ಕಳೆದೆರಡು ವಾರದಿಂದ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ(Waqf board land)ವಿಚಾರದ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ವಿಜಯಪುರ ಜಿಲ್ಲೆಯ ಹೊನವಾಡ ಹಳ್ಳಿಯ ರೈತರ ಆಸ್ತಿಯನ್ನು “ವಕ್ಫ್ ಆಸ್ತಿ” ಎಂದು ರೈತರಿಗೆ ಯಾವುದೇ ನೋಟಿಸ್ ನೀಡದೆ ಘೋಷಣೆ ಮಾಡಿರುವ ಹಿನ್ನೆಲೆ ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಏನಿದು ವಕ್ಫ್ ಕಾಯ್ದೆ? ಇದರಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ? ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ ಈ ಮಾಹಿತಿಯು ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
ಇದನ್ನೂ ಓದಿ: NPCI mapping status-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ಅಪ್ಲಿಕೇಶನ್ ಬಿಡುಗಡೆ!
Waqf Act news-ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಘೋಷಣೆ ಪ್ರಕರಣದ ಹಿನ್ನೆಲೆ:
ವಿಜಯಪುರ ಜಿಲ್ಲೆಯ ಹೊನವಾಡ ಹಳ್ಳಿಯ ಸರಿ ಸುಮಾರು 1500 ಎಕರೆ ವಿಸ್ತೀರ್ಣದ ರೈತರ ಜಮೀನಿನ ಪಹಣಿಯಲ್ಲಿ ನಮೂನೆ-11 ಕಾಲಂ ನಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ ರೈತರಿಗೆ ಯಾವುದೇ ಸೂಚನೆ ನೀಡದೆ ಇದು ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿ ಎಂದು ಸೂಚಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ತಮ್ಮ ತಾತ ಮುತ್ತಾತರ ಕಾಲದಿಂದ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿರುವಂತಹ ರೈತರಿಗೆ ಈ ಕ್ರಮವು ಶಾಕ್ ನೀಡಿದಂತಾಗಿದೆ. ಈ ಸುದ್ದಿ ರಾಜ್ಯಾದಂತ ಸದ್ದು ಮಾಡಲು ಆರಂಭಿಸಿದಾಗ ಕೆಲವು ದೋಷಗಳಿಂದ ಹೀಗೆ ಅಗಿದೆ ರೈತರ ಜಮೀನನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಸರಕಾರದಿಂದ ಘೋಷಣೆ ಹೊರಡಿಸಲಾಗಿದೆ.
ಇದನ್ನೂ ಓದಿ: Student stipend application-ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Waqf Act- ಏನಿದು ವಕ್ಫ್ ಕಾಯ್ದೆ?
ವಕ್ಫ್ ಕಾಯ್ದೆ ಎಂದರೆ 1913 ರಲ್ಲಿ ಮೊದಲ ಬಾರಿಗೆ ವಕ್ಫ್ ಕಾಯ್ದೆಯನ್ನು ನಮ್ಮ ದೇಶದಲ್ಲಿ ಜಾರಿಗೆ ತರಲಾಗಿದ್ದು “ವಕ್ಫ್” ಎನ್ನುವುದು ಅರೇಬಿಕ ಭಾಷೆಯಾಗಿದ್ದು ಇದರ ಅರ್ಥ “ಶರಣಾಗು” ಎಂದು. ಈ ಕಾಯ್ದೆಯ ಪ್ರಕಾರ ದಾನವಾಗಿ ಪಡೆದ ಆಸ್ತಿಯನ್ನು ಧರ್ಮ ಮತ್ತು ಸೇವಾಕಾರ್ಯಗಳಿಗೆ ಮಾತ್ರ ಬಳಕೆ ಮಾಡಬೇಕು ಇಂತಹ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಕರೆಯಲಾಗುತ್ತದೆ.
ಒಮ್ಮೆ ಆಸ್ತಿಯು ವಕ್ಫ್ ಪಾಲಾದರೆ ಇದನ್ನು ಹಿಂತಿರುಗಿಸಲು ಬರುವುದಿಲ್ಲ ಮತ್ತು ಮರಳಿ ಪಡೆಯಲು ಅಗುವುದಿಲ್ಲ ಕೆಲವು ತಿದ್ದುಪಡಿ ಮಾಡಿ 1955ರಲ್ಲಿ ಅಗಿನ ಪ್ರಧಾನಿ ಮರುಜಾರಿಗೆ ತಂದರು ಬಳಿಕ ಪಿ.ವಿ ನರಸಿಂಹರಾವ್ ರವರು 1995 ರಲ್ಲಿ ಮತ್ತೊಷ್ಟು ತಿದ್ದುಪಡಿಯಾಗಿ ಮಾಡಿದರು.
ಇದನ್ನೂ ಓದಿ: Voter ID list- ಹಳ್ಳಿವಾರು ಅಧಿಕೃತ ಮತದಾರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ!
ಈ ತಿದ್ದುಪಡಿಗಳು ವಕ್ಫ್ ಕಾಯ್ದೆಗೆ ಮತ್ತೊಷ್ಟು ಬಲ ನೀಡಿದವು 1995ರ ತಿದ್ದುಪಡಿಯ ಪ್ರಕಾರ ಸೆಕ್ಷನ್ 3ರ ಪ್ರಕಾರ ವಕ್ಫ್ ಆಸ್ತಿಯು ಮುಸ್ಲಿಮರಿಗೆ ಸೇರಿದ್ದು ಎಂದು ಎಂದರೆ ಸಾಕು ಅದನ್ನು ವಕ್ಫ್ ಆಸ್ತಿ ಎಂದು ಕರೆಯಲಾಗುತ್ತದೆ.
ಕಾಯ್ದೆಯ ಪ್ರಕಾರ ಈ ಆಸ್ತಿಯು/ಜಮೀನು ವಕ್ಫ್ ಆಸ್ತಿ ಎಂದು ಸಾಬೀತುಪಡಿಸಲು ವಕ್ಫ್ ಮಂಡಳಿಯ ಮಾಲೀಕತ್ವವನ್ನು ಸಾಬೀತುಪಡಿಸಲು ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ ಇದಲ್ಲದೇ ಆಸ್ತಿ ಕಳೆದುಕೊಂಡ ಆ ಜಮೀನಿನ ಮಾಲೀಕನ್ನು ಕೋರ್ಟ್ ಮೋರೆ ಹೋಗಲು ಸಾಧ್ಯವಿಲ್ಲ ಅವನು ತನ್ನ ಮಾಲೀಕತ್ವವನ್ನು ಸಾಬೀತುಪಡಿಸಲು ವಕ್ಫ್ ಮಂಡಳಿಯ ಟ್ರಿಬ್ಯೂನಲ್ ಅಂದರೆ ಈ ಮಂಡಳಿ ನ್ಯಾಯಮಂಡಳಿ ಬಳಿ ಹೋಗಬೇಕು.
ಹೇಗಿದೆ ನೋಡಿ ತನ್ನ ಆಸ್ತಿಯನ್ನು ವಶಪಡಿಸಿಕೊಂಡವರ ಬಳಿಯೇ ನ್ಯಾಯ ಕೇಳಲು ಆ ಜಮೀನಿನ ಮಾಲೀಕ ಹೋಗಬೇಕು ಅಂತಹ ಕಾಯ್ದೆ ಇದಾಗಿದೆ.
ಇದನ್ನೂ ಓದಿ: Ration card list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
ವಕ್ಫ್ ಮಂಡಳಿಯ ನ್ಯಾಯಮಂಡಳಿ ಬಳಿ ಆ ಜಮೀನಿನ ಮಾಲೀಕನು ತನ್ನ ಮಾಲೀಕತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದಲ್ಲಿ ಆ ಜಮೀನನ್ನು ಖಾಲಿ ಮಾಡುವಂತೆ ಆದೇಶ ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಈ ಮಂಡಳಿ ನಿರ್ಧಾವನ್ನು ನಮ್ಮ ದೇಶದ ಯಾವುದೇ ಕೋರ್ಟ ಸಹ ಪ್ರಶ್ನೆ ಮಾಡುವ ಅಗಿಲ್ಲ ಅ ರೀತಿ ಈ ಕಾಯ್ದೆಯನ್ನು ರೂಪಿಸಲಾಗಿದೆ.
Karnataka Waqf news- ಭಾರತದಲ್ಲಿ ವಕ್ಫ್ ಆಸ್ತಿ ವಿವರ ಹೀಗಿದೆ:
ದೇಶದಾದ್ಯಂತ ವಕ್ಫ್ ಮಂಡಳಿಯು ವಕ್ಫ್ 8.7 ಲಕ್ಷ ಎಕರೆ ಪ್ರದೇಶವನ್ನು ಹೊಂದಿದ್ದು ಇದು ಮೂರನೇ ಅತೀ ದೊಡ್ಡ ಸಂಸ್ಥೆ ಅಗಿದ್ದು ಮೊದಲ ಸ್ಥಾನದಲ್ಲಿ ರಕ್ಷಣಾ ಇಲಾಖೆ 18 ಲಕ್ಷ ಎಕರೆ ಹೊಂದಿದ್ದರೆ ಎರಡನೇ ಸ್ಥಾನದಲ್ಲಿರವ ರೈಲ್ವೆ ಇಲಾಖೆಯು 12 ಲಕ್ಷ ಎಕರೆ ಭೂಮಿಯನ್ನು ಹೊಂದಿದೆ.
ಇದನ್ನೂ ಓದಿ: Jaminige dhari-ಜಮೀನಿಗೆ ಹೋಗಲು ಅಕ್ಕ-ಪಕ್ಕದವರು ದಾರಿ ಬಿಡುತ್ತಿಲ್ಲವೇ? ಬಂತು ನೋಡಿ ಹೊಸ ನಿಯಮ!
Waqf Act Information-2024: ವಕ್ಫ್ ಕಾಯ್ದೆಯಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ?
ಒಮ್ಮೆ ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಿದರೆ ಈ ಜಮೀನಿನ ಮೇಲೆ ಯಾವುದೇ ಬ್ಯಾಂಕ್ ಮೂಲಕ ಕೃಷಿ ಸಾಲ ಸೇರಿದಂತೆ ಯಾವುದೇ ಬಗ್ಗೆ ಸಾಲವನ್ನು ಪಡೆಯಲು ಬರುವುದಿಲ್ಲ ಈ ಆಸ್ತಿಯ ಮಾಲೀಕತ್ವವು ವಕ್ಫ್ ಬೋರ್ಡಗೆ ಸೇರುತ್ತದೆ.
ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ವಕ್ಫ್ ಬೋರ್ಡನ ನ್ಯಾಯಮಂಡಳಿ ಮಂಡನೆ ಮಾಡಿ ರೈತರು ತಮ್ಮ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಬೇಕಾಗುತ್ತದೆ.
Waqf Board website-ರಾಜ್ಯದ ವಕ್ಫ್ ಮಂಡಳಿಯ ಅಧಿಕೃತ ವೆಬ್ಸೈಟ್: Click here