SSLC Result-ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ! ಇಲ್ಲಿದೆ ವೆಬ್ಸೈಟ್ ಲಿಂಕ್!

May 2, 2025 | Siddesh
SSLC Result-ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ! ಇಲ್ಲಿದೆ ವೆಬ್ಸೈಟ್ ಲಿಂಕ್!
Share Now:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ 2024-25 ನೇ ಸಾಲಿನ(SSLC Exam Result) ಎಸ್.ಎಸ್.ಎಲ್.ಸಿ ಪರೀಕ್ಷೆ-1ಯ ಅಧಿಕೃತ ಫಲಿತಾಂಶವನ್ನು ಇಂದು ಅಂದರೆ ದಿನಾಂಕ- 02 ಮೇ 2025 ರಂದು ಬಿಡುಗಡೆ ಮಾಡಲು ಸಕಲ ಸಿದ್ದತೆಯನ್ನು ಮಂಡಲಿಯಿಂದ ಮಾಡಿಕೊಳ್ಳಲಾಗಿದೆ. ಇದರ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ಮಂಡಲಿಯ ಅಧಿಕೃತ ಪ್ರಕಟಣೆಯ ಪ್ರಕಾರ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ(10th Result 2025)-1ರ ಪರೀಕ್ಷೆಗಳು ದಿನಾಂಕ: 21-03-2025 ರಿಂದ 04-04-2025ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!

ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ 02-05-2025 ರಂದು ಬೆಳಿಗ್ಗೆ 11-30 ಗಂಟೆಗೆ (KSEAB SSLC Result 2025)ಕರ್ನಾಟಕ ಶಾಲಾ ವರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದ್ದು ಈ ಬಗ್ಗೆ ಮಂಡಲಿಯಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

Total students attend sslc exam- ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ವಿವರ ಹೀಗಿದೆ:

ಒಟ್ಟು ವಿದ್ಯಾರ್ಥಿಗಳು- 8.96 ಲಕ್ಷ ವಿದ್ಯಾರ್ಥಿಗಳು
ಬಾಲಕರು- 4,61,563
ಬಾಲಕಿಯರು- 4,34,884
ಒಟ್ಟು ಪರೀಕ್ಷಾ ಕೇಂದ್ರಗಳು- 2,818
ಪರೀಕ್ಷೆ ನಡೆದ ದಿನಾಂಕ- 21-03-2025 ರಿಂದ 04-04-2025ರವರೆಗೆ

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ! ಒಂದೇ ಬಾರಿಗೆ 3 ತಿಂಗಳ ಹಣ!

More information- ಪ್ರಮುಖ ಮಾಹಿತಿ ವಿವರ:

ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವ ದಿನಾಂಕ- 02 ಮೇ 2025
ವೆಬ್ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗುವ ಸಮಯ- 12:30 ನಂತರ
ಫಲಿತಾಂಶ ನೋಡಲು ಅಧಿಕೃತ ಲಿಂಕ್- https://karresults.nic.in/

ಅಧಿಕೃತ ಪ್ರಕಟಣೆ ಪ್ರತಿ:

SSLC Result link

How to check sslc result- SSLC ಫಲಿತಾಂಶವನ್ನು ನೋಡುವುದು ಹೇಗೆ?

ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ಇಂದು ಫಲಿತಾಂಶ ಪ್ರಕಟವಾದ ಬಳಿಕ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!

Step-1: Step-1: ಮೊಟ್ಟ ಮೊದಲಿಗೆ ಇಲ್ಲಿ Apply now ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಜಾಲತಾಣವನ್ನು ಪ್ರವೇಶ ಮಾಡಬೇಕು.

sslc result 2025

Step-2: ನಂತರ ಈ ಪೇಜ್ ನಲ್ಲಿ ಕಾಣುವ "ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ/Karnataka School Examination and Assessment Board" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಇಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶ ತೋರಿಸುತ್ತದೆ.

ಇದನ್ನೂ ಓದಿ: RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

ವಿದ್ಯಾರ್ಥಿಗಳಿಗೆ ಕಿವಿಮಾತು:

ಫಲಿತಾಂಶದ ಕುರಿತು ಆತಂಕಗೊಳ್ಳದೆ, ಧೈರ್ಯದಿಂದ ತಮ್ಮ ಶ್ರಮದ ಫಲವನ್ನು ಸ್ವೀಕರಿಸಲು ವಿದ್ಯಾರ್ಥಿಗಳು ಸಿದ್ಧರಾಗಿರಬೇಕು. ಫಲಿತಾಂಶವು ಯಾವುದೇ ರೀತಿಯಲ್ಲಿ ಇರಲಿ, ಇದು ಕೇವಲ ಒಂದು ಹೆಜ್ಜೆಯಷ್ಟೇ. ಭವಿಷ್ಯದಲ್ಲಿ ಇನ್ನಷ್ಟು ಅವಕಾಶಗಳು ಕಾದಿವೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: