Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ(Free sewing machine training) ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!
Business loan schemes-2024

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ(Free sewing machine training) ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಅವಧಿ ಎಂದಿನಿಂದ ಆರಂಭವಾಗುತ್ತದೆ? ಯಾರೆಲ್ಲ ತರಬೇತಿಯಲ್ಲಿ ಭಾಗವಹಿಸಬಹುದು? ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್ ನಿಂದ ಯಾವೆಲ್ಲ ಯೋಜನೆಯಡಿ ಸಾಲ ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: School admission- ಉಚಿತವಾಗಿ  12 ಸಾವಿರ ಸೀಟ್ ಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

Free sewing machine training eligibility- ಉಚಿತ 30 ದಿನಗಳ ಉಚಿತ ಹೊಲಿಗೆ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

1) 18 ರಿಂದ 45 ವರ್ಷದ ವಯೊಮಾನದವರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರು.

2) ಕನ್ನಡ ಓದು ಬರಹ ಬಲ್ಲವರಾಗಿರಬೇಕು.

3) ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.

4) ಗ್ರಾಮೀಣ ಭಾಗದ ಬಿ.ಪಿ.ಎಲ್ ಕಾರ್ಡಾ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿದೆ:

ಹೌದು ಮಿತ್ರರೇ ಈ ತರಬೇತಿಯು ಒಟ್ಟು 30 ದಿನ ನಡೆಯಲಿದ್ದು ತರಬೇತಿ ಭಾಗವಹಿಸುವವರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Agriculture university courses- ಕೃಷಿ ವಿಶ್ವವಿದ್ಯಾನಿಲಯ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ!

Sewing machine training date- ತರಬೇತಿ ಪ್ರಾರಂಭವಾಗುವ ದಿನ:

18 ಮಾರ್ಚ 2024 ರಿಂದ ಈ ತರಬೇತಿ ಆರಂಭವಾಗಿ 18 ಏಪ್ರಿಲ್ 2024 ಕ್ಕೆ ಮುಕ್ತಾಯವಾಗುತ್ತದೆ ಒಟ್ಟು 30 ದಿನಗಳ ತರಬೇತಿ ಇದಾಗಿರುತ್ತದೆ.

Sewing machine training application- ಅರ್ಜಿ ಸಲ್ಲಿಸುವ ವಿಧಾನ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ಈ 9449860007, 9538281989, 9916783825, 8880444612 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯ ವಿವರಗಳನ್ನು ಒದಗಿಸಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಬಳಿಕ ತರಬೇತಿ ಆರಂಭವಾಗುವ ದಿನ ನಿಮ್ಮ ಅಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಪೋಟೋ ತೆಗೆದುಕೊಂಡು ನೇರವಾಗಿ ತರಬೇತಿಯಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: Revenue Department- ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ! ಏನಿದು ನೂತನ ಮಾದರಿ? ಇಲ್ಲಿದೆ ಸಂಪೂರ್ಣ ವಿವರ.

ತರಬೇತಿ ನಡೆಯುವ ಸ್ಥಳ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343

Sewing machine subsidy yojana-2024: ಯಾವೆಲ್ಲ ಯೋಜನೆಯಡಿ ಸಾಲ ಪಡೆಯಬಹುದು.

ಈ ಕೇಂದ್ರದಲ್ಲಿ ತರಬೇತಿ ಪಡೆಯುವ ಅವಧಿಯಲ್ಲಿ ಯಾವೆಲ್ಲ ಯೋಜನೆಯಡಿ ನೀವು ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಬ್ಸಿಡಿಯಲ್ಲಿ ಸಾಲವನ್ನು ಪಡೆಯಬಹುದು ಎಂದು ತಿಳಿಸಲಾಗುತ್ತದೆ ಜೊತೆಗೆ ಸಾಲಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಸಹ ಒದಗಿಸಲಾಗುತ್ತದೆ. ಒಂದಿಷ್ಟು ಯೋಜನೆಗಳ ಕುರಿತು ಈ ಕೆಳಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Free adhar update- ಉಚಿತವಾಗಿ ಆಧಾರ್ ಕಾರ್ಡ ನವೀಕರಣ ಮಾಡಲು ಇನ್ನು 2 ದಿನ ಮಾತ್ರ ಅವಕಾಶ!

1) Vishwakarma yojana- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ:

ಈ ವರ್ಷದಿಂದ ಜಾರಿಗೆ ಬಂದಿರುವ ಜನಪ್ರಿಯ ಯೋಜನೆಯಲ್ಲಿ ಈ ಯೋಜನೆಯು ಒಂದಾಗಿದೆ ಸ್ವ-ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ಬ್ಯಾಂಕ್ ಮೂಲಕ ಶೇ 5% ಬಡ್ಡಿಯಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: click here

2) PMEGP- ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ:

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ(PMEGP) ಈ ಯೋಜನೆಯ ಮೂಲಕವು ನೀವು ಸ್ವ-ಉದ್ಯೋಗವನ್ನು ಆರಂಭಿಸಲು ಶೇ 35 ಸಬ್ಸಿಡಿಯಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ: Click here

ಇದನ್ನೂ ಓದಿ: Best Home loan- 2024: ಉಚಿತ ಮನೆ ಯೋಜನೆಯಡಿ ರೂ. 1 ಲಕ್ಷ ಸಹಾಯಧನ! ಈ ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಿ.