AO and AAO Recruitment-ಕೃಷಿ ಇಲಾಖೆಯಲ್ಲಿ ಬೃಹತ್ ನೇಮಕಾತಿ: 600ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನ!

April 20, 2026 | Siddesh
AO and AAO Recruitment-ಕೃಷಿ ಇಲಾಖೆಯಲ್ಲಿ ಬೃಹತ್ ನೇಮಕಾತಿ: 600ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನ!
Share Now:

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿಯಿರುವ(AO and AAO Notification 2026) 'ಗ್ರೂಪ್-ಬಿ' ವೃಂದದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 632 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯು ಕೃಷಿ ಪದವೀಧರರಿಗೆ ದೊಡ್ಡ ಅವಕಾಶವಾಗಿದ್ದು, ಒಟ್ಟು ಹುದ್ದೆಗಳಲ್ಲಿ ಶೇ. 85 ರಷ್ಟು ಸೀಟುಗಳನ್ನು ಕೃಷಿ ವಿಜ್ಞಾನ ಪದವೀಧರರಿಗೆ(Karnataka Agriculture Department) ಹಾಗೂ ಇನ್ನುಳಿದ ಶೇ. 15 ರಷ್ಟು ಹುದ್ದೆಗಳನ್ನು ಕೃಷಿ ಅಭಿಯಂತರ ಮತ್ತು ಇತರ ಸಂಬಂಧಿತ ತಾಂತ್ರಿಕ ಪದವೀಧರರಿಗೆ ಮೀಸಲಿರಿಸಲಾಗಿದೆ. ಪಾರದರ್ಶಕ ಆಯ್ಕೆ ಪ್ರಕ್ರಿಯೆಗಾಗಿ ಕೆಇಎ(KEA) ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿ ಇಲಾಖೆಯನ್ನು ಬಲಪಡಿಸುವುದು ಸರ್ಕಾರದ ಈ ನಡೆಯ ಹಿಂದಿನ ಆಶಯವಾಗಿದೆ.

ಇದನ್ನೂ ಓದಿ: MY LIC App-ಎಲ್ಐಸಿಯಿಂದ 'ಮೈ ಎಲ್ಐಸಿ' ಹೊಸ ಆಪ್ ಬಿಡುಗಡೆ!ಬೆರಳ ತುದಿಯಲ್ಲಿ ಪಾಲಸಿ ಮಾಹಿತಿ!

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು(AO and AAO) ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಹೊಂದಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 10, 2026 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯು ಜೂನ್ ತಿಂಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಿ ಈ ನೇಮಕಾತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಪ್ರಸ್ತುತ ಇಂದಿನ ಲೇಖನದಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾಧಿಕಾರದಿಂದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಅರ್ಜಿ ಸಲ್ಲಿಸಲು(Agriculture Officer Job) ನಿಗದಿಪಡಿಸಿರುವ ಪ್ರಮುಖ ದಿನಾಂಕ, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು, ಹುದ್ದೆವಾರು ಪ್ರತಿ ತಿಂಗಳ ವೇತನದ ಮಾಹಿತಿ ಸೇರಿದಂತೆ ಇನ್ನಿತರೆ ಅವಶ್ಯಕ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Electricity Bill-ಮನೆಯಲ್ಲಿ ಬಳಸುವ ವಿದ್ಯುತ್ ದರ ಪರಿಷ್ಕರಣೆ! ಇಲ್ಲಿದೆ ಮಹತ್ವದ ಮಾಹಿತಿ!

ಒಟ್ಟು ಹುದ್ದೆಗಳ ವಿವರ:

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ಕೃಷಿ ಅಧಿಕಾರಿ (Agriculture Officer)81
ಸಹಾಯಕ ಕೃಷಿ ಅಧಿಕಾರಿ (Asst. Agriculture Officer)551
ಒಟ್ಟು632

ವೇತನ ಶ್ರೇಣಿ:

  • ಕೃಷಿ ಅಧಿಕಾರಿ: ₹69,250 – ₹1,34,200
  • ಸಹಾಯಕ ಕೃಷಿ ಅಧಿಕಾರಿ: ₹65,950 – ₹1,24,900

ಇದನ್ನೂ ಓದಿ: Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19.04.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.05.2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 12.05.2026
  • ಪರೀಕ್ಷಾ ದಿನಾಂಕ: 06.06.2026 ಮತ್ತು 07.06.2026

ಕೃಷಿ ಇಲಾಖೆಯ ಬೇಡಿಕೆಯಂತೆ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಕೆಇಎ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿನ ಅರ್ಹತೆಗಳನ್ನು ಸರಿಯಾಗಿ ಗಮನಿಸಬೇಕು. ಯಾವುದೇ ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿತನ ರದ್ದಾಗಲಿದೆ. ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಸಿದ್ಧರಾಗಿ." — ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

ಇದನ್ನೂ ಓದಿ: Free Computer Courses-38 ದಿನದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: PM-Kisan Application-ಪಿಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸಲು ಅವಕಾಶ! ಇಂದೇ ಅರ್ಜಿ ಸಲ್ಲಿಸಿ!

ಗರಿಷ್ಠ ವಯೋಮಿತಿ:

ವಿವಿಧ ವರ್ಗಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ವರ್ಗ (Category)ಗರಿಷ್ಠ ವಯೋಮಿತಿ
ಸಾಮಾನ್ಯ ಅರ್ಹತೆ (General Merit)40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ43 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-145 ವರ್ಷಗಳು

1) ಕೃಷಿ ಅಧಿಕಾರಿ (Agriculture Officer):

ಈ ಹುದ್ದೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ:

  • ಶೇ. 85 ರಷ್ಟು ಹುದ್ದೆಗಳಿಗೆ (ಕೃಷಿ ಪದವೀಧರರು):
    • ಬಿ.ಎಸ್ಸಿ. (ಕೃಷಿ) ಅಥವಾ ಬಿ.ಎಸ್ಸಿ. (ಆನರ್ಸ್) ಕೃಷಿ ಪದವಿ ಹೊಂದಿರಬೇಕು.
  • ಶೇ. 15 ರಷ್ಟು ಹುದ್ದೆಗಳಿಗೆ (ಇತರ ತಾಂತ್ರಿಕ ಪದವೀಧರರು):
    • ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ)
    • ಬಿ.ಟೆಕ್ (ಆಹಾರ ತಂತ್ರಜ್ಞಾನ)
    • ಬಿ.ಎಸ್ಸಿ. (ಕೃಷಿ ಮಾರುಕಟ್ಟೆ ಮತ್ತು ಸಹಕಾರ)
    • ಬಿ.ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತು ಸಹಕಾರ
    • ಬಿ.ಎಸ್ಸಿ. (ಆನರ್ಸ್) ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್
    • ಬಿ.ಎಸ್ಸಿ. (ಕೃಷಿ ಜೈವಿಕ ತಂತ್ರಜ್ಞಾನ)
    • ಬಿ.ಟೆಕ್ (ಜೈವಿಕ ತಂತ್ರಜ್ಞಾನ)
    • ಬಿ.ಎಸ್ಸಿ. (ಅಗ್ರಿಕಲ್ಚರಲ್ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)

ಇದನ್ನೂ ಓದಿ: 2nd Puc Exam-2: ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಧಿಕೃತ ದಿನಾಂಕ ಪ್ರಕಟ!

2) ಸಹಾಯಕ ಕೃಷಿ ಅಧಿಕಾರಿ (Assistant Agriculture Officer):

  • ಶೇ. 85 ರಷ್ಟು ಹುದ್ದೆಗಳಿಗೆ:
    • ಬಿ.ಎಸ್ಸಿ. (ಕೃಷಿ) ಅಥವಾ ಬಿ.ಎಸ್ಸಿ. (ಆನರ್ಸ್) ಕೃಷಿ ಪದವಿ.
  • ಶೇ. 15 ರಷ್ಟು ಹುದ್ದೆಗಳಿಗೆ:
    • ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ / ಆಹಾರ ತಂತ್ರಜ್ಞಾನ)
    • ಬಿ.ಎಸ್ಸಿ. (ಕೃಷಿ ಮಾರುಕಟ್ಟೆ ಮತ್ತು ಸಹಕಾರ)
    • ಬಿ.ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತು ಸಹಕಾರ
    • ಬಿ.ಎಸ್ಸಿ. (ಆನರ್ಸ್) ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್
    • ಬಿ.ಎಸ್ಸಿ. (ಕೃಷಿ ಜೈವಿಕ ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ)
    • ಬಿ.ಎಸ್ಸಿ. ಅಥವಾ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)

ಪ್ರಮುಖ ಸೂಚನೆಗಳು:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ (10.05.2026) ಅಭ್ಯರ್ಥಿಯು ಪದವಿ ಪೂರೈಸಿ ಅಂಕಪಟ್ಟಿ ಹೊಂದಿರಬೇಕು. ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅಭ್ಯರ್ಥಿಯು ಭಾರತದ ಕಾನೂನು ರೀತ್ಯಾ ಸ್ಥಾಪಿತವಾದ ಮತ್ತು ICAR (Indian Council of Agriculture Research) ಅಥವಾ AICTE ಇಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.

ಅಂಚೆ ತೆರಪು ಅಥವಾ ದೂರಶಿಕ್ಷಣದ ಮೂಲಕ ಪಡೆದ ತಾಂತ್ರಿಕ ಪದವಿಗಳನ್ನು ಪರಿಗಣಿಸಲಾಗುವುದಿಲ್ಲ.

  • AO and AAO Online Application-ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್- Apply Now
  • AO and AAO Notification-ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: