ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆಯಡಿ(Solar Subsidy Scheme) ಸಹಾಯಧನದಲ್ಲಿ ಮನೆಯ ಮೇಲೆ ಸೋಲಾರ್ ಘಟಕವನ್ನು ಸ್ಥಾಪನೆ ಮಾಡಲು ಅವಕಾಶವಿರುತ್ತದೆ.
PM Surya Ghar Scheme 2025 – ಜನರು ತಮ್ಮ ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಸ್ವಾವಲಂಬನೆ ಸಾದಿಸಲಿ ಎಂಬ ಉದ್ದೇಶದಿಂದ ಫೆಬ್ರವರಿ 2024 ರಂದು ಪಿಎಂ ಸೂರ್ಯ ಘರ್ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಅಡಿಯಲ್ಲಿ ಆಕರ್ಷಕ ಸಬ್ಸಿಡಿ ಮೊತ್ತದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು?ಕಿ.ವ್ಯಾವಾರು ಸಬ್ಸಿಡಿ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!
Bescom Solar Subsidy Yojana-ಈ ಯೋಜನೆಯ ಕುರಿತು ಬೆಸ್ಕಾಂ ನ ಅಧಿಕೃತ ಪ್ರಕಟಣೆಯಲ್ಲಿ ಏನಿದೆ?
PM Surya Ghar ಯೋಜನೆಯ ಕುರಿತು ಬೆಸ್ಕಾಂ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ, ಕೇವಲ 5 ವರ್ಷಗಳ ಮರುಪಾವತಿ ಅವಧಿ ಮತ್ತು 20 ವರ್ಷಗಳ ಉಚಿತ ವಿದ್ಯುತ್ ಸೌಲಭ್ಯ ಎಂದು ಪ್ರಕಟಿಸಿದೆ. ಈ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಿಗೆ ಇರುವ ಆಕರ್ಷಕ ಸಬ್ಸಿಡಿ ಮೊತ್ತದ ಕುರಿತು ಹಾಗೂ ಅರ್ಜಿ ಸಲ್ಲಿಸುವ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ
Solar Subsidy Scheme Benefits-ಯೋಜನೆಯ ಲಾಭಗಳು:
ಈ ಯೋಜನೆಯ ಅಡಿಯಲ್ಲಿ ಅರ್ಹರಿರುವ ಅಭ್ಯರ್ಥಿಗಳಿಗೆ ಸಬ್ಸಿಡಿ ಜೊತೆಗೆ ವಾರ್ಷಿಕ 7% ಬಡ್ಡಿದರದಲ್ಲಿ ಬ್ಯಾಂಕ್ ನಿಂದ ಲೋನ್ ಪಡೆಯುವ ಸೌಲಭ್ಯವಿದೆ. ನೀವು ಪಡೆದ ಲೋನ್ ಗೆ 10 ವರ್ಷದವರೆಗೆ ಕಂತು ಕಟ್ಟುವ ಅವಕಾಶವಿದೆ.
ಇದನ್ನೂ ಓದಿ: PM-Kisan 19th installment- ಈ ದಿನ ಪಿ ಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ!

1kw ಸೋಲಾರ್ ಫಲಕ ಅಳವಡಿಸಿಕೊಳ್ಳಲು ಎಷ್ಟು ಜಾಗ ಬೇಕು ಮತ್ತು ಎಷ್ಟು ವೆಚ್ಚವಾಗುತ್ತದೆ?
ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಒಂದು ಕಿಲೋ ವ್ಯಾಟ್ ಸಾಮರ್ಥ್ಯವಿರುವ ಸೋಲಾರ್ ಫಲಕ ಅಳವಡಿಸಿಕೊಳ್ಳಲು ಕೇವಲ 10×10 ಜಾಗ ಸಾಕಾಗಿದೆ. ಅದೇ ರೀತಿ ಇದಕ್ಕೆ ತಗಲುವ ವೆಚ್ಚ 60 ರಿಂದ 80 ಸಾವಿರ ರೂಪಾಯಿ. ವಿಶೇಷವೇನೆಂದರೆ ನಿಮಗೆ ಸರ್ಕಾರದಿಂದ 30,000ರೂ. ಸಬ್ಸಿಡಿ ಸಿಗಲಿದೆ. ಇದನ್ನು ಅಳವಡಿಸಿಕೊಳ್ಳುವುದರಿಂದ ದೀರ್ಘವಧಿಯಲ್ಲಿ ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಬಹುದಾಗಿದೆ.
Solar Subsidy Details-ಕಿ.ವ್ಯಾವಾರು ಸಬ್ಸಿಡಿ ವಿವರ ಹೀಗಿದೆ:
1ಕಿ.ವ್ಯಾ ಸೋಲಾರ್ ಘಟಕಕ್ಕೆ- ರೂ 30,000/- ಸಬ್ಸಿಡಿ
2ಕಿ.ವ್ಯಾ ಸೋಲಾರ್ ಘಟಕಕ್ಕೆ- ರೂ 60,000/- ಸಬ್ಸಿಡಿ
3ಕಿ.ವ್ಯಾ ಸೋಲಾರ್ ಘಟಕಕ್ಕೆ- ರೂ 78,000/- ಸಬ್ಸಿಡಿ
ಇದನ್ನೂ ಓದಿ: KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ!
ಇದರಿಂದ ಆದಾಯ ಕೂಡ ಗಳಿಸಬಹುದು! ಅದು ಹೇಗೆ?
ನಿಮ್ಮ ಮನೆಬಳಕೆಗೆ ಬೇಕಾಗಿರುವ ವಿದ್ಯುತ್ ಅನ್ನು ಹೊರತುಪಡಿಸಿ ಉಳಿಯುವ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಿ ಹಣ ಗಳಿಸಬಹುದು.
Solar Subsidy Application-ಅರ್ಜಿ ಹೇಗೆ ಸಲ್ಲಿಸುವುದು?
ಲೇಟೆಸ್ಟ್ ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡಿ ಇದ್ದರೆ ಸಾಕು ನೀವು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪಿಎಂ ಸೂರ್ಯ ಘರ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!
Online Application for Solar Subsidy-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್- Apply Now
Required Documents- ಅರ್ಜಿ ಹಾಕಲು ಅವಶ್ಯಕ ದಾಖಲೆಗಳು:
1) ವಿದ್ಯುತ್ ಬಿಲ್
2) ಆಧಾರ್ ಕಾರ್ಡ್
3) ಬ್ಯಾಂಕ್ ಪಾಸ್ ಬುಕ್
4) ಮೊಬೈಲ್ ಸಂಖ್ಯೆ
ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!
Solar Subsidy Scheme Benefits-ಈ ಯೋಜನೆಯ ಪ್ರಯೋಜನಗಳು:
1) ವಿದ್ಯುತ್ ಬಿಲ್ ನಲ್ಲಿ ಉಳಿತಾಯ
2) ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು.
3) ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆಯನ್ನು ಈ ಯೋಜನೆ ಹೊಂದಿರುತ್ತದೆ.
ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್- Apply Now
Bescom Solar Subsidy Helpline-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಬೆಸ್ಕಾಂ ಸೋಲಾರ್ ಸಹಾಯವಾಣಿ- 080-22340816