SSLC Result-2026 ಎಸ್ಸೆಸ್ಸೆಲ್ಸಿ ಫಲಿತಾಂಶ ವಿಳಂಬ ಸಾಧ್ಯತೆ: ಹೈಕೋರ್ಟ್ ತೀರ್ಪಿನ ಮೇಲೆ ವಿದ್ಯಾರ್ಥಿಗಳ ಭವಿಷ್ಯ!

April 21, 2026 | Siddesh
SSLC Result-2026 ಎಸ್ಸೆಸ್ಸೆಲ್ಸಿ ಫಲಿತಾಂಶ ವಿಳಂಬ ಸಾಧ್ಯತೆ: ಹೈಕೋರ್ಟ್ ತೀರ್ಪಿನ ಮೇಲೆ ವಿದ್ಯಾರ್ಥಿಗಳ ಭವಿಷ್ಯ!
Share Now:

ಈ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಫಲಿತಾಂಶದ ಕುರಿತು ಆತಂಕ ಶುರುವಾಗಿದೆ. ಪ್ರತಿ ವರ್ಷದಂತೆ ಏಪ್ರಿಲ್ ಅಂತ್ಯದ ವೇಳೆಗೆ ಫಲಿತಾಂಶ(SSLC Result Date) ನಿರೀಕ್ಷಿಸಲಾಗಿತ್ತಾದರೂ, ಈ ಬಾರಿ ತಾಂತ್ರಿಕ ಮತ್ತು ಕಾನೂನಾತ್ಮಕ ಕಾರಣಗಳಿಂದಾಗಿ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯ ಸರ್ಕಾರವು ತೃತೀಯ ಭಾಷಾ ವಿಷಯದಲ್ಲಿ ಅಂಕಗಳ ಬದಲಿಗೆ ಗ್ರೇಡಿಂಗ್ ಪದ್ಧತಿ ಜಾರಿಗೆ ತರಲು ಮುಂದಾಗಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ವಿಷಯವು ನ್ಯಾಯಾಲಯದ ಮೆಟ್ಟಿಲೇರಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಮೂಲತಃ ಏಪ್ರಿಲ್ 24ರಂದು ಫಲಿತಾಂಶವನ್ನು ಘೋಷಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ತೃತೀಯ ಭಾಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೈಕೋರ್ಟ್ ಈಗಾಗಲೇ ಗ್ರೇಡಿಂಗ್ ಬದಲಿಗೆ ಅಂಕಗಳನ್ನೇ ನೀಡುವಂತೆ ಸೂಚನೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಇಂದು (ಏಪ್ರಿಲ್ 21) ನಡೆಯಲಿರುವ ನ್ಯಾಯಾಲಯದ ವಿಚಾರಣೆಯ ನಂತರವಷ್ಟೇ ಫಲಿತಾಂಶದ ಅಂತಿಮ ಚಿತ್ರಣ ಲಭ್ಯವಾಗಲಿದೆ.

ಇದನ್ನೂ ಓದಿ: AO and AAO Recruitment-ಕೃಷಿ ಇಲಾಖೆಯಲ್ಲಿ ಬೃಹತ್ ನೇಮಕಾತಿ: 600ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನ!

ಈ ಗೊಂದಲದಿಂದಾಗಿ ಸುಮಾರು 8.30 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ವಿಚಾರಣೆ ಸುದೀರ್ಘವಾಗಿ ಮುಂದುವರಿದರೆ, ಫಲಿತಾಂಶ(SSLC Result) ಪ್ರಕಟಣೆ ಮತ್ತಷ್ಟು ದಿನಗಳ ಕಾಲ ಮುಂದೂಡಲ್ಪಡಬಹುದು. ಈಗಾಗಲೇ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶಗಳು ಹೊರಬಿದ್ದಿದ್ದು, ಪಿಯು ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುತ್ತಿರುವ ಈ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತಡವಾದರೆ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಕಾಲೇಜು ಸೀಟು ಪಡೆಯಲು ಸಮಸ್ಯೆಯಾಗಬಹುದು ಎಂಬ ಆತಂಕ ಪೋಷಕರಲ್ಲಿ ಮನೆಮಾಡಿದೆ.

ಇದನ್ನೂ ಓದಿ: Electricity Bill-ಮನೆಯಲ್ಲಿ ಬಳಸುವ ವಿದ್ಯುತ್ ದರ ಪರಿಷ್ಕರಣೆ! ಇಲ್ಲಿದೆ ಮಹತ್ವದ ಮಾಹಿತಿ!

SSLC Result Delay Reasons-ಫಲಿತಾಂಶ ವಿಳಂಬವಾಗಲು ಕಾರಣವೇನು?

ತೃತೀಯ ಭಾಷೆಯ ವಿಷಯದಲ್ಲಿ ಅಂಕಗಳ ಬದಲಿಗೆ 'ಗ್ರೇಡಿಂಗ್' ನೀಡುವ ಸರ್ಕಾರದ ಹೊಸ ನೀತಿ.

ಈ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿರುವುದು.

ಹೈಕೋರ್ಟ್ ಗ್ರೇಡಿಂಗ್ ಬದಲಿಗೆ ಅಂಕಗಳನ್ನೇ ನೀಡಲು ಸೂಚಿಸಿರುವುದು ಮತ್ತು ಸರ್ಕಾರ ಅದನ್ನು ಮರುಪರಿಶೀಲಿಸಲು ಕೋರಿರುವುದು.

ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಮಂಡಳಿಯು ಅಧಿಕೃತವಾಗಿ ಫಲಿತಾಂಶದ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗದಿರುವುದು.

ಇದನ್ನೂ ಓದಿ: MY LIC App-ಎಲ್ಐಸಿಯಿಂದ 'ಮೈ ಎಲ್ಐಸಿ' ಹೊಸ ಆಪ್ ಬಿಡುಗಡೆ!ಬೆರಳ ತುದಿಯಲ್ಲಿ ಪಾಲಸಿ ಮಾಹಿತಿ!

SSLC Exam 2026-ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವರದಿಯ ಪ್ರಕಾರ ರಾಜ್ಯದ್ಯಂತ ಈ ಬಾರಿ SSLC ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಈ ಕೆಳಗಿನಂತಿದೆ:

  • ಬಾಲಕರು: 4.25 ಲಕ್ಷ
  • ಬಾಲಕಿಯರು: 4.05 ಲಕ್ಷ
  • ಒಟ್ಟು ವಿದ್ಯಾರ್ಥಿಗಳು: 8.30 ಲಕ್ಷ

ಇದನ್ನೂ ಓದಿ: Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!

KSEAB Board-ಈ ಬಗ್ಗೆ ಪರೀಕ್ಷಾ ಮಂಡಳಿ ಅಧಿಕಾರಿಯ ಪತ್ರಿಕಾ ಪ್ರಕಟಣೆ:

"ನ್ಯಾಯಾಲಯದಲ್ಲಿ ಯಾವ ಆದೇಶ ಬರುತ್ತದೆಯೋ ಅದರ ಪಾಲನೆ ಮಾಡಬೇಕಾಗುತ್ತದೆ. ತೃತೀಯ ಭಾಷೆ ವಿಚಾರದಲ್ಲಿ ಮೌಲ್ಯಮಾಪಕರು ಅಂಕ ನೀಡಿದ್ದಾರೆ. ಅದರ ಆಧಾರದಲ್ಲಿ ಅಂಕ ಅಥವಾ ಗ್ರೇಡಿಂಗ್ ನೀಡಬಹುದು. ಕೋರ್ಟ್‌ನಲ್ಲಿ ಮತ್ತಷ್ಟು ದಿನ ವಿಚಾರಣೆ ಸಾಗಿದರೆ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. -ಪ್ರಕಾಶ್ ಜಿ. ನಿಟ್ಟಾಲಿ, ಮುಖ್ಯಸ್ಥರು, ಪರೀಕ್ಷಾ ಮಂಡಳಿ(KSEAB).

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: