PM Kisan Installment-2025: ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಯಾವಾಗ? ಕೆವೈಸಿ ಮಾಡದವರಿಗಿಲ್ಲ ಆರ್ಥಿಕ ನೆರವು!

November 11, 2025 | Siddesh
PM Kisan Installment-2025: ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಯಾವಾಗ? ಕೆವೈಸಿ ಮಾಡದವರಿಗಿಲ್ಲ ಆರ್ಥಿಕ ನೆರವು!
Share Now:

PM-KISAN ಭಾರತದ ಅತಿ ಮಹತ್ವವಾದ ರೈತರ ಕಲ್ಯಾಣ ಯೋಜನೆ ಅಡಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಲ್ಮಾನ್ ನಿಧಿ (PM-Kisan) ಯೋಜನೆಯ 21ನೇ ಕಂತು ಹಣ ಬಿಡುಗಡೆಗೆ ಪ್ರಾರಂಭಗೊಂಡಿದೆ. 2019 ರಲ್ಲಿ ಪ್ರಾರಂಭವಾದ ಈ ರೈತರ ಧನಸಹಾಯ ಯೋಜನೆಯು ದೇಶದ ಕೋಟ್ಯಾಂತರ ರೈತರ ಜೀವನವನ್ನ ಸುಧಾರಿಸಲು ಬಹಳ ಉಪಯೋಗವಾಗಿದೆ. ಹಾಗೂ ರೈತರ ಆರ್ಥಿಕತೆಯು ಕೂಡ ಬಹಳ ಮುಂದುವರೆದಿದೆ.

ಪ್ರತಿ ವರ್ಷಕ್ಕೆ 6,000. ಅಂದರೆ 2000 ಪ್ರತಿ ಕಂತಿನಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ(PM Kisan Installment) ಜಮವಾಗುತ್ತಿದ್ದು, ಈಗಾಗಲೇ 9.7 ಕೋಟಿಗಿಂತ ಹೆಚ್ಚು ರೈತರು ಈ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಈ ಬಾರಿಯೂ 21ನೇ ಕಂತಿನಿಂದ ಸರ್ಕಾರ e -KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಇದರ ಅರ್ಥ e-KYC ಪೂರ್ಣಗೊಳಿಸಿದ ರೈತರು ಮಾತ್ರ 2 ಸಾವಿರ ರೂಪಾಯಿ ಪಡೆಯಲು ಅರ್ಹರಿರುವರು.

ಇದನ್ನೂ ಓದಿ: Sarojini Damodaran Scholarship-ಪದವಿ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಇನ್ನು ಮುಂದೆ ಕೆ ವೈ ಸಿ ಮಾಡದ ರೈತರು ಹಣ ಪಡೆಯಲು(PM Kisan 21th Installment-2025) ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತು e-KYC ಪ್ರಾಮುಖ್ಯತೆ ಮತ್ತು ಅದನ್ನು ಪೂರ್ಣಗೊಳಿಸುವ ಸುಲಭ ವಿಧಾನವನ್ನು ತಿಳಿಸಲಾಗಿದೆ. ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಇತರ ರೈತರಿಗೂ ಮಾಹಿತಿ ತಲುಪಿಸಲು ಸಹಕರಿಸಿ.
PM-KISAN ಪಿಎಂ ಕಿಸಾನ್ ಯೋಜನೆ?

PM - Kisan ಈ ಯೋಜನೆಯ ಭಾರತದ ಸರ್ಕಾರದ ಒಂದು ಧನ ಸಹಾಯ ಯೋಜನೆಯಾಗಿದೆ. ಆರ್ಥಿಕವಾಗಿ ಸಹಾಯ ಮಾಡಲು ಈ ಯೋಜನೆ ಪ್ರಾರಂಭವಾಯಿತು. ಈ ಯೋಜನೆ ಅಡಿಯಲ್ಲಿ ಯೋಗ್ಯ ರೈತರಿಗೆ ಪ್ರತಿ ವರ್ಷ 6,000ಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಹಾಯಧನದಿಂದ ರೈತರು ಗೊಬ್ಬರ, ಕೀಟನಾಶಕ, ಹಾಗೂ ಕೃಷಿಗೆ ಸಂಬಂಧಪಟ್ಟ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಈ ಯೋಜನೆ ಬಹಳ ಉಪಯುಕ್ತವಾಗಿದೆ.

ಇದನ್ನೂ ಓದಿ: Sugarcane Rate In Karnataka-ಕಬ್ಬಿಗೆ ಹೆಚ್ಚುವರಿ ದರ ಅಧಿಕೃತ ಆದೇಶ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ!

What Is The Purpose Of PM Kisan Scheme-ಈ ಯೋಜನೆಯ ಪ್ರಮುಖ ಉದ್ದೇಶವೇನು ? -

PM ಕಿಸಾನ್ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಸಣ್ಣಪುಟ್ಟ ರೈತರಿಗೆ ತಮ್ಮ ಆರ್ಥಿಕತೆಯನ್ನು ಸ್ವಲ್ಪಮಟ್ಟಿಗೆ ಮೇಲೆತ್ತುವ ಮೂಲಕ ಸರ್ಕಾರ ಸಹಾಯ ಮಾಡುತ್ತದೆ. ಕೃಷಿ ಉತ್ಪಾದನೆ ಕೂಡ ಹೆಚ್ಚಾಗುತ್ತಿದೆ. ಬಹುಮುಖ್ಯವಾಗಿ ಈ ಯೋಜನೆಯು ರೈತರ ಅಗತ್ಯವಿರುವ ಕೃಷಿ ಉಪಕರಣಗಳು ಮತ್ತು ಸಾಧನಗಳನ್ನು ಖರೀದಿಸಲು ರೈತರಿಗೆ ಬಹಳ ಅನುಕೂಲವಾಗಿದೆ.

E - KYC ಏಕೆ ಕಡ್ಡಾಯ?

e-KYC ಮೂಲಕ ರೈತರ ಗುರುತನ್ನು ಡಿಜಿಟಲ್ ರೀತಿಯಲ್ಲಿ ಪರಿಶೀಲಿಸುತ್ತಾರೆ. ಇದು ಏಕೆ ಮುಖ್ಯವೆಂದರೆ ಇದರಿಂದ ನಕಲಿ ಅಥವಾ ಅನರ್ಹ ಅಭ್ಯರ್ಥಿಗಳಿಗೆ ಲಾಭದಾಯಕವಾಗಿರುವುದಿಲ್ಲ. ಡಿಜಿಟಲ್ ಪ್ರಕ್ರಿಯೆಯಿಂದ ರೈತರ ನಿಖರವಾದ ದಾಖಲೆಗಳನ್ನು ಕ್ಷಣಮಾತ್ರದಲ್ಲಿ ಪರಿಶೀಲನೆ ಮಾಡಬಹುದು ಹಾಗೂ ಈ ಡಿಜಿಟಲ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ಕಂಡುಹಿಡಿಯಲು ಬಹಳ ಉಪಯುಕ್ತವಾಗಿದೆ.

ಕೆ ವೈ ಸಿ ಪೂರ್ಣಗೊಂಡ ನಂತರ ರೈತರ ಹಣ ಬ್ಯಾಂಕ್ ಖಾತೆಗೆ ನೇರವಾಗಿ ಜಮವಾಗುತ್ತದೆ.

ಸರ್ಕಾರವು ಸ್ಪಷ್ಟವಾಗಿ ಸೂಚಿಸಿದ್ದಾರೆ ಎಲ್ಲಾ ರೈತರಿಗೂ ಪಿಎನ್ ಕಿಸನ್ ಯೋಜನೆಯ 21ನೇ ಕಂತಿನ ಪಾವತಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರವು ಹೇಳಿದೆ ಹಾಗೆ e-KYC ಮಾಡದ ರೈತರಿಗೆ ಹಣ ಅವರ ಖಾತೆಗೆ ಜಮವಾಗುವುದಿಲ್ಲ ವೆಂದು ಸೂಚನೆ ನೀಡಿದ್ದಾರೆ. e-KYC ಮಾಡದ ರೈತರು ಆದಷ್ಟು ಬೇಗ ಕೆವೈಸಿ ಪೂರ್ಣಗೊಳಿಸಿ. e-KYC ಪೂರ್ಣಗೊಳಿಸುವ ಹಂತಗಳು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸರಿಯಾಗಿ ಅನುಸರಿಸಿ.

ಇದನ್ನೂ ಓದಿ: Indira Kit-ರೇಶನ್ ಕಾರ್ಡದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಪ್ರತಿ ತಿಂಗಳು ತೊಗರಿ ಬೇಳೆ!

PM Kisan

PM Kisan 21th Installment Date-21ನೇ ಕಂತಿನ ಹಣ ಯಾವಾಗ ಬರಲಿದೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ರೂ.ವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಒಂದು ವರ್ಷ ಮೂರು ಕಂತುಗಳಲ್ಲಿ ಹಣ ನೀಡಲಾಗುತ್ತದೆ. ಮೊದಲ ಕಂತನ್ನು ಏಪ್ರಿಲ್-ಜುಲೈನಲ್ಲಿ ಅವಧಿಯ ಕಂತನ್ನು ಆಗಸ್ಟ್ ನಲ್ಲಿ ಜಮಾ ಮಾಡಲಾಗುತ್ತದೆ ಇದೇ ಮಾದರಿಯಲ್ಲಿ ಆಗಸ್ಟ್-ನವೆಂಬರ್ ಅವಧಿಯ ಎರಡನೇ ಕಂತನ್ನು ಡಿಸೆಂಬರ್ ನಲ್ಲಿ ಜಮಾ ಮಾಡಲಾಗುತ್ತದ, ಡಿಸೆಂಬರ್-ಮಾರ್ಚ್ ಅವಧಿಯ ಕಂತನ್ನು ಏಪ್ರಿಲ್ ನಲ್ಲಿ ಜಮಾ ಮಾಡಲಾಗುತ್ತದೆ.

ಪ್ರಸ್ತುತ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ರೂ 2,000/- ಅರ್ಥಿಕ ನೆರವು ಡಿಸೆಂಬರ್-2025 ತಿಂಗಳಿನಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಅಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: Mobile Phone Trace-ನಿಮ್ಮ ಮೊಬೈಲ್ ಕಳುವಾದರೆ ಟ್ರೇಸ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Eligibility for PM Kisan-ಪಿಎಂ ಕಿಸಾನ್ ಸಹಾಯಧನ ಪಡೆಯಲು ಅರ್ಹತೆಗಳು?

ಭಾರತೀಯ ನಾಗರಿಕರಾಗಿರಬೇಕು
ಭೂಮಿ ಮಾಲೀಕರಾಗಿರುವ ರೈತರಿಗೆ ಮಾತ್ರ ಸಹಾಯಧನ ಸಿಗುವುದು
ರೈತರು ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರಬಾರದು. ಉದಾಹರಣೆ:- ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಥವಾ ಸಂಸದರು. ಇವರು ಈ ಯೋಜನೆಗೆ ಅನರ್ಹ ಎಂದು ಸರ್ಕಾರವು ಸೂಚಿಸಿದೆ.

ಇದನ್ನೂ ಓದಿ: Bima Sakhi-ಬಿಮಾ ಸಖಿ ಯೋಜನೆ: ಎಲ್ಐಸಿ ಯಿಂದ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7,000/- ಸ್ಟೈಪೆಂಡ್!

Documents for PM Kisan e-KYC-ಇ-ಕೆವೈಸಿ ಮಾಡಲು ಬೇಕಾಗುವಂತ ದಾಖಲೆಗಳು - important

PM ಕಿಸಾನ್ ಯೋಜನೆ ಅಡಿಯಲ್ಲಿ e-KYC ಪೂರ್ಣಗೊಳಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ.

  • ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ರೈತರ ಜಮೀನಿನ ಪುರಾವೆ ಅಗತ್ಯವಿದ್ದರೆ ಮಾತ್ರ.

ಇದನ್ನೂ ಓದಿ: Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!

E - KYC applying process pm Kisan -ಆನ್ಲೈನ್ ನಲ್ಲಿ ಇ-ಕೆವೈಸಿ ಹೇಗೆ ಮಾಡುವುದು ?

Pm ಕಿಸಾನ್ ಯೋಜನೆ ಅಡಿಯಲ್ಲಿ ಈಕೆ ವೈ ಸಿ ಮಾಡಲು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ. ಈಕೆ ವೈ ಸಿ ಪೂರ್ಣಗೊಳಿಸಲು ಸರ್ಕಾರ ಕೇವಲ ಆನ್ಲೈನ್ ಮೂಲಕವೇ ಅವಕಾಶವನ್ನು ನೀಡಿದ್ದಾರೆ. ರೈತರು ಈ e-KYC ಪೂರ್ಣಗೊಳಿಸಲು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮವನ್ ಕಚೇರಿಗೆ ಭೇಟಿ ನೀಡಿ ಕೆ ವೈ ಸಿ ಪೂರ್ಣಗೊಳಿಸಬಹುದು.

STEP-1: ಕೆ ವೈ ಸಿ ಮಾಡಲು ಮೊದಲು pmkisan.gov.in ಇಲ್ಲಿ ನೀಡಿರುವ ಲಿಂಕ್ Click Here ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಇದನ್ನೂ ಓದಿ: PUC ಮತ್ತು SSLC ಅಂತಿಮ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ!

STEP-2: ನಂತರ 'Farmer's Corner' ವಿಭಾಗದಲ್ಲಿ 'e-KYC' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

STEP-3: ಕ್ಲಿಕ್ ಮಾಡಿದ ನಂತರ e-KYC ಪೇಜ್ ಬರುವುದು ಅದರಲ್ಲಿ ನಿಮ್ಮ ಹನ್ನೆರಡು ಅಂಕೆಗಳ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

STEP-4: ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ರಿಜಿಸ್ಟ್ರೇಷನ್ ಆಗಿರುವ ನಿಮ್ಮ ಮೊಬೈಲ್ ನಂಬರ್ಗೆ ಒಂದು ಓಟಿಪಿ ಬರುವುದು ಅದನ್ನು ಅಲ್ಲಿ ನಮೂದಿಸಿ.

STEP-5: ನಂತರ ಕೊನೆಯದಾಗಿ ಓಟಿಪಿ ಸರಿಯಾಗಿದ್ದರೆ ನಿಮ್ಮ e-KYC ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಂದೇಶ ಬರುತ್ತದೆ.

ಗಮನಿಸಿ: ನಿಮಗೆ ಸ್ವತಹ ಆನ್ಲೈನ್ ನಲ್ಲಿ e-KYC ಮಾಡಲು ಬರುವುದಿಲ್ಲವೆಂದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ e-KYC ಪೂರ್ಣಗೊಳಿಸಿ. ಮೇಲೆ ನೀಡಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ.

ಇನ್ನು ಕೂಡ ಕೆವೈಸಿ ಪೂರ್ಣಗೊಳಿಸದ ರೈತರು ದಯವಿಟ್ಟು ಆದಷ್ಟು ಬೇಗ ಕೆವೈಸಿಯನ್ನು ಪೂರ್ಣಗೊಳಿಸಿ. ನಿಮ್ಮ 21ನೇ ಕಂತಿನ ಹಣ ಪಡೆಯಲು ಇ-ಕೆವೈಸಿಯು ಬಹಳ ಮುಖ್ಯವಾಗಿದೆ. e-KYC ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಅಧಿಕೃತ ವೆಬ್ ಸೈಟ್ ಲಿಂಕ್ - Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: