Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ?

July 9, 2025 | Siddesh
Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ?
Share Now:

ಇಫ್ಕೋ ಕಂಪನಿಯ ನ್ಯಾನೋ ಯೂರಿಯಾವನ್ನು(nano urea fertilizer) ಬಹುತೇಕ ರಾಜ್ಯದ ಎಲ್ಲಾ ಭಾಗಗಳಲ್ಲಿ ಯೂರಿಯ ಚೀಲವನ್ನು(IFFCO) ಖರೀದಿ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ರೈತರಿಗೆ ನೀಡಲಾಗುತ್ತಿದ್ದು ಈ ನಾನ್ಯೋ ಯೂರಿಯಾವನ್ನು ಯಾವೆಲ್ಲ ಬೆಳೆಗಳಿಗೆ ಹಾಗೂ ಯಾವೆಲ್ಲ ಹಂತಗಳಲ್ಲಿ ಬಳಕೆ ಮಾಡಬಹುದು? ಎನ್ನುವ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ರಸಗೊಬ್ಬರದ ವೆಚ್ಚವನ್ನು ಕಡಿತಗೊಳಿಸಲು, ಪೋಷಕಾಂಶಗಳ ಸಮರ್ಥ ಬಳಕೆ ಹಾಗೂ ಮಣ್ಣು,ನೀರು ಮತ್ತು ಜೀವ ರಾಶಿಗಳಿಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಫ್ಕೋ ಕಂಪನಿಯು ಪ್ರಸ್ತುತ ದಿನಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವಂತೆ ರೈತರಿಗೆ ಹೆಚ್ಚು ಉತೇಜನವನ್ನು ನೀಡುತ್ತಿದೆ.

ಇದನ್ನೂ ಓದಿ: Bele Samikshe- ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್ ಆಗಲಿದೆ!

ಈ ಅಂಕಣದಲ್ಲಿ ವಿವಿಧ ಬೆಳೆಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವ ವಿಧಾನ ಹೇಗೆ?ನ್ಯಾನೋ ಯೂರಿಯಾವನ್ನು ರೈತರ ಬಳಕೆ ಮಾಡುವುದರಿಂದ ಅಗುವ ಪ್ರಯೋಜನಗಳೇನು?ನ್ಯಾನೋ ಯೂರಿಯಾದ ಗುಣಲಕ್ಷಣಗಳು ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Nano Urea Benefits-ನ್ಯಾನೋ ಯೂರಿಯಾವನ್ನು ರೈತರ ಬಳಕೆ ಮಾಡುವುದರಿಂದ ಅಗುವ ಪ್ರಯೋಜನಗಳು:

ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ (20-50nm) ಬಳಸುವುದರಿಂದ ಬೆಳೆಗೆ ಶೇಕಡಾ 80 ರಷ್ಟು ಉಪಯೋಗವಾಗುತ್ತದೆ.

ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಮತ್ತು ಬೇರು ಬೆಳವಣಿಗೆಯಾಗುತ್ತದೆ.

ಇದು ಸಸ್ಯಗಳೊಳಗಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸುತ್ತದೆ.

ಇದನ್ನೂ ಓದಿ: Media Internship-ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್‍ಗೆ ಅರ್ಜಿ! ತಿಂಗಳಿಗೆ ರೂ 20,000/- ಸ್ಟೈಪಂಡ್!

ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.

ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಯೂರಿಯಾ ಬಳಕೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು

ರೈತರು ಇದನ್ನು ಸುಲಭವಾಗಿ ಶೇಖರಿಸಿ, ಸಾಗಾಣಿಕೆ ಮಾಡಬಹುದು.

ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವುದರಲ್ಲಿ ಸಹಕರಿಸುತ್ತದೆ.

ಇದನ್ನೂ ಓದಿ: Artists Pension Scheme-ಕಲಾವಿದರ ಮಾಸಾಶನ 2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ!

Nano Urea Details-ನ್ಯಾನೋ ಯೂರಿಯಾದ ಗುಣಲಕ್ಷಣಗಳು:

ಇದು ನೀರಿನಲ್ಲಿ ಸಮವಾಗಿ ಹರಡಿದ ಶೇಕಡಾ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ

ನ್ಯಾನೊ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ.

ನ್ಯಾನೊ ಯೂರಿಯಾದಲ್ಲಿನ ಸಾರಜನಕವು ಸಸ್ಯದೊಳಗೆ ಹೈಡೋಲಿಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.

ಇದನ್ನೂ ಓದಿ: Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Nano Urea

ಇದನ್ನೂ ಓದಿ: GKVK Diploma Agriculture-ಬೆಂಗಳೂರು ಕೃಷಿ ವಿವಿಯಿಂದ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

ವಿವಿಧ ಬೆಳೆಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವ ವಿಧಾನ:

ಬೆಳೆ1ನೇ ಸಿಂಪಡಣೆ2ನೇ ಸಿಂಪಡಣೆ3ನೇ ಸಿಂಪಡಣೆ
ಧಾನ್ಯಗಳು/ದ್ವಿದಳ ಧಾನ್ಯಗಳು / ಎಣ್ಣೆಕಾಳುಗಳುಮೊಳಕೆಯೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25 ದಿನಗಳ ನಂತರ.ಮೊಳಕೆಯೊಡೆದ 50-60 ದಿನಗಳ ನಂತರ ಅಥವಾ ನಾಟಿ ಮಾಡಿದ 40-50 ದಿನಗಳ ನಂತರಹೆಚ್ಚಿನ ಪ್ರಮಾಣದ ಸಾರಜನಕ ಅಗತ್ಯವಿರುವ ಬೆಳೆಳಲ್ಲಿ ಸಿಂಪರಣೆ ಮಾಡಬಹುದು.
ತರಕಾರಿಗಳುಮೊಳಕೆಯೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25 ದಿನಗಳ ನಂತರಮೊಳಕೆಯೊಡೆದ 50-60 ದಿನಗಳ ನಂತರ ಅಥವಾ ನಾಟಿ ಮಾಡಿದ 40-50 ದಿನಗಳ ನಂತರಹೆಚ್ಚು ಕಾಯಿ ಕೊಯ್ಲಿ ಅಗತ್ಯವಿರುವ ಬೆಳೆಗಳಲ್ಲಿ ಪ್ರತಿ ಪಿಕಿಂಗ್ ನಂತರ ಸಿಂಪರಣೆ ಮಾಡಿ
ಆಲೂಗಡ್ಡೆಗಡ್ಡೆ ಮೊಳಕೆಯೊಡೆದ 30-35 ದಿನಗಳ ನಂತರಗಡ್ಡೆಯ ಅಭಿವೃದ್ಧಿಯ ಸಮಯದಲ್ಲಿ (ಮೊಳಕೆಯ ನಂತರ 45-55 ದಿನಗಳು)ಸಾರಜನಕ ಅಗತ್ಯವನ್ನು ಅವಲಂಬಿಸಿ ಸಿಂಪರಣೆ ಮಾಡಿ
ಹತ್ತಿಮೊಳಕೆಯೊಡೆದ 30-35 ದಿನಗಳ ನಂತರಮೊಳಕೆಯೊಡೆದ 50-60 ದಿನಗಳ ನಂತರಸಾರಜನಕ ಅಗತ್ಯವನ್ನು ಅವಲಂಬಿಸಿ ಸಿಂಪರಣೆ ಮಾಡಿ
ಕಬ್ಬುಮೊಳಕೆಯೊಡೆದ 30-35 ದಿನಗಳ ನಂತರಮೊಳಕೆಯೊಡೆದ 65-70 ದಿನಗಳ ನಂತರಮೊಳಕೆಯೊಡೆದ 90 ದಿನಗಳ ನಂತರ
ಹಣ್ಣುಗಳು ಮತ್ತು ಹೂಬಿಡುವ ಬೆಳೆಗಳುಬೆಳೆ ಸಾರಜನಕದ ಅಗತ್ಯವನ್ನು ಅವಲಂಬಿಸಿ 2-3 ಸಿಂಪರಣೆಗಳನ್ನು - ಹೂಬಿಡುವ ಹಂತಕ್ಕೆ ಮೊದಲು, ಹಣ್ಣಿನ ರಚನೆಯ ಆರಂಭಿಕ ಹಂತ ಮತ್ತು ಹಣ್ಣಿನ ಬೆಳವಣಿಗೆಯ ಹಂತದಲ್ಲಿ
ಕಾಫಿ/ಚಹಾ/ನೆಡುತೋಪು ಬೆಳೆಗಳು2-3 ತಿಂಗಳ ಮಧ್ಯಂತರದಲ್ಲಿ ಬೆಳೆಗೆ ಸಾರಜನಕದ ಅವಶ್ಯಕತೆಯಂತೆ; ಯೂರಿಯಾದ ಸ್ಥಳದಲ್ಲಿ, ನ್ಯಾನೊ ಯೂರಿಯಾವನ್ನು ಸಿಂಪಡಿಸಿ (ಕಾಫಿ/ಚಹಾದಲ್ಲಿ ಪ್ರತಿ ಕಟಾವಿನ ನಂತರ

ಇದನ್ನೂ ಓದಿ: Gruhalakshmi Amount-2025: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Nano Urea-ನ್ಯಾನೋ ಯೂರಿಯಾವನ್ನು ಎಲ್ಲಿ ಖರೀದಿ ಮಾಡಬಹುದು?

ನ್ಯಾನೋ ಯೂರಿಯಾವನ್ನು ವಿವಿಧ ಬೆಳೆಗಳಿಗೆ ಬಳಕೆ ಮಾಡಲು ರೈತರು ತಮ್ಮ ಹತ್ತಿರದ ಸೂಸೈಟಿ ಅಥವಾ ಆಗ್ರೋ ಶಾಪ್ ಅನ್ನು ನೇರವಾಗಿ ಭೇಟಿ ಮಾಡಿ ನ್ಯಾನೋ ಯೂರಿಯಾವನ್ನು ಖರೀದಿ ಮಾಡಬಹುದು.

More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

IFFCO Helpline-ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ-1800 103 1967
IFFCO Website-ಅಧಿಕೃತ ವೆಬ್ಸೈಟ್- https://www.iffco.in/en, https://www.iffco.in/kn/iffco-e-bazar

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: