ಸರಳ ವಿಧಾನವನ್ನು ಅನುಸರಿಸಿ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ ಬ್ಯಾಂಕ್ ಖಾತೆಗೆ ಲಿಂಕ್ ಅಗಿದಿಯೋ? ಇಲ್ಲವೋ?(Bank account adhr link) ಎಂದು ಹಾಗೂ ಲಿಂಕ್ ಅಗಿದ್ದರೆ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ? ಎಂದು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.
ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಸಹಾಯಧನ ಅಥವಾ ಅರ್ಥಿಕ ನೆರವನ್ನು(DBT Payment status) ಪಡೆಯಲು ತಮ್ಮ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದು ಕಡ್ಡಾಯವಾಗಿದೆ ಒಂದೊಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದ್ದರೆ ನಿಮಗೆ ಆ ಯೋಜನೆಯ ಹಣ ಸಿಗುವುದಿಲ್ಲ.
ಇದನ್ನೂ ಓದಿ: Student stipend application-ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI mapping status) ಅಗಿರುವುದನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ ಇಂತಹ ಜನರಿಗೆ ಮಾಹಿತಿ ತಿಳಿಸುವ ದೇಸೆಯಲ್ಲಿ ಇಂದು ಒಂದು ಉಪಯುಕ್ತ ಮೊಬೈಲ್ ಅಪ್ಲಿಕೇಶನ್ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ. ಅಪ್ಲಿಕೇಶನ್ ನಲ್ಲಿ ರಾಜ್ಯ ಸರಕಾರದ ವಿವಿಧ ಯೋಜನೆಗಳ ಹಣ ಸಂದಾಯದ ವಿವರವನ್ನು ಸಹ ಪಡೆಯಬಹುದಾಗಿದೆ.
Bank account adhar link status- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಏಕೆ ಮಾಡಿಸಬೇಕು?
ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಹಣವನ್ನು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಲು DBT ಅಂದರೆ ನೇರ ನಗದು ವರ್ಗಾವಣೆ ತಾಂತ್ರಿಕತೆಯನ್ನು ಬಳಕೆ ಮಾಡಲಾಗುತ್ತದೆ ಅದ್ದರಿಂದ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಇಲ್ಲದಿದ್ದರೆ ನಿಮಗೆ ಹಣ ಜಮಾ ಅಗುವುದಿಲ್ಲ.
ಅದ್ದರಿಂದ ಸರಕಾರದ ಯಾವುದೇ ಯೋಜನೆಯ ಸಹಾಯಧನ/ಅರ್ಥಿಕ ನೆರವನ್ನು ಪಡೆಯಲು ನಿಮ್ಮ ಆಧಾರ್ ಕಾರ್ಡ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಅಗಿರಬೇಕು.
ಇದನ್ನೂ ಓದಿ: Voter ID list- ಹಳ್ಳಿವಾರು ಅಧಿಕೃತ ಮತದಾರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ!
NPCI mapping status-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ಅಪ್ಲಿಕೇಶನ್ ಬಿಡುಗಡೆ!
ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯಿಂದ ಅಭಿವೃದಿಪಡಿಸಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವ ವಿವರವನ್ನು ಪಡೆಯಬಹುದು.
Step-1: ಮೊದಲಿಗೆ Download DBT Karnataka mobile app ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ DBT Karnataka mobile ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ಇದಾದ ಬಳಿಕ ಫಲಾನುಭವಿಯ ಆಧಾರ್ ಕಾರ್ಡ ನಂಬರ್ ಹಾಕಿ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಿ ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡಲು ಲಾಗಿನ್ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಮುಂದುವರೆಯಬೇಕು.
ಇದನ್ನೂ ಓದಿ: Ration card list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

Step-3: ಮೇಲಿನ ಹಂತವನ್ನು ಅನುಸರಿಸಿ ಪಾಸ್ವರ್ಡ್ ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ್ ಹಾಕಿ ಲಾಗಿನ್ ಅಗಬೇಕು.

Step-4: Login ಅದ ಬಳಿಕ ಇಲ್ಲಿ ಮುಖಪುಟದಲ್ಲಿ 4 ಆಯ್ಕೆಗಳು ಕಾಣಿಸುತ್ತವೆ ಇಲ್ಲಿ “ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆಯ ಸ್ಥಿತಿ/Seeding Status of Aadhar in Bank Account” ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ನಿಮ್ಮ ಆಧಾರ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಅಗಿದೆ ಎಂದು Bank name ಕಾಲಂ ನಲ್ಲಿ ತೋರಿಸುತ್ತದೆ ಜೊತೆಗೆ ಕೆಳಗೆ Seeding Status ನಲ್ಲಿ “Active” ಎಂದು ಇದ್ದರೆ ಆಧಾರ್ ಲಿಂಕ್ ಸರಿಯಾಗಿದೆ ಎಂದು ಅರ್ಥ ಒಂದೊಮ್ಮೆ “Inactive” ಎಂದು ತೋರಿಸಿದರೆ ಲಿಂಕ್ ಅಗಿರುವುದಿಲ್ಲ ಎಂದು ತಿಳಿಯಬೇಕು.

ಇದನ್ನೂ ಓದಿ: Jaminige dhari-ಜಮೀನಿಗೆ ಹೋಗಲು ಅಕ್ಕ-ಪಕ್ಕದವರು ದಾರಿ ಬಿಡುತ್ತಿಲ್ಲವೇ? ಬಂತು ನೋಡಿ ಹೊಸ ನಿಯಮ!
“Payment Status/ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಯೋಜನೆಯ ಪಾವತಿ ವಿವರ ಪಡೆಯಬಹುದು:
ಫಲಾನುಭವಿಗಲು ಈ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆದುಕೊಂಡು ಮುಖಪುಟದಲ್ಲಿ ಕಾಣುವ “Payment Status/ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಯಾವೆಲ್ಲ ಯೋಜನೆಯಡಿ ನಿಮಗೆ ಸಹಾಯಧನ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಪ್ಲಿಕೇಶನ್ ನಲ್ಲಿ ನೋಡಬಹುದು.