಾಲಸಿ ಮಾಹಿತಿ!
Share Now:

ಬೆಂಗಳೂರು: ಜೀವ ವಿಮಾ ಕ್ಷೇತ್ರದಲ್ಲಿ ದಶಕಗಳ ನಂಬಿಕೆಯನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ (LIC), ಈಗ ತನ್ನ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಅತ್ಯಾಧುನಿಕ 'ಮೈ ಎಲ್ಐಸಿ' (MY LIC) ಸೂಪರ್ ಆಪ್ ಅನ್ನು ಪರಿಚಯಿಸಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಹಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಮನೆಯಲ್ಲೇ ಕುಳಿತು ತಮ್ಮ ವಿಮಾ ಪಾಲಿಸಿಗಳನ್ನು ನಿರ್ವಹಿಸಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ. ನಿಮ್ಮ ಪಾಲಿಸಿ ವಿವರಗಳು, ಪ್ರೀಮಿಯಂ ಪಾವತಿ ಮತ್ತು ಪಾಲಿಸಿ ಪ್ರಯೋಜನಗಳ ಸಂಪೂರ್ಣ ಮಾಹಿತಿ ಈಗ ಕೇವಲ ಒಂದು ಬೆರಳ ತುದಿಯಲ್ಲಿ ಲಭ್ಯವಿದೆ.

ಈ ಹೊಸ ಮೊಬೈಲ್ ಅಪ್ಲಿಕೇಶನ್ ಕೇವಲ ಮಾಹಿತಿ ನೀಡುವ ತಾಣವಷ್ಟೇ ಅಲ್ಲದೆ, ಗ್ರಾಹಕರಿಗೆ(MY LIC App Information) ಸಂಪೂರ್ಣ ವಿಮಾ ಸೇವೆಯನ್ನು ಒದಗಿಸುವ ಒಂದು ಸಮಗ್ರ ವೇದಿಕೆಯಾಗಿದೆ. ಪಾಲಿಸಿದಾರರು ತಮ್ಮ ಹಳೆಯ ಪಾಲಿಸಿಗಳನ್ನು ನವೀಕರಿಸಲು, ಹೊಸ ಪಾಲಿಸಿಗಳನ್ನು ಆಯ್ಕೆ ಮಾಡಲು ಮತ್ತು ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಇದು ಪೂರಕವಾಗಿದೆ. ಗ್ರಾಹಕರ ಸಮಯವನ್ನು ಉಳಿಸುವ ಮತ್ತು ವ್ಯವಹಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಐಸಿ ಈ ಡಿಜಿಟಲ್ ಹೆಜ್ಜೆಯನ್ನು ಇಟ್ಟಿದೆ.

ಇದನ್ನೂ ಓದಿ: Electricity Bill-ಮನೆಯಲ್ಲಿ ಬಳಸುವ ವಿದ್ಯುತ್ ದರ ಪರಿಷ್ಕರಣೆ! ಇಲ್ಲಿದೆ ಮಹತ್ವದ ಮಾಹಿತಿ!

'ಮೈ ಎಲ್ಐಸಿ' ಆಪ್ ಮೂಲಕ ನೀವು ನಿಮ್ಮ ವಿಮೆಯ ಸ್ಥಿತಿಗತಿಗಳನ್ನು ರಿಯಲ್ ಟೈಮ್‌ನಲ್ಲಿ(MY LIC Mobile Application) ಪರಿಶೀಲಿಸಬಹುದು. ಕಾಗದ ರಹಿತ ಸೇವೆ ಮತ್ತು ಸುಲಭವಾದ ಇ-ಕೆವೈಸಿ (e-KYC) ಪ್ರಕ್ರಿಯೆಯು ಗ್ರಾಹಕರಿಗೆ ಯಾವುದೇ ಕಿರಿಕಿರಿ ಇಲ್ಲದ ಅನುಭವವನ್ನು ನೀಡುತ್ತದೆ. ನೀವು ಎಲ್ಲೇ ಇರಲಿ, ನಿಮ್ಮ ಪಾಲಿಸಿಗಳು ಮತ್ತು ಪಾವತಿಗಳ ಮೇಲೆ ನಿಗಾ ಇರಿಸಲು ಈ ಆಪ್ ಒಂದು ಪರಿಪೂರ್ಣ ಸಾಧನವಾಗಿದ್ದು, ಲಕ್ಷಾಂತರ ಗ್ರಾಹಕರು ಈಗಾಗಲೇ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಮೊಬೈಲ್ ಅಪ್ಲಿಕೇಶನ್ ಬಳಸುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

MY LIC App-ಈ ಅಪ್ಲಿಕೇಶನ್ ಮೂಲಕ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು?

ಭಾರತೀಯ ಜೀವ ವಿಮಾ ನಿಗಮದಿಂದ ಬಿಡುಗಡೆ ಮಾಡಿರುವ MY LIC ಮೊಬೈಲ್ ಅಪ್ಲಿಕೇಶನ್ ಅನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಕಚೇರಿಯನ್ನು ಭೇಟಿ ಮಾಡಿ ಪಡೆಯಬಹುದಂತಾದ ಅನೇಕ ಸೇವೆಗಳನ್ನು ಈ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಪಡೆಯಬಹುದಾಗಿದೆ. ಇವುಗಳ ಪಟ್ಟಿ ಈ ಕೆಳಗಿನಂತಿವೆ:

360 ಡಿಗ್ರಿ ಪಾಲಿಸಿ ವಿವರವನ್ನು ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಪಡೆಯಬಹುದು ಅಂದರೆ ನೀವು ಏಜೆಂಟ್ ಮೂಲಕ LIC ಪಾಲಿಸಿ ಮಾಡಿಸಿದ್ದರೆ ನಿಮ್ಮ ಎಲ್ಲಾ ಪಾಲಿಸಿಗಳ ವಿವರಗಳನ್ನು ಒಂದೇ ಸ್ಥಳದಲ್ಲಿ ಅಂದರೆ ಈ ಅಪ್ಲಿಕೇಶನ್ ನಲ್ಲಿ ನೋಡಬಹುದು.

ಇದನ್ನೂ ಓದಿ: Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!

LIC ಪಾಲಿಸಿಯ ಪ್ರಿಮಿಯಂ ಅನ್ನು ಸಹ ಈ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಮನೆಯಿಂದಲೇ ಪಾವತಿ ಮಾಡಲು ಅವಕಾಶ ನೀಡಲಾಗಿದೆ.

ಕಾಗದ ರಹಿತವಾಗಿ ಪಾಲಿಸಿ ಆಧಾರಿತ ಸಾಲಕ್ಕೆ ಅರ್ಜಿ ಸಲ್ಲಿಸಲು ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಅವಕಾಶ ನೀಡಲಾಗಿದ್ದು ತ್ವರಿತವಾಗಿ ನಿಮ್ಮ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದು.

ಎಲ್ಐಸಿಯ ವಿವಿಧ ಪಾಲಿಸಿಗಳನ್ನು ಆನ್‌ಲೈನ್ ಮೂಲಕವೇ ಎಲ್ಲಾ ವಿವರವನ್ನು ಚೆಕ್ ಮಾಡಿ ಈ ಅಪ್ಲಿಕೇಶನ್ ಮೂಲಕವೇ ಪಾಲಿಸಿಯನ್ನು ಖರೀದಿಸಬಹುದು.

ಲ್ಯಾಪ್ಸ್ ಆಗಿರುವ (ಸ್ಥಗಿತಗೊಂಡಿರುವ) ಪಾಲಿಸಿಗಳನ್ನು ಆನ್‌ಲೈನ್ ಮೂಲಕವೇ ಪುನಶ್ಚೇತನಗೊಳಿಸಬಹುದು.

ನಿಮ್ಮ ಪಾಲಿಸಿಯಿಂದ ಸಿಗುವ ಲಾಭಗಳು ಮತ್ತು ಬೋನಸ್ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Free Computer Courses-38 ದಿನದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

MY LIC App

ಇದನ್ನೂ ಓದಿ: 2nd Puc Exam-2: ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಧಿಕೃತ ದಿನಾಂಕ ಪ್ರಕಟ!

How To Download MY LIC App-ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಹೇಗೆ?

ಗ್ರಾಹಕರು ಸುಲಭವಾಗಿ ಈ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒಂದೆರಡು ಕ್ಲಿಕ್ ನಲ್ಲಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು:

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ (Google Play Store) ಹೋಗಿ 'MY LIC' ಎಂದು ಹುಡುಕಿ ಅಥವಾ ಇಲ್ಲಿ ನೀಡಿದ ಲಿಂಕ್ ಮೂಲಕ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದೇ ಮಾದರಿಯಲ್ಲಿ ಐಫೋನ್ ಬಳಕೆದಾರರು ಆಪಲ್ ಆಪ್ ಸ್ಟೋರ್ (App Store) ಮೂಲಕ ಇದನ್ನು ಡೌನ್ಲೋಡ್ ಮಾಡಬಹುದು.

Step-1: ಗ್ರಾಹಕರು ಮೊದಲಿಗೆ ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಧಿಕೃತ 'MY LIC' ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: PM-Kisan Application-ಪಿಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸಲು ಅವಕಾಶ! ಇಂದೇ ಅರ್ಜಿ ಸಲ್ಲಿಸಿ!

Step-2: ನಂತರ ಅಪ್ಲಿಕೇಶನ್ ತೆರೆದು ನಿಮ್ಮ ಪಾಲಿಸಿ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ OTP ಅನ್ನು ನಮೂದಿಸಿ ಲಾಗಿನ್ ಆಗಿ.

Step-3: ಲಾಗಿನ್ ಅದ ನಂತರ ಇಲ್ಲಿ ನಿಮ್ಮ ಪಾಲಿಸಿಯ ಎಲ್ಲಾ ವಿವರ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯ ಬಗ್ಗೆ ತಿಳಿಯಬಹುದು.

MY LIC App Benefits-ಮೈ ಎಲ್.ಐ.ಸಿ ಆಪ್ ಬಳಸುವುದರಿಂದ ಆಗುವ ಪ್ರಯೋಜನಗಳೇನು?

ಸಮಯದ ಉಳಿತಾಯ: ಎಲ್ಐಸಿ ಕಚೇರಿಗೆ ಹೋಗಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ.

ಪಾರದರ್ಶಕತೆ: ನಿಮ್ಮ ಹಣ ಎಷ್ಟು ಜಮೆಯಾಗಿದೆ ಮತ್ತು ಪಾಲಿಸಿಯ ಮೌಲ್ಯವೆಷ್ಟು ಎಂಬುದು ನಿಮ್ಮ ಕಣ್ಣೆದುರಿಗೇ ಇರುತ್ತದೆ.

ಭದ್ರತೆ: ಸುರಕ್ಷಿತ ಮತ್ತು ಸುಲಭವಾದ ಡಿಜಿಟಲ್ ಪಾವತಿ ವಿಧಾನಗಳು.

ಕಾಗದ ರಹಿತ ವ್ಯವಹಾರ: ಪರಿಸರ ಸ್ನೇಹಿ ಮತ್ತು ಕಾಗದ ಪತ್ರಗಳ ಕಿರಿಕಿರಿ ಇಲ್ಲದ ಇ-ಕೆವೈಸಿ ಸೌಲಭ್ಯ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: