Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsPMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.

PMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.

ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವುದರ ಬದಲಿಗೆ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ತಮ್ಮದೇ ಆದ ಸ್ವಂತ ಬ್ರಾಂಡ್ ನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಆಸಕ್ತ ಅಭ್ಯರ್ಥಿಗಳಿಗೆ ಸ್ವ-ಉದ್ಯೋಗ(self employment loan schemes) ಆರಂಭಿಸಲು ಅರ್ಥಿಕವಾಗಿ ನೆರವು ನೀಡುವ ದೇಸೆಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಕ್ಕೆ ಘಟಕಗಳ ನಿಯಮಬದ್ಧಗೊಳಿಸುವಿಕೆ (Pmfme yojane) ಯೋಜನೆಯಡಿ ಅರ್ಜಿ ಸಲ್ಲಿಸಿ  ಶೇ 35 % ಸಬ್ಸಿಡಿ  15 ಲಕ್ಷದವರೆಗೆ ಸಹಾಯಧನ ಪಡೆಯಬವುದು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಕ್ಕೆ ಘಟಕಗಳ ನಿಯಮಬದ್ಧಗೊಳಿಸುವಿಕೆ (PMFME scheme) ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿದೆ  ಪ್ರಾರಂಭಿಸಲು ಮತ್ತು ಹಾಲಿ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿರುತ್ತದೆ.

ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ: 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬವುದು. ಯಾವುದೇ ಕನಿಷ್ಠ ವಿದ್ಯಾರ್ಹತೆ ಇರುವುದಿಲ್ಲ.

ಇದರ ಜೊತೆಗೆ ಇತರೆ ಸರ್ಕಾರಿ ಯೋಜನೆಗಳಲ್ಲಿ ಶಾಯಧನ ಸಂಪರ್ಕಿತ ಬ್ಯಾಂಖ್ ಸಾಲ ಪಡೆದಿದ್ದರೂ ಸಹ ಅರ್ಹರು.

ಸಹಾಯಧನ ವಿವರ(Subsidy Details):

ಯೋಜನೆಯ ಲಾಭ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್(National Bank loan) ಅಥವಾ ಖಾಸಗಿ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಸರಕಾರ ಶೇ 35ರಷ್ಟು  ಗರಿಷ್ಠ ರೂ 15 ಲಕ್ಷಗಳು ಅಥವಾ ಶೇ 35ರಷ್ಟು ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು-How to apply?

ನಿಮ್ಮ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಥವಾ ಅರ್ಜಿ ಸಲ್ಲಿಸಲು ಈ ಯೋಜನೆಗೆ ಸಂಬಂಧಪಟ್ಟ ನಿಮ್ಮ ಜಿಲ್ಲೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ (ಪಿಎಂಎಪ್ಎಂಇ ಯೋಜನೆ)ಅವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿ ಒದಗಿಸಿ ಅರ್ಜಿ ಸಲ್ಲಿಸಬೇಕು ಅಥವಾ ನೇರವಾಗಿ ಈ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು. ವೆಬ್ಸೈಟ್ ವಿಳಾಸ: pmfme.mofpi.gov.in

ಇದನ್ನೂ ಓದಿ: gruha joytio status check: ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು  ಅರ್ಜಿ ಸ್ಥಿತಿ ತಿಳಿಯುವುದು ಹೇಗೆ?

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ವೈಯಕ್ತಿಕವಾಗಿ, ಸಹಕಾರಿ ಸಂಸ್ಥೆ, ಸ್ವ ಸಹಾಯ ಸಂಘ(SHG groups), ರೈತ ಉತ್ಪಾದಕ ಕಂಪನಿ(FPO)ಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬವುದು.


ಅಗತ್ಯ ದಾಖಲೆಗಳು ಮಾಹಿತಿ :-

ಚಾಲ್ತಿಯಲ್ಲಿರುವ ಉದ್ಯಮಕ್ಕೆ :-

1) ಆಧಾರ್ ಕಾರ್ಡ್

2) ಪಾನ್ ಕಾರ್ಡ್

3) ರೇಷನ್‌ ಕಾರ್ಡ್‌/ವಿದ್ಯುತ್‌ ಬಿಲೆ

4) ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ ಮೆಂಟ್

5) ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ.

6) ಯಂತ್ರೋಪಕರಣಗಳ ಕೋಟೆಷನ್.

7) ಪಂಚಾಯತ ಪರವಾನಿಗೆ ಪತ್ರ

8) FSSAI ಮತ್ತು ಉದ್ಯಮ ಆಧಾರ


ಹೊಸ ಉದ್ಯಮಕ್ಕೆ: –

1) ಆಧಾರ್ ಕಾರ್ಡ್

2) ಪಾನ್ ಕಾರ್ಡ್

3) ರೇಷನ್‌ ಕಾರ್ಡ್‌/ವಿದ್ಯುತ್‌ ಬಿಲೆ

4) ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ ಮೆಂಟ್

5) ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ.

6) ಯಂತ್ರೋಪಕರಣಗಳ ಕೋಟೆಷನ್.

7) ಪಂಚಾಯತ ಪರವಾನಿಗೆ ಪತ್ರ

8) FSSAI ಮತ್ತು ಉದ್ಯಮ ಆಧಾರ

ಉತ್ಪನ್ನ ಮಾರುಕಟ್ಟೆಗೆ ಮತ್ತು ಆಹಾರ ಸಂಸ್ಕರಣೆಗೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ:

PMFME ಯೋಜನೆ ಅಡಿಯಲ್ಲಿ ನೀವು CFTRI ಸಂಸ್ಥೆ ಮೈಸೂರಿನಿಂದ ಅಗತ್ಯವಿರುವ ತಾಂತ್ರಿಕ ತರಬೇತಿಯನ್ನು ಪಡೆಯಬವುದು, ನೀವು ಒಂದು ಸಮಯದಲ್ಲಿ 30 ಜನರ ಗುಂಪಿನಲ್ಲಿ ಒಟ್ಟಿಗೆ ಸೇರಿದರೆ.  ಮಾರ್ಕೆಟಿಂಗ್ ಎನ್‌ಜಿಒಗಳು ಅಗತ್ಯವಿದ್ದರೆ ಲಿಂಕ್‌ಗಳನ್ನು ಒದಗಿಸಲಾಗುತ್ತದೆ.
ಆದ್ದರಿಂದ ಆಸಕ್ತರು PMFME ಯೋಜನೆಯಡಿಯಲ್ಲಿ ಉದ್ಯಮಿಗಳಾಗಲು ಇದು ಉತ್ತಮ ಅವಕಾಶವಾಗಿದೆ.

CFTRI, Mysore Website:  https://cftri.res.in/kweb/

Most Popular

Latest Articles

- Advertisment -

Related Articles