Pan card aadhar link-ಪಾನ್ ಕಾರ್ಡ್ ಸೆಪ್ಟೆಂಬರ್ ನಿಂದ ಹೊಸ ನಿಯಮ ಜಾರಿ!

August 31, 2024 | Siddesh

ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ ಲಿಂಕ್ ಮಾಡುವುದ ಕುರಿತು ನೂತನ ನಿಯಮ ಕೇಂದ್ರ ಸರಕಾರದಿಂದ(pan card importance) ಸೆಪ್ಟೆಂಬರ್ ನಲ್ಲಿ ಜಾರಿಗೆ ತರವು ಸಾಧ್ಯೆತೆಯಿದೆ ಎನ್ನುವ ಮಾಹಿತಿಯ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್, ರೇಷನ್ ಕಾರ್ಡ್ ಗಳಿಗೆ ಎಷ್ಟು ಪ್ರಾಮುಖ್ಯತೆಯಿದಿಯೋ ಅಷ್ಟೇ ಪ್ರಾಮುಖ್ಯತೆ ಪಾನ್ ಕಾರ್ಡ್ ಗೂ ಸಹ ಇರುತ್ತದೆ ಪಾನ್ ಕಾರ್ಡ ಒಂದು ಶಾಶ್ವತ ಖಾತೆ ಸಂಖ್ಯೆಯಾಗಿದ್ದು ಇದನ್ನು ಭಾರತೀಯರಿಗೆ ಪ್ರಮುಖ ಗುರುತಿನ ಚೀಟಿ ಎಂದು ಪರಿಗಣಿಸಲಾಗಿದೆ. ಈ ಕಾರ್ಡ್ ಅನ್ನು ಡೇಟ್ ಅಪ್ ಬಿರ್ತ್ ಮತ್ತು ಪೋಟೋ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ.

ಪ್ರಸ್ತುತ ಪಾನ್ ಕಾರ್ಡ ಗೆ ಆಧಾರ್ ಕಾರ್ಡ ಲಿಂಕ್ ಮಾಡುವಂತೆ ಕೇಂದ್ರ ಸರಕಾರವು ಸೂಚನೆ ನೀಡಲಾಗಿದ್ದು ಅದರೆ ಹೊಸ ನಿಯಮ ಸೆಪ್ಟೆಂಬರ್‌ನಿಂದ ಜಾರಿಗೆ ಬರು ಸಾಧ್ಯತೆ ಇದ್ದು ಇದರನ್ವಯ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ನಿಯಮದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. 

ಇದನ್ನೂ ಓದಿ: ITBP ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ : 819 ಹುದ್ದೆಗಳಲ್ಲಿ ಮಹಿಳೆಯರಿಗೆ 122 ಹುದ್ದೆಗಳು ಮೀಸಲು!

ಇಲ್ಲಿಯವರೆಗೆ ಪಾನ್ ಕಾರ್ಡ ಮತ್ತು ಆಧಾರ್ ಕಾರ್ಡ ಲಿಂಕ್ ಮಾಡದವರಿಗೆ ಈ ಮಾಹಿತಿ ಉಪಯುಕ್ತವಾಗಿದ್ದು, ಇನ್ನು ಮುಂದೆ ಪಾನ್ ಕಾರ್ಡ ಮತ್ತು ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಬರುವುದಿಲ್ಲ ಪಾನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ ಪ್ರತಿಯನ್ನು ದಾಖಲೆಯಾಗಿ ನೀಡಿದ,

ಮತ್ತು ಹೊಸದಾಗಿ ಪಾನ್ ಕಾರ್ಡ ಪಡೆದ ನಾಗರಿಕರು ಪಾನ್ ಕಾರ್ಡ ಗೆ ಆಧಾರ್ ಕಾರ್ಡ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಅರ್ಜಿ ಸಲ್ಲಿಸುವ ಸಮಯದಲ್ಲೇ ಪಾನ್ ಕಾರ್ಡಗೆ ಆಧಾರ್ ಲಿಂಕ್ ಅಗಿರುತ್ತದೆ ಈ ಬಗ್ಗೆ ಕೇಂದ್ರದ ಸಂಬಂಧಪಟ್ಟ ಇಲಾಖೆಯಿಂದ ಸ್ಪಷ್ಟನೆ ನೀಡಿವೆ.

ಇದನ್ನೂ ಓದಿ: Kuri shed subsidy-ಕುರಿ,ಹಸು,ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣಕ್ಕೆ ರೂ 57,000 ಸಬ್ಸಿಡಿ ಪಡೆಯಲು ಅರ್ಜಿ!

pan card importance- ಪಾನ್ ಕಾರ್ಡ ಏಕೆ ಮುಖ್ಯ?

1) ಬ್ಯಾಂಕ್ ಖಾತೆಯಲ್ಲಿ 50,000 ಕ್ಕಿಂತ ಹೆಚ್ಚಿನ ಹಣವನ್ನು ಬಿಡಿಸಲು ಪಾನ್ ಕಾರ್ಡ ಕಡ್ಡಾಯ.

2) ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ಕಡ್ಡಾಯವಾಗಿ ಪಾನ್ ಕಾರ್ಡ ಅನ್ನು ಸಲ್ಲಿಸಬೇಕಾಗುತ್ತದೆ.

3) ಇದಲ್ಲದೇ ವಿವಿಧ ಬಗ್ಗೆಯ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಪಾನ್ ಕಾರ್ಡ ಅವಶ್ಯಕ.

4) ಷೇರು ಮಾರುಕಟ್ಟೆಯಲ್ಲಿ ಹೊಡಿಕೆ ಮಾಡಲು ಪಾನ್ ಕಾರ್ಡ ಅವಶ್ಯಕ.

ಹೀಗೆ ಪ್ರತಿಯೊಂದು ಕೆಲಸಕ್ಕೂ ಪಾನ್ ಕಾರ್ಡ ಕಡ್ಡಾಯವಾಗಿರುವುದರಿಂದ ಈ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ.

ಪ್ಯಾನ್ ಕಾರ್ಡ್ ಒಂದು ಪ್ರಮುಖ ಗುರುತಿನ ಚೀಟಿ. ಇದನ್ನು ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಒದಗಿಸಿದೆ. ಅದರ ಮೇಲೆ ನೀಡಲಾದ 10 ಅಂಕೆಗಳ ಆಲ್ಫಾನ್ಯೂಮರಿಕ್ ಕೋಡ್ ಅನನ್ಯವಾಗಿದೆ ಮತ್ತು ಪ್ಯಾನ್ ಕಾರ್ಡ್ ಹೊಂದಿರುವವರ ಜೀವಿತಾವಧಿಗೆ ಮಾನ್ಯವಾಗಿರುತ್ತದೆ. 

How to apply for pan card- ಪಾನ್ ಕಾರ್ಡ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಾರ್ವಜನಿಕರು ಅಗತ್ಯ ದಾಖಲೆಗಳ ಸಮೇತ ಹತ್ತಿರ ಗ್ರಾಮ್ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಗಳನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Zilla Panchayat Recruitment 2024: ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳ ನೇಮಕಾತಿ!

Documents- ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಪೋಟೋ.

2) ಅರ್ಜಿದಾರರ ಆಧಾರ್ ಕಾರ್ಡ.

3) ಅಂಕಪಟ್ಟಿ.

4) ಮೊಬೈಲ್ ಸಂಖ್ಯೆ.

ಪಾನ್ ಕಾರ್ಡಗೆ ಸಂಬಂಧಪಟ್ಟ ಅಧಿಕೃತ  ವೆಬ್ಸೈಟ್: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: