Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsGruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ...

Gruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ ಈ ಕೆಲಸ ಮಾಡಿ!

ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಈ ತಿಂಗಳಿಗೆ ಹೆಚ್ಚು ಕಡಿಮೆ ಮೂರು ಕಂತುಗಳು ಜಮಾ ಅಗುವಷ್ಟು ದಿನಗಳು ಕಳೆದಿವೆ ಇನ್ನು ಹಲವು ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಹಣ ಒಂದು ಕಂತನ್ನು ಪಡೆಯಲು ಅಗಿರುವುದಿಲ್ಲ ಅಂತಹ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸರಿಯಾಗಿ ತಿಳಿದು ಅಗತ್ಯ ಕ್ರಮಗಳನ್ನು ಅನುಸರಿಸಿದರೆ ತಪ್ಪದೇ ನಿಮಗೆ ಮುಂದಿನ ಕಂತಿನಿಂದ ಹಣ ವರ್ಗಾವಣೆಯಾಗುತ್ತದೆ.

ಮುಖ್ಯವಾಗಿ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಬಳಿಕವು ಹಣ ಬಂದಿರದೇ ಇರುವ ಫಲಾನುಭವಿಗಳ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿದಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಂಚಿಕೊಂಡ ಸೂಕ್ತ ಕಾರಣ ಮತ್ತು ಪರಿಹಾರ ಮಾರ್ಗಗಳು ಈ ಕೆಳಗಿನಂತಿವೆ.

(1)Gruhalakshmi status- CDPO ಲಾಗಿನ್ ಅಲ್ಲಿ ಪರಿಶೀಲನೆಗೆ ಬಾಕಿಯಿರುವುದು:

ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆಯಾದ ಬಳಿಕವು ಹಣ ಬಂದಿರದ ಕೆಲವು ಫಲಾನುಭವಿಗಳ ಅರ್ಜಿಗಳು ಮರುಪರಿಶೀಲನೆಗೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಸ್ಥರ(CDPO) ಲಾಗಿನ್ ಗೆ ಹೋಗಿರುತ್ತವೆ ಈ ರೀತಿಯಾಗಿವು ನಿಮಗೆ ಇಲ್ಲಿಯವರೆಗೆ  ಹಣ ಬಂದಿರದೇ ಇರಬವುದು ಒಮ್ಮೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ತಾಲ್ಲೂಕಿನ CDPO ಕಚೇರಿಯ ವಿಳಾಸ ಪಡೆದು ಆ ಕಚೇರಿಯನ್ನು (ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ ದಾಖಲಾತಿಗಳೊಂದಿಗೆ) ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Coffee board-ಕಾಫಿ ಮಂಡಳಿಯಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ!

CDPO ಲಾಗಿನ್ ಅಲ್ಲಿ ಪರಿಶೀಲನೆಗೆ ಹೋಗಲು ಕಾರಣಗಳು:

ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರುಗಳು ತಾಳೆ ಅಗಿದಿದಲ್ಲಿ ಈ ರೀತಿ ಮರುಪರಿಶೀಲನೆಗೆ ಹೋಗುತ್ತದೆ.

ಆಧಾರ್ ಮತ್ತು ರೇಷನ್ ಕಾರ್ಡ ಹೆಸರು ಹೊಂದಾಣಿಕೆ ಅಗದಿರುವ ಪಕ್ಷದಲ್ಲಿ ಹೀಗೆ ಆಗಬಹುದು.

ಇತರೆ ದಾಖಲಾತಿಗಳಲ್ಲಿ ವಿವರಗಳ ಬದಲಾವಣೆಯಿಂದಾಗಿ ಈ ಲಾಗಿನ್ ಅಲ್ಲಿ ಮರುಪರಿಶೀಲನೆಗೆ ಉಳಿದುಕೊಂಡಿರುತ್ತವೆ.

ಇದನ್ನೂ ಓದಿ: Viral video-ಪ್ರಾಣಿ-ಪಕ್ಷಿಗಳಿಂದ ತನ್ನ ಬೆಳೆ ರಕ್ಷಣೆಗೆ ರೈತ ಬಳಸಿದ ಐಡಿಯಾ ಸಖತ್ ವೈರಲ್!

(2)NPCI mapping- ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅಗದಿರುವುದು:

ಇನ್ನು ಹಲವು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲದೇ ಇರುವುದು ಸಹ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಅಗದಿರಲು ಒಂದು ಕಾರಣವಾಗಿದೆ ನಿಮ್ಮ ಹಳ್ಳಿಯಿಂದ ನೀವು ದೂರದ ಪಟ್ಟಣ ಹೋಗಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವುದು ಇತ್ಯಾದಿ ಸೇವೆಗಳನ್ನು ಪಡೆಯುವುದು ನಿಮಗೆ ಕಷ್ಟಕರವಾದಲ್ಲಿ ನಿಮ್ಮ ಹತ್ತಿರದ ಅಂಚೆ ಕಚೇರಿ/ಪೋಸ್ಟ್ ಅಪೀಸ್ ನಲ್ಲಿ ಒಂದು ಉಳಿತಾಯ ಖಾತೆಯನ್ನು ತೆರೆಯುವುದರಿಂದ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ತಾಂತ್ರಿಕ ಸಮಸ್ಯೆಯು ಬಗ್ಗೆಹರಿಯುತ್ತದೆ ಮತ್ತು ಹಳ್ಳಿಯಿಂದ ದೂರದ ಪಟ್ಟಣಕ್ಕೆ ಬ್ಯಾಂಕ್ ವ್ಯವಹಾರ ಮಾಡುವುದಕ್ಕೆ ಅಲೆದಾಡುವುದು ತಪ್ಪುತ್ತದೆ.

NPCI ಮ್ಯಾಪಿಂಗ್ ಸಮಸ್ಯೆಯಿಂದ ಹಣ ಬರದ ಹಲವು ಜನರು ಈ ರೀತಿ ಪೋಸ್ಟ್ ಅಪೀಸ್/ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಬಳಿಕ ಹಣ ಜಮಾ ಅಗಿದೆ ಎಂದು ತಿಳಿಸಿರುತ್ತಾರೆ.

ಇದನ್ನೂ ಓದಿ: free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!

ಗೃಹಲಕ್ಷ್ಮಿ ಯೋಜನೆ ಅಂಕಣಗಳು click here 
CDPO ಕಚೇರಿ ವಿಳಾಸ click here 

(3) ನಿಮ್ಮ ಅರ್ಜಿ ಸ್ಥಿತಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದೆವೆ ಇನ್ನು ನಮಗೆ ಹಣ ಬಂದಿಲ್ಲ ಎಲ್ಲಿ ಈ ಕುರಿತು ವಿಚಾರಿಸಬೇಕು? ನಮ್ಮ ಅರ್ಜಿ ಯಾವ ಹಂತದಲ್ಲಿದೆ? ಏನು ಕಥೆ? ಎಂದು ಅನೇಕ ಜನರಿಗೆ ಯಾವ ಕಚೇರಿಯನ್ನು ಭೇಟಿ ಮಾಡಬೇಕು?  ಆ ಕಚೇರಿ ನಮ್ಮ ತಾಲ್ಲೂಕಿನಲ್ಲಿ ಎಲ್ಲಿ ಇದೆ ಎಂದು? ತಿಳಿದಿರುವುದಿಲ್ಲ.

ಅದ ಕಾರಣ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಬಳಿಕವು ಹಣ ಜಮಾ ಅಗದಿರುವ ಫಲಾನುಭವಿಗಳು ಇಲ್ಲಿ ಕ್ಲಿಕ್ ಮಾಡಿ> CDPO office address ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(CDPO office) ಕಚೇರಿಯನ್ನು ಅಗತ್ಯ ದಾಖಲಾತಿಗಳೊಂದಿಗೆ(ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಮೊಬೈಲ್ ಸಂಖ್ಯೆ) ಭೇಟಿ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ನಿಮಗೆ ಹಣ ಜಮಾ ಅಗದಿರುವ ಕಾರಣವೇನು? ಎಂದು ತಿಳಿದು ಅರ್ಜಿ ಸರಿಪಡಿಸಲು ಯಾವ ಕ್ರಮ ಅನುಸರಿಸಬೇಕು ಎಂದು ಮಾಹಿತಿ ತಿಳಿದುಕೊಂಡು ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಈ ಯೋಜನೆಯಡಿ ಇಲ್ಲಿಯವರೆಗೆ ಹಣ ಪಡೆಯದೇ ಇರುವ ಅರ್ಜಿದಾರರಿಗೆ ಈ ಮಾಹಿತಿ ನೆರವಾಗುತ್ತದೆ. ಎಲ್ಲಾರಿಗೂ ಈ ಯೋಜನೆಯಡಿ ಅರ್ಥಿಕ ನೆರವು ಸಿಗುವಂತಾಗಲಿ ಧನ್ಯವಾದಗಳು ಶುಭ ದಿನ.

(4)ಅಂಗನವಾಡಿ ಕಾರ್ಯಕರ್ತೆಯರ ಬಳಿ ಪಟ್ಟಿ:

ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿ ತಾಂತ್ರಿಕ ಸಮಸ್ಯೆಯಿಂದ ಹಣ ಬರದವರ ಹಳ್ಳಿವಾರು ಪಟ್ಟಿಯನ್ನು ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಬಳಿ ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗಿದ್ದು ಒಮ್ಮೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರದವರು ನಿಮ್ಮ ಹಳ್ಳಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಆ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಿ.

Most Popular

Latest Articles

- Advertisment -

Related Articles