Ration card download link-2023: ರೇಷನ್ ಕಾರ್ಡ ಕಳೆದು ಹೋದರೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
ರೇಷನ್ ಕಾರ್ಡ ಕಳೆದ ಹೋದರೆ ಅಥವಾ ಮನೆಯಿಂದ ಸರಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ರೇಷನ್ ಕಾರ್ಡ ಮರೆತು ಬಿಟ್ಟು ಹೋಗಿರುವಾಗ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಅನ್ನು ಡೌನ್ಲೋಡ್ ಮಾಡಿಕೊಳ್ಳಬವುದು ಹೇಗೆ?(ration card download) ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.
ಅನೇಕ ಜನರು ಈ ಮಾಹಿತಿಯನ್ನು ಕೇಳಿದರ ಕಾರಣ ಇಂದು ರೇಷನ್ ಕಾರ್ಡ ಕಳೆದ ಹೋದರೆ ಅಥವಾ ಮನೆಯಿಂದ ಸರಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ರೇಷನ್ ಕಾರ್ಡ ಮರೆತು ಬಿಟ್ಟು ಹೋಗಿರುವಾಗ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಅನ್ನು ಡೌನ್ಲೋಡ್ ಮಾಡಿಕೊಳ್ಳಬವುದು ಹೇಗೆ?(ration card download) ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ.
ನಮ್ಮ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹಿಂದುಳಿದ ವರ್ಗದ ಜನರಿಗೆ ಅಹಾರ ಧಾನ್ಯ ವಿತರಣೆ ಮಾಡಲು ಪಡಿತರ ಚೀಟಿ/ರೇಷನ್ ಕಾರ್ಡಗಳನ್ನು ವಿತರಿಸಲಾಗುತ್ತದೆ. ಇಲ್ಲಿಯವರೆಗೆ 1,52,03,471 ಕುಟುಂಬಗಳಿಗೆ ರೇಷನ್ ಕಾರ್ಡ ಅನ್ನು ವಿತರಣೆ ಮಾಡಲಾಗಿದೆ.
How to Download ration card- ನಿಮ್ಮ ಮೊಬೈಲ್ ನಲ್ಲಿ ರೇಷನ್ ಕಾರ್ಡ ಡೌನ್ಲೋಡ್ ಮಾಡುವ ವಿಧಾನ:
Step-1: ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣದ ಈ https://ahara.kar.nic.in/lpg/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇಲ್ಲಿ ಒಟ್ಟು ಮೂರು ವಿಭಾಗಕ್ಕೆ ಸಂಬಂಧಪಟ್ಟ 3 ಲಿಂಕ್ ಗಳು ಗೋಚರಿಸುತ್ತದೆ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
1) BENGALURU(URBAN/RURAL/CITY) districts only):- https://ahara.kar.nic.in/status1/
2) Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only:- https://ahara.kar.nic.in/status3/
3) Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only:- https://ahara.kar.nic.in/status2/
ಇದನ್ನೂ ಓದಿ: Electric bill name change: ಮೊಬೈಲ್ ನಲ್ಲೇ ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಅವಕಾಶ? ಇಲ್ಲಿದೆ ವೆಬ್ಸೈಟ್ ಲಿಂಕ್.
Step-2: ಈ ಪುಟದಲ್ಲಿ "ಪಡಿತರ ಚೀಟಿ ವಿವರ/Status of ration card" ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ Select verification type: ಎಂದು ಕಾಣುವ ಆಯ್ಕೆಯ ಮುಂದೆಯಿರುವ "With OTP"ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ ನಂಬರ್ ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ "Member's Names / ಸದಸ್ಯರು ಹೆಸರು" ಎಂದು ಹೊಸ ಆಯ್ಕೆ ಗೋಚರಿಸುತ್ತದೆ ಇಲ್ಲಿ ಸದಸ್ಯರ ಹೆಸರನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಮತ್ತೆ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಈ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡನ ಸಂಪೂರ್ಣ ವಿವರ ತೋರಿಸುತ್ತದೆ ಒಟ್ಟು ಎಷ್ಟು ಜನ ಸದಸ್ಯರಿದಿರಿ? ಅವರ ಹೆಸರು ಇ-ಕೆವೈಸಿ ಸ್ಥಿತಿ ಇತ್ಯಾದಿ ಮಾಹಿತಿ ಗೋಚರಿಸುತ್ತದೆ. ಇದೆ ಪುಟದಲ್ಲಿ ಬಲ ಬದಿಯ ಕೆಳಗೆ ಕಾಣುವ "View RC Details /ಪ.ಚೀಟಿ ವೀಕ್ಷಣೆ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ ಡುಪ್ಲಿಕೇಟ್ ಕಾಪಿಯನ್ನು ಡೌನ್ಲೋಡ್ ಮಾಡಿಕೊಳ್ಳಬವುದು.
ಗಮನಿಸಿ: ಈ ರೇಷನ್ ಕಾರ್ಡ ಕೇವಲ ಮಾಹಿತಿಗಾಗಿ ಉಪಯೋಗಿಸಬವುದಾಗಿದ್ದು ಇದು ಅಧಿಕೃತವಲ್ಲ, ಅಧಿಕೃತ ರೇಷನ್ ಕಾರ್ಡ ಅನ್ನು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯಿಂದ ಪಡೆಯಬೇಕು, ಈ ಜಾಲತಾಣವು ಬೆಳಿಗ್ಗೆ 8-00 ರಿಂದ ರಾತ್ರಿ 8-00 ರವರೆಗೆ ಮಾತ್ರ ಒಪನ್ ಆಗುತ್ತದೆ.
ನಿಮಗೆ ಯಾವ ತಿಂಗಳು ಎಷ್ಟು ಆಹಾರ ಧಾನ್ಯ ವಿತರಿಸಲಾಗಿದೆ ಎನ್ನುವ ಮಾಹಿತಿಯನ್ನು ಈ ಪೇಜ್ ನಲ್ಲಿ ತಿಳಿಯಬವುದು:
ಇದೆ ಪುಟದ ಬಲ ಬದಿಯ ಕೆಳಗೆ ಕಾಣುವ "Allotment History/ಹಂಚಿಕೆ ಮಾಹಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡಗೆ ಯಾವ ಯಾವ ತಿಂಗಳು ಎಷ್ಟು ರೇಷನ್ ವಿತರಣೆ ಮಾಡಲಾಗಿದೆ ಅಕ್ಕಿ ಎಷ್ಟು ಕೆಜಿ, ರಾಗಿ, ಜೋಳ ಇತ್ಯಾದಿ ಮಾಹಿತಿ ತಿಂಗಳವಾರು ಇಲ್ಲಿ ತೋರಿಸುತ್ತದೆ.