PM Kisan Tractor Yojana-ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ?

February 2, 2026 | Siddesh
PM Kisan Tractor Yojana-ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ?
Share Now:

ರೈತರು ದೇಶದ ಬೆನ್ನೆಲುಬು ಎಂಬ ದ್ಯೇಯ ವ್ಯಾಕ್ಯೆಯಂತೆ ನಮ್ಮ ದೇಶದಲ್ಲಿರುವ ರೈತರನ್ನು ಸ್ವಾವಲ್ಂಬಿಗಳನ್ನಾಗಿ ಮಾಡಲು ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ(Kisan Tractor Subsidy Scheme) ತಂದಿದ್ದು, ಅದರಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಲು 50% ಸಬ್ಸಿಡಿಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಲ್ಲಾ ರೈತರಿಗೂ ಸಹ ತಮ್ಮದೇ ಆದ ಸ್ವಂತ ಟ್ರ್ಯಾಕ್ಟರ್ ಅನ್ನು ಕೊಂಡುಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ, ಆದರೆ ಆರ್ಥಿಕ ಸ್ಥಿತಿಯಿಂದ ಸಾಧ್ಯವಾಗದ ಕಾರಣ ಸರ್ಕಾರವು(Agriculture Machinery Subsidy) ಈ ಯೋಜನೆಯ ಮೂಲಕ ಸಹಾಯಮಾಡುವುದೇ ಇದರ ಉದ್ದೇಶವಾಗಿದೆ. ಕೃಷಿ ಕ್ಷೇತ್ರವು ಇಂದು ಆಧುನಿಕತೆಯತ್ತ ತ್ವರಿತವಾಗಿ ಸಾಗುತಿದ್ದು, ಹಳೆಯ ಕಾಲದಲ್ಲಿ ಬಳಸುವ ನೇಗಿಲು-ಎತ್ತುಗಳ ಜಾಗವನ್ನು ಇಂದು ಯಂತ್ರೋಪಕರಣಗಳು ಆಕ್ರಮಿಸಿಕೊಳ್ಳುತ್ತಿವೆ.

ಇದನ್ನೂ ಓದಿ: LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!

ಆದರೆ, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇಂದಿನ(Kisan Tractor Scheme Eligibility) ದುಬಾರಿ ಬೆಲೆಯ ಟ್ರ್ಯಾಕ್ಟರ್‌ಗಳನ್ನು ಖರೀದಿ ಮಾಡುವುದು ಅತಿ ದೊಡ್ಡ ಸವಾಲಾಗಿದೆ. ರೈತರ ಈ ಭಾರವನ್ನು ಕಡಿಮೆ ಮಾಡಲು ಹಾಗೂ ಕೃಷಿಯಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸಲು ಸರ್ಕಾರವು 'ಕಿಸಾನ್ ಟ್ರ್ಯಾಕ್ಟರ್ ಯೋಜನೆ'ಯನ್ನು ಜಾರಿಗೆ ತಂದಿದೆ.

ಈ ಯೋಜನೆಯಡಿ ಅರ್ಹ ರೈತರಿಗೆ ಹೊಸ ಟ್ರ್ಯಾಕ್ಟರ್ ಖರೀದಿಸಲು ಶೇಕಡಾ 20 ರಿಂದ 50 ರಷ್ಟು ಸಹಾಯಧನವನ್ನು (Subsidy) ನೀಡಲಾಗುತ್ತದೆ. ಇದು ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೆ, ಕೃಷಿ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಮುಗಿಸಲು ಸಹಾಯ ಮಾಡುತ್ತದೆ. ಸರ್ಕಾರದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇದನ್ನೂ ಓದಿ: Budget 2026-27: ಕೇಂದ್ರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?ಇಲ್ಲಿದೆ ಸಂಪೂರ್ಣ ವಿವರ!

Kisan Tractor Subsidy Scheme-ಏನಿದು ಕಿಸಾನ್ ಟ್ರ್ಯಾಕ್ಟರ್ ಯೋಜನೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಾರಿಗೆ ತಂದಿರುವ ಯೋಜನೆಯಾಗಿದ್ದು, ದೇಶದ ರೈತರಿಗೆ ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.

ಈ ಯೋಜನೆಯ ಅಡಿಯಲ್ಲಿ ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್ ಖರೀದಿಸಿದರೂ ಸರ್ಕಾರವು ನಿಗದಿತ ಮೊತ್ತದ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಸಾಮಾನ್ಯವಾಗಿ ಸಾಮಾನ್ಯ ವರ್ಗದ ರೈತರಿಗೆ 20% ರಿಂದ 25% ಮತ್ತು ಎಸ್‌ಸಿ/ಎಸ್‌ಟಿ ಅಥವಾ ಮಹಿಳಾ ರೈತರಿಗೆ 50% ವರೆಗೆ ಸಹಾಯಧನವನ್ನು ಪಡೆಯುವ ಅವಕಾಶವಿರುತ್ತದೆ.

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

Purpose Of This Scheme-ಈ ಯೋಜನೆಯ ಮುಖ್ಯ ಉದ್ದೇಶವೇನು?

ಕೃಷಿಯಲ್ಲಿ ಹಿಂದಿನ ಜನರು ಬಳಸುತ್ತಿದ್ದ ಯಂತ್ರಗಳನ್ನು ಬಿಟ್ಟು ಇಂದಿನ ಕಾಲದ ಆಧುನಿಕ ಯಂತ್ರಗಳ ಬಳಕೆಯನ್ನು ಹೆಚ್ಚಿಸುವುದು.

ಯಂತ್ರಗಳ ಬಳಕೆಯಿಂದ ಕೃಷಿ ವೆಚ್ಚ ಕಡಿಮೆಯಾಗುತ್ತದೆ ಇದಲ್ಲದೆ ಬೆಳೆಗಳ ಇಳುವರಿಯನ್ನು ಹೆಚ್ಚಿಸಿದಾಗ ರೈತರಿಗೆ ಲಾಭವೂ ಸಹ ಹೆಚ್ಚಿಗೆಯಾಗುತ್ತದೆ.

ಎತ್ತುಗಳಿಂದ ದಿನಗಟ್ಟಲೆ ಮಾಡುವ ಕೆಲಸವನ್ನು ಟ್ರ್ಯಾಕ್ಟರ್ ಸಹಾಯದಿಂದ ಅತೀ ಬೇಗನೆ ಮುಗಿಸಿ ಸಮಯದ ಉಳಿತಾಯವನ್ನು ಮಾಡಬಹುದು.

ಸಣ್ಣ ರೈತರು ಬಾಡಿಗೆ ಟ್ರ್ಯಾಕ್ಟರ್‌ಗಳಿಗಾಗಿ ಕಾಯುವ ಬದಲು ಸ್ವಂತ ಯಂತ್ರವನ್ನು ಇಟ್ಟುಕೊಂಡು ಸ್ವಾವಲಂಬಿಗಳಾಗಬಹುದು.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?

ಅರ್ಜಿದಾರರು ಫಲಾನುಭವಿಯೂ ಭಾರತೀಯ ಪ್ರಜೆಯಾಗಿರಬೇಕು ಮತ್ತು ಕೃಷಿಕರಾಗಿರಬೇಕು.

ಅರ್ಜಿದಾರರ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.

ಅರ್ಜಿದಾರರು ಈ ಹಿಂದಿನ 7 ವರ್ಷಗಳಲ್ಲಿ ಸರ್ಕಾರದಿಂದ ಯಾವುದೇ ಟ್ರ್ಯಾಕ್ಟರ್ ಸಬ್ಸಿಡಿ ಪಡೆದಿರಬಾರದು.

ಒಬ್ಬ ರೈತ ಕೇವಲ ಒಂದು ಟ್ರ್ಯಾಕ್ಟರ್‌ಗೆ ಮಾತ್ರ ಸಬ್ಸಿಡಿ ಪಡೆಯಲು ಅರ್ಹರಿರುತ್ತಾರೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Documents required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ್
  • ಜಮೀನಿನ ದಾಖಲೆಗಳು-ಪಹಣಿ (RTC), ಖಾತಾ ಉತಾರ.
  • ಬ್ಯಾಂಕ್ ಪಾಸ್‌ಬುಕ್
  • ಪ್ಯಾನ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ
  • ಫೋಟೋ.
  • ಮೊಬೈಲ್ ಸಂಖ್ಯೆ

Where To APply-ಎಲ್ಲಿ ಅರ್ಜಿಯನ್ನು ಸಲ್ಲಿಸಬಹುದು?

ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಹ ಇರುವ ಫಲಾನುಭವಿಗಳು ನಿಮ್ಮ ತಾಲ್ಲೂಕಿನ 'ಸಹಾಯಕ ಕೃಷಿ ನಿರ್ದೇಶಕರ ಕಚೇರಿ' (Office of Assistant Director of Agriculture) ಅಥವಾ 'ರೈತ ಸಂಪರ್ಕ ಕೇಂದ್ರ'ಕ್ಕೆ (RSK)ಗೆ ನೇರವಾಗಿ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Adarsha Vidyalaya Admission-ಆದರ್ಶ ವಿದ್ಯಾನಿಯಲಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

tractor subsidy

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ಹಂತ-1: ಅರ್ಜಿದರ ರೈತರು ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ "Apply Now" ಮೇಲೆ ಕ್ಲಿಕ್ ಮಾಡಿ ಅದಿಕೃತ ಕೃಷಿ ಇಲಾಖೆಯ ವೆಬ್ಸೈಟ್ ಗೆ ಭೇಟಿ ಮಾಡಬೇಕು.

ಹಂತ-2: ಭೇಟಿ ಮಾಡಿದ ನಂತರ ಅಲ್ಲಿ ಕಾಣುವ 'ಕಿಸಾನ್ ಟ್ರ್ಯಾಕ್ಟರ್ ಯೋಜನೆ' ಅಥವಾ 'ಕೃಷಿ ಯಾಂತ್ರೀಕರಣ ಯೋಜನೆ' ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಹಂತ-3: ತದನಂತರ ಅಲ್ಲಿ ಕೇಳಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಹಾಗೂ ಜಮೀನಿನ ವಿವರಗಳನ್ನು ಭರ್ತಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಹಂತ-4: ಬಳಿಕೆ ಅರ್ಜಿಗೆ ಸಂಭಂದಿಸಿದ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಗಮನಿಸಿ: ಸಬ್ಸಿಡಿ ಹಣವು 'ಮೊದಲು ಬಂದವರಿಗೆ ಮೊದಲ ಆದ್ಯತೆ'ಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲ್ಲೂಕಿನ 'ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಥವಾ
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Website Link

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: