New Ration Card-ಹೊಸ BPL ಮತ್ತು APL ರೇಷನ್ ಕಾರ್ಡ ಪಡೆಯಲು ಅರ್ಹ ಸಲ್ಲಿಸಲು ಅವಕಾಶ!

May 2, 2025 | Siddesh
New Ration Card-ಹೊಸ BPL ಮತ್ತು APL ರೇಷನ್ ಕಾರ್ಡ ಪಡೆಯಲು ಅರ್ಹ ಸಲ್ಲಿಸಲು ಅವಕಾಶ!
Share Now:

ಕರ್ನಾಟಕ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಹೊಸ BPL ಮತ್ತು APL ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು(New Ration Card Application) ಅರ್ಹ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರೇಷನ್ ಕಾರ್ಡ ಅನ್ನು ಪಡೆಯುವುದರ ಮೂಲಕ(Ration Card Application) ಅರ್ಹ ಕುಟುಂಬಗಳು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸ್ಥಿತಿ ಪರಿಶೀಲನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: SSLC Result-ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ! ಇಲ್ಲಿದೆ ವೆಬ್ಸೈಟ್ ಲಿಂಕ್!

Who Can Apply For New Ration Card-ಹೊಸ ರೇಷನ್ ಕಾರ್ಡ್‌ಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕೆಲವು ನಿರ್ದಿಷ್ಟ ಅರ್ಹತೆ ಮಾನದಂಡಗಳಿವೆ. ಈ ಕೆಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:

ಹೊಸದಾಗಿ ಮದುವೆಯಾದ ದಂಪತಿಗಳು: ತಮ್ಮ ಹೊಸ ಕುಟುಂಬಕ್ಕೆ ಪ್ರತ್ಯೇಕ ರೇಷನ್ ಕಾರ್ಡ್ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

BPL ಅರ್ಹತೆ: ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯಯು ಕಡಿಮೆ ಇದ್ದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು.

ಇದನ್ನೂ ಓದಿ: Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!

APL ಅರ್ಹತೆ: BPL ಆದಾಯ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು.

ಸರ್ಕಾರಿ/ಸಾರ್ವಜನಿಕ ವಲಯದ ಉದ್ಯೋಗಿಗಳು, ವೈದ್ಯರು, ವಕೀಲರು, ಲೆಕ್ಕಪರಿಶೋಧಕರು ಅಥವಾ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು BPL ಕಾರ್ಡ್‌ಗೆ ಅರ್ಹರಲ್ಲ.

New Ration Card Documents- ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ:

  • ಆಧಾರ್ ಕಾರ್ಡ್: ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯ.
  • ಗುರುತಿನ ಚೀಟಿ: ಮತದಾರರ ಗುರುತಿನ ಚೀಟಿ ಅಥವಾ ಇತರ ಸರ್ಕಾರಿ ಗುರುತಿನ ದಾಖಲೆ.
  • ಆದಾಯ ಪ್ರಮಾಣ ಪತ್ರ: BPL ಕಾರ್ಡ್‌ಗೆ ಆದಾಯ ಪ್ರಮಾಣ ಕಡ್ಡಾ ಕಂದಾಯ ಇಲಾಖೆಯಿಂದ ಪಡೆಯಬೇಕು.
  • ಫೋಟೋ: ಕುಟುಂಬದ ಮುಖ್ಯಸ್ಥರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.
  • ಮೊಬೈಲ್ ಸಂಖ್ಯೆ: OTP ದೃಢೀಕರಣಕ್ಕಾಗಿ ಸಕ್ರಿಯ ಮೊಬೈಲ್ ಸಂಖ್ಯೆ.
  • ವಿಳಾಸದ ಪುರಾವೆ: ವಿದ್ಯುತ್ ಬಿಲ್, ಗ್ಯಾಸ್ ಬಿಲ್

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ! ಒಂದೇ ಬಾರಿಗೆ 3 ತಿಂಗಳ ಹಣ!

Ration Card Online Application-ಅರ್ಜಿ ಸಲ್ಲಿಸುವ ವಿಧಾನ

ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ತಮ್ಮ ಹತ್ತಿರದ ಗ್ರಾಮ ಪಂಚಾಯತಿ ಅಥವಾ ಗ್ರಾಮ ಒನ್, ಅಥವಾ ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ನೀಡಿ.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Karnataka Ration Card Status Check on Mobile- ಆನ್‌ಲೈನ್‌ನಲ್ಲಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಒಮ್ಮೆ ಅರ್ಜಿಯನ್ನು ಸಲ್ಲಿಸಿದ ಬಳಿಕ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಅರ್ಜಿಯ ಸ್ಥಿತಿಯನ್ನು ನೋಡಬಹುದು.

Step-1: ಪ್ರಥಮದಲ್ಲಿ Ration Card Application Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆಯ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!

ration card status (9)

Step-2: ಇದಾದ ಬಳಿಕ ಈ ಪುಟದಲ್ಲಿ "ಇ-ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ಹೊಸ /ಹಾಲಿ ಪಡಿತರ ಚೀಟಿಯ ಸ್ಥಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯು ಯಾವ ವಿಭಾಗದಡಿ ಬರುತ್ತದೆ(ಬೆಂಗಳೂರು/ಮೈಸೂರು/ಕಲಬುರಗಿ) ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಬಳಿಕ ಈ ಪೇಜ್ ನಲ್ಲಿ ಕಾಣುವ "Application Status of new Ration Card applied/ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿ ಯ ಸ್ಥಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Enter Acknowledgment No/ ಹಿಂಬರಹ ಸಂಖ್ಯೆ ನಮೂದಿಸಿ" ಕಾಲಂ ನಲ್ಲಿ ನಿಮ್ಮ ಅರ್ಜಿಯ ಸಂಖ್ಯೆಯನ್ನು ಹಾಕಿ "Go" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.

ಇದನ್ನೂ ಓದಿ: RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

Benefits Of Ration Card-ರೇಷನ್ ಕಾರ್ಡ್‌ನ ಪ್ರಯೋಜನಗಳು:

BPL ಕಾರ್ಡ್: ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು (ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ), ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಹಾಯಧನ ಆಧಾರಿತ ಯೋಜನೆಗಳ ಪ್ರಯೋಜನವನ್ನು ಪಡೆಯಲು ಈ ಕಾರ್ಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಇಂತಹ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.

APL ಕಾರ್ಡ್: ಸಾಧಾರಣ ದರದಲ್ಲಿ ಆಹಾರ ಧಾನ್ಯಗಳು ಮತ್ತು ಕೆಲವು ಸರ್ಕಾರಿ ಯೋಜನೆಗಳಿಗೆ ಗುರುತಿನ ಚೀಟಿಯ ರೀತಿ ಈ ದಾಖಲೆಯನ್ನು ಬಳಕೆ ಮಾಡಿಕೊಳ್ಳಬಹುದು.

Online Ration Card Status-ಅರ್ಜಿ ಸ್ಥಿತಿ ಚೆಕ್ ಲಿಂಕ್- New Ration Card Status
Ration Card Helpline-ಸಹಾಯಕ್ಕಾಗಿ ಕರೆ ಮಾಡಿ: 1800-425-9339

WhatsApp Group Join Now
Telegram Group Join Now
Share Now: