Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

December 31, 2025 | Siddesh
Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?
Share Now:

ಅನೇಕ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಯಾವುದು? ಅದು ಎಲ್ಲಿ ಬರುತ್ತದೆ ಹಾಗೂ ಕೃಷಿ ಜಮೀನನ್ನು(Agriculture Land) ನೇರವಾಗಿ ಭೇಟಿ ಮಾಡಿದಾಗ ತಾವು ನಿಂತಿರುವ ಜಮೀನಿನ ಸರ್ವೆ ನಂಬರ್ ಯಾವುದು ಎನ್ನುವ ಮಾಹಿತಿಯು ನಿಖರವಾಗಿ ತಿಳಿದಿರುವುದಿಲ್ಲ, ಈ ಎಲ್ಲಾ ಬಗ್ಗೆಯ ನಿಖರವಾದ ಮಾಹಿತಿಯನ್ನು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಲು ಅವಕಾಶವಿದ್ದು ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಬೆರಳ ತುದಿಯಲ್ಲೇ ನಾವಿರುವ ಸ್ಥಳದಿಂದಲೇ ಅನೇಕ ವಿಷಯಗಳನ್ನು ಒಂದೆರಡು(RTC) ಕ್ಲಿಕ್ ನಲ್ಲಿ ನಮ್ಮ ಮೊಬೈಲ್ ನಲ್ಲೇ ಅನೇಕ ಮಾಹಿತಿಯನ್ನು ಪಡೆದುಕೊಳ್ಳಬಹುದು ರೈತರ ಜಮೀನಿಗೆ ಕಂದಾಯ ಇಲಾಕೆಯಿಂದ(Karnataka Revenue Department) ಮಾಲೀಕತ್ವ ವಿವರ ಮತ್ತು ಒಟ್ಟೂ ವಿಸ್ತೀರ್ಣದ ಮಾಹಿತಿಯನ್ನು ಸೂಚಿಸಲು ಸರ್ವೆ ನಂಬರ್ ಅನ್ನು ನಿಗದಿಪಡಿಸಲಾಗಿರುತ್ತದೆ, ಈ ಸರ್ವೆ ನಂಬರ್ ಅನ್ನು ನಮೂದಿಸಿ ಜಮೀನಿನ ಎಲ್ಲಾ ಬಗ್ಗೆ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದಾಗಿದೆ.

ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!

ಈ ಅಂಕಣದಲ್ಲಿ ಕೃಷಿಕರು ಸ್ಮಾರ್ಟ್ ಪೋನ್ ಅನ್ನು ಬಳಕೆ ಮಾಡಿಕೊಂಡು ತಮ್ಮ ಜಮೀನಿನ ಸರ್ವೆ ನಂಬರ್(Find Survey Number) ಅನ್ನು ಹೇಗೆ ಪಡೆಯಬಹುದು? ಮತ್ತು ಒಂದು ಕೃಷಿ ಜಮೀನಿನನ್ನು ಭೇಟಿ ಮಾಡಿ ಆ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರವನ್ನು ಮೊಬೈಲ್ ನಲ್ಲೇ ಹೇಗೆ ತಿಳಿಯಬಹುದು? ಹಾಗೂ ಹಳ್ಳಿವಾರು ಸರ್ವೆ ನಂಬರ್ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಮಾಹಿತಿಯನ್ನು ಸಹ ಹಂಚಿಕೊಳ್ಳಲಾಗಿದೆ.

Dishaank App-ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ತಿಳಿಯುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಕಂದಾಯ ಇಲಾಖೆಯಿಂದ(Pahani) ಅಭಿವೃದ್ದಿಪಡಿಸಿರುವ Dishaank ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ಒಂದೆರಡು ಕ್ಲಿಕ್ ನಲ್ಲಿ ನೀವು ನಿಂತಿರುವ ಜಮೀನಿನ ಸರ್ವೆ ನಂಬರ್ ಮಾಹಿತಿ ಮತ್ತು ವಿಸ್ತೀರ್ಣ ಹಾಗೂ ಮಾಲೀಕರ ವಿವರ ಸೇರಿದಂತೆ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ.

Step-1: ರೈತರು ತಮ್ಮ ಮೊಬೈಲ್ ನಲ್ಲಿ ಈ "Dishaank App" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Solar Pumpset Helpline-ಸೋಲಾರ್ ಪಂಪ್ ಸೆಟ್ ಸಹಾಯಧನ ಪಡೆಯಲು ಸಹಾಯವಾಣಿ ಸ್ಥಾಪನೆ!

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ "Open" ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು, ಇಲ್ಲಿ ಭಾಷೆ ಆಯ್ಕೆಯಲ್ಲಿ ಕನ್ನಡ ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು ಮತ್ತು 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ "OTP ಪಡೆಯಿರಿ" ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಅಪ್ಲಿಕೇಶನ್ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ GPS ಲೋಕೇಶನ್ ಅನ್ನು ಆನ್ ಮಾಡಿಕೊಂಡು ನೀವು ಯಾವ ಜಾಗದಲ್ಲಿ ಇರುತ್ತಿರೋ ಆ ಸ್ಥಳದ ಸರ್ವೆ ನಂಬರ್ ವಿವರ ಈ ಅಪ್ಲಿಕೇಶನ್ ತೋರಿಸುತ್ತದೆ. ಬಳಿಕ ಆ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಈ ಜಾಗದ ಮಾಲೀಕರ ವಿವರ ಮತ್ತು ಹಿಸ್ಸಾ ನಂಬರ್ ಗೋಚರಿಸುತ್ತದೆ.

ಇದನ್ನೂ ಓದಿ: Federal Bank Scholarship-ಫೆಡರಲ್ ಬ್ಯಾಂಕ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

rtc

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

Village Wise Survey Number List-ಹಳ್ಳಿವಾರು ಸರ್ವೆ ನಂಬರ್ ಪಟ್ಟಿಯನ್ನು ಪಡೆಯುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲಿ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ಕಂದಾಯ ಇಲಾಖೆಯ ಅಧಿಕೃತ cropsurvey.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಸರ್ವೆ ನಂಬರ್ ಪಟ್ಟಿಯನ್ನು ಪಡೆಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ "Survey Number List" ಮಾಡಿ ಅಧಿಕೃತ cropsurvey.karnataka.gov.in ಜಾಲತಾಣವನ್ನು ಪ್ರವೇಶ ಮಾಡಬೇಕು.

pahani

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/ತಾಲ್ಲೂಕು/ಹೋಬಳಿ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು Survey No ಕಾಲಂ ನಲ್ಲಿ ಸರ್ವೆ ನಂಬರ್ ಹಾಕಿದರೆ ಹಿಸ್ಸಾವಾರು ಆ ಸರ್ವ ನಂಬರಿನಲ್ಲಿರುವ ರೈತರ ಪಟ್ಟಿ ಇನ್ನಿತರೆ ವಿವರ ತೋರಿಸುತ್ತದೆ.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಕಾರ್ಡಗೆ ಬಯೋ ಮೆಟ್ರಿಕ್ ನವೀಕರಣ! ತಪ್ಪದೇ ಈ ಮಾಹಿತಿ ತಿಳಿಯಿರಿ!

Land Survey Number Check-ಸರ್ವೆ ನಂಬರ್ ಹಾಕಿ ಹಿಸ್ಸಾ ನಂಬರ್ ಪಡೆಯಬಹುದು:

ಇನ್ನು ಕೆಲವು ರೈತರಿಗೆ ನಾಡಕಚೇರಿಯಲ್ಲಿ ಪಹಣಿಯನ್ನು ತೆಗೆಯುವಾಗ ಜಮೀನಿನ ಸರ್ವೆ ನಂಬರ್ ನೆನಪಿರುತ್ತದೆ ಅದರೆ ಹಿಸ್ಸಾ ನಂಬರ್ ಸರಿಯಾಗಿ ನೆನಪಿರುವುದಿಲ್ಲ ಈ ಸಮಸ್ಯೆಯನ್ನು ಸರಿದೂಗಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸರ್ವೆ ನಂಬರ್ ಹಾಕಿ ಹಿಸ್ಸಾ ಸಂಖ್ಯೆಯನ್ನು ತಿಳಿಯಬಹುದು.

Step-1: ಪ್ರಥಮ ಹಂತದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Crop Survey ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ತದನಂತರ ಈ ಪೇಜ್ ನಲ್ಲಿ ಜಿಲ್ಲೆ/ತಾಲ್ಲೂಕು/ಹೋಬಳಿ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು Survey No ಕಾಲಂ ನಲ್ಲಿ ಸರ್ವೆ ನಂಬರ್ ಹಾಕಿದರೆ ಹಿಸ್ಸಾವಾರು ಸರ್ವೆ ನಂಬರ್ ಪಟ್ಟಿ ತೋರಿಸುತ್ತದೆ ಇಲ್ಲಿ ಮಾಲೀಕರ ಹೆಸರು, ಜಮೀನಿನ ವಿಸ್ತೀರ್ಣ ಇನ್ನಿತರೆ ಸಂಪೂರ್ಣ ವಿವರವನ್ನು ನಾವು ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: