- Advertisment -
HomeNew postsViral video-ಪ್ರಾಣಿ-ಪಕ್ಷಿಗಳಿಂದ ತನ್ನ ಬೆಳೆ ರಕ್ಷಣೆಗೆ ರೈತ ಬಳಸಿದ ಐಡಿಯಾ ಸಖತ್ ವೈರಲ್!

Viral video-ಪ್ರಾಣಿ-ಪಕ್ಷಿಗಳಿಂದ ತನ್ನ ಬೆಳೆ ರಕ್ಷಣೆಗೆ ರೈತ ಬಳಸಿದ ಐಡಿಯಾ ಸಖತ್ ವೈರಲ್!

Last updated on September 29th, 2024 at 11:27 am

ರೈತಾಪಿ ಕೆಲಸದಲ್ಲಿ ಪ್ರತಿ ಹಂತದಲ್ಲಿಯೂ ವಿಭಿನ್ನ ಬಗ್ಗೆಯ ಸವಾಲುಗಳು ಇದೇ ಇರುತ್ತವೆ. ಬೀಜದಿಂದ ಬೀಜ ಪಡೆಯುವವರೆಗೆ ನಾನಾ ತೊಡಕುಗಳನ್ನು ದಾಟಿ ರೈತ ಬೆಳೆಯನ್ನು ಬೆಳೆಯುವುದು ಪ್ರಸ್ತುತ ಸನ್ನಿವೇಶದಲ್ಲಿ ಸವಾಲಿನ ಕೆಲಸವೇ ಅಗಿದೆ.

ಬೀಜದಿಂದ-ಬೀಜದವರೆಗೆ ಅಂದರೆ ಒಂದು ಬೆಳೆಯನ್ನು ಬೆಳೆಯಲು ಬೀಜವನ್ನು ಬಿತ್ತನೆ ಮಾಡಿ ಫಸಲಿಗೆ ಬಂದ ಬಳಿಕ ಕಟಾವು ಮಾಡಿ ಮತ್ತೆ ಬೀಜವನ್ನು ಸಂಗ್ರಹಣೆ ಮಾಡುವುದು ಎಂದು ಈ ನಡುವೆ ಬೆಳೆಯ ಬೆಳವಣಿಗೆ ಹಂತದಲ್ಲಿ ರೋಗ-ಕೀಟವನ್ನು ಸರಿಯಾದ ಸಮಯಕ್ಕೆ ಗುರುತಿಸಿ ನಿಯಂತ್ರಿಸುವುದು ರೈತರಿಗೆ ಸವಾಲಾದರೆ ಬೆಳೆಯು ಫಸಲಿಗೆ ಬಂದ ಬಳಿಕ ಕಾಡು ಪ್ರಾಣಿ ಮತ್ತು ಪಕ್ಷಿಗಳಿಂದ ಫಸಲನ್ನು ಸಂರಕ್ಷಣೆ ಮಾಡಿಕೊಳ್ಳುವುದು ಇನ್ನೊಂದು ಸವಾಲಿನ ಕೆಲಸವಾಗಿದೆ.

ಇದನ್ನೂ ಓದಿ: free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!

ಸಖತ್ ವೈರಲ್ ಆಯ್ತು ಬೆಳೆ ರಕ್ಷಣೆಗೆ ಜಮೀನಿನಲ್ಲಿ ಇಟ್ಟ ಸಾಧನದ ವಿಡಿಯೋ!

ಹೌದು ರೈತ ಬಾಂಧವರೇ ಕೃಷಿ ವಿಜ್ನಾನಿಗಳಂತೆಯೇ ನಮ್ಮ ರೈತರು ಸಹ ಸ್ವಂತ ಏನಾದರು ಒಂದು ಹೊಸ ಹೊಸ ವಿನೂತನ ಪ್ರಯೋಗಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಮಾಡುತ್ತಿರುತ್ತಾರ‍ೆ  ಇಲ್ಲೊಬ್ಬ ರೈತ ತನ್ನ ಬೆಳೆಯನ್ನು ಪ್ರಾಣಿ-ಪಕ್ಷಿಗಳಿಂದ ಸಂರಕ್ಷಣೆ ಮಾಡಿಕೊಳ್ಳಲು ತನ್ನ ಜಮೀನಿನಲ್ಲಿ ಇಟ್ಟ ಸಾಧನದ ವಿಡಿಯೋ ಇಂಟರ್ ನೆಟ್ ಜಗತ್ತಿನಲ್ಲಿ ಭಾರೀ ವೈರಲ್ ಅಗಿದೆ ಈ ಸಾಧನ ನೋಡಿದ ನೆಟ್ಟಿಗರು ಲೈಕ್ , ಶೇರ್ ಜೊತೆಗೆ ತಲೇವಾರಿ ಕಾಮೆಂಟ್ ಹಾಕುತ್ತಿದ್ದಾರೆ.

ವೈರಲ್ ಸಾಧನದ ವಿವರ ಹೀಗಿದೆ:

ರೈತನ್ನು ಈ ಸಾಧನವನ್ನು ತಯಾರಿಸಲು ಸೈಕಲ್​ಗೆ ಅಳವಡಿಸುವ ಹ್ಯಾಂಡಲ್​ ಬಾರ್​ ಬಳಸಿಕೊಂಡು ಇದಕ್ಕೆ ಕೆಳಗೆ ಜಪ್ಪಿಂಗ್​ ಸ್ಪ್ರಿಂಗ್​​ ಜೋಡಿಸಿ, ಮೇಲೆ ಮತ್ತು ಕೆಳಗೆ ಕುಣಿಯುವಂತೆ ಮಾಡಿದ್ದಾರೆ. ಮಾನವನಂತೆಯೇ ಇರುವ ಗೊಂಬೆಯೊಂದನ್ನು ನಿರ್ಮಿಸಿ, ಅದರ ತೋಳುಗಳನ್ನು ಹ್ಯಾಂಡಲ್​ನ ಎರಡು ಕೊನೆಗೆ ಜೋಡಿಸಿದ್ದಾನೆ ಇದು ಗಾಳಿಯ ವೇಗಕ್ಕೆ ಹಾರಡುವಂತೆ ವಿನ್ಯಾಸ ಮಾಡಲಾಗಿದೆ. 

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಈ ಸಾಧನವು ಗಾಳಿಗೆ ತಕ್ಕಂತೆ ಸುತ್ತಮುತ್ತಲೂ ತಿರುಗುವುದರ ಜೊತೆಗೆ ಶೇಕ್ ಅಗುವುದರಿಂದ ಮನುಷ್ಯರೇ ಓಡಾಡುತ್ತಿದ್ದಾರೆ ಎಂದೇ ಗೋಚರಿಸುತ್ತದೆ. ಈ ರೀತಿ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುವ ರೈತನ ಈ ಪ್ರಯತ್ನಕ್ಕೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ :

ಇದನ್ನೂ ಓದಿ: Micro credit loan scheme- ಪ್ರೇರಣಾ ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!

- Advertisment -
LATEST ARTICLES

Related Articles

- Advertisment -

Most Popular

- Advertisment -