Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

July 26, 2025 | Siddesh
Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?
Share Now:

ರಾಜ್ಯ ಸರಕಾರವು ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಈಗಾಗಲೇ ರೇಷನ್ ಕಾರ್ಡ್(Ration Card Tiddupadi arji) ಅನ್ನು ಹೊಂದಿರುವ ನಾಗರಿಕರು ತಮ್ಮ ಕಾರ್ಡ್ ನಲ್ಲಿರುವ ವಿವಿಧ ಬಗ್ಗೆಯ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಪಡಿತರ ಚೀಟಿಯಲ್ಲಿನ ವಿವರಗಳು ಸಮರ್ಪಕವಾಗಿ ನಮೂದಿಸಿರುವುದ ಅತೀ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ತಪ್ಪಾಗಿ ದಾಖಲಾಗಿರುವ ವಿವರವನ್ನು ರೇಶನ್ ಕಾರ್ಡ್ ನಲ್ಲಿ(Ration Card)ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Sainik Welfare Scholarship-ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ!

ಪ್ರಸ್ತುತ ಲೇಖನದಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ಯಾವೆಲ್ಲ ತಿದ್ದುಪಡಿಗೆ ಅರ್ಜಿ(Ration Card Online Application) ಸಲ್ಲಿಸಲು ಅವಕಾಶವಿದೆ?ಅರ್ಜಿ ಸಲ್ಲಿಸುವುದು ಹೇಗೆ?ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು?ಅರ್ಜಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳುವ ವಿಧಾನ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Ration Card Correction-ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?

ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ಈ ಕೆಳಗಿನ ಪಟ್ಟಿಯಲ್ಲಿರುವ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

  • ರೇಶನ್ ಕಾರ್ಡಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ.
  • ಪಡಿತರ ಚೀಟಿಯಲ್ಲಿ ವಿಳಾಸ ಬದಲಾವಣೆ.
  • ಮರಣ ಹೊಂದಿರುವ ಸದಸ್ಯರ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಪಡಿತರ ಚೀಟಿ ಇ-ಕೆವೈಸಿ.
  • ಕುಟುಂಬದ ಮುಖ್ಯಸ್ಥರ ಬದಲಾವಣೆ.
  • ಪೋಟೋ ಬದಲಾವಣೆ.
  • ಹೊಸ ರೇಶನ್ ಕಾರ್ಡ ಪ್ರೀಂಟ್ ಪಡೆಯಲು ಅವಕಾಶ.

ಇದನ್ನೂ ಓದಿ: Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

Ration Card

ಇದನ್ನೂ ಓದಿ: Karnataka Cabinet Decisions-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ: ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

ರೇಷನ್ ಕಾರ್ಡನಲ್ಲಿ ಈ ಮೇಲಿನ ಪಟ್ಟಿಯಲ್ಲಿರುವ ತಿದ್ದುಪಡಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Documents For Ration Card Correction-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ವಿವಿಧ ಬಗ್ಗೆಯ ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ದಾಖಲೆಗಳ ಪಟ್ಟಿ ಹೀಗಿದೆ:

  • ಮಕ್ಕಳನ್ನು ಮತ್ತು ಹೊಸ ಸದ್ಯರನ್ನು ಸೇರಿಸಲು:

A) 6 ವರ್ಷ ಮೇಲ್ಪಟ್ಟವರನ್ನು ಸೇರಿಸಲು ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ.
B) 6 ವರ್ಷ ಕೆಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್.

ಇದನ್ನೂ ಓದಿ: Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ! ₹35,000 ವಿದ್ಯಾರ್ಥಿವೇತನ!

  • ಪಡಿತರ ಚೀಟಿಯಲ್ಲಿ ವಿಳಾಸ ತಿದ್ದುಪಡಿಗೆ:

ವಿಳಾಸ ಬದಲಾವಣೆ ಅಗಿರುವ ವಿಳಾಸದ ಪೂರಾವೆಯ ಅಧಿಕೃತ ದಾಖಲೆ.
ಅರ್ಜಿದಾರರ ಮೊಬೈಲ್ ಸಂಖ್ಯೆ.
ರೇಷನ್ ಕಾರ್ಡ ಪ್ರತಿ.

  • ಸದಸ್ಯರನ್ನು ತೆಗೆದುಹಾಕಲು:

ಮರಣ ದಾಖಲಾತಿ ಪ್ರಮಾಣ ಪತ್ರ.

  • ಹೊಸ ಸದಸ್ಯರ ಸೇರ್ಪಡೆಗೆ:

ಅರ್ಜಿದಾರ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಆಧಾರ್ ಕಾರ್ಡ ಪ್ರತಿ.
ರೇಷನ್ ಕಾರ್ಡ ಪ್ರತಿ.
ಮೊಬೈಲ್ ಸಂಖ್ಯೆ.

ಇದನ್ನೂ ಓದಿ: UPI Payment-ಆಗಸ್ಟ್ 1, 2025 ರಿಂದ UPI ಪಾವತಿಗೆ ಹೊಸ ನಿಯಮಗಳು: ಏನೆಲ್ಲ ಬದಲಾವಣೆ?

Ration Card Status Check-ನಿಮ್ಮ ಮೊಬೈಲ್ ನಲ್ಲಿ ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸ್ಥಿತಿ ಚೆಕ್ ಮಾಡಿ:

ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ಆನ್ಲೈನ್ ನಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Ration Card Correction Application Status ಮಾಡಿ ರಾಜ್ಯ ಸರಕಾರದ ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

Ration Card website

Step-2: ತದನಂತರ ಈ ಪುಟದಲ್ಲಿ "ಇ-ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ತಿದ್ದುಪಡಿ ವಿನಂತಿಯ ಸ್ಥಿತಿ" ಆಯ್ಕೆ ವಿಭಾಗದಲ್ಲಿ ನಿಮ್ಮ ಜಿಲ್ಲೆಯ ವ್ಯಾಪ್ತಿಯ ವಿಭಾಗದ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಗೆ ಪ್ರವೇಶ ಮಾಡಬೇಕು.

Step-3: ಬಳಿಕ ಈ ಪೇಜ್ ನಲ್ಲಿ "ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಡಿತರ ಚೀಟಿಯ ನಂಬರ್ ಮತ್ತು ತಿದ್ದುಪಡಿ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ "Go" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: