Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsveterinary doctor application-400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

veterinary doctor application-400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿಯಿಂದ ಅಧಿಕೃತ ಅಧಿಸೂಚನೆ(veterinary doctor online application)ಹೊರಡಿಸಲಾಗಿದ್ದು, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್‌ 12 ರಿಂದ ಸೆಪ್ಟೆಂಬರ್‌ 12ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಈ ಲೇಖನದಲ್ಲಿ ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Nabard job notification-2024: ನಬಾರ್ಡ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

How to apply for this job-ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿಮಾಡಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ ಎಂದಲ್ಲ ತದನಂತರದಲ್ಲಿ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗೂ ಯಾವುದೇ ಹಂತದಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಈ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು, (OTR- ONE TIME REGISTRATION) ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ಮುಂದಿನ ಎಲ್ಲಾ ಅಧಿಸೂಚನೆಗಳಿಗೂ ಪರಿಗಣಿಸಲಾಗುವುದರಿಂದ, ಅಭ್ಯರ್ಥಿಗಳು Profile Creation / ರುಜುವಾತುಗಳು ಸೃಷ್ಟಿಸುವ ಹಂತದಲ್ಲಿ ಅತೀ ಜಾಗರೂಕತೆಯಿಂದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿದೆ. ಅಭ್ಯರ್ಥಿಗಳು ಸೂಚನೆಗಳನ್ನು ಹಂತಹಂತವಾಗಿ ಓದಿಕೊಳ್ಳತಕ್ಕದ್ದು, ಎಲ್ಲಾ ಸೂಚನೆಗಳನ್ನು ಓದಿದ ನಂತರವೇ ಅರ್ಜಿಯನ್ನು ಭರ್ತಿಮಾಡತಕ್ಕದು.

ಇದನ್ನೂ ಓದಿ: uchitha olige tharabeti-2024: ಉಚಿತ ಹೋಲಿಗೆ ತರಬೇತಿ ಮತ್ತು ಸಾಲ ಪಡೆಯಲು ಅರ್ಜಿ ಆಹ್ವಾನ!

Application fee paying method-ಈ ಕೆಳಗಿನ ವಿಧಾನಗಳನ್ನು ಬಳಸಿಕೊಂಡು ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು:

• ನೆಟ್ ಬ್ಯಾಂಕಿಂಗ್

• ಡೆಬಿಟ್ ಕಾರ್ಡ್

• ಕ್ರೆಡಿಟ್ ಕಾರ್ಡ್

• UPI

How to pay application fee- ಶುಲ್ಕವನ್ನು ಪಾವತಿಸಲು ಕೆಳಗಿನ ವಿಧಾನವನ್ನು ಅನುಸರಿಸಿ:

ಹಂತ-1: ನೀವು ಅರ್ಜಿ ಸಲ್ಲಿಸಲು ಬಯಸುವ ನಿರ್ದಿಷ್ಟ ಅಧಿಸೂಚನೆಗಾಗಿ” APPLY Post” ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ-2: ಆಯ್ಕೆ ಮಾಡಿದ ಅಧಿಸೂಚನೆಗಾಗಿ ಅಪ್ಲಿಕೇಶನ್ ಅನ್ನು ಪರಿಶೀಲಿಸಿ.

ಹಂತ-3: “Pay Now” ಬಟನ್ ಅನ್ನು ಕ್ಲಿಕ್ ಮಾಡಿ, ಅದು ನಿಮ್ಮನ್ನು ಪಾವತಿ ಪರದೆಗೆ ಮರು ನಿರ್ದೇಶಿಸುತ್ತದೆ. ಅಲ್ಲಿ, ನೀವು UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.

ಹಂತ-4: ಪಾವತಿ ಯಶಸ್ವಿಯಾದಲ್ಲಿ, ಪಾವತಿಯ ಯಶಸ್ಸನ್ನು ದೃಢೀಕರಿಸುವ ಮೂಲಕ ನಿಮ್ಮನ್ನು ಅರ್ಜಿ ಹಾಕಲು ಮರು ನಿರ್ದೇಶಿಸಲಾಗುತ್ತದೆ.

ಇದನ್ನೂ ಓದಿ: Education loan – ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಆಹ್ವಾನ!

ಹಂತ-5: ನೀವು” Applied Post ” ಗ್ರಿಡ್‌ನಿಂದ ಅರ್ಜಿಯನ್ನು (APPLICATION COPY) ಡೌನ್‌ಲೋಡ್ ಮಾಡಬಹುದು.

ಹಂತ-6: ಪಾವತಿ ವಹಿವಾಟು ವಿಫಲವಾದಲಿ., Applied Post ವಿಭಾಗದಲಿ.. “Re-Pay” ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಹಂತ 3 ಅನ್ನು ಪುನರಾವರ್ತಿಸಿ.

Education qualification- ಶೈಕ್ಷಣಿಕ ವಿದ್ಯಾರ್ಹತೆ:-

“1) Must be a holder of degree in B.V.Sc/B.V.Sc & AH

2) Must have registered in KVC/IVC”

ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಮೇಲ್ಕಂಡ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು ಹಾಗೂ ಅರ್ಜಿ ಸಲ್ಲಿಸುವಾಗ ಸದರಿ ವಿದ್ಯಾರ್ಹತೆಯ Convocation / PDC ಅನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಪರಿಗಣಿಸಲಾಗುವುದಿಲ್ಲ.

Age limit- ವಯೋಮಿತಿ:- 

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ – 18 ವರ್ಷಗಳ ವಯೋಮಾನದವರಾಗಿರಬೇಕು ಹಾಗೂ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಇದನ್ನೂ ಓದಿ: Bele vime-ಬೆಳೆ ವಿಮೆ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ಸಾಮಾನ್ನ ಅರ್ಹತೆ:- 35 ವರ್ಷಗಳು

ಪ್ರವರ್ಗ-2A, 2B, 3A, 3B:- 38 ವರ್ಷಗಳು

ಪ.ಜಾ, ಪ.ಪಂ, ಪ್ರವರ್ಗ-1:- 40 ವರ್ಷಗಳು

Total vacancy- ಒಟ್ಟು ಹುದ್ದೆಗಳ ವಿವರ:

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಪಶು ವೈದ್ಯಾಧಿಕಾರಿಗಳು:- 342 + 58 ಹುದ್ದೆಗಳು

Last date for application- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 12 ಆಗಸ್ಟ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಸೆಪ್ಟಂಬರ್ 2024

ಇದನ್ನೂ ಓದಿ: Male nakshatragalu: 2024ರ ಮಳೆ ನಕ್ಷತ್ರಗಳು ಮತ್ತು ಹಿರಿಯರ ಗಾದೆಗಳು! ಇಲ್ಲಿದೆ ಉಪಯುಕ್ತ ಮಾಹಿತಿ!

Selection proces- ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ. ತಲಾ 300 ಅಂಕಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಮತ್ತು ನಿರ್ದಿಷ್ಟ ಪತ್ರಿಕೆಯಲ್ಲಿ ಗಳಿಸುವ ಅಂಕಗಳ ಶೇಕಡಾವಾರು ಆಧಾರದಲ್ಲಿ ಮತ್ತು ಮೀಸಲಾತಿ ನಿಯಮದ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ವಿಶೇಷ ಸೂಚನೆ:-

(1) ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.

(2) ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.

(3) ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ, ಮೀಸಲಾತಿ ಪ್ರಮಾಣ ಪತ್ರ/ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು, (ದಾಖಲೆಗಳು ಸ್ಪಷ್ಟವಾಗಿರುಬೇಕು) ತಪ್ಪಿದ್ದಲಿ ಅವರ ಮೀಸಲಾತಿ/ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.

(4) ಅರ್ಜಿ ಸಲಿಸುವ ಸಮಯದಲಿ ಮೀಸಲಾತಿಯನ್ನು ಕೋರದೆ ತದನಂತರದಲ್ಲಿ ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.

Apply method- ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು:

ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಖವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/UPI ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ/ ಸಹಿಯನ್ನು ಅಪೊಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1) ಅಭ್ಯರ್ಥಿಗಳು KPSC ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಇದರ ಹೊರತಾಗಿ ಯಾವುದೇ ಇತರ ಮೂಲಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

2) ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಅರ್ಜಿದಾರರು https://kpsconline.karnataka.gov.in ಗೆ ಭೇಟಿ ನೀಡಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಲು “ಹೊಸ ಅರ್ಜಿದಾರರ ನೋಂದಣಿ”‘ (NEW REGISTRATION) ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

3) ನೋಂದಣಿ ಮತ್ತು ಲಾಗಿನ್ ರುಜುವಾತುಗಳನ್ನು ರಚಿಸಲು ನೀವು ಮಾನ್ಯವಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರುವಿರಿ ಎಂದು ಖಚಿತ ಪಡಿಸಿಕೊಳ್ಳಿ.

4) ಒಮ್ಮೆ ನೀವು ನೋಂದಾಯಿಸಿದ ಮತ್ತು ನಿಮ್ಮ ಲಾಗಿನ್ ರುಜುವಾತುಗಳನ್ನು (USER ID & PASS WORD) ಪಡೆದ ನಂತರ, “ಅರ್ಜಿದಾರರ ವಿವರಗಳ ನೋಂದಣಿ (APPLICANT DETAILS REGISTRATION) ” ಕ್ರಿಕ್ ಮಾಡುವ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಲು ಮುಂದುವರಿಯಿರಿ.

5) ಅಭ್ಯರ್ಥಿಗಳು ತಮ್ಮ ವಿವರಗಳನ್ನು ಒಮ್ಮೆ ಮಾತ್ರ ಭರ್ತಿ ಮಾಡಬೇಕಾಗುತ್ತದೆ ಮತ್ತು ಈ ವಿವರಗಳನ್ನು ಎಲ್ಲಾ ಭವಿಷ್ಯದ KPSC ಅಧಿಸೂಚನೆಗಳಿಗೆ ಬಳಸಲಾಗುತ್ತದೆ. ಆದ್ದರಿಂದ ನಿಮ್ಮ USER ID ಮತ್ತು Password ಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಿ. ನೀವು ನಿಮ್ಮ ಲಾಗಿನ್ ನಲ್ಲಿ ಮಾತ್ರ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು.

6) ನಿಮ್ಮ ಅರ್ಜಿದಾರರ ವಿವರ ಪುಟದಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಒದಗಿಸಿ ಮತ್ತು “ಉಳಿಸು” (SAVE) ಬಟನ್ ಅನ್ನು ಬಳಸಿಕೊಂಡು ಅದನ್ನು ಉಳಿಸಲು ಖಚಿತಪಡಿಸಿಕೊಳ್ಳಿ.

7) ನೀವು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. “ಭಾವಚಿತ್ರವು 200 ໖ ಮೀರಬಾರದು ಮತ್ತು ಸಹಿ 70 ಒಳಗೆ ಇರಬೇಕು. ಗಮನಿಸಿ: ಕೇವಲ ಸಹಿಯನ್ನು ಮತ್ತು ಭಾವಚಿತ್ರವನ್ನು JPEG/JPG ಸ್ವರೂಪದಲಿ, ಆಪ್‌ಲೋಡ್ ಮಾಡಬೇಕು.

8) ನಿಮ್ಮ ರುಜುವಾತುಗಳೊಂದಿಗೆ ಲಾಗಿನ್ ಮಾಡಿದ ನಂತರ, ” Apply to Post ” ಅಡಿಯಲ್ಲಿ ನೀವು ಸಕ್ರೀಯ ಅಧಿಸೂಚನೆಗಳನ್ನು ನೋಡುತ್ತೀರಿ. ನೀವು ಅರ್ಜಿ ಸಲ್ಲಿಸಲು ಬಯಸುವ ಅಧಿಸೂಚನೆಯ ಪಕ್ಕದಲ್ಲಿರುವ” Apply Post ” ಲಿಂಕ್ ಅನ್ನು ಕಿ…ಕ್ ಮಾಡಿ.

9) “Apply Post” ಲಿಂಕ್ ಅನ್ನು ಕಿಕ್ ಮಾಡುವುದರಿಂದ ನೀವು ಅಧಿಸೂಚನೆಯ ಪ್ರಕಾರ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದೀರಾ ಎಂದು ತಂತ್ರಾಂಶವು ಪರಿಶೀಲಿಸುತ್ತದೆ. ನೀವು ಅನರ್ಹರಾಗಿದ್ದರೆ, ಸಿಸ್ಟಮ್ ಸೂಕ್ತವಾದ ಸಂದೇಶವನ್ನು ಪ್ರದರ್ಶಿಸುತ್ತದೆ.

10) ಅರ್ಹತಾ ಷರತ್ತುಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಮಾತ್ರ ಅವರ ಅರ್ಜಿಯನ್ನು ಮುಂದುವರಿಸಲು ತಂತ್ರಾಂಶವು ಅನುಮತಿಸುತ್ತದೆ.

helpful website links- ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:

KPSCಯ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now
KPSC Website link- Click here

Most Popular

Latest Articles

- Advertisment -

Related Articles