PM Surya Ghar Yojana-ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕಾದರೆ ಈ ಕೂಡಲೇ ಅರ್ಜಿ ಸಲ್ಲಿಸಿ!

August 10, 2025 | Siddesh
PM Surya Ghar Yojana-ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕಾದರೆ ಈ ಕೂಡಲೇ ಅರ್ಜಿ ಸಲ್ಲಿಸಿ!
Share Now:

PM Surya Ghar Yojana: ಸ್ನೇಹಿತರೆ ನಿಮ್ಮ ಮನೆಗೆ ಕರೆಂಟ್ ಬಿಲ್ ಬಹಳ ಬರುತ್ತಿದೆಯೇ? ವಿದ್ಯುತ್ ಬಿಲ್ ಏರಿಕೆಯಾದಲ್ಲಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಲು ಬಹಳ ಸಮಸ್ಯೆ ಆಗುತ್ತಿದೆಯಾ ? ಚಿಂತಿಸಬೇಡಿ ಸ್ನೇಹಿತರೆ ನಿಮಗಾಗಿ ಕೇಂದ್ರ ಸರ್ಕಾರದಿಂದ ಪಿಎಂ ಸೂರ್ಯಘರ್ (PM Surya Ghar Scheme) ಯೋಜನೆಯನ್ನು ಜಾರಿಗೊಳಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳಿನಿಂದ ನಿಮ್ಮ ವಿದ್ಯುತ್ ಬಿಲ್ ಸಂಪೂರ್ಣ ಉಚಿತವಾಗಿ(PM Surya Ghar) ಬಳಕೆ ಮಾಡಬಹುದು ಯಾವುದೇ ರೀತಿಯ ಬಿಲ್ ಬರುವುದಿಲ್ಲ. ಪಿಎಂ ಸೂರ್ಯ ಗರ್ ಯೋಜನೆಗೆ ಅರ್ಜಿ ಸಲ್ಲಿಸುವವರು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ: PUC Scholariship-ಪ್ರಥಮ ದರ್ಜೆಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ!

What Is PM Surya Ghar Yojana - ಪಿಎಂ ಸೂರ್ಯಘರ್ ಯೋಜನೆ ಎಂದರೇನು?

2024 ಫೆಬ್ರವರಿ ರಂದು ಶುರುವಾದ ಈ ಅದ್ಭುತ ಯೋಜನೆಯು ದೇಶದಾದ್ಯಂತ ಮನೆಗಳಿಗೆ ಬಹಳ ಉಪಕಾರಿಯಾಗಿದೆ. ಸಾಮಾನ್ಯ ವರ್ಗದ ಜನರಿಗೆ ವಿದ್ಯುತ್ ಬಿಲ್ ಕಡಿಮೆ ಮಾಡಲು ಕೇಂದ್ರ ಸರ್ಕಾರವೇ ಉಚಿತವಾಗಿ ಸೌರಶಕ್ತಿ ಎಂದರೆ (solar system) ಅಳವಡಿಸುವ ಮೂಲಕ ಸಾಮಾನ್ಯ ವರ್ಗದ ಜನರಿಗೆ ವೆಚ್ಚವನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿದೆ.

ಅರ್ಜಿ ಸಲ್ಲಿಸಿದ ಮನೆಗೆ ಉಚಿತವಾಗಿ ಮನೆಯ ಛಾವಣಿಯ ಮೇಲೆ ಸೌರಶಕ್ತಿ ಅಳವಡಿಸಲು ಈ ಯೋಜನೆ ಸಹಾಯ ಮಾಡುತ್ತದೆ. ನೆನಪಿರಲಿ ಇದರಲ್ಲಿ ಯಾವುದೇ ರೀತಿಯ ಹಣವು ಬೇಕಾಗುವುದಿಲ್ಲ ಇದು ಸಂಪೂರ್ಣ ಉಚಿತವಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಅನುಸರಿಸಿ.

ಇದನ್ನೂ ಓದಿ: Ganga Kalyana-2025: ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

PM Surya Ghar Yojana Eligibility - ಈ ಯೋಜನೆ ಪಡೆಯಲು ಅರ್ಹತೆಗಳು?

ಪಿಎಂ ಸೂರ್ಯ ಗರ್ ಯೋಜನೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾರತದ ಖಾಯಂ ನಿವಾಸಿ ಆಗಿರಬೇಕು. ಅರ್ಜಿ ಸಲ್ಲಿಸುವ ಮನೆಗೆ ವಿದ್ಯುತ್ ಸಂಪರ್ಕ ಖಂಡಿತವಾಗಿ ಇರಬೇಕು. ಮತ್ತು ನಿಮ್ಮ ಮನೆಯ ಛಾವಣಿ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಲು ಸ್ವಲ್ಪ ಜಾಗವಿರಬೇಕು. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಆದಾಯದ ಮಿತಿ ಇಲ್ಲ.

ಎಲ್ಲಾ ಆದಾಯದ ಗುಂಪಿನವರು ಅಥವಾ ಮಾಲೀಕರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ವಯಸ್ಸಿನ ಮಿತಿಯು ಯಾವುದೇ ರೀತಿಯ ನಿರ್ಬಂಧವೂ ಇಲ್ಲ. ಈ ಯೋಜನೆ ಕೇವಲ ಮನೆಗಳಿಗಷ್ಟೇ ಆಗಿರುತ್ತದೆ. ಮನೆಗಳು ಹೊರತುಪಡಿಸಿ ಯಾವುದೇ ರೀತಿಯ ಹೋಟೆಲ್, ಅಂಗಡಿಗಳು, ಅಥವಾ ವ್ಯಾಪಾರ ನಡೆಸುವಂತಹ ಸ್ಥಳಕ್ಕೆ ಈ ಯೋಜನೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

Solar Subsidy Scheme

ಇದನ್ನೂ ಓದಿ: Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯ!ಯಾವ ಜಿಲ್ಲೆಗೆ ಎಷ್ಟು ಅನುದಾನ?

Documents For PM Surya Ghar Yojana - ಅರ್ಜಿ ಸಲ್ಲಿಸುವಾಗ ಕೇಳಲಾಗುವ ಅಗತ್ಯ ದಾಖಲೆಗಳು?

ಪಿಎಂ ಸೂರ್ಯಘರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಕೇಳಲಾಗುತ್ತದೆ. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್, ವೋಟರ್ ಐಡಿ, ಮನೆಯ ಛಾವಣಿಯ ಫೋಟೋ, ಮನೆಯ ಆಸ್ತಿ ದಾಖಲೆಗಳು, ಇತ್ತೀಚಿನ ವಿದ್ಯುತ್ ಬಿಲ್, ಬ್ಯಾಂಕ್ ಖಾತೆ ವಿವರಗಳು, ಹಾಗೂ ನಿಮ್ಮ 4 ಪಾಸ್ಪೋರ್ಟ್ ಸೈಜ್ ಫೋಟೋಗಳು, ಅರ್ಜಿ ಸಲ್ಲಿಸುವಾಗ ಇದಿಷ್ಟು ದಾಖಲೆಗಳು ಕಡ್ಡಾಯವಾಗಿ ಕೇಳಲಾಗುತ್ತದೆ.

How to Apply for PM Surya Ghar Yojana - ಅರ್ಜಿ ಸಲ್ಲಿಸುವ ವಿಧಾನ ?

Step-1: ಅರ್ಜಿ ಸಲ್ಲಿಸುವವರು ಮೊದಲು ಅಧಿಕೃತ pmsuryaghar.gov.in ವೆಬ್ಸೈಟ್ ಗೆ ಭೇಟಿ ನೀಡಿ.

Step-2: ನಂತರ ನಿಮ್ಮ ರಾಜ್ಯ ಮತ್ತು ನಿಮ್ಮ ಜಿಲ್ಲೆ ಆಯ್ಕೆ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ.

Step-3: ನಿಮ್ಮ ಪ್ರದೇಶದ ವಿದ್ಯುತ್ ಸೊರಬರಾಜು ಕಂಪನಿಯನ್ನು ಆಯ್ಕೆಮಾಡಿಕೊಳ್ಳಿ.

Step-4: ವಿದ್ಯುತ್ ಬಿಲ್ ನಲ್ಲಿರುವ ಗ್ರಾಹಕರ ಖಾತೆ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚಕೋಡನ್ನು ಎಂಟ್ರಿ ಮಾಡಿಕೊಳ್ಳಿ ನಂತರ Next ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Atal Pension Scheme-ಕೇಂದ್ರ ಸರ್ಕಾರದಿಂದ ವೃದ್ಧರಿಗೆ ತಿಂಗಳಿಗೆ 5000 ಪೆನ್ಷನ್! ನೀವು ಕೂಡ ಅಪ್ಲೈ ಮಾಡಿ!

Step-5: ಲಾಗಿನ್ ಮಾಡಿ: ನೊಂದಣಿ ಯಶಸ್ವಿ ಆದ ನಂತರ ನಿಮ್ಮ ಗ್ರಾಹಕರ ಖಾತೆ ಸಂಖ್ಯೆ ಮತ್ತು ನೀವು ಹೊಂದಿಸಿದ ಪಾಸ್ವರ್ಡ್ ಬಳಸಿ ವೆಬ್ಸೈಟ್ ಲಾಗಿನ್ ಮಾಡಿಕೊಳ್ಳಿ.

Step-6: ಲಾಗಿನ್ ಆದ ನಂತರ Apply for rooftop solar ಇದನ್ನು ಕ್ಲಿಕ್ ಮಾಡಿಕೊಳ್ಳಿ.

Step-7: ಅಲ್ಲಿ ಕೇಳುವ ಎಲ್ಲಾ ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ. ಮತ್ತು ಕೇಳಲಾಗುವ ದಾಖಲೆಗಳನ್ನು PDF ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ.

Step-8: ಕೊನೆಯದಾಗಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.

Step-9: ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಸಂಖ್ಯೆ ಬರುವುದು ಅದನ್ನು ಸರಿಯಾಗಿ ಸುರಕ್ಷಿತವಾಗಿಡಿ ಏಕೆಂದರೆ ಈ ಸಂಖ್ಯೆ ನಿಮ್ಮ ಅರ್ಜಿಯ ಸ್ಟೇಟಸ್ ನೋಡಲು ಬೇಕಾಗುವುದು.

ಇದನ್ನೂ ಓದಿ: Lalbagh Flower Show-ನಾಳೆಯಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ! ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿ!

Last Date For PM Surya Ghar Yojana - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸರ್ಕಾರ ಇನ್ನು ಸೂಚಿಸಿಲ್ಲ. ಅರ್ಜಿ ಸಲ್ಲಿಸುವಂಥ ಮನೆಯ ಮಾಲೀಕರು ತಡ ಮಾಡದೆ ಅರ್ಜಿಯನ್ನು ತಕ್ಷಣ ಸಲ್ಲಿಸಿ ಏಕೆಂದರೆ ಈ ಯೋಜನೆ ಯಾವಾಗ ಬೇಕಾದರೂ ಸ್ಥಗಿತಗೊಳಬಹುದು.

ಪಿಎಂ ಸೂರ್ಯ ಯೋಜನೆ ಭಾರತದ ಪ್ರತಿ ಮನೆಗೂ ಉಪಕಾರಿ ಯೋಜನೆಯಾಗಿದೆ. ನಿಮ್ಮ ವಿದ್ಯುತ್ ಬಿಲ್ ವೆಚ್ಚವನ್ನು ಉಳಿಸಲು ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ. ನಿಮ್ಮ ಮನೆಯ ಛಾವಣಿ ಮೇಲೆ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿ. ತಿಂಗಳಿಗೆ ನಿಮಗೆ 300 ಯೂನಿಟ್ ಉಚಿತ ವಿದ್ಯುತ್ ಅವಕಾಶವನ್ನು ಕಳೆದುಕೊಳ್ಳಬೇಡಿ.

ಈ ಯೋಜನೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಮಾತ್ರ ಭೇಟಿ ನೀಡಿ ಅಧಿಕೃತ ವೆಬ್ಸೈಟ್ ಕೆಳಗೆ ಲಿಂಕ್ ಮುಖಾಂತರ ನೀಡಲಾಗಿದೆ.
Website Link :- https://pmsuryaghar.gov.in/

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: