PM Kisan Farmer List-ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ!

August 1, 2025 | Siddesh
PM Kisan Farmer List-ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ!
Share Now:

ಕೇಂದ್ರ ಸರಕಾರದ ಕೃಷಿ ಸಚಿವಾಲಯದಿಂದ ದೇಶಾದ್ಯಂತ ಪಿಎಂ ಕಿಸಾನ್(Kisan Samman Yojana)ಯೋಜನೆಯಡಿ 20 ನೇ ಕಂತಿನ ರೂ 2,000/- ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ಹಳ್ಳಿವಾರು ಪಟ್ಟಿಯನ್ನು ತನ್ನ ಅಧಿಕೃತ www.pmkisan.gov.in ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು ಈ ಪಟ್ಟಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ನೋಡಬಹುದು? ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯು ಭಾರತದ ಕೋಟ್ಯಂತರ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯಡಿ, ಅರ್ಹ ರೈತರಿಗೆ ವಾರ್ಷಿಕ ₹6,000 ಮೂರು ಕಂತುಗಳಲ್ಲಿ (ತಲಾ ₹2,000) ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇದನ್ನೂ ಓದಿ: Scholarship Application-ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

20ನೇ ಕಂತಿನ ಹಣವನ್ನು ಆಗಸ್ಟ್ 2, 2025ರಂದು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಈ ಓದುಗರ ಸ್ನೇಹಿ ಅಂಕಣದಲ್ಲಿ, ಮೊಬೈಲ್‌ನಲ್ಲಿ ಅರ್ಹ ರೈತರ ಪಟ್ಟಿಯನ್ನು(PM Kisan Eligible Farmer List )ಪರಿಶೀಲಿಸುವ ವಿಧಾನ, 20ನೇ ಕಂತಿನ ಬಿಡುಗಡೆ ದಿನಾಂಕದ ವಿವರಗಳು ಮತ್ತು ಕಂತಿನ ಹಣವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳನ್ನು ಸರಳವಾಗಿ ವಿವರಿಸಲಾಗಿದೆ.

PM Kisan 20th Instalment Date-ಆಗಸ್ಟ್ 2, 2025ರಂದು 9.7 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ:

20ನೇ ಕಂತಿನ ಹಣ ಬಿಡುಗಡೆ ದಿನಾಂಕ ಕೇಂದ್ರ ಕೃಷಿ ಸಚಿವಾಲಯದ ಅಧಿಕೃತವಾಗಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ₹2,000 ಆಗಸ್ಟ್ 2, 2025ರಂದು 9.7 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (DBT) ಮೂಲಕ ಜಮೆಯಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ಈ ಕಂತನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಕಂತಿನಡಿ ₹20,500 ಕೋಟಿಗೂ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲಾಗುತ್ತದೆ ಎಂದು ಅಧಿಕೃತ ಅಂಕಿ-ಅಂಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Kuri Sakanike Training-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

kisan samman

PM Kisan Amount Transfer Event-ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ:

ಪಿಎಂ ಕಿಸಾನ್ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಲು ಅವಕಾಶವಿದ್ದು ಈ PM Kisan Event ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಖಪುಟದಲ್ಲಿ ಕೆಳಗೆ ಕಾಣುವ "Register Now" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ಹಾಕಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಬಹುದು.

PM Kisan Details-ಯೋಜನೆಯ ಅಂಕಿ-ಅಂಶ ವಿವರ:

  • ಯೋಜನೆಗೆ ಜಾರಿಗೆ ಬಂದ ವರ್ಷ- 2019
  • ಇಲ್ಲಿಯವರೆಗೆ ಎಷ್ಟು ಕಂತು ಬಿಡುಗಡೆ ಮಾಡಲಾಗಿದೆ- ಒಟ್ಟು 19 ಕಂತು
  • ಪ್ರತಿ ಒಬ್ಬ ರೈತರಿಗೆ ವರ್ಗಾವಣೆ ಮಾಡಿದ ಮೊತ್ತ- 38,000/-
  • ಒಟ್ಟು ಫಲಾನುಭವಿ ರೈತರು- 9.7 ಕೊಟಿ
  • 20ನೇ ಕಂತಿನಲ್ಲಿ ಬಿಡುಗಡೆಯಾಗುತ್ತಿರುವ ಒಟ್ಟು ಮೊತ್ತ- 20,500 ಕೋಟಿ

ಇದನ್ನೂ ಓದಿ: Navodaya School-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

PM Kisan Beneficiary List-2025: ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ:

ಈಗಾಗಲೇ ಯಾವುದೇ ತಾಂತ್ರಿಕ ಅಡೆತಡೆಗಳಿಲ್ಲದೇ 19ಕಂತಿನ ಹಣವನ್ನು ಪಡೆದಿರುವ ರೈತರಿಗೆ 20ನೇ ಕಂತಿನ ಆರ್ಥಿಕ ನೇರವು ಸಹ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಅಗಲಿದೆ ಒಮ್ಮೆ ರೈತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ ಅನ್ನು ಪವೇಶ ಮಾಡಿ ಅರ್ಹ ಫಲಾನುಭವಿ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

Step-1: ಮೊದಲಿಗೆ ಇಲ್ಲಿ ಕ್ಲಿಕ್ PM Kisan Eligible Farmer List ಮಾಡಿ ಅಧಿಕೃತ ಕೇಂದ್ರ ಕೃಷಿ ಸಚಿವಾಲಯದ ಪಿಎಂ ಕಿಸಾನ್ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Kisan 20th Installment-ರೈತರ ಖಾತೆಗೆ 20ನೇ ಕಂತಿನ ಪಿಎಂ ಕಿಸಾನ್ ಹಣ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ!

PM Kisan Farmer List

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಬಲಬದಿಯಲ್ಲಿ ಕೆಳಗೆ ಕಾಣುವ ‘ಬೆನಿಫಿಶಿಯರಿ ಲಿಸ್ಟ್/Beneficiary List’ ಬಟನ್ ಮೇಲೆ ಕ್ಲಿಕ್ ಮಾಡಿ ರಾಜ್ಯ,ಜಿಲ್ಲೆ,ತಾಲ್ಲೂಕು,ಹಳ್ಳಿ ಅನ್ನು ಸೆಲೆಕ್ಟ್ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ 20ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಪಡೆಯಲು ಅರ್ಹರಿರುವ ರೈತ ಪಟ್ಟಿ ತೋರಿಸುತ್ತದೆ.

Step-3: ಈ ಪಟ್ಟಿಯಲ್ಲಿ ಒಮ್ಮೆ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಿ.

PM Kisan 20th Instalment-20ನೇ ಕಂತಿನ ಹಣ ಪಡೆಯಲು ತಪ್ಪದೇ ಅನುಸರಿಸಬೇಕಾದ ಕ್ರಮಗಳು:

20ನೇ ಕಂತಿನ ಹಣ ಪಡೆಯಲು ತಪ್ಪದೇ ಅನುಸರಿಸಬೇಕಾದ ಕ್ರಮಗಳು ಕಂತಿನ ಹಣವನ್ನು ಸಮಯಕ್ಕೆ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

ಇ-ಕೆವೈಸಿ (e-KYC) ಖಚಿತಪಡಿಸಿಕೊಳ್ಳಿ: pmkisan.gov.inಗೆ ಭೇಟಿ ನೀಡಿ, ‘e-KYC’ ಆಯ್ಕೆಯನ್ನು ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ನಮೂದಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬಂದ OTPಯನ್ನು ಭರ್ತಿ ಮಾಡಿ ಇ-ಕೆವ್ಸೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳಿ.

ಬಯೋಮೆಟ್ರಿಕ್ e-KYC: ಒಂದೊಮ್ಮೆ ಇ-ಕೆವ್ಸೈಸಿ ಅಗಿಲ್ಲದೇ ಇದ್ದಲ್ಲಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಬಯೋಮೆಟ್ರಿಕ್ ಆಧಾರಿತ ಕೆವ್ಸೈಸಿ ಅನ್ನು ಮಾಡಿಸಿ.

ಇದನ್ನೂ ಓದಿ: Kharif Crop Survey-ರೈತರೇ ಸ್ವಂತ ಬೆಳೆ ವಿವರ ದಾಖಲಿಸಲು ಅಪ್ಲಿಕೇಶನ್ ಬಿಡುಗಡೆ!

ಆಧಾರ್-ಬ್ಯಾಂಕ್ ಖಾತೆ ಲಿಂಕ್: ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ. ಇದಕ್ಕಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ NPCIಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಭೂಮಿ ದಾಖಲೆಗಳ ಸರಿಪಡಿಕೆ: ಭೂಮಿಯ ದಾಖಲೆಗಳಲ್ಲಿ ಹೆಸರು, ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ತಪ್ಪಿದ್ದರೆ ಸ್ಥಳೀಯ ಕೃಷಿ ಇಲಾಖೆತ RSK ಕಚೇರಿಯಲ್ಲಿ ಸರಿಪಡಿಸಿಕೊಳ್ಳಿ.

For More Information-ಹೆಚ್ಚಿನ ಮಾಹಿತಿಗಾಗಿ ಉಪಯುಕ್ತ ಲಿಂಕ್ ಗಳು:

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್: Click Here
ಪಿಎಂ ಕಿಸಾನ್ ಸಹಾಯವಾಣಿ: 155261, 011-24300606
ಪಿಎಂ ಕಿಸಾನ್ ಮೊಬೈಲ್ ಆಪ್: PM Kisan Mobile App (Google Play Store/Apple App Store)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: