Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!

July 21, 2025 | Siddesh
Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!
Share Now:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ(RDPR) ಹಳ್ಳಿ ಮಟ್ಟದಲ್ಲಿ ಗ್ರಾಮ ಪಂಚಾಯತಿ(Grama Panchayat) ಮೂಲಕ ಸಕ್ರಮ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವ ಅರ್ಹ ಆಸ್ತಿಯ ಮಾಲೀಕರಿಗೆ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಸರಕಾರ ಮುಂದಾಗಿದ್ದು ಇದರ ಕುರಿತು ಸಂಪೂರ್ಣ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಮಟ್ಟದ ಆಸ್ತಿಯ ಮಾಲೀಕರಿಗೆ ತಮ್ಮ ಹಳ್ಳಿ ವ್ಯಾಪ್ತಿಯ ಮನೆ/ಆಸ್ತಿಯ ನೋಂದಣಿಯನ್ನು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಇ-ಸ್ವತ್ತು(e-swathu)ತಂತ್ರಾಂಶದಲ್ಲಿ ಅಗತ್ಯ ವಿವರವನ್ನು ಅಪ್ಲೋಡ್ ಮಾಡಿ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದ್ದು ಇನ್ನು ಶೇ 40%ಕ್ಕಿಂತ ಹೆಚ್ಚಿನ ಜನರು ತಮ್ಮ ತಮ್ಮ ಆಸ್ತಿಗಳಿಗೆ ಅಧಿಕೃತ ದಾಖಲೆಗಳನ್ನು ಪಡೆದಿರುವುದಿಲ್ಲ.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

ಈ ಸಂಬಂಧ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯರ್ ರಾಜ್ ಇಲಾಖೆಯು ಈಗಾಗಲೇ ಇ-ಸ್ವತ್ತು(Property Registration) ಆಂದೋಲನವನ್ನು ಆಯೋಜನೆ ಮಾಡಲಾಗಿದ್ದು ಹಳ್ಳಿ ಮಟ್ಟದಲ್ಲಿ ಮನೆ/ಆಸ್ತಿಯ ಮಾಲೀಕರಿಗೆ ಅಧಿಕೃತ ಮಾಲೀಕತ್ವದ ದಾಖಲೆಯನ್ನು ಹೊಂದಲು ಉತೇಜನವನ್ನು ನೀಡಲಾಗುತ್ತಿದೆ. ಇಂದಿನ ಈ ಅಂಕಣದಲ್ಲಿ ಸಕ್ರಮ ಆಸ್ತಿಗಳಿಗೆ ಇ-ಸ್ವತ್ತು ಪಡೆಯುವುದು ಹೇಗೆ?ನಾಗರಿಕರು ಇ-ಸ್ವತ್ತು ದಾಖಲೆಯನ್ನು ಪಡೆಯುವುದರಿಂದ ಅಗುವ ಲಾಭಗಳೇನು? ಇ-ಸ್ವತ್ತು ದಾಖಲೆ ಎಂದರೇನು ಸೇರಿದಂತೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Akrama Sakrama-ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ:

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಮತ್ತು ಕಂದಾಯ ಭೂಮಿಗಳಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡು ಕರ್ನಾಟಕ ಭೂ ಕಂದಾಯ ಕಾಯಿದೆಯ ಪ್ರಕಾರವಾಗಿ ಅಧಿಕೃತ ದಾಖಲೆಗಳನ್ನು ಹೊಂದಿ ಸಕ್ರಮ ಯೋಜನೆಯ ವ್ಯಾಪ್ತಿಯಲ್ಲಿ ಬರುವ ನಿವೇಶನ/ಮನೆಗಳಿಗೆ ಇ-ಸ್ವತ್ತು ದಾಖಲೆಯನ್ನು ನೀಡಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯರ್ ರಾಜ್ ಇಲಾಖೆಯಿಂದ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ನಿವೇಶನ/ಮನೆಗಳಿಗೆ ತಹಸೀಲ್ದಾರ್ ಮೂಲಕ ಅನುಮೋದನೆಗೊಂಡು ವಿಸ್ತೀರ್ಣ,ಚಕ್ಕುಬಂದಿ ಒಳಗೊಂಡ ಎಲ್ಲಾ ಸ್ವತ್ತುಗಳಿಗೂ ಖಾತೆ ನೀಡಲು ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು ತಹಸೀಲ್ದಾರ್ ಅವರಿಂದ ಸ್ವೀಕೃತವಾದ ಹಕ್ಕುಪತ್ರದಲ್ಲಿ ಯಾವುದೇ ಬಗ್ಗೆಯ ತಪ್ಪುಗಳಿದ್ದರೆ ಮಾಹಿತಿ ಸಮಪರ್ಕವಾಗಿಲ್ಲವೆಂದು ಗುರುತಿಸಿ ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿಯನ್ನು ತಿರಸ್ಕರಿಸಲು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

e-Swathu Application Process-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಸಾರ್ವಜನಿಕರು ಇ-ಸ್ವತ್ತು ದಾಖಲೆಯನ್ನು ಪಡೆಯಲು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಪಂಚಾಯತಿ ಸಿಬ್ಬಂದಿಗಳು ನಿಮ್ಮ ಜಾಗಕ್ಕೆ ಭೇಟಿ ಮಾಡಿ ಜಾಗದ ಒಟ್ಟು ವಿಸ್ತೀರ್ಣವನ್ನು ದಾಖಲಿಸುತ್ತಾರ‍ೆ ಬಳಿಕ ನಿಮ್ಮ ಅರ್ಜಿಯನ್ನು ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಇದಾದ ಬಳಿಕ ಈ ಆಸ್ತಿ ನೋಂದಣಿ ಕುರಿತು ಯಾವುದೇ ಬಗ್ಗೆಯ ತಕರಾರು ಇದ್ದರೆ ಸಲ್ಲಿಸಿ ಎಂದು ಗ್ರಾಮ ಪಂಚಾಯಿತಿಯಿಂದ ನೋಟಿಸ್ ಪ್ರಕಟಣೆ ಮಾಡಲಾಗುತ್ತದೆ,

ಒಂದು ತಿಂಗಳ ನೋಟಿಸ್ ಅವಧಿ ಮುಗಿಸಿದ ಬಳಿಕ ಅರ್ಜಿದಾರ ಆಸ್ತಿಗೆ ಸಂಬಂಧಪಟ್ಟ ಮ್ಯುಟೇಶನ್ ಅನ್ನು ಸಿದ್ದಪಡಿಸಿಕೊಂಡು ಅಂತಿಮವಾಗಿ ಇ-ಸ್ವತ್ತು ದಾಖಲೆಯನ್ನು ಮುದ್ರಿಸಿ ನಿಮಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: Education Scholarship-ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

e swathu application

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

What Is e-swathu-ಇ-ಸ್ವತ್ತು ದಾಖಲೆ ಎಂದರೇನು?

ಇ-ಸ್ವತ್ತು ಎಂದರೆ ಗ್ರಾಮೀಣ ಮಟ್ಟದಲ್ಲಿರುವ ಖಾಲಿ ಜಾಗ/ಮನೆಯ ಮಾಲೀಕರ ವಿವರವನ್ನು ಡಿಜಿಟಲ್ ಮಾದರಿಯಲ್ಲಿ ದಾಖಲಿಸಿ ಆ ಒಂದು ಆಸ್ತಿಯ ಮಾಲೀಕರ ವಿವರ ಮತ್ತು ಜಾಗದ ಒಟ್ಟು ವಿಸ್ತೀರ್ಣ ಮತ್ತು ಜಾಗದ ಗುರುತನ್ನು ನಿಖರವಾಗಿ ಸಾಬೀತುಪಡಿಸಿವ ದಾಖಲೆ ಇದಾಗಿದೆ.

e-Swathu Document Benefits-ಆಸ್ತಿ/ಮನೆಗೆ ಇ-ಸ್ವತ್ತು ಪಡೆಯುವುದರಿಂದ ಅಗುವ ಪ್ರಯೋಜನಗಳೇನು?

ಗ್ರಾಮೀಣ ಮಟ್ಟದಲ್ಲಿ ನೆಲೆಸಿರುವ ಸಾರ್ವಜನಿಕರು ತಮ್ಮ ಆಸ್ತಿ/ಮನೆಗೆ ಇ-ಸ್ವತ್ತು ಅಧಿಕೃತ ಮಾಲೀಕತ್ವದ ದಾಖಲೆಯನ್ನು ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳು ದೊರೆಯಲಿವೆ ಎನ್ನುವ ಪಟ್ಟಿ ಹೀಗಿದೆ:

  • ನಿಮ್ಮ ಆಸ್ತಿಯ ಮಾಲೀಕತ್ವದ ಅಧಿಕೃತ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನೋಂದಣಿಯಾಗಿರುವುದರಿಂದ ಈ ವಿವರವನ್ನು ನಕಲಿ ಮಾಡಲು ಸಾಧ್ಯವಾಗುವುದಿಲ್ಲ.
  • ಆಸ್ತಿ ಮಾಲೀಕತ್ವವನ್ನು ಸಾಬೀತುಪಡಿಸಲು ಅಧಿಕೃತ ದಾಖಲೆ ಇ-ಸ್ವತ್ತು ಅಗಿರುತ್ತದೆ.
  • ಮನೆ ಮತ್ತು ಜಾಗದ ಮೇಲೆ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಇ-ಸ್ವತ್ತು ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು ಈ ದಾಖಲೆ ನಿಮ್ಮ ಬಳಿ ಇದ್ದರೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
  • ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಲಭ್ಯವಿರುವ ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

e swathu

Documents For e-swathu-ಇ ಸ್ವತ್ತು ಪಡೆಯಲು ಅರ್ಜಿ ಹಾಕಲು ಅವಶ್ಯಕ ದಾಖಲೆಗಳು:

ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ದಾಖಲೆಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಯನ್ನು ಒದಗಿಸಬೇಕಾಗುತ್ತದೆ.

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar
  • ಸ್ಥಳದ ಪೋಟೋ ಆಸ್ತಿಯ ಮಾಲೀಕರೊಂದಿಗೆ/Photo
  • ಕೈ ಬರಹದ ಅರ್ಜಿ/Application
  • ವಂಶವೃಕ್ಷ/Vamsharuksha
  • ವಿದ್ಯುತ್ ಬಿಲ್/Electricity bill
  • ತೆರಿಗೆ ಪಾವತಿ ರಶೀದಿ/Tax Receipt
  • ವಂಶವೃಕ್ಷದಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಮತ್ತು ಪೋಟೋ/Adhar and Photo

e-Swathu Website-ಅಧಿಕೃತ ಇ ಸ್ವತ್ತು ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: