PM Kisan Status-ಪಿಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹2,000 ಆರ್ಥಿಕ ನೆರವು ವರ್ಗಾವಣೆ!

August 3, 2025 | Siddesh
PM Kisan Status-ಪಿಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹2,000 ಆರ್ಥಿಕ ನೆರವು ವರ್ಗಾವಣೆ!
Share Now:

ಕೇಂದ್ರ ಸರಕಾರದಿಂದ ನಿನ್ನೆ ಉತ್ತರಪ್ರದೇಶದ ವಾರಾಣಸಿಯಲ್ಲಿ ಆಯೋಜನೆಯ ಮಾಡಿದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ನಿಧಿ(PM Kisan) ಯೋಜನೆಯ 20ನೇ ಕಂತಿನ ರೂ 2,000/- ಹಣವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಇಂದಿನ ಈ ಅಂಕಣದಲ್ಲಿ ಕಿಸಾನ್ ಸಮ್ಮಾನ್ ನಿಧಿ(PM Kisan 20th Iinstallment) ಯೋಜನೆಯ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಜೊತೆಗೆ ರೈತರು ತಮ್ಮ ಮೊಬೈಲ್ ಮೂಲಕ ನೇ ಕಂತಿನ ಹಣ ಜಮಾ ವಿವರವನ್ನು ಹೇಗೆ ಪಡೆಯುವುದು? ಮತ್ತು ಈ ಯೋಜನೆಯಡಿ 20ನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗದೇ ಇರುವವರು ಯಾವೆಲ್ಲ ಕ್ರಮಗಳನ್ನುಅನುಸರಿಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ಸ್ಕಾಲರ್‌ಶಿಪ್ ಯೋಜನೆಯಡಿ ₹12,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

PM Kisan Details-ಪಿಎಂ ಕಿಸಾನ್ ಯೋಜನೆಯ ಅಂಕಿ-ಅಂಶ ವಿವರ:

  • ಇಲ್ಲಿಯವರೆಗೆ ಈ ಯೋಜನೆಯಡಿ ಬಿಡುಗಡೆಯಾದ ಮೊತ್ತ- 3,77,000 ಕೋಟಿ
  • 20ನೇ ಕಂತಿನ ಬಿಡುಗಡೆ ಮೊತ್ತ- 20,500 ಕೋಟಿ
  • ಒಟ್ಟು ರೈತರ ಸಂಖ್ಯೆ- 9.7 ಕೋಟಿ
  • 20ನೇ ಕಂತಿನ ಬಿಡುಗಡೆ ದಿನಾಂಕ- 02 ಆಗಸ್ಟ್ 2025

PM Kisan 20th Iinstallment-20ನೇ ಕಂತಿನ ರೂ 2,000/- ಹಣ ರೈತರ ಖಾತೆಗೆ ಜಮಾ:

ನಿನ್ನೆ ಅಂದರೆ 02 ಆಗಸ್ಟ್ 2025 ರಂದು ಕೇಂದ್ರ ಕೃಷಿ ಸಚಿವಾಲಯದಿಂದ ಉತ್ತರಪ್ರದೇಶದ ವಾರಾಣಸಿಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳ್ಳಗೆ 11:30 ಕ್ಕೆ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ರೂ 2,000/- ಹಣ ವರ್ಗಾವಣೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಇದನ್ನೂ ಓದಿ: Kusum-B Yojana- ರೈತರಿಗೆ ಬಂಪರ್ ಸುದ್ದಿ! ಅಕ್ರಮ ಪಂಪ್ ಸೆಟ್ ಗಳಿಗೆ ಸೌರವಿದ್ಯುತ್!

PM Kisan-ರೈತರ ಗೌರವ ಮತ್ತು ಸಹಾಯಕ್ಕೆ ಬದ್ಧತೆ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಕಾರ್ಯಮದಲ್ಲಿ ಮಾತನಾಡಿದ ಅವರು "ಪ್ರತಿಯೊಬ್ಬ ರೈತನೂ ನಮ್ಮ ದೇಶದ ಅನ್ನದಾತರು. ಅವರ ಆದಾಯ, ಗೌರವ ಮತ್ತು ಸನ್ಮಾನವನ್ನು ಸುರಕ್ಷಿತಗೊಳಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ.

ಈ ಆರ್ಥಿಕ ನೆರವು ಕೇವಲ ಹಣಕಾಸು ಸಹಾಯವಲ್ಲ, ಬದಲಾಗಿ ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವಾಗಿದೆ" ಎಂದು ಹೇಳಿದರು. ಈ ಯೋಜನೆಯು 2019ರಿಂದ ಆರಂಭವಾಗಿ, ಈವರೆಗೆ 19 ಕಂತುಗಳ ಮೂಲಕ ₹3.69 ಲಕ್ಷ ಕೋಟಿ ರೂ.ಗಳನ್ನು ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: DL and RC Card- ವಾಹನ ಚಾಲಕರಿಗೆ ಸಿಹಿ ಸುದ್ದಿ! DL ಮತ್ತು RC ಡೆಲಿವರಿ ಈಗ ಮತ್ತಷ್ಟು ಬೇಗ! ಬಂದಿದೆ ಸ್ಮಾರ್ಟ್ ಕಾರ್ಡ್?

pmkisan status

Kisan Samman Nidhi Yojana-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮಹತ್ವ:

ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕವಾಗಿ ₹6,000 ಆರ್ಥಿಕ ನೆರವನ್ನು ಮೂರು ಸಮಾನ ಕಂತುಗಳಲ್ಲಿ (ಪ್ರತಿ ಕಂತಿಗೆ ರೂ ₹2,000 ದಂತೆ) ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ 20ನೇ ಕಂತಿನ ಹಣ ನಿನ್ನೆ ಅಂದರೆ ಆಗಸ್ಟ್ 2, 2025ರಂದು ಬಿಡುಗಡೆಯಾಗಿದ್ದು, ಇದು ರೈತರಿಗೆ ಬಿತ್ತನೆ, ಗೊಬ್ಬರ ಮತ್ತು ಇತರೆ ಕೃಷಿ ಅಗತ್ಯಗಳಿಗೆ ಸಣ್ಣ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ಒದಗಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಈ ಯೋಜನೆಯ ಆರ್ಥಿಕ ನೆರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಮಧ್ಯವರ್ತಿಗಳ ಹಾವಗೆ ಅವಕಾಶವಿರುದಿಲ್ಲ ಈ ಯೋಜನೆಯು ದೇಶದ ಅತೀ ದೊಡ್ಡ DBT ಹಣ ವರ್ಗಾವಣೆ ಯೋಜನೆ ಅಗಿದೆ.

ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ!

PM Kisan Status Check-ನಿಮ್ಮ ಖಾತೆಗ ರೂ 2,000/- ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಪ್ರಸ್ತುತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಮಾ ಮಾಡಿರುವ 20ನೇ ಕಂತಿನ ರೂ 2,000/- ಆರ್ಥಿಕ ನೆರವು ತಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿರುವುದನ್ನು ರೈತರು ಈ ಕೆಳಗೆ ವಿವರಿಸಿರುವ ಎರಡು ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ವಿಧಾನ-1: ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಸಹಾಯವಾಣಿಗೆ(Bank Balance check Helpline)ಮಿಸ್ ಕಾಲ್ ಮಾಡಿ:

ರೈತರು ತಮ್ಮ ಬ್ಯಾಂಕ್ ಖಾತೆಗೆ 20ನೇ ಕಂತಿನ ರೂ 2,000/- ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಲು ಮೊದಲಿಗೆ ಇಲ್ಲಿ ಕ್ಲಿಕ್ Bank Balance Check Helpline Numbers ಮಾಡಿ ನಿಮ್ಮ ಬ್ಯಾಂಕಿನ ಬ್ಯಾಲೆನ್ಸ್ ಚೆಕ್ ಸಹಾಯವಾಣಿಗೆ ಕರೆ ಮಿಸ್ ಕಾಲ್ ಮಾಡುವ ಮೂಲಕ ಪ್ರಸ್ತುತ ಬ್ಯಾಂಕಿನ ಬ್ಯಾಲೆನ್ಸ್ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಡೆಯುವುದರ ಮೂಲಕ 20ನೇ ಕಂತಿನ ರೂ 2,000/- ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: Scholarship Application-ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

kisan samman

ವಿಧಾನ-2: ಪಿಎಂ ಕಿಸಾನ್ ವೆಬ್ಸೈಟ್ ನಲ್ಲಿ(PM Kisan Website)ಚೆಕ್ ಮಾಡಬಹುದು:

ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಜಮಾ ಅಗಿರುವುದನ್ನು ಕೇಂದ್ರ ಕೃಷಿ ಸಚಿವಲಾಯದ ಅಧಿಕೃತ www.pmkisan.gov.in ಜಾಲತಾಣವನ್ನು ಪ್ರವೇಶ ಮಾಡಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರವನ್ನು ಪಡೆಯಬಹುದು.

Step-1: ಇಲ್ಲಿ ಕ್ಲಿಕ್ PM Kisan Status ಮಾಡಿ ಅಧಿಕೃತ www.pmkisan.gov.in ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Kuri Sakanike Training-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Step-2: ನಂತರ ಈ ವೆಬ್ ಪೇಜ್ ನಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ನಮೂದಿಸಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "Get OTP" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು "Enter OTP" ಕಾಲಂ ನಲ್ಲಿ ನಮೂದಿಸಿ "Get Data" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ವೆಬ್ ಪೇಜ್ ಕೊನೆಯಲ್ಲಿ 20ನೇ ಕಂತಿನ ಹಣ ಜಮಾ ವಿವರ ಮತ್ತು UTR Details,ಇನ್ನಿತರೆ ಬ್ಯಾಂಕ್ ವಿವರವನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: