four wheeler subsidy- 4.00 ಲಕ್ಷ ಸಹಾಯಧನದಲ್ಲಿ ಗೂಡ್ಸ್ ವಾಹನ, ಟ್ಯಾಕ್ಸಿ ಪಡೆಯಲು ಅರ್ಜಿ ಆಹ್ವಾನ!

Facebook
Twitter
Telegram
WhatsApp

ಶೇ.75ರಷ್ಟು ಅಥವಾ ಗರಿಷ್ಟ ರೂ.4.00 ಲಕ್ಷಗಳವರೆಗೆ ಸಹಾಯಧನದಲ್ಲಿ  ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(taxi/swift dzire/ashok leyland dost/bajaj auto) ವಾಹನಗಳನ್ನು ಖರೀದಿ ಮಾಡಲು ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭಿವೃದ್ದಿ ಯೋಜನೆಯಲ್ಲಿ ಒಂದಾದ ಸ್ವಾವಲಂಬಿ ಸಾರಥಿ ಯೋಜನೆಯಡಿ(swavalambi sarati application) ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನವನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಅಕ್ಟೋಬರ್ 2024 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ.

ಈ ಅಂಕಣದಲ್ಲಿ ಶೇ.75ರಷ್ಟು ಅಥವಾ ಗರಿಷ್ಟ ರೂ.4.00 ಲಕ್ಷಗಳವರೆಗೆ ಸಹಾಯಧನದಲ್ಲಿ  ವಾಹನವನ್ನು ಖರೀದಿ ಮಾಡಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅಪ್ಲಿಕೇಶನ್ ಹಾಕುವ ವಿಧಾನ ಹೇಗೆ?ಅಗತ್ಯ ಡಾಕುಮೆಂಟ್ಸ್ ಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Land purchase scheme- 25 ಲಕ್ಷದಲ್ಲಿ ಶೇ 50% ಸಬ್ಸಿಡಿಯಲ್ಲಿ ಕೃಷಿ ಜಮೀನು ಖರೀದಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Taxi subsidy-ಸ್ವಾವಲಂಬಿ ಸಾರಥಿ ಯೋಜನೆಯಡಿ ಸಬ್ಸಿಡಿ ಮೊತ್ತ ಎಷ್ಟು ನೀಡಲಾಗುತ್ತದೆ?

ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ಫಲಾನುಭವಿಗಳಿಗೆ  ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನಗಳನ್ನು ಖರೀದಿ ಮಾಡಲು ಶೇ.75ರಷ್ಟು ಅಥವಾ ಗರಿಷ್ಟ ರೂ.4.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ  ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ.

Car subsidy-ಸ್ವಾವಲಂಬಿ ಸಾರಥಿ ಯೋಜನೆಯಡಿ  ಯಾವ ವಾಹನ ಖರೀದಿ ಮಾಡಬಹುದು?

ಅರ್ಹ ಫಲಾನುಭವಿಗಳು ಸ್ವಾವಲಂಬಿ ಸಾರಥಿ ಯೋಜನೆಯಡಿ  ಸರಕು ಸಾಗಾಣಿಕೆ/ಟ್ಯಾಕ್ಸಿ/ಹಳದಿ ಬೋರ್ಡ್ ವಾಹನಗಳನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಬಹುದು.          

1) ಟ್ಯಾಕ್ಸಿ/taxi/swift dzire
2) ಸರಕು ಸಾಗಣಿಕೆ ವಾಹನ//tata ace
3) ನಾಲ್ಕು ಚಕ್ರಗಳ ವಾಹನ/ashok leyland dost
4) ಆಟೋ/bajaj auto

ಇದನ್ನೂ ಓದಿ: Tractor subsidy-2024: ಟ್ರ್ಯಾಕ್ಟರ್, ಪವರ್ ಟಿಲ್ಲರ್ ಸೇರಿದಂತೆ ಸಬ್ಸಿಡಿಯಲ್ಲಿ ಯಾವೆಲ್ಲ ಯಂತ್ರ ಪಡೆಯಬಹುದು? ಇಲ್ಲಿದೆ ಸಂಪೂರ್ಣ ವಿವರ!

four wheeler subsidy scheme in karnataka- ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.
2) ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
3) ಅರ್ಜಿದಾರರು ವಯಸ್ಸು 21 ವರ್ಷದಿಂದ 60 ವರ್ಷದಯೊಳಗಿರಬೇಕು.
4) ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ರೂ.1,50,000/- ಹಾಗೂ ನಗರ 5)  5) 5) ಪ್ರದೇಶದಲ್ಲಿ ರೂ.2,00,000/- ಮಿತಿಯೊಳಗಿರಬೇಕು.
6) ಲಘು ವಾಹನದ ಡ್ರೈವಿಂಗ್ ಲೆಸೈನ್ಸ್ ಹೊಂದಿರುವುದು ಕಡ್ಡಾಯ.
7) ಕುಟುಂಬದ ಸದಸ್ಯರು ಸರಕಾರಿ ನೌಕರಿಯಲ್ಲಿ ಇರಬಾರದು.

swavalambi sarati application-ಅಪ್ಲಿಕೇಶನ್ ಹಾಕುವ ವಿಧಾನ:

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ಡಾಕುಮೆಂಟ್ಸ್ ಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ sevasindhu ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್: Apply Now

ಇದನ್ನೂ ಓದಿ: Beautician training-ಉಚಿತ ಫಿಟ್ನೆಸ್ ಕೋಚ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

swavalambi sarati documents- ಅರ್ಜಿ ಸಲ್ಲಿಸಲು ಅಗತ್ಯ ಡಾಕುಮೆಂಟ್ಸ್ ಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಪೋಟೋ
5) ಡ್ರೈವಿಂಗ್ ಲೈಸೆನ್ಸ್
6) ಮೊಬೈಲ್ ನಂಬರ್
7) ರೇಶನ್ ಕಾರ್ಡ ಪ್ರತಿ.

ಇದನ್ನೂ ಓದಿ: Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಇತರೆ ವರ್ಗದ ಅರ್ಜಿದಾರರು ಸಹ ಇದೆ ಅವಕಾಶ:

ಸ್ವಾವಲಂಬಿ ಸಾರಥಿ ಯೋಜನೆಯು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಇತರೆ ವರ್ಗದ ಅರ್ಹ ಅಭ್ಯರ್ಥಿಗಳು ಸಹ ಸೇವಾ ಸಿಂಧು ಪೋರ್ಟಲ್/ಗ್ರಾ,ಮ ಒನ್/ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಸಬಹುದು ಆಯಾ ನಿಗಮವಾರು ಆ ವರ್ಗದ ಅರ್ಜಿದಾರರು ಅರ್ಜಿ ಸಲ್ಲಿಸಬಹುದು ಇದಕ್ಕೆ 15 ಸೆಪ್ಟಂಬರ್ 2024 ಕೊನೆಯ ದಿನಾಂಕವಾಗಿದೆ.

Contact numbers-ಜಿಲ್ಲಾವಾರು ಅಧಿಕಾರಿಗಳ ದೂರವಾಣಿ ಸಂಖ್ಯೆ: Click here

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Google Pay loan

Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಲೋನ್

D.Pharm. Admission

D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರ ಔಷಧ ನಿಯಂತ್ರಣ ಇಲಾಖೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ ಡಿ.ಫಾರ್ಮಸಿ(D.Pharmacy ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ(D.Pharm. Admission) 2024-25 ನೇ ಶೈಕ್ಷಣಿಕ

Colgate Scholarship

Colgate Scholarship 2024 – ಕೋಲ್ ಗೇಟ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ 75 ಸಾವಿರ ವಿದ್ಯಾರ್ಥಿ ವೇತನ!

Colgate Keep India Smiling Scholarship 2024 – ಕೋಲ್ ಗೇಟ್ ಕಂಪನಿಯು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ಭರ್ಜರಿ 75,000 ರೂ. ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಹ