Vidyasiri Scholarship 2025-ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

October 11, 2025 | Siddesh
Vidyasiri Scholarship 2025-ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
Share Now:

Vidyasiri Scholarship 2025-ಕರ್ನಾಟಕ ಸರ್ಕಾರ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯು ರಾಜ್ಯದ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾ ಸರಿ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ. ಈ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಪದವಿಪೂರ್ವ ಮತ್ತು ಪದವಿ ಓದುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ, ಊಟ, ವಸತಿ, ಖರ್ಚುಗಳಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರವೇ ಮುಂದಾಗಿದೆ. ಈ ಯೋಜನೆಯಿಂದ ಬಹಳಷ್ಟು ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಈ ಯೋಜನೆಯು ಆಶಾಕಿರಣವಾಗಿದೆ.

ಈ ವರ್ಷದ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಹಾಗೂ ಕೊನೆಯ ದಿನಾಂಕ, ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ. ಇದರಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಇದನ್ನೂ ಓದಿ: Food kit-ಬಿಪಿಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್! ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ ಇಲ್ಲಿದೆ ಸಂಪೂರ್ಣ ಮಾಹಿತಿ!
.
Vidyasiri Scholarship-ವಿದ್ಯಾಸಿರಿ ವಿದ್ಯಾರ್ಥಿ ವೇತನ:

ಕರ್ನಾಟಕದ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯು ರಾಜ್ಯದ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯ ಉದ್ದೇಶವೇನೆಂದರೆ ಪಿಯುಸಿ ಡಿಪ್ಲೋಮೋ ಪದವಿ ಅಥವಾ ಸ್ನಾತಕೊತರ ಪದವಿ ಓದುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಮತ್ತು ಉನ್ನತ ಶಿಕ್ಷಣ ದೊರಕಲು ಸಹಾಯವಾಗುತ್ತದೆ. ಅರ್ಜಿ ಪ್ರಕ್ರಿಯೆಯು ಈಗಾಗಲೇ ಶುರುವಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಕೆಳಗೆ ನೀಡಲಾಗಿದೆ.

Eligibility for Vidyasiri scholarship- ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

  • ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿ ಆಗಿರಬೇಕು
  • ಅರ್ಜಿದಾರರು ಹಿಂದುಳಿದ ವರ್ಗಕ್ಕೆ ಸೇರಿರಬೇಕು
  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗೆ ನೀಡಿರುವ ಯಾವುದಾದರೂ ಒಂದು ಪಠ್ಯಕ್ರಮ ಓದುತ್ತಿರಬೇಕು. ಪಿಯುಸಿ, ಡಿಪ್ಲೋಮೋ, ಐಟಿಐ, ಪದವಿ, ನಾಟಕೋತರ ಪದವಿ, ಅಥವಾ ವೃತ್ತಿಪರ ಕೋರ್ಸ್ ಉದಾಹರಣೆ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಇತ್ಯಾದಿ.
  • ಮುಖ್ಯವಾಗಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷದ ಕಿಂತ ಕಡಿಮೆ ಇರಬೇಕು.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

How to apply- ಅರ್ಜಿ ಸಲ್ಲಿಸುವ ವಿಧಾನ?

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ.

Step-1: ಮೊದಲು ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ "Vidyasiri Scholarship Application" ಮಾಡಿ ಕರ್ನಾಟಕ ಸರ್ಕಾರ ಎಸ್ಎಸ್ಪಿ ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಿಕೊಳ್ಳಿ.

ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

scholarship application

Step-2: ಅರ್ಜಿ ಫಾರಂ ಬರುವುದು. ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ. ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ.

Step-3: ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಒತ್ತಿ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಅರ್ಜಿಯ ಪ್ರಿಂಟ್ ಔಟ್ ಸಿಗುವುದು ಅದನ್ನು ಸುರಕ್ಷಿತವಾಗಿ ಪಡೆದುಕೊಳ್ಳಿ.

ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಸಿ ಎಸ್ ಸಿ ಅಥವಾ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Shadi Bhagya Scheme-"ಶಾದಿ ಭಾಗ್ಯ" ಯೋಜನೆಯಡಿ ವಿವಾಹಕ್ಕೆ ರೂ. 50,000 ಸಹಾಯಧನ ಪಡೆಯಲು ಅರ್ಜಿ!

Important documents for scholarship- ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಬೇಕಾಗುವಂತ ಅಗತ್ಯ ದಾಖಲೆಗಳು:

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಶಿಕ್ಷಣ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
  • 4 ಪಾಸ್ಪೋರ್ಟ್ ಸೈಜ್ ಫೋಟೋ

Last date for scholarship - ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯದಿನಾಂಕ?

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2025 ರಂದು ಮುಕ್ತಾಯಗೊಳ್ಳುತ್ತದೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

Online Vidyasiri Scholarship Application Link-ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ- Apply Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: