PM-Kisan ID-ಕೇಂದ್ರ ಸರಕಾರದಿಂದ ಪಿಎಂ ಕಿಸಾನ್ ಯೋಜನೆ ಸೌಲಭ್ಯ ಪಡೆಯಲು ರೈತರಿಗೆ ಐಡಿ!

December 19, 2025 | Siddesh
PM-Kisan ID-ಕೇಂದ್ರ ಸರಕಾರದಿಂದ ಪಿಎಂ ಕಿಸಾನ್ ಯೋಜನೆ ಸೌಲಭ್ಯ ಪಡೆಯಲು ರೈತರಿಗೆ ಐಡಿ!
Share Now:

ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM-Kisan) ನಕಲಿ ಖಾತೆಗೆ ಹಣ ವರ್ಗಾವಣೆ ಅಗುವುದನ್ನು ತಪ್ಪಿಸಿ ಅರ್ಹ ರೈತರಿಗೆ ಮಾತ್ರ ಈ ಯೋಜನೆಯ ಹಣವನ್ನು ತಲುಪಿಸಲು ಒಂದೇ ಮಾದರಿಯ ಐಡಿ ನಂಬರ್ ಅನ್ನು ಎಲ್ಲಾ ರೈತರಿಗೆ ವಿತರಣೆ ಮಾಡಲು ಮುಂದಾಗಿದ್ದು, ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಯಡಿ(PM-Kisan Latest News) ದೇಶದ ಎಲ್ಲಾ ರಾಜ್ಯದ ರೈತರಿಗೆ ತಲಾ ರೂ 2,000/- ದಂತೆ ಒಟ್ಟು ಮೂರು ಕಂತಿಗಳಲ್ಲಿ ವಾರ್ಷಿಕ ರೂ 6,000/- ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ, ವಿಶ್ವದ ಅತೀ ದೊಡ್ಡ ಡಿಬಿಟಿ ಯೋಜನೆ ಎನ್ನುವ ಹೆಗ್ಗಳಿಕೆ ಈ ಯೋಜನೆಯಾದ್ದು.

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

ಆದರೆ ಕೆಲವು ಭಾಗಗಳಲ್ಲಿ ನಕಲಿ ದಾಖಲೆಯನ್ನು ಸೃಷ್ಟಿಸಿ ದೊಡ್ಡ ಮಟ್ಟದ ಹಣವನ್ನು ತಮ್ಮ ಖಾತೆಗಳಿಗೆ(DBT) ಜಮಾ ಅಗುವಂತೆ ಮಾಡಲಾಗಿದ್ದು ಇದನ್ನು ಸಮರ್ಪಕವಾಗಿ ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಅಂತಿಮ ಕೇಂದ್ರ ಸರಕಾರವು ಪಿಎಂ ಕಿಸಾನ್(Kisan Samman) ಫಲಾನುಭವಿಗಳಿಗೆ ಒಂದೇ ಮಾದರಿ ಡಿಜಿಟಲ್ ರೈತ ಐಡಿಯನ್ನು ವಿತರಣೆ ಮಾಡಲು ಮುಂದಾಗಿದೆ. ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

PM-Kisan Scheme-2025: ನಕಲಿ ಖಾತೆಗೆ ಪಿಎಂ ಕಿಸಾನ್ ಹಣ:

ಪಿಎಂ ಕಿಸಾನ್ ಯೋಜನೆಯಡಿ ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಅಥವಾ ಯೋಜನೆಯ ಮಾರ್ಗಸೂಚಿಯನ್ನು ಅನುಸರಿಸದೇ ಅರ್ಜಿ ಸಲ್ಲಿಸ ಹಣ ಪಡೆದರ ವಿವರ ಹೀಗಿದೆ:

ಇಲ್ಲಿಯವರೆಗೆ ಅನರ್ಹ ಪಿಎಂ ಕಿಸಾನ್ ಫಲಾನುಭವಿಗಳಿಂದ ಮರು ವಸೂಲಿ ಮಾಡಿರುವ ಒಟ್ಟು ಮೊತ್ತ- 416 ಕೋಟಿ

7 ರಿಂದ 21ನೇ ಕಂತಿನ ಬಿಡುಗಡೆ ಸಮಯದಲ್ಲಿ ಸ್ಥಗಿತಗೊಳಿಸಿದ ನಕಲಿ ಖಾತೆಗಳ ಸಂಖ್ಯೆ- 11.38 ಲಕ್ಷ

ಇದನ್ನೂ ಓದಿ: Pension Application-ಸಂದ್ಯ ಸುರಕ್ಷಾ ಯೋಜನೆಯಡಿ ಪ್ರತಿ ತಿಂಗಳು ರೂ 1200/- ಪಿಂಚಣಿ ಪಡೆಯುವುದು ಹೇಗೆ?

kisan samman

ಇದನ್ನೂ ಓದಿ: Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!

PM-Kisan Farmer ID-ರೈತರಿಗೆ ಏಕೆ ಈ ಐಡಿ ವಿತರಣೆ ಮಾಡಲಾಗುತ್ತಿದೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವನ್ನು ಒದಗಿಸಲು ಮತ್ತು ಅನರ್ಹ ರೈತರನ್ನು ನಿಖರವಾಗಿ ಪತ್ತೆ ಮಾಡುವ ನಿಟ್ಟಿನಲ್ಲಿ ಸೂಕ್ತ ವಿಧಾನವನ್ನು ಅನುಷ್ಥಾನ ಮಾಡಲು ಕೇಂದ್ರ ಸರಕಾರವು ಪಿಎಂ ಕಿಸಾನ್ ಯೋಜನೆಯ ಅರ್ಜಿದಾರ ರೈತರಿಗೆ ಏಕೀಕೃತ ಐಡಿ ನಂಬರ್ ಅನ್ನು ವಿತರಣೆ ಮಾಡಲು ಮುಂದಾಗಿದ್ದು ಇದಕ್ಕೆ ಪ್ರಮುಖ ಕಾರಣಗಳ ಪಟ್ಟಿ ಈ ಕೆಳಗಿನಂತಿವೆ:

ಎಲ್ಲಾ ಭಾಗದ ಅಥವಾ ದೇಶದ ಯಾವುದೇ ರಾಜ್ಯದಲ್ಲಿ ಅಥವಾ ಜಿಲ್ಲೆಯಲ್ಲಿರುವ ಎಲ್ಲಾ ಜಮೀನಿಗೆ ಸೇರಿ ಒಬ್ಬ ವ್ಯಕ್ತಿಯು ಹೊಂದಿರುವ ಜಮೀನಿಗೆ ಒಂದೇ ಐಡಿ ನಂಬರ್ ಇರುವ ಕಾರ್ಡ್ ವಿತರಣೆಗೆ ನಿರ್ಧಾರ.

ಒಂದೇ ಐಡಿ ನಂಬರ್ ನೀಡುವುದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಜಮೀನು ಹೊಂದಿ ಎರಡು ಕಡೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯುತ್ತಿದ್ದರೆ ಇಂತಹ ಅರ್ಜಿಯನ್ನು ಸ್ಥಗಿತ ಮಾಡಲು ಈ ಕ್ರಮ ನೆರವಾಗಲಿದೆ.

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ 18,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ವಿವರ!

ಗಂಡ-ಹೆಂಡತಿ ಇಬ್ಬರ ಹೆಸರಿನಲ್ಲಿ ಜಮೀನು ಇದ್ದು ಈ ಇಬ್ಬರ ಹೆಸರಿನಲ್ಲಿಯೂ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯುತ್ತಿದ್ದರೆ ಇಂತಹ ಅರ್ಜಿಗಳನ್ನು ಗುರುತಿಸಿ ಇಬ್ಬರಲ್ಲಿ ಒಬ್ಬರ ಅರ್ಜಿಯನ್ನು ರದ್ದುಪಡಿಸಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ಮಾರ್ಗಸೂಚಿಯ ಪ್ರಕಾರ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ನಿಟ್ಟಿನಲ್ಲಿ ಒಬ್ಬರಿಗಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿದ್ದರೆ ಇಂತಹ ಅರ್ಜಿಗಳನ್ನು ಸ್ಥಗಿತ ಮಾಡಲಾಗುತ್ತದೆ.

ಇದನ್ನೂ ಓದಿ: Women SHG Subsidy-ಮಹಿಳೆಯರಿಗೆ ಗುಡ್ ನ್ಯೂಸ್! ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

PM-Kisan Eligibility Criteria-ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹತಾ ಮಾನದಂಡಗಳ ಪಟ್ಟಿ:

ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.

ರಾಜ್ಯ ಮತ್ತು ಕೇಂದ್ರ ಸರಕಾರದ ನೌಕರಿಯಲ್ಲಿದ್ದು ನಿವೃತ್ತಿ ಹೊಂದಿ 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಬರುವುದಿಲ್ಲ.

ಆದಾಯ ತೆರಿಗೆ ಮತ್ತು GST ಪಾವತಿದಾರರಾಗಿರುವವರು ಅರ್ಜಿ ಸಲ್ಲಿಸಲು ಬರುವುದಿಲ್ಲ.

ಇದನ್ನೂ ಓದಿ: NLM Subsidy Yojana-NLM ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಉದ್ದಿಮೆ ಪ್ರಾರಂಭಿಸಲು ಅವಕಾಶ!

ಸಣ್ಣ ಮತ್ತು ದೊಡ್ಡ ಹಿಡುವಳಿಗಾರ ರೈತರು ಸಹ ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆಯಬಹುದು.

ಗಂಡ-ಹೆಂಡತಿ ಇಬ್ಬರ ಹೆಸರಿನಲ್ಲಿ ಜಮೀನು ಇದ್ದರೆ ಇಬ್ಬರಲ್ಲಿ ಒಬ್ಬರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Fruits ID-ರಾಜ್ಯದಲ್ಲಿ ಈಗಾಗಲೇ ಏಕೀಕೃತ ಐಡಿ ವಿತರಣೆ:

ಕೇಂದ್ರ ಸರಕಾರವು ಪ್ರಸ್ತುತ ಎಲ್ಲಾ ಜಮೀನನ್ನು ಸೇರಿ ಒಂದೆ ಬಗ್ಗೆಯ ಐಡಿಯನ್ನು ರೈತರಿಗೆ ವಿತರಣೆ ಮಾಡಲು ಮುಂದಾಗಿದ್ದು ಈಗಾಗಲೇ ನಮ್ಮ ರಾಜ್ಯದಲ್ಲಿ ವಿವಿಧ ಸರಕಾರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ರೈತರಿಗೆ ಪ್ರೂಟ್ಸ್ ಐಡಿ/FID ನಂಬರ್ ಅನ್ನು ವಿತರಣೆ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಕೇಂದ್ರ ಎಲ್ಲಾ ರಾಜ್ಯದ ರೈತರಿಗೆ ಏಕೀಕೃತ ಐಡಿಯನ್ನು ವಿತರಣೆ ಮಾಡಲು ಮುಂದಾಗಿದೆ.

Fruits Website-ರಾಜ್ಯ ಸರಕಾರದ ಪ್ರೂಟ್ಸ್ ಐಡಿ ವೆಬ್ಸೈಟ್- Click Here
PM Kisan Website-ಕೇಂದ್ರದ ಪಿಎಂ ಕಿಸಾನ್ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: