Swachh Bharat Mission-ಶೌಚಾಲಯ ನಿರ್ಮಾಣಕ್ಕೆ ₹12,000/- ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

September 6, 2025 | Siddesh
Swachh Bharat Mission-ಶೌಚಾಲಯ ನಿರ್ಮಾಣಕ್ಕೆ ₹12,000/- ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!
Share Now:

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಿ ಶೌಚಾಲಯ ನಿರ್ಮಾಣಕ್ಕೆ(Swachh Bharat Mission) ಸಹಾಯಧನವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ(Swachh Bharat Mission Yojana) ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆಯಡಿ ₹12,000 ಸ್ಕಾಲರ್ಶಿಪ್!

How To Apply For Free Toilet Yojana-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದನೇ ವಿಧಾನ ತಮ್ಮ ಹತ್ತಿರ ಗ್ರಾಮ ಪಂಚಾಯತಿ ಅಥವಾ ನಗರ ಸಭೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಎರಡನೇ ವಿಧಾನ ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿದಾರರು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Free Toilet Yojana Subsidy Amount-ಎಷ್ಟು ಸಬ್ಸಿಡಿ ಪಡೆಯಬಹುದು?

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ ₹12,000/- ಸಹಾಯಧನವನ್ನು ಪಡೆಯಬಹುದು.

ಇದನ್ನೂ ಓದಿ: New GST Rates-ಕೇಂದ್ರ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ: ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ!

Documents For Free Toilet Scheme-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲೆಗಳ ಪಟ್ಟಿ ಕೆಳಗಿನಂತಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಪೋಟೋ.
  • ರೇಶನ್ ಕಾರ್ಡ ಪ್ರತಿ.
  • ನಿವಾಸಿ ದೃಡೀಕರಣ ಪ್ರತಿ.
  • ಆದಾಯ ಪ್ರಮಾಣ ಪತ್ರ.

Online Application For Free Toilet Scheme-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ನಾಗರಿಕರು ಕೆಳಗಿನ ವಿಧಾನವನ್ನು ಅನುಸರಿಸಿ ಕೇಂದ್ರ ಸರಕಾರದ ಅಧಿಕೃತ "Swachh Bharat Mission" ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ "Free Toilet Scheme Online Application" ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Free CCTV Training-ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವೀಸಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನ!

Free Toilet Yojana

Step-2: ತದನಂತರ ಈ ಪುಟದಲ್ಲಿ "Registration mobile No" ಕಾಲಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ Enter OTP ಕಾಲಂ ನಲ್ಲಿ OTP ಅನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "Sign-in" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: "Sign-in" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದ ಬಳಿಕ ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಕಾಣುವ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: LIC Scholarship- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ!ಎಲ್ಐಸಿಯಿಂದ ₹ 40,000 ವಿದ್ಯಾರ್ಥಿವೇತನ!

Who Can Apply For Free Toilet Scheme-ಅರ್ಜಿ ಸಲ್ಲಿಸಲು ಅರ್ಹರು:

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ಶೌಚಾಲಯ ನಿರ್ಮಾಣಕ್ಕೆ ರೂ ₹12,000/- ಸಾವಿರ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳ ವಿವರ.

  • ಅರ್ಜಿದಾರ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
  • ತಮ್ಮ ಹೆಸರಿನಲ್ಲಿ ಈಗಾಗಲೇ ಶೌಚಾಲಯವನ್ನು ಹೊಂದಿರಬಾರದು.
  • ಅರ್ಜಿದಾರ ಅಭ್ಯರ್ಥಿಯ ವಯಸ್ಸು 18 ವರ್ಷದ ಮೇಲಿರಬೇಕು.
  • ಅರ್ಜಿದಾರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಇದನ್ನೂ ಓದಿ: Property Registration Fee-ರಾಜ್ಯ ಸರಕಾರದಿಂದ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ!

Important Dates For ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಸಂಬಂಧಪಟ್ಟ ಇಲಾಖೆಯಿಂದ ಕೊನೆಯ ದಿನಾಂಕವನ್ನು ಇನ್ನು ಘೋಷಣೆ ಮಾಡಿರುವುದಿಲ್ಲ.

Toll Free Number-ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ: 18001800404

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: