PM Kisan Updates-ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

July 13, 2025 | Siddesh
PM Kisan Updates-ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!
Share Now:

ಕೇಂದ್ರ ಕೃಷಿ ಮಂತ್ರಾಲಯದಿಂದ ಹೊರಡಿಸಿರುವ ನೂತನ ಮಾರ್ಗಸೂಚಿಯನ್ವಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan News) ರೈತರು 20ನೇ ಕಂತಿನ ರೂ 2,000/- ಆರ್ಥಿಕ ನೆರವನ್ನು ಪಡೆಯಲು ಈ ಅಂಕಣದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan) ನಿಯಮದನ್ವಯ 20ನೇ ಕಂತಿನ ಹಣವನ್ನು ಜುಲೈ ತಿಂಗಳ ಕೊನೆಯ ವಾರದಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಈ ಕಂತಿನ ಆರ್ಥಿಕ ನೆರವನ್ನು ಪಡೆಯಲು ಅರ್ಹ ಫಲಾನುಭವಿ ರೈತರು ಕೆಲವು ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿ ಇವುಗಳ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: RTC Crop Name-ಇನ್ನು ಮುಂದೆ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವುದು ಬಾರಿ ಸುಲಭ!

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Yojana)ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿ ರೈತರ ಖಾತೆಗೆ ಒಂದು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ರೂ 2,000/-ದಂತೆ ಒಟ್ಟು ರೂ 6,000/- ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

PM Kisan 20th installment-20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ:

ಈ ಯೋಜನೆಯಡಿ ಈಗಾಗಲೇ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000/- ಆರ್ಥಿಕವನ್ನು ಪಡೆಯುತ್ತಿರುವ ಫಲಾನುಭವಿ ರೈತರು ಈ ಕೆಳಗಿನ ಪಟ್ಟಿಯಲ್ಲಿರುವ ಕೆಲವು ಅಂಶಗಳನ್ನು ತಪ್ಪದೇ ಪಾಲನೆ ಮಾಡುವುದು ಕಡ್ಡಾಯವಾಗಿದ್ದು ತಪ್ಪಿದ್ದಲ್ಲಿ 20ನೇ ಕಂತಿನ ಆರ್ಥಿಕ ನೆರವು ವರ್ಗಾವಣೆ ಅಗುವುದಿಲ್ಲ ಅದ್ದರಿಂದ ಅರ್ಹ ರೈತರು ಈ ಕೆಲಸಗಳನ್ನು ತಪ್ಪದೇ ಮಾಡಿ.

1) ಇ-ಕೆವೈಸಿ ಪೂರ್ಣಗೊಳಿಸಬೇಕು/PM Kisan eKYC:

ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇಲ್ಲಿಯವರೆಗೆ ಇ-ಕೆವೈಸಿಯನ್ನು ಮಾಡಿಕೊಳ್ಳದ ರೈತರು ನಿಮ್ಮ ಆಧಾರ್ ಕಾರ್ಡ್ ವಿವರ ಮತ್ತು ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ನಮೂದಿಸಿ ಒಟಿಪಿ ಆಧಾರಿತ ಇ-ಕೆವೈಸಿಯನ್ನು ತಪ್ಪದೇ ಮಾಡಿಕೊಳ್ಳಿ.

ಇದನ್ನೂ ಓದಿ: Weed Mat Subsidy-ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

2) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಇರುವುದನ್ನು ಖಚಿತಪಡಿಸಿಕೊಳ್ಳಿ/Bank Account Aadhar link:

ಪಿಎಂ ಕಿಸಾನ್ ಫಲಾನುಭವಿ ರೈತರು ಒಮ್ಮೆ ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳಿ.

3) ಆಧಾರ್ ಮತ್ತು ಬ್ಯಾಂಕ್ ವಿವರ ಚೆಕ್ ಮಾಡಿಕೊಳ್ಳಬೇಕು/PM Kisan Details Check:

ಪಿಎಂ ಕಿಸಾನ್ ಯೋಜನೆಯಡಿ ಅರ್ಜಿಯಲ್ಲಿ ನಮೂದಿಸಿರುವ ರೈತರ ಹೆಸರಿಗೂ ಹಾಗೂ ಬ್ಯಾಂಕ್ ಖಾತೆಯಲ್ಲಿ ನಮೂದಾಗಿರುವ ಹೆಸರಿಗೂ ತಾಳೆಯಾಗಿದಿಯಾ? ಎಂದು ಒಮ್ಮೆ ಚೆಕ್ ಮಾಡಿಕೊಂಡು ಒಂದೊಮ್ಮೆ ಅರ್ಜಿದಾರರ ಹೆಸರುಗಳು ತಾಳೆಯಾಗದೇ ಇದ್ದಲ್ಲಿ ಈ ತಾಂತ್ರಿಕ ದೋಷವನ್ನು ನಿಮ್ಮ ಬ್ಯಾಂಕ್ ಶಾಖೆ ಅಥವಾ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅವಕಾಶ! ತಿಂಗಳಿಗೆ 50,000 ಆದಾಯ!

pmkisan

4) ಪಿಎಂ ಕಿಸಾನ್ ಯೋಜನೆಯ ಮಾಹಿತಿ ಪಡೆಯಲು ಮೊಬೈಲ್ ನಂಬರ್ ನವೀಕರಿಸಿ/PM Kisan Mobile Number Update:

ಕಾಲ ಕಾಲಕ್ಕೆ ಪಿಎಂ ಕಿಸಾನ್ ಯೋಜನೆಯಡಿ ನೀವು ಸಲ್ಲಿಸಿರುವ ಅರ್ಜಿಯ ಕುರಿತು ಮಾಹಿತಿಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ನೇರವಾಗಿ ಪಡೆಯಲು ಪ್ರಸ್ತುತ ನೀವು ಬಳಕೆ ಮಾಡುತ್ತಿರುವ ಮೊಬೈಲ್ ನಂಬರ್ ಅನ್ನು ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅಪ್ಡೇಟ್ ಮಾಡಿಕೊಳ್ಳಿ.

5) ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ/PM Kisan Status:

ಕೇಂದ್ರ ಸರ್ಕಾರದ ಅಧಿಕೃತ pmkisan.gov.in ಜಾಲತಾಣವನ್ನು ಪ್ರವೇಶ ಮಾಡಿ Status Check ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ.

6) ಅರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಿ/PM Kisan Beneficiary:

ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ಪಡೆಯಲು ಅರ್ಹರಿರುವ ಫಲಾನುಭವಿ ರೈತರ ಪಟ್ಟಿಯನ್ನು pmkisan.gov.in ತಂತ್ರಾಂಶದಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ನಿಮ್ಮ ಮೊಬೈಲ್ ಮೂಲಕವೇ ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: Free Mobile Repair Training-1 ತಿಂಗಳ ಉಚಿತ ಮೊಬೈಲ್ ರಿಪೇರಿ ತರಬೇತಿ! ಬ್ಯಾಂಕಿನಿಂದ ಸಾಲ ಸೌಲಭ್ಯ!

7) ಆನ್ಲೈನ್ ಅರ್ಜಿಯಲ್ಲಿ ನಮೂದಿಸಿರುವ ಜಮೀನಿನ ವಿವರ ಚೆಕ್ ಮಾಡಿ/PM Kisan Land Details:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಜಿಯಲ್ಲಿ ರೈತರು ನಮೂದಿಸಿರುವ ಜಮೀನಿನ ಮಾಹಿತಿಯನ್ನು ಸಮರ್ಪಕವಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

ವಿಶೇಷ ಸೂಚನೆ: 19ನೇ ಕಂತಿನ ಹಣವನ್ನು ಪಡೆದಿರುವ ಫಲಾನುಭವಿಗಳು ಈ ಮೇಲಿನ ಎಲ್ಲಾ ದಾಖಲೆಗಳು ಸರಿಯಾಗಿ ಇರುತ್ತದೆ. 19ನೇ ಕಂತಿನ ಹಣ ಪಡೆಯದೇ ಇರುವವರು ಹಾಗೂ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಖಾತೆಯಲ್ಲಿನ ವಿವರ ಹಾಗೂ ಪಹಣಿ ಮಾಲೀಕರ ವಿವರದಲ್ಲಿ ಯಾವುದೇ ಬಗ್ಗೆಯ ತಿದ್ದುಪಡಿಯನ್ನು ಮಾಡಿರುವವರು ಒಮ್ಮೆ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

PM Kisan Beneficiary List 2025: ಪಿಎಂ ಕಿಸಾನ್ ಅರ್ಹ ರೈತರ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡುವ ವಿಧಾನ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ರೂ ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ಫಲಾನುಭವಿ ರೈತರ ಪಟ್ಟಿಯನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ತಂತ್ರಾಂಶ ವನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತವನ್ನು ಅನುಸರಿಸಿ ಪರಿಶೀಲನೆ ಮಾಡಬಹುದು.

Step-1: ಅರ್ಜಿದಾರರು ಮೊದಲ ಹಂತದಲ್ಲಿ ಈ PM Kisan Beneficiary List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Scholarship-MBA ವ್ಯಾಸಂಗಕ್ಕೆ ₹2.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಇದನ್ನೂ ಓದಿ: PM Yasasvi Scholarship-ಪಿಎಂ ಯಶಸ್ವಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Step-2: ತದನಂತರ ಈ ತಂತ್ರಾಂಶದಲ್ಲಿ ತೋರಿಸುವ "Beneficiary List" ಆಯ್ಕೆಯ ಮೇಲೆ ಒತ್ತಿ State , District , Sub-District , Block , Village ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ಒಮ್ಮೆ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಿ.

PM Kisan Helpline-ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ಮಾಹಿತಿ:

PM Kisan Website-ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್- CLICK HERE
PM Kisan State Website-ರಾಜ್ಯ ಸರ್ಕಾರದ ವೆಬ್ಸೈಟ್- CLICK HERE
PM Kisan Helpline-ಸಹಾಯವಾಣಿ- Download Now

WhatsApp Group Join Now
Telegram Group Join Now
Share Now: