PM Kisan Latest Update-ಕೇಂದ್ರದಿಂದ ಪಿಎಂ ಕಿಸಾನ್ ಯೋಜನೆಯ ಕುರಿತು ನೂತನ ಮಾಹಿತಿ ಪ್ರಕಟ!

July 20, 2025 | Siddesh
PM Kisan Latest Update-ಕೇಂದ್ರದಿಂದ ಪಿಎಂ ಕಿಸಾನ್ ಯೋಜನೆಯ ಕುರಿತು ನೂತನ ಮಾಹಿತಿ ಪ್ರಕಟ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan)ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ರೈತರಿಗೆ ಕೇಂದ್ರ ಸರ್ಕಾರದ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ(Kisan samman nidhi)ಯೋಜನೆಯ ಟ್ವಿಟರ್ ಖಾತೆಯ ಮೂಲಕ ನೂತನ ಮಾಹಿತಿಯನ್ನು ಪ್ರಕಟಿಸಿದ್ದು ರೈತರಿಗೆ ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಪ್ರಸ್ತುತ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರವು 2019 ರಿಂದ ಪಿಎಂ ಕಿಸಾನ್(PM Kisan Latest News)ಯೋಜನೆಯನ್ನು ದೇಶಾದ್ಯಂತ ಏಕ ಕಾಲಕ್ಕೆ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ರೈತರಿಗೆ ಬಿತ್ತನೆ ಬೀಜ, ಬಿತ್ತನೆ ಗೊಬ್ಬರ ಕೃಷಿ ಪರಿಕರಗಳ ಖರೀದಿಗೆ ಆರ್ಥಿಕವಾಗಿ ನೆರವನ್ನು ಒದಗಿಸಲು ವಾರ್ಷಿಕ ಪ್ರತಿ ಫಲಾನುಭವಿಗಳಿಗೆ ರೂ 6,000/- ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: RTC Adhar Link-ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಈಗಲೇ ಆನ್‌ಲೈನ್‌ನಲ್ಲಿ ಪರಿಶೀಲಿಸಿ!

ಇಂದಿನ ಈ ಲೇಖನದಲ್ಲಿ ಕಿಸಾನ್ ಸಮ್ಮಾನ್ ನಿಧಿ(PM Kisan)ಯೋಜನೆಯಡಿ ಪ್ರಸ್ತುತ ಹೊರಡಿಸಿರುವ ನೂತನ ಮಾಹಿತಿ ಅನುಸಾರ ರೈತರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಮತ್ತು 20 ನೇ ಕಂತಿನ ರೂ 2,000/- ಹಣ ಬಿಡುಗಡೆ ಕುರಿತು ಅಧಿಕೃತವಾಗಿ ಬಿಡುಗಡೆಯಾಗಿರುವ ಮಾಹಿತಿ ಸೇರಿದಂತೆ ಈ ಯೋಜನೆಯ ಕುರಿತು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

PM Kisan Latest Update-ಕೇಂದ್ರದಿಂದ ಪಿಎಂ ಕಿಸಾನ್ ಯೋಜನೆಯ ಕುರಿತು ನೂತನ ಮಾಹಿತಿ ಪ್ರಕಟ:

ಕೇಂದ್ರ ಕೃಷಿ ಮಂತ್ರಾಲಯದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಎಕ್ಸ್/ಟ್ವಿಟರ್ ಖಾತೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ಬಹು ಮುಖ್ಯವಾಗಿ ತಿಳಿದಿರಬೇಕಾದ ಒಂದಿಷ್ಟು ವಿಷಯಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ವಿವರ ಈ ಕೆಳಗಿನಂತಿದೆ:

1) ನಕಲಿ ಲಿಂಕ್ ಮೇಲೆ ಕ್ಲಿಕ್ ಮಾಡದಿರಲು ಸೂಚನೆ:

ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ಪಡೆಯುತ್ತಿರುವ ರೈತರನ್ನು ನೇರವಾಗಿ ಟಾರ್ಗೆಟ್ ಮಾಡಿರುವ ಸೈಬರ್ ವಂಚಕರು ವಾಟ್ಸಾಪ್ ಮೂಲಕ ನಕಲಿ ಪಿಎಂ ಕಿಸಾನ್ ಯೋಜನೆಯ ಅಪ್ಲಿಕೇಶನ್ ಲಿಂಕ್ ಅನ್ನು ಕಳುಹಿಸಿ ರೈತರ ಬ್ಯಾಂಕ್ ಖಾತೆಯಲ್ಲಿ ಹಣವನ್ನು ದೋಚುತ್ತಿದ್ದು ಈ ಕುರಿತು ಜಾಗೃತರಾಗಿರುವಂತೆ ಸೂಚಿಸಿದ್ದು ಈ ಯೋಜನೆಯ ಕುರಿತು ಯಾವುದೇ ಬಗ್ಗೆಯ ನಕಲಿ ಲಿಂಕ್ ನಿಮ್ಮ ಮೊಬೈಲ್ ಗೆ ಬಂದರೆ ಕ್ಲಿಕ್ ಮಾಡದೇ ಇರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

2) ಅನಗತ್ಯ ಫೋನ್ ಕರೆಗೆ ಸ್ಪಂದಿಸಿದ ಸೂಚನೆ:

ಕೆಲವು ರಾಜ್ಯಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿಸಿಕೊಂಡು ನಕಲಿ ಅಧಿಕಾರಿಗಳ ವೇಶದಲ್ಲಿ ರೈತರ ಮೊಬೈಲ್ ನಂಬರ್ ಗೆ ಕರೆ ಮಾಡಿ ರೈತರಿಂದ ಅನಧಿಕೃತವಾಗಿ OTP ಅನ್ನು ಪಡೆದು ಬ್ಯಾಂಕಿನಲ್ಲಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು ಈ ಕುರಿತು ಜಾಗೃತರಾಗಿರು ರೈತರಿಗೆ ಸೂಚಿಸಿದ್ದು ಯಾವುದೇ ಕರೆಗಳು ಬಂದರು ಸಹ OTP ಅನ್ನು ನೀಡದೇ ಇರುವಂತೆ ನಿರ್ದೇಶನ ನೀಡಲಾಗಿದೆ.

3) ಅಧಿಕೃತ ವೆಬ್ಸೈಟ್ ಮತ್ತು ಟ್ವಿಟರ್ ಖಾತೆಯಲ್ಲಿ ಮಾಹಿತಿ ಪಡೆಯಿರಿ:

ರೈತರು ಪಿಎಂ ಕಿಸಾನ್ ಯೋಜನೆಯ ಕುರಿತು ಕಾಲ ಕಾಲಕ್ಕೆ ಸರ್ಕಾರದಿಂದ ಬಿಡುಗಡೆ ಮಾಡುವ ಮಾಹಿತಿಯನ್ನು ತಿಳಿಯಲು ಈ ಯೋಜನೆಯ ಅಧಿಕೃತ ವೆಬ್ಸೈಟ್ ಮತ್ತು ಟ್ವಿಟರ್ ಖಾತೆಯನ್ನು ಹಿಂಬಾಲಿಸಲು ಸೂಚಿಸಲಾಗಿದ್ದು ಯಾವುದೇ ಬಗ್ಗೆಯ ಗಾಳಿ ಸುದ್ದಿ ಮತ್ತು ಅನಧಿಕೃತ ಮಾಹಿತಿಯನ್ನು ನಂಬಿ ಮೋಸ ಹೋಗದಿರಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

PM Kisan 20th Installment

ಇದನ್ನೂ ಓದಿ: Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

Kisan Samman Nidhi Yojane-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತು ಅಧಿಕೃತ ಮಾಹಿತಿಯನ್ನು ಪಡೆಯಲು:

ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್Click Here
ಪಿಎಂ ಕಿಸಾನ್ ಎಕ್ಸ್/ಟ್ವಿಟರ್ ಖಾತೆFollow Now

PM Kisan 20th Installment Date-ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಜಮಾ ದಿನಾಂಕ:

ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಅಧಿಕೃತವಾಗಿ ಇಂತಹದೇ ದಿನ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ರೈತರ ಖಾತೆಗ ಜಮಾ ಮಾಡಲಾಗುತ್ತದೆ ಎಂದು ದಿನಾಂಕವನ್ನು ಪ್ರಕಟಿಸಿರುವುದಿಲ್ಲ ಅಧಿಕೃತ ದಿನಾಂಕ ಪ್ರಕಟವಾದ ತಕ್ಷಣ ನಮ್ಮ ಪುಟದಿಂದ ಈ ಮಾಹಿತಿಯನ್ನು ಪ್ರಕಟಿಸಲಾಗುವುದು ಈ ಕುರಿತು ಮುಂಚಿತವಾಗಿ ಅಧಿಕೃತ ಮಾಹಿತಿಯನ್ನು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ಮತ್ತು ಎಕ್ಸ್/ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ರೈತರು ಪಡೆಯಬಹುದು.

PM Kisan 20th Installment-20ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ:

ಅರ್ಹ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರ್ಥಿಕ ನೆರವನ್ನು ಒದಗಿಸಿ ನಕಲಿ ರೈತರಿಗೆ ಈ ಯೋಜನೆಯ ಪ್ರಯೋಜನವನ್ನು ಸ್ಥಗಿತಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಳೆದ 5-6 ತಿಂಗಳಿನಿಂದ ಈ ಯೋಜನೆಯ ಎಲ್ಲಾ ಅರ್ಜಿದಾರರಿಗೆ ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು ಪ್ರಸ್ತುತ 20ನೇ ಕಂತಿನ ಹಣವನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಸಿಕೊಂಡವರಿಗೆ ಮಾತ್ರ ಹಣ ಜಮಾ ಮಾಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

How to check PM Kisan E-KYC Status-ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ಪಡೆಯುತ್ತಿರುವ ಫಲಾನುಭವಿ ರೈತರು ತಮ್ಮ ಮೊಬೈಲ್ ನಲ್ಲೇ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಈಗಾಗಲೇ ನಿಮ್ಮ ಅರ್ಜಿಯ ಇ-ಕೆವೈಸಿ ಅಗಿರುವುದನ್ನು ಒಂದೆರಡು ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ PM Kisan E-KYC Status ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

pm kisan

Step-2: ನಂತರ ಇಲ್ಲಿ ಮುಖಪುಟದಲ್ಲಿ "Farmers Corner" ನಲ್ಲಿ ಕಾಣುವ "e-KYC" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಇ-ಕೆವೈಸಿ ಅಗಿದ್ದರೆ e-KYC Already Done ಎಂದು ತೋರಿಸುತ್ತದೆ.

PM Kisan E-KYC Applicationn-ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು?

ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ ಅರ್ಜಿಯ ಇ-ಕೆವೈಸಿಯನ್ನು ಮಾಡಿಸದ ರೈತರು ತಮ್ಮ ಆಧಾರ್ ಕಾರ್ಡ ಪ್ರತಿ ಮತ್ತು ಮೊಬೈಲ್ ಸಮೇತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: