Vermicompost subsidy-ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ 20,000 ಸಹಾಯಧನ!

January 16, 2026 | Siddesh
Vermicompost subsidy-ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ 20,000 ಸಹಾಯಧನ!
Share Now:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮೀಣ ರೈತರ ಜೀವನೋಪಾಯವನ್ನು(Vermicompost subsidy) ಸುಧಾರಿಸಲು ಕೃಷಿಗೆ ಪೂರಕವಾಗಿ ಎರೆಹುಳು ಗೊಬ್ಬರ ತೊಟ್ಟಿಯನ್ನು ನಿರ್ಮಾಣ ಮಾಡಲು ಇಲಾಖೆಯ ವತಿಯಿಂದ 20,000 ಸಹಾಯಧನವನ್ನು ಪಡೆಯಲು ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಜೈವಿಕ(organic fertilizer unit) ಗೊಬ್ಬರದ ಮಹತ್ವ ದಿನೇದಿನೇ ಹೆಚ್ಚುತ್ತಿದೆ. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು, ರಾಸಾಯನಿಕ ಗೊಬ್ಬರದ ವೆಚ್ಚ ಕಡಿಮೆ ಮಾಡಲು ಮತ್ತು ಬೆಳೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಅನೇಕ ರೈತರು ಎರೆಹುಳು ಗೊಬ್ಬರ ತಯಾರಿಕೆಗೆ (Vermicompost) ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: Housing Subsidy-ಡಾ. ಬಿ.ಆರ್ ಅಬೇಡ್ಕರ್ ನಿವಾಸ ಯೋಜನೆ ಸ್ವಂತ ಮನೆ ನಿರ್ಮಾಣಕ್ಕೆ ರೂ 2.0 ಲಕ್ಷ ಸಹಾಯಧನ!

ಇದರ ಹಿನ್ನಲೆಯಲ್ಲಿ ಸರ್ಕಾರ ರೈತರು(farmer subsidy) ಸ್ವಂತವಾಗಿಯೇ ಜೈವಿಕ ಗೊಬ್ಬರವನ್ನು ಸ್ವತಃ ತಯಾರಿಸಿ ಬಳಸುವಂತೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಹಾಯಧನವನ್ನು ಬಳಸಿಕೊಂಡು ರೈತರು ಬೆಳೆಗೆಳಿಗೆ ಹಾಕುವ ವೆಚ್ಚ ಹಾಗೂ ಉತ್ಪಾದನೆಯಲ್ಲಿ ಉತ್ತಮ ಆದಾಯವನ್ನು ಪಡೆಯಲು ಸಹಾಯಕಾರಿಯಾಗಿದೆ.

ಪ್ರಸ್ತುತ ಈ ಅಂಕಣದಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ನೀಡಬೇಕಾದ ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಈ ಯೋಜನೆಯ ಪ್ರಮುಖ ಉದ್ದೇಶವೇನು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Myntra Scholarship-ಮೈಂತ್ರಾ ಕಂಪನಿಯಿಂದ ರೂ 60,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Uses Of this Scheme-ಎರೆಹುಳು ಗೊಬ್ಬರ ತೊಟ್ಟಿಯ ಪ್ರಯೋಜನಗಳಾವುವು?

ಜೈವಿಕ ಗೊಬ್ಬರಕ್ಕೆ ಸದಾ ಬೇಡಿಕೆ: ಬೆಳೆ ಹಾಗೂ ತರಕಾರಿಗಳಿಗೆ ರಾಸಾಯನಿಕರ ಗೊಬ್ಬರದ ಬಳಕೆ ಹೆಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಜೈವಿಕ ಗೊಬ್ಬರಕ್ಕೆ ಯಾವಾಗಲೂ ಉತ್ತಮ ಬೇಡಿಕೆ ಇರುತ್ತದೆ.

ಮನೆಯಲ್ಲೇ ಗೊಬ್ಬರ ತಯಾರಿಕೆ ಸಾಧ್ಯ: ಅಡುಗೆಮನೆ ತ್ಯಾಜ್ಯ, ಎಲೆಗಳು, ಗೊಬ್ಬರ ಮಿಶ್ರಣಗಳಿಂದ ಸರಳ ವಿಧಾನದಲ್ಲಿ ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಸಬಹುದು.

ಬೆಳೆಗಳ ಗುಣಮಟ್ಟ ಉತ್ತಮ, ಹೆಚ್ಚುವರಿ ಆದಾಯದ ಮೂಲ: ಜೈವಿಕ ಗೊಬ್ಬರ ಬಳಕೆ ಬೆಳೆಗಳ ಗುಣಮಟ್ಟ ಹೆಚ್ಚಿಸಿ, ರೈತರಿಗೆ ಉತ್ಪಾದನೆ ಮಾರಾಟದಿಂದ ಹೆಚ್ಚುವರಿ ಆದಾಯವನ್ನು ತರುತ್ತದೆ.

ಪರಿಸರ ಸ್ನೇಹಿ ಕೃಷಿ: ಜೈವಿಕ ಗೊಬ್ಬರವು ಮಣ್ಣಿನ ಆರೋಗ್ಯ ಕಾಪಾಡಿ, ಪರಿಸರಕ್ಕೆ ಹಿತಕರವಾದ, ದೀರ್ಘಕಾಲದ ಸುಸ್ಥಿರ ಕೃಷಿಯನ್ನು ಸಾಧ್ಯ ಮಾಡುತ್ತದೆ.

ಇದನ್ನೂ ಓದಿ: Bembala Bele-ಬೆಂಬಲ ಬೆಲೆ ಯೋಜನೆಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ!

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಒದಗುವ ಸಹಾಯಧನವೆಷ್ಟು?

ನರೇಗಾ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ₹20,000 ವರೆಗೆ ಆರ್ಥಿಕ ಸಹಾಯಧನವನ್ನು ಪಡೆಯಬಹುದು.

Who Can APply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ತಮ್ಮ ಹೆಸರಿನಲ್ಲೇ ಕೃಷಿ ಭೂಮಿಯ ದಾಖಲೆಗಳನ್ನು ಹೊಂದಿರಬೇಕು.

ನರೇಗಾ ಜಾಬ್ ಕಾರ್ಡ್ (Job Card) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಮನೆ/ಭೂಮಿಯ ಮಾಲೀಕರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಇದನ್ನೂ ಓದಿ: Drone Pilot Training-ಇಲ್ಲಿದೆ ಡ್ರೋನ್ ಪೈಲಟ್ ಆಗುವ ಸುವರ್ಣಾವಕಾಶ! ಇಂದೇ ಅರ್ಜಿ ಸಲ್ಲಿಸಿ!

compost pit grant

ಇದನ್ನೂ ಓದಿ: KSRTC Ticket Booking-ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯುವುದು ಇನ್ನು ಭಾರೀ ಸುಲಭ!

Documents required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಆಧಾರ್ ಕಾರ್ಡ/Aadhar Card.
ರೇಶನ್ ಕಾರ್ಡ/Ration Card.
ಪಹಣಿ/RTC.
ನರೇಗಾ ಜಾಬ್ ಕಾರ್ಡ/Job Card.
ಪೋಟೋ/Photo.
ಬ್ಯಾಂಕ್ ಪಾಸ್ ಬುಕ್/Bank Pass Book.

Where To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ಸಹಾಯಧನವನ್ನು ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Azeem Premji Scholarship-ಅಜೀಂ ಪ್ರೇಮ್‌ಜಿ ವತಿಯಿಂದ 30,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

More Information-ಇನ್ನೂ ಹೆಚ್ಚಿನ ಮಾಹಿತಿಯು ನಿಮಗೆ ಬೇಕಾದಲ್ಲಿ ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
Helpline-ಸಹಾಯವಾಣಿ ಸಂಖ್ಯೆ- 8277506000

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: