Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

July 19, 2025 | Siddesh
Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!
Share Now:

ಇನ್ನು ಮುಂದೆ ರೈತರು ತಮ್ಮ ಜಮೀನಿನ ಪಹಣಿಯ(RTC) ಸರ್ವೆ ನಂಬರ್ ಅನ್ನು ತಿಳಿಯುವುದು ಭಾರೀ ಸುಲಭ ಏಕೆಂದರೆ ಕಂದಾಯ ಇಲಾಖೆಯಿಂದ ಕೃಷಿಕರಿಗೆ ಅನುಕೂಲವಾಗುವ ದೇಸೆಯಲ್ಲಿ ಉಚಿತವಾಗಿ ತಮ್ಮ ಮೊಬೈಲ್ ನಲ್ಲೇ ಜಮೀನಿನ ಸರ್ವೆ ನಂಬರ್(Survey Number) ಅನ್ನು ತಿಳಿಯಲು ವೆಬ್ಸೈಟ್ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು ಇದರ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೃಷಿಕರು ಕೃಷಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಸಬ್ಸಿಡಿ ಆಧಾರಿತ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆಯಲು ಜಮೀನಿನ ಪಹಣಿಯ ಪ್ರತಿಯನ್ನು ನಾಡಕಚೇರಿ ಅಥವಾ ಕಂಪ್ಯೂಟರ್ ಸೆಂಟರ್ ನಲ್ಲಿ ಪ್ರಿಂಟ್ ತೆಗೆಯಬೇಕಾದಗ ಸರ್ವೆ ನಂಬರ್ ಮರೆತು ಹೋಗಿದ್ದರೆ ಆ ಸಮಯದಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹುಡುಕುವ ಸುಲಭ ವಿಧಾನದ ಕುರಿತು ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

ಪ್ರಸ್ತುತ ಈ ಲೇಖನದಲ್ಲಿ ಪಹಣಿಯ ಸರ್ವೆ ನಂಬರ್ ಅನ್ನು ಉಚಿತವಾಗಿ ಕೃಷಿಕರು(Farmers) ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬಹುದು? ಎನ್ನುವ ಮಾಹಿತಿ ಸೇರಿದಂತೆ ಪಹಣಿಯ ಕುರಿತು ಒಂದಿಷ್ಟು ಅಗತ್ಯ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

RTC Importance In Karnataka-ಜಮೀನ ಪಹಣಿಯ ಏಕೆ ಮುಖ್ಯ:

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಪಹಣಿ/ಉತಾರ್/RTC ಏಕೆ ಮುಖ್ಯ? ಈ ದಾಖಲೆಯನ್ನು ಯಾವೆಲ್ಲ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ? ಎನ್ನುವ ವಿವರವಾದ ಮಾಹಿತಿ ಈ ಕೆಳಗಿನಂತಿದೆ.

ಕೃಷಿ,ತೋಟಗಾರಿಕೆ,ಪಶುಸಂಗೋಪನೆ ಇಲಾಖೆಯಲ್ಲಿನ ಸಬ್ಸಿಡಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಪಹಣಿ/ಉತಾರ್/RTC ದಾಖಲೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.

ಬೆಳೆ ವಿಮೆ,ಬೆಳೆ ಪರಿಹಾರ,ಬೆಂಬಲ ಬೆಲೆ ಯೋಜನೆಯ ಪ್ರಯೋಜನವನ್ನು ಪಡೆಯಲು ಅವಶ್ಯಕ.

ಬ್ಯಾಂಕಿನಲ್ಲಿ ವಿವಿಧ ಬಗ್ಗೆಯ ಕೃಷಿ ಪೂರಕ ಸಾಲಗಳನ್ನು ಪಡೆಯಲು ಜಮೀನಿನ ಪಹಣಿ ಅತ್ಯವಶ್ಯಕವಾಗಿದೆ.

ಕೃಷಿ ಜಮೀನಿನ ಮಾಲೀಕತ್ವವನ್ನು ಪ್ರಾಥಮಿಕ ಹಂತದಲ್ಲಿ ದೃಡೀಕರಿಸುವ ಮೊದಲ ದಾಖಲೆ ಪಹಣಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕೃಷಿಕರಿಗೆ ಪಹಣಿ ದಾಖಲೆಯು ಒಂದು ಬಹು ಮುಖ್ಯ ಅತ್ಯಗತ್ಯ ದಾಖಲೆಯಲ್ಲಿ ಒಂದಾಗಿದೆ.

ಇದನ್ನೂ ಓದಿ: Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

Agriculture Land Survey Numbers-ಅನೇಕ ರೈತರಲ್ಲಿ ಈ ಸಮಸ್ಯೆ ಕಂಡುಬರುತ್ತದೆ:

ಹೌದು ಮಿತ್ರರೇ ಬಹುತೇಕೆ ಕೃಷಿಕರಲ್ಲಿ ಈ ಸಮಸ್ಯೆ ತೆಲೆದೂರುವುದನ್ನು ನಾವು ನೋಡಬಹುದು ಸರ್ಕಾರಿ ಕಚೇರಿಗಳನ್ನು ಭೇಟಿ ಮಾಡಿದ ಸಮಯದಲ್ಲಿ ತಮ್ಮ ಜಮೀನಿನ ಪಹಣಿಯ ಸರ್ವೆ ನಂಬರ್ ಅನ್ನು ಅಧಿಕಾರಿಗಳು ಕೇಳಿದಾಗ ನಮಗೆ ನೆನಪಿಲ್ಲ ಸರ್ ಮರೆತು ಹೋಗಿದೆ ಎನ್ನುತ್ತಾರೆ ಇದಕ್ಕೆ ಸೂಕ್ತ ಪರಿಹಾರ ಮಾರ್ಗವನ್ನು ಪ್ರಸ್ತುತ ಇಂದಿನ ಈ ಲೇಖನದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾದ್ದು, ಕೃಷಿಕರಿಗೆ ತಮ್ಮ ಜಮೀನಿನ ಪಹಣಿಯ ಸರ್ವೆ ನಂಬರ್ ಮರೆತು ಹೋಗಿದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಸರ್ವೆ ನಂಬರ್ ಮಾಹಿತಿಯನ್ನು ತಿಳಿಯಬಹುದು.

Onlien Survey Number Check-ಉಚಿತವಾಗಿ ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ಹೇಗೆ?

ಕಂದಾಯ ಇಲಾಖೆಯ ಅಧಿಕೃತ rdservices.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತರು ಕೇವಲ ಒಂದೆರಡು ಕ್ಲಿಕ್ ನಲ್ಲಿ ಯಾವುದೇ ಸ್ಥಳದಲ್ಲಿದ್ದು ತಮ್ಮ ಮೊಬೈಲ್ ಮೂಲಕ ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಸಂಪೂರ್ಣ ಉಚಿತವಾಗಿ ರಾಜ್ಯದ ಯಾವುದೇ ಭಾಗದ ಸರ್ವೆ ನಂಬರ್ ಮತ್ತು ಈ ಜಮೀನಿನ ಮಾಲೀಕರ ವಿವರ ಮತ್ತು ವಿಸ್ತೀರ್ಣದ ಮಾಹಿತಿಯನ್ನು ಚೆಕ್ ಮಾಡಬಹುದು.

Step-1: ಮೊದಲಿಗೆ ಈ ಲಿಂಕ್ Survey Number Check ಮೇಲೆ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕೃತ rdservices.karnataka.gov.in ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

rtc

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಮೊದಲಿಗೆ "Allow" ಎಂದು ಕ್ಲಿಕ್ ಮಾಡಿ ನಿಮ್ಮ ಲೋಕೇಶನ್ ಕ್ಯಾಪ್ಚ್ ಮಾಡಲು ಅನುಮತಿಯನ್ನು ನೀಡಬೇಕು ಬಳಿಕ ಈ ವೆಬ್ ಪೇಜ್ ನಲ್ಲಿ ಎಡಬದಿಯಲ್ಲಿ ಕಾಣುವ "Search Village/ಗ್ರಾಮ ಹುಡುಕಿ" ಕಾಲಂ ನಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ಟೈಪ್ ಮಾಡಿದರೆ ನಿಮ್ಮ ಹಳ್ಳಿಯ ಹೆಸರು ಕೆಳಗೆ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Scholarship-HDFC ಬ್ಯಾಂಕಿನಿಂದ Parivartan ಯೋಜನೆಯಡಿ ₹75,000 ವಿದ್ಯಾರ್ಥಿವೇತನ!

agriculture land

Step-3: ನಿಮ್ಮ ಹಳ್ಳಿಯ ಹೆಸರಿನ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಹಳ್ಳಿಯಲ್ಲಿನ ಎಲ್ಲಾ ಸರ್ವೆ ನಂಬರ್ ನ ಗೂಗಲ್ ನಕ್ಷೆ ಒಪನ್ ಅಗುತ್ತದೆ ಇಲ್ಲಿ ನಿಮ್ಮ ಜಮೀನು ಯಾವ ಭಾಗದಲ್ಲಿ ಬರುತ್ತದೆ ಎಂದು ಹುಡುಕಿ ಆ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ ಹಿಸ್ಸಾ ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್,ಜಮೀನಿನ ಮಾಲೀಕರ ವಿವರ,ಜಮೀನಿನ ಒಟ್ಟು ವಿಸ್ತೀರ್ಣದ ಸಂಪೂರ್ಣ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ನೋಡಬಹುದು.

WhatsApp Group Join Now
Telegram Group Join Now
Share Now: