Revenue Department-ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ! ಜಮೀನಿನ ಖಾತೆ ಬದಲಾವಣೆಗೆ ನೂತನ ಕ್ರಮ!

May 12, 2025 | Siddesh
Revenue Department-ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ! ಜಮೀನಿನ ಖಾತೆ ಬದಲಾವಣೆಗೆ ನೂತನ ಕ್ರಮ!
Share Now:

ರೈತರಿಗೆ ಕಂದಾಯ ಇಲಾಖೆಯಿಂದ(Revenue Department) ಸಿಹಿ ಸುದ್ದಿಯನ್ನು ನೀಡಲಾಗಿದ್ದು ಜಮೀನಿನ ಮಾಲೀಕತ್ವದ ಖಾತೆಯ ವರ್ಗಾವಣೆ(Pouthi Khata) ಕುರಿತು ನೂತನ ಕ್ರಮ ಜಾರಿಗೊಳಿಸಲು ರಾಜ್ಯ ಸರ್ಕಾರವು ಕಂದಾಯ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ. ಇದರ ಕುರಿತು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ಇನ್ನು ಸಹ ಬಹುದೊಡ್ಡ ಸಂಖ್ಯೆಯಲ್ಲಿ ಪ್ರಸ್ತುತ ವಾರಸುದಾರರ(Land Documents) ಹೆಸರಿಗೆ ತಾವು ಉಳುಮೆ ಮಾಡುವ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಂಡಿರುವುದಿಲ್ಲ ಇದಕ್ಕಾಗಿ ಶಾಶ್ವತ ಪರಿಹಾರವನ್ನು ಒದಗಿಸಲು ಕಂದಾಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

ಈ ಲೇಖನದಲ್ಲಿ ಜಮೀನಿನ(RTC) ಮಾಲೀಕತ್ವ ವರ್ಗಾವಣೆಗೆ ಕಂದಾಯ ಇಲಾಖೆಯ ನೂತನ ಯೋಜನೆಯ ಮಾಹಿತಿ ಮತ್ತು ಪೌತಿ ಖಾತೆ ವಿವರಣೆ ಹಾಗೂ ಇದರ ಕುರಿತು ಇನ್ನಿತರೆ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is Pouthi Khata-ಜಮೀನಿನ ಮಾಲೀಕತ್ವ ವರ್ಗಾವಣೆಗೆ ಪೌತಿ ಖಾತೆ ಎನ್ನುತ್ತಾರೆ:

ಮೃತ ವಾರಸುದಾರಿಂದ ಹಾಲಿ ವಾರಸುದಾರರಿಗೆ ಅಥವಾ ಪ್ರಸ್ತುತ ವಾರಸುದಾರಿಗೆ ಜಮೀನಿನ ಮಾಲೀಕತ್ವವನ್ನು ಕಾನೂನಾತ್ಮಕವಾಗಿ ಮಾಲೀಕತ್ವವನ್ನು ವರ್ಗಾವಣೆಯನ್ನು ಮಾಡುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ.

Karanataka Pouthi Khata Details-50 ಲಕ್ಷಕ್ಕೂ ಹೆಚ್ಚಿನ ಮಾಲೀಕರ ಖಾತೆ ವರ್ಗಾವಣೆ ಬಾಕಿ:

ಕಂದಾಯ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಪ್ರಸ್ತುತ ವಾರಸುದಾರರ ಹೆಸರಿಗೆ ಜಮೀನಿನ ಮಾಲೀಕತ್ವವನ್ನು 50 ಲಕ್ಷಕ್ಕೂ ಹೆಚ್ಚಿನ ಮಾಲೀಕರು ತಮ್ಮ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳುವುದು ಬಾಕಿ ಉಳಿದಿದೆ ಎಂದು ಅಧಿಕೃತ ಮಾಹಿತಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!

Pouthi Khata Information-ಜಮೀನಿನ ಖಾತೆ ಬದಲಾವಣೆಗೆ ನೂತನ ಕ್ರಮ:

ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದ್ದು, ಇಲ್ಲಿಯವರೆಗೆ ತಮ್ಮ ಹೆಸರಿಗೆ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳದವರಿಗೆ ಜಮೀನಿನ ಮಾಲೀಕತ್ವವನ್ನು ಸರಳ ವಿಧಾನವನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಲು "ಪೌತಿ ಖಾತೆ ಅಭಿಯಾನ" ವನ್ನು ಹಳ್ಳಿ ಮಟ್ಟದಲ್ಲಿ ಏರ್ಪಡಿಸಲು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.

Pouthi Khata Date-ಯಾವಾಗ ಜಾರಿಗೆ ಬರಲಿದೆ ಪೌತಿ ಖಾತೆ ಅಭಿಯಾನ?

ಪ್ರಸ್ತುತ ಲಭ್ಯವಿರುವ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಮಾಹಿತಿಯನ್ವಯ ಮೇ-2025 ತಿಂಗಳ ಅಂತ್ಯದ ಒಳಗಾಗಿ ಪೌತಿ ಖಾತೆ ಅಭಿಯಾನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ಮಟ್ಟದಲ್ಲಿ ಏರ್ಪಡಿಸಲು ಇಲಾಖೆಯಿಂದ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

RTC

Pothi Khata Benefits-ಇದರಿಂದ ರೈತರಿಗೆ ಏನೆಲ್ಲ ಲಾಭಗಳಿವೆ?

ಕಂದಾಯ ಇಲಾಖೆಯಿಂದ ಆಯೋಜನೆ ಮಾಡಲು ಮುಂದಾಗಿರುವ ಪೌತಿ ಖಾತೆ ಅಭಿಯಾನದಿಂದ ರೈತರಿಗೆ ಅನೇಕ ಲಾಭ/ಪ್ರಯೋಜನಗಳು ಇದ್ದು ರೈತರು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ತಮ್ಮ ಹೆಸರಿಗೆ ಕೃಷಿ ಜಮೀನ ಮಾಲೀಕತ್ವವನ್ನು ಕಡಿಮೆ ಅವಧಿಯಲ್ಲಿ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.

ತಮ್ಮ ಹೆಸರಿಗೆ ಕೃಷಿ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದ ಕೃಷಿ ಜಮೀನಿನ ಮೇಲೆ ಬೆಳೆ ಸಾಲ ಪಡೆಯಲು ಸಾಧ್ಯವಾಗುತ್ತದೆ ಮತ್ತು ಆ ಜಮೀನಿನಲ್ಲಿ ಬೆಳೆಯುವ ಬೆಳೆಗೆ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯಬಹುದು ಜೊತೆಗೆ ಬೆಳೆ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ಸಹಕಾರಿಯಾಗಿದೆ.

ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

Pothi Khata Abhiyana-ರೈತರು ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

ಮೇ-2025 ತಿಂಗಳ ಅಂತ್ಯದ ಒಳಗಾಗಿ ಪೌತಿ ಖಾತೆ ಅಭಿಯಾನವು ಪ್ರಾರಂಭವಾಗುವ ನಿರೀಕ್ಷೆ ಇದ್ದು ರೈತರು ಕೂಡಲೇ ತಮ್ಮ ಹೆಸರಿಗೆ ಕೃಷಿ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳಲು ಇಚ್ಚೆಯನ್ನು ಹೊಂದಿರುವವರು ಇದಕ್ಕೆ ಲಭ್ಯವಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ.

Pouthi Khata Details-ಪೌತಿ ಖಾತೆ ಅಭಿಯಾನವನ್ನು ಹೇಗಿರುತ್ತದೆ?

ಗ್ರಾಮ ಪಂಚಾಯಿತಿಗೆ ತಹಸೀಲ್ದಾ‌ರ್  ನಿಯೋಜಿಸಿದ ಹಿರಿಯ ಅಧಿಕಾರಿಯ ತಂಡ ಭೇಟಿಕೊಟ್ಟು ಸಾರ್ವಜನಿಕ/ರೈತರ ಸಮ್ಮುಖದಲ್ಲಿ ಪೌತಿ ಖಾತೆ ಆಂದೋಲನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದು ಈ ಆಂದೋಲನ ಕಾರ್ಯಕಮವನ್ನು ನಿಗದಿಪಡಿಸಿದ ದಿನಾಂಕದಂದು ನಡೆಸಲಾಗುತ್ತದೆ.

ಈ ಪ್ರಕ್ರಿಯೆಯ ಭಾಗವಾಗಿ ಮುಂಚಿತವಾಗಿಯೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಗಬೇಕಾದವರ ಕುಟುಂಬಕ್ಕೆ ಮಾಹಿತಿಯನ್ನು ನೀಡಲಾಗುತ್ತದೆ ಇದಕ್ಕಾಗಿ ಹಳ್ಳಿಮಟ್ಟದಲ್ಲಿ ಪ್ರಚಾರವನ್ನು  ಡಂಗುರವನ್ನೂ ಸಾರಿಸುವ ಮೂಲಕ ಕೈಗೊಳ್ಳಲಾಗುತ್ತದೆ ಆಂದೋಲನ ನಡೆಸುವ ದಿನ ಅಧಿಕಾರಿಗಳ ತಂಡ ಸಾರ್ವಜನಿಕ ಸಮ್ಮುಖದಲ್ಲಿ ಜಿ-ಟೀ (ವಂಶವೃಕ್ಷ) ತಯಾರಿಸುತ್ತಾರೆ. 

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

ಹೀಗಾಗಿ ಯಾವುದೇ ವ್ಯತ್ಯಾಸಗಳಿದ್ದರೆ ಅಲ್ಲೇ ಬಹಿರಂಗವಾಗುತ್ತದೆ. ಅಲ್ಲೇ ಕುಟುಂಬ ಸದಸ್ಯರನ್ನು ದಾಖಲೆಯಲ್ಲಿ ನಮೂದಿಸುವ ಎರಡನೇ ಹಂತದ ಪ್ರಕ್ರಿಯೆ ನಡೆಸುವರು. ಮುಂದೆ ಡಿಜಿಟಲೀಕರಣ ಆಗಲಿದೆ. ಈ ಆಂದೋಲನ ಪೌತಿ ಖಾತೆಗೆ ಸೀಮಿತವಾಗಿರದೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹಾರ ನೀಡುವುದಕ್ಕೂ ಗಮನಕೊಡಬೇಕೆಂಬ ಇರಾದೆ ಇಲಾಖೆಯದ್ದಾಗಿದೆ ಎಂದು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

District Wise Pouthi Khata Details-ಜಿಲ್ಲಾವಾರು ಬಾಕಿ ಉಳಿದಿರುವ ಪೌತಿ ಖಾತೆಗಳು:

ರಾಜ್ಯದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ದೊಡ್ದ ಮಟ್ಟದಲ್ಲಿ ಪೌತಿ ಖಾತೆ ಪ್ರಕರಣಗಳು ಇದ್ದು ಈ ಕೆಳಗೆ ಜಿಲ್ಲಾವಾರು ಎಷ್ಟು ಪ್ರಕರಣಗಳು ಇವೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ದಾವಣಗೆರೆ- 95,079
ಬಳ್ಳಾರಿ- 70,702
ಗದಗ- 66,136
ಹಾಸನ- 2,73,761
ಮೈಸೂರು- 2,57,345
ಮಂಡ್ಯ- 3,70,207
ಚಿಕ್ಕಮಗಳೂರು- 96,636
ತುಮಕೂರು- 5,61,107
ರಾಮನಗರ- 1,79,793
ಕೋಲಾರ- 1,79,793
ಚಿಕ್ಕಬಳ್ಳಾಪುರ- 2,84,206
ಬೆಂಗಳೂರು ನಗರ- 29,816
ಬೆಂಗಳೂರು ಗ್ರಾಮಾಂತರ-83,752
ಹಾವೇರಿ- 1,05,871
ಬಾಗಲಕೋಟೆ- 67,599
ಧಾರವಾಡ- 62,599
ಚಾಮರಾಜನಗರ- 1,29,478
ಬೀದರ್- 72,935
ಕೊಪ್ಪಳ- 96,293
ಚಿತ್ರದುರ್ಗ- 1,95,854
ವಿಜಯನಗರ- 1,29,976
ಕಲಬುರ್ಗಿ- 97,739
ರಾಯಚೂರು- 91,426
ಯಾದಗಿರಿ- 1,04,611
ಉತ್ತರಕನ್ನಡ- 2,01,957
ಶಿವಮೊಗ್ಗ- 90,846
ಕೊಡಗು- 2,81,199
ವಿಜಯಪುರ- 60,383
ದಕ್ಷಿಣಕನ್ನಡ- 1,18,255
ಉಡುಪಿ- 2,89,433
ಬೆಳಗಾವಿ- 4,75,625

WhatsApp Group Join Now
Telegram Group Join Now
Share Now: