New Ration Card-ಹೊಸ ರೇಶನ್ ಕಾರ್ಡ ವಿತರಣೆ ಕುರಿತು ಮಹತ್ವದ ಮಾಹಿತಿ ಪ್ರಕಟ!

January 12, 2026 | Siddesh
New Ration Card-ಹೊಸ ರೇಶನ್ ಕಾರ್ಡ ವಿತರಣೆ ಕುರಿತು ಮಹತ್ವದ ಮಾಹಿತಿ ಪ್ರಕಟ!
Share Now:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ(Ahara Ilake) ಆರ್ಥಿಕವಾಗಿ ಹಿಂದುಳಿದ ವರ್ಗದ ನಾಗರಿಕರಿಗೆ ಬಿಪಿಎಲ್ ರೇಶನ್ ಕಾರ್ಡ ಮತ್ತು ಇದೇ ಮಾದರಿಯಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಎಪಿಎಲ್ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ಪ್ರಸ್ತುತ ಹೊಸ ರೇಶನ್ ಕಾರ್ಡಗಳನ್ನು ರಾಜ್ಯ ಸರಕಾರವು ವಿತರಣೆ ಮಾಡುತ್ತಿಲ್ಲ ಈ ನಿಟ್ಟಿನಲ್ಲಿ ಹೊಸ ರೇಶನ್ ಕಾರ್ಡ ವಿತರಣೆ ಬಗ್ಗೆ ಸಚಿವ ಕೆ ಎಚ್ ಮುನಿಯಪ್ಪ ಅವರು ಹಂಚಿಕೊಂಡಿರುವ ನೂತನ ಪತ್ರಿಕಾ ಪ್ರಕಟಣೆ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಆಧಾರ್ ಕಾರ್ಡ, ವೋಟರ್ ಐಡಿ, ಪಾನ್ ಕಾರ್ಡ ರೀತಿ ಅತೀ ಮುಖ್ಯ ದಾಖಲೆಗಳಲ್ಲಿ ರೇಶನ್ ಕಾರ್ಡ(New Ration Card) ಸಹ ಒಂದು ಪ್ರಮುಖ ಸರಕಾರಿ ದಾಖಲೆಯಾಗಿದ್ದು ನಾಗರಿಕರು ಈ ದಾಖಲೆಯನ್ನು ಹೊಂದಿರುವುದು ಅತೀ ಮುಖ್ಯವಾಗಿ ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯವಾದ ಕಾರಣ.

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಆರ್ಥಿಕ ನೆರವು ಏರಿಕೆ ನಿರೀಕ್ಷೆ!

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ರೇಶನ್ ಕಾರ್ಡ(New Ration Card News) ಪಡೆಯಲು ಅನೇಕ ನಕಲಿ ಅರ್ಜಿಗಳು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಳೆದ 2 ವರ್ಷದಿಂದ ಹೊಸ ಪಡಿತರ ಚೀಟಿಯನ್ನು ಆಹಾರ ಇಲಾಕೆಯಿಂದ ವಿತರಣೆ ಮಾಡುತ್ತಿಲ್ಲ ಪ್ರಸ್ತುತ ನಕಲಿ ಮತ್ತು ಅನರ್ಹ ಪಡಿತರ ಚೀಟಿದಾರನ್ನು ಗುರುತಿಸಿ ಇಂತಹ ಕಾರ್ಡಗಳನ್ನು ರದ್ದು ಮಾಡಲಾಗುತ್ತಿದ್ದು ಈ ಕಾರ್ಯವು ಅಂತಿಮ ಹಂತಕ್ಕೆ ಬಂದಿದ್ದು ಆಹಾರ ಇಲಾಖೆಯ ಅಧಿಕಾರಿಗಳು ಹೊಸ ಪಡಿತರ ಚೀಟಿ ಅರ್ಜಿ ವಿಲೇವಾರಿಗೆ ಪೂರ್ಣಗೊಳಿಸಿ ಹೊಸ ರೇಶನ್ ಕಾರ್ಡ್ ವಿತರಣೆಗೆ ಕೈ ಹಾಕಿದೆ.

New Ration Card-ಇನ್ನು ಒಂದೆರಡು ತಿಂಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆ: ಕೆ ಎಚ್ ಮುನಿಯಪ್ಪ

ನಿನ್ನೆ ಭಾನುವಾರದಂದು ಕಲಬುರಗಿ ಜಿಲ್ಲೆಯಲ್ಲಿ ನಡೆದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಇಲಾಖೆ ಸಚಿವರಾದ ಕೆ ಎಚ್ ಮುನಿಯಪ್ಪ ಅವರು ಅನರ್ಹ ರೇಶನ್ ಕಾರ್ಡದಾರ ಗುರುತಿಸಿ ರದ್ದುಪಡಿಸುವುದು ಮತ್ತು ಹೊಸ ರೇಶನ್ ಕಾರ್ಡ ಅರ್ಜಿ ಸ್ವೀಕಾರ ಹಾಗೂ ಹೊಸ ಪಡಿತರ ಚೀಟಿ ವಿತರಣೆ ಬಗ್ಗೆ ನೂತನ ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ವಿವರ ಹೀಗಿದೆ:

ಪ್ರಸ್ತುತ ನಮ್ಮ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅನರ್ಹ ಫಲಾನುಭವಿಗಳು ಬಿಪಿಎಲ್ ರ‍ೇಷನ್ ಕಾರ್ಡ ಅನ್ನು ಹೊಂದಿದ್ದು ಉತ್ತಮ ಆದಾಯವನ್ನು ಹೊಂದಿರುವವರು ಸಹ ಬಿಪಿಎಲ್ ಕಾರ್ಡ ಅನ್ನು ಹೊಂದಿದ್ದು ಮಾರ್ಗಸೂಚಿಯನ್ವ ಅನರ್ಹರಿರುವ ಕಾರ್ಡದಾರನ್ನು ಗುರುತಿಸಿ ರದ್ದುಪಡಿಸಿ ಎಪಿಎಲ್ ಕಾರ್ಡ ಅಗಿ ಬದಲಾವಣೆ ಮಾಡುವ ಕಾರ್ಯವನ್ನು ಆಹಾರ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದು ಇದರೊಟ್ಟಿಗೆ ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಿರುವ 3 ಲಕ್ಷ ಅರ್ಜಿದಾರರ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು ಇನ್ನು ಒಂದರೆಡು ತಿಂಗಳಲ್ಲಿ ಎಲ್ಲಾ ಅರ್ಹ ಅರ್ಜಿದಾರರಿಗೆ ರೇಷನ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bele Parihara-ಈ ಜಿಲ್ಲೆಯ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ!

BPL Ration Card-ನಮ್ಮ ರಾಜ್ಯದಲ್ಲಿವೆ ಅಗತ್ಯಕ್ಕಿಂತ ಹೆಚ್ಚಿನ ಕಾರ್ಡಗಳು:

ನಮ್ಮ ರಾಜ್ಯವು ಹೆಚ್ಚು ತೆರಿಗೆ ಪಾವತಿದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರು ಸಹ ಪ್ರಸ್ತುತ ನಮ್ಮ ರಾಜ್ಯದಲ್ಲಿ ದೊಡ್ಡ ಸಂಖ್ಯೆ ಬಿಪಿಎಲ್ ಪಡಿತರ ಚೀಟಿಗಳಿವೆ ಇದಲ್ಲದೇ ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 50% ಮಾತ್ರ ಬಿಪಿಎಲ್ ಕಾರ್ಡಗಳನ್ನು ಸಾರ್ವಜನಿಕರು ಹೊಂದಿರಬೇಕು ಆದರೆ ನಮ್ಮ ರಾಜ್ಯದಲ್ಲಿ ಶೇ 75% ಜನರು ಬಿಪಿಎಲ್ ಕಾರ್ಡಗಳನ್ನು ಹೊಂದಿದ್ದಾರೆ ಈ ಸಂಬಂಧ ಆಹಾರ ಇಲಾಖೆಯ ಅಧಿಕಾರಿಗಳು ಅಗತ್ಯ ಪರಿಶೀಲನೆಯನ್ನು ನಡೆಸುತ್ತಿದ್ದು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ನಾಗರಿಕರ ಬಿಪಿಎಲ್ ಕಾರ್ಡ ಅನ್ನು ರದ್ದುಪಡಿಸಿ ಎಪಿಎಲ್ ಕಾರ್ಡಗಳಾಗಿ ಪರಿವರ್ತಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

New Ration Card-ತುರ್ತು ವೈದ್ಯಕೀಯ ಕಾರಣಕ್ಕಾಗಿ ಪಡಿತರ ಚೀಟಿ ಪಡೆಯಲು ಅವಕಾಶ:

ಪ್ರಸ್ತುತ ಆಹಾರ ಇಲಾಖೆಯಿಂದ ಸಾರ್ವಜನಿಕರು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅವಶ್ಯವಿರುವ ಬಿಪಿಎಲ್ ಕಾರ್ಡ ಅನ್ನು ಪಡೆಯಲು ಅರ್ಜಿ ಸಲ್ಲಿಸಿ ಅರ್ಹತೆ ಅನುಗುಣವಾಗಿ ಬಿಪಿಎಲ್ ಕಾರ್ಡ ಅನ್ನು ಆಹಾರ ಇಲಾಖೆಯಿಂದ ಪಡೆಯಲು ಅವಕಾಶವಿದ್ದು ಈ ಕಾರಣವನ್ನು ನೀಡಿ ಈಗಾಗಲೇ ಬಿಪಿಎಲ್ ಕಾರ್ಡ ಅನ್ನು ಪಡೆದಿರುವ ಫಲಾನುಭವಿಗಳ ವಿವರವನ್ನು ಸಹ ಮರು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

Ration Card

ಇದನ್ನೂ ಓದಿ: Free Pumpset Repair-ಉಚಿತ 30 ದಿನದ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Indira Kit-ಫೆಬ್ರವರಿಯಿಂದ ಇಂದಿರಾ ಕಿಟ್ ವಿತರಣೆ:

ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರಿಗೆ ಈಗಾಗಲೇ ರಾಜ್ಯ ಸರಕಾರದಿಂದ ಘೋಷಣೆ ಮಾಡಿರುವ ಇಂದಿರಾ ಕಿಟ್ ವಿತರಣೆಯನ್ನು ಫೆಬ್ರವರಿಯಿಂದ ವಿತರಣೆ ಮಾಡಲು ಆಹಾರ ಇಲಾಖೆಯು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ ಎಂದು ಸಚಿವರು ಮಾಹಿತಿಯನ್ನು ತಿಳಿಸಿದ್ದು, ಈ ಕಿಟ್ ನಲ್ಲಿ ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಉಪ್ಪಿನ ಪ್ಯಾಕೇಟ್ ಅನ್ನು ಒಳಗೊಂಡಿದೆ.

ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ 10 Kg ಅಕ್ಕಿಯನ್ನು ವಿತರಣೆಯನ್ನು ಮಾಡಲಾಗುತ್ತಿದೆ ಇದರ ಬದಲು 5 Kg ಅಕ್ಕಿಯನ್ನು ವಿತರಣೆ ಮಾಡಿ ಬಾಕಿ ಉಳಿದ 5 Kg ಅಕ್ಕಿ ಬದಲು 5 Kg ಇಂದಿರಾ ಕಿಟ್ ಅನ್ನು ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ.

Cancelled Ration Card List-ಈಗಾಗಲೇ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ:

ಸಾರ್ವಜನಿಕರು ಪ್ರತಿ ತಿಂಗಳು ಮಾರ್ಗಸೂಚಿಯನ್ವಯ ಪಡಿತರ ಚೀಟಿಯನ್ನು ಪಡೆಯಲು ಅನರ್ಹರಿರುವ ರದ್ದಾದ ಪಡಿತರ ಚೀಟಿದಾರರ ಪಟ್ಟಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಸಾರ್ವಜನಿಕರು ಮೊದಲಿಗೆ ಈ ಲಿಂಕ್ "Cancelled Ration Card List" ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Dairy Shed Subsidy-ಗ್ರಾಮ ಪಂಚಾಯಿತಿಯಿಂದ ದನದ ಶೆಡ್ ನಿರ್ಮಾಣಕ್ಕೆ ರೂ 57,000 ಪಡೆಯುವುದು ಹೇಗೆ!

Step-2: ಇದಾದ ಬಳಿಕ ಈ ಪುಟದಲ್ಲಿ ಗೋಚರಿಸುವ "ಇ-ಸೇವೆಗಳು" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿ ಈ ವಿಭಾಗದಲ್ಲಿ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಪ್ರವೇಶ ಮಾಡಬೇಕು.

Step-3: "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ಪ್ರತಿ ತಿಂಗಳುವಾರು ನಿಮ್ಮ ತಾಲ್ಲೂಕಿನಲ್ಲಿ ರದ್ದುಪಡಿಸಲಾದ ರೇಶನ್ ಕಾರ್ಡದಾರ ಪಟ್ಟಿಯನ್ನು ನೀವು ಮೊಬೈಲ್ ಮೂಲಕವೇ ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: