Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!

March 2, 2026 | Siddesh
Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!
Share Now:

ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಸ್ವಾವಲಂಬನೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು (Karnataka Kuri Abhiruddi Nigama)ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 10+1 ಕುರಿ ಅಥವಾ ಮೇಕೆ ಘಟಕಗಳನ್ನು(Sheep And Goat Farming Susbidy Scheme) ಸ್ಥಾಪಿಸಲು ಆಸಕ್ತ ಫಲಾನುಭವಿಗಳಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕುರಿ/ಮೇಕೆ ಸಾಕಾಣಿಕೆ ಉದ್ದಿಮೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಇಚ್ಛಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಈ ಯೋಜನೆಯು ಮುಖ್ಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡಿದೆ. ನಿಗಮದ ವತಿಯಿಂದ(Kuri Sakanike Susbidy) ನೀಡಲಾಗುವ ಈ ಆರ್ಥಿಕ ನೆರವು, ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರು ತಮ್ಮದೇ ಆದ ಉದ್ಯಮವನ್ನು ಆರಂಭಿಸಲು ಪ್ರೇರೇಪಿಸುತ್ತದೆ. ನಿಗಮವು ನಿಗದಿಪಡಿಸಿದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿ ನಮೂನೆಗಳನ್ನು(Kuri Sakanike Susbidy Yojane) ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಗಡುವಿನೊಳಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಇಂದಿನ ಲೇಖನದಲ್ಲಿ ಅರ್ಜಿ ಸಲ್ಲಿಸುವುದರ ಕುರಿತು ಅಗತ್ಯ ವಿವರ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಾಗಿದ್ದು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ. ಇತರರಿಗೂ ಮಾಹಿತಿ ತಿಳಿಸಲು ಸಹಕರಿಸಿ.

Sheep And Goat Farming Subsidy Yojana In Karnataka-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದೊಳಗಿರಬೇಕು.

ಅರ್ಜಿದಾರರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

Sheep And Goat Farming Subsidy Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಈ ಯೋಜನೆಯಡಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದವರಿಗೆ ಶೇಕಡಾ 90% ರಷ್ಟು ಸಹಾಯಧನ ನೀಡಲಾಗುತ್ತದೆ. ಅಂದರೆ, ಸುಮಾರು ರೂ. 63,000 ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6, 2026

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

Sheep And Goat Farming Subsidy

ಇದನ್ನೂ ಓದಿ: SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

Sheep And Goat Farming Scheme Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ನಿಗಮದ ಯೋಜನೆಯಡಿ ಸಹಾಯಧನವನ್ನು ಪಡೆಯಲು ನಿಮ್ಮ ಹತ್ತಿರದ ಕುರಿಗೆ ಸಂಬಂದಪಟ್ಟ ರೈತ ಉತ್ಪಾದಕ ಕಂಪನಿ ಕಚೇರಿ ಅಥವಾ ನಿಮ್ಮ ತಾಲ್ಲೂಕಿನ ಪಶುವೈದ್ಯಾಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆಯನ್ನು ಮತ್ತು ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

Documents-ಅರ್ಜಿ ಸಲ್ಲಿಸಲು ಅವಕಶ್ಯಕ ದಾಖಲೆಗಳು:

ನಿಗಮದಿಂದ ಕುರಿ/ಮೇಕೆ ಸಾಕಾಣಿಕೆಗೆ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್ ಪ್ರತಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ರೇಷನ್ ಕಾರ್ಡ್ (ಬಿಪಿಎಲ್ ಕಾರ್ಡ್).
  • ಬ್ಯಾಂಕ್ ಪಾಸ್ ಬುಕ್ ಪ್ರತಿ.

ಇದನ್ನೂ ಓದಿ: Sugarcane Incentive-ಕಬ್ಬು ಬೆಳೆಗಾರರಿಗೆ 300 ಕೋಟಿ ಆರ್ಥಿಕ ನೆರವು ಬಿಡುಗಡೆ: ಸಚಿವ ಶಿವಾನಂದ ಪಾಟೀಲ್!

Sheep And Goat Farming Subsidy Yojane-ಯಾವೆಲ್ಲ ಜಿಲ್ಲೆಯಲ್ಲಿ ಅರ್ಜಿ ಅಹ್ವಾನಿಸಲಾಗಿದೆ?

ಪ್ರಸ್ತುತ ತುಮಕೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ನಿಮ್ಮ ಜಿಲ್ಲೆಯಲ್ಲಿನ ಅರ್ಜಿ ಸಲ್ಲಿಸುವಿಕೆಯ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಪಶುಸಂಗೋಪನೆ ಇಲಾಖೆಯ ಕಚೇರಿಯನ್ನು ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗಮದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕುರಿತು ಮಾಹಿತಿಯನ್ನು ಪಡೆಯಬಹುದು.

Sheep And Goat Farming-ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಸಾದಕ-ಭಾದಕಗಳ ಪಟ್ಟಿ:

ಸಾಧಕಗಳು (Pros):

ಕಡಿಮೆ ಬಂಡವಾಳ: ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದಾದ ಉಪಕಸುಬು.

ಹೆಚ್ಚಿನ ಬೇಡಿಕೆ: ಮಾಂಸ ಮತ್ತು ಉಣ್ಣೆಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇರುತ್ತದೆ.

ತ್ವರಿತ ಸಂತಾನೋತ್ಪತ್ತಿ: ಕುರಿ ಮತ್ತು ಮೇಕೆಗಳು ವೇಗವಾಗಿ ಮರಿ ಹಾಕುವುದರಿಂದ ಅಲ್ಪಾವಧಿಯಲ್ಲಿ ಸಂಖ್ಯೆ ವೃದ್ಧಿಯಾಗುತ್ತದೆ.

ಗೊಬ್ಬರದ ಲಾಭ: ಇವುಗಳ ಹಿಕ್ಕೆ ಅತ್ಯುತ್ತಮ ಸಾವಯವ ಗೊಬ್ಬರವಾಗಿದ್ದು, ಕೃಷಿ ಭೂಮಿಗೆ ಉಪಯುಕ್ತ.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!

ಬಾಧಕಗಳು (Cons):

ರೋಗಭಯ: ಪಿ.ಪಿ.ಆರ್ (PPR) ನಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರವಿರಬೇಕು, ಸಕಾಲಕ್ಕೆ ಲಸಿಕೆ ಹಾಕಿಸುವುದು ಅನಿವಾರ್ಯ.

ಮೇವಿನ ಲಭ್ಯತೆ: ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆ ಎದುರಾಗಬಹುದು.

ನಿರ್ವಹಣೆ: ಕಾಡು ಪ್ರಾಣಿಗಳು ಅಥವಾ ಕಳ್ಳರ ಕಾಟದಿಂದ ರಕ್ಷಿಸಲು ಸುಸಜ್ಜಿತ ಕೊಟ್ಟಿಗೆ ಮತ್ತು ಭದ್ರತೆಯ ಅವಶ್ಯಕತೆ ಇರುತ್ತದೆ.

For More Information-ನಿಗಮದ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ:

  • ನಿಗಮದ ವೆಬ್ಸೈಟ್- Click Here
  • ನಿಗಮದ ದೂರವಾಣಿ ಸಂಖ್ಯೆ-080-22211268

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: