Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsVOKKALIGA COMMUNITY DEVELOPMENT SCHEME: ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ಗಂಗ ಕಲ್ಯಾಣ ಯೋಜನೆ ಸೇರಿ...

VOKKALIGA COMMUNITY DEVELOPMENT SCHEME: ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ಗಂಗ ಕಲ್ಯಾಣ ಯೋಜನೆ ಸೇರಿ ಇತರೆ 6 ಯೋಜನೆಗಳಿಗೆ ಅರ್ಜಿ ಆಹ್ವಾನ!

ರಾಜ್ಯ ಸರಕಾರದಡಿಯಲ್ಲಿ ರಚನೆಯಾಗಿರುವ ವಿವಿಧ ನಿಗಮಗಳಿಂದ ಆಯಾ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದ ಜನರನ್ನು ಅರ್ಥಿಕ ಮತ್ತು ಶೈಕ್ಷಣಿಕವಾಗಿ ಮುನ್ನೆಡೆಗೆ ಕರೆತರಲು 2023-24 ಸಾಲಿನ ಹಲವು ಯೋಜನೆಗೆ ಅರ್ಹಫಲಾನುಭವಿಗಳಿಂದ ಅರ್ಜಿ ಅಹ್ವಾನ ಮಾಡಲಾಗಿದೆ.

ಅದರಂತೆ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತದಿಂದ ಗಂಗಾ ಕಲ್ಯಾಣ ಯೋಜನೆ, ಸ್ವಾವಲಯ ಸಾರಥಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಸ್ಥಯಂ ಉದ್ಯೋಗ ಸಾಲ ಯೋಜನೆ: (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಶೈಕ್ಷಣಿಕ ಸಾಲ ಯೋಜನೆಗಳು, ಅಮೃತ ಮುನ್ನಲೆ: ಕೌಶಲ್ಯಾಭಿವೃದ್ಧಿ ತರಬೇತಿ, ವಿದೇಶ ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಫಲಾನುಭವಿಗಳಾ ಆಯ್ಕೆಗೆ ಅರ್ಜಿ ಅಹ್ವಾನ ಮಾಡಲಾಗಿದೆ.

ಅರ್ಜಿ ಸಲ್ಲಿಸಲು 30 ಅಕ್ಟೋಬರ್ 2023 ಕೊನೆಯ ದಿನವಾಗಿದ್ದು ಅರ್ಹ ಮತ್ತು ಆಸಕ್ತ ಅರ್ಜಿದಾರರು ನಿಮ್ಮ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಬವುದು.

KARNATAKA VOKKALIGA COMMUNITY DEVELOPMENT CORPORATION LIMITED- 2023-24 ಸಾಲಿನಲ್ಲಿ ನಿಗಮದಿಂದ ಅನುಷ್ಥಾನ ಮಾಡುತ್ತಿರುವ ಯೋಜನೆಗಳ ವಿವರ ಈ ಕೆಳಗಿನಂತಿದೆ:

1) ಗಂಗಾ ಕಲ್ಯಾಣ ಯೋಜನೆ:

ಈ ಯೋಜನೆಯಡಿ ಅರ್ಜಿ ಸಲ್ಲಿಸಲು ನಿಗಮದ ವರ್ಗಕ್ಕೆ ಸೇರಿದ ರೈತರು ಅರ್ಹರಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000/-ಗಳ ಮಿತಿಯೊಳಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸು ಯೋಜನೆ ಇದಾಗಿದೆ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕ ವೆಚ್ಚ ರೂ. 4.75 ಲಕ್ಷಗಳಲ್ಲಿ ರೂ. 4.25 ಲಕ್ಷಗಳು ಸಹಾಯಧನ, ಘಟಕ ಪೂರ್ಣಗೊಳಿಸಲು ಸಾದ್ಯವಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

ಉಳಿದ ಜಿಲ್ಲೆಗಳಿಗೆ ಘಟಕ ವೆಚ್ಚ ರೂ. 3.75 ಲಕ್ಷಗಳಲ್ಲಿ ರೂ. 3.25 ಲಕ್ಷ ಸಹಾಯಧನ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮನನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು, ಇತರೇ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ Farmer’s FRUIT ID ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.

2) ಸ್ವಾವಲಯ ಸಾರಥಿ ಯೋಜನೆ: (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) 

ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವ ಮತ್ತು ಚಾಲನಾ ಪರವಾನಿಗೆ ಹೊಂದಿರುವ ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಯ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ (ಹಳದಿ ಬೋರ್ಡ್‌) ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3.00 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಫಲಾನುಭವಿಗಳು ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯಬವುದು.

3) ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:

ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುತ್ತದೆ.

> ಘಟಕ ವೆಚ್ಚ ರೂ.1,00,000/- ಗಳಿಗೆ ಶೇ.20ರಷ್ಟು ಗರಿಷ್ಟ ರೂ 20,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಟ ರೂ.80,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

> ಘಟಕ ವೆಚ್ಚ ರೂ.2,00,000/- ಗಳಿಗೆ ಶೇ.15ರಷ್ಟು ಗರಿಷ್ಠ ರೂ. 30,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.85ರಷ್ಟು ಗರಿಷ್ಟ ರೂ.1,75,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

ಇದನ್ನೂ ಓದಿ: ಪಡಿತರ ಚೀಟಿ ತಿದ್ದುಪಡಿಗೆ ಬರೊಬ್ಬರಿ 3.18 ಲಕ್ಷ ಅರ್ಜಿಯಲ್ಲಿ 93 ಸಾವಿರ  ತಿರಸ್ಕಾರ!ಅರ್ಜಿ ಸ್ಥಿತಿ ಚೆಕ್ ಮಾಡಲು ಇಲ್ಲಿದೆ ವೆಬ್ಸೈಟ್ ಲಿಂಕ್.


4) ಸ್ಥಯಂ ಉದ್ಯೋಗ ಸಾಲ ಯೋಜನೆ: (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) 

ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ/ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು/ ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ. 20 ರಷ್ಟು ಅಥವಾ ಗರಿಷ್ಟ ರೂ. 1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು. 


5) ಶೈಕ್ಷಣಿಕ ಸಾಲ ಯೋಜನೆಗಳು

A) ಶೈಕ್ಷಣಿಕ ಸಾಲ ಯೋಜನೆ(Fresh Students)

ಕುಟುಂಬದ ವಾರ್ಷಿಕ ಆದಾಯ ರೂ. 3,50 ಲಕ್ಷಗಳ ಮಿತಿಯಲ್ಲಿರುವ  ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ.  ವಾರ್ಷಿಕ ರೂ. 1.00 ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಥ ರೂ 4.00 ಲಕ್ಷಗಳಿಂದ 5.00 ಲಕ್ಷದ ವರೆಗೆ ವಾರ್ಷಿಕ ಶೇ. 2 ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

CET NEET ಇತ್ಯಾದಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರ ಸರ್ಕರಿ ಕೋಟಾದ ಸೀಟು ಪಡೆದಿರಬೇಕು. 

B)ಶೈಕ್ಷಣಿಕ ಸಾಲ ಯೋಜನೆ(Renewal): 

2022-23 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ/ 3ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು.

PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

6) ವಿದೇಶ ವಿದ್ಯಾವಿಕಾಸ ಯೋಜನೆ (Fresh Students)

ಕುಟುಂಬದ ವಾರ್ಷಿಕ ಆದಾಯ ರೂ 8.00 ಲಕ್ಷಗಳ ಮೀತಿಯಲ್ಲಿರುವ ವಿದ್ಯಾರ್ಥಿಗಳು QS World Ranking 500 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿ.ಹೆಚ್.ಡಿ, ಮಾಸ್ಟರ್ ಡಿಗ್ರಿ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಥ ರೂ 10.00 ಲಕ್ಷಗಳಂತೆ 3 ವರ್ಷದ ಅವಧಿಗೆ ಒಟ್ಟು ರೂ 20.00 ಲಕ್ಷಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

7) ಅಮೃತ ಮುನ್ನಲೆ: ಕೌಶಲ್ಯಾಭಿವೃದ್ಧಿ ತರಬೇತಿ

> ಉಚಿತ ಅಲ್ಪಾವಧಿ ತರಬೇತಿ ಹಾಗೂ Placement 
> ITT’s, GTTC’s | KGTTI’s 101 Job Role ಗೆ ತರಬೇತಿ.
> ಅರ್ಜಿಯನ್ನು ಕೌಶಲ್ಯ ತಂತ್ರಾಂಶ (https://www.kaushalkar.com) ದಲ್ಲಿ ಸಲ್ಲಿಸುವುದು.

ವಿಶೇಷ ಸೂಚನೆ:

1) ಯೋಜನೆಗಳಲ್ಲಿ ಅರ್ಜಿಸಲ್ಲಿಸುವವರು ಒಕ್ಕಲಿಗೆ ಸಮುದಾಯಗಳಿಗೆ ಸೇರಿದವರಾಗಿರಬೇಕು. 

2) ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಯೋಜನೆ ಸೌಲಭ್ಯ 

3) ಮಂಡಳಿ ವಿವೇಚನಾ ಕೋಟಾ / ಸರ್ಕಾರದ ವಿವೇಚನಾ ಕೋಟಾ ಸೌಲಭ್ಯದ ಅರ್ಜಿಗಳನ್ನು ಸಹ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಬೇಕು. 

4) ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸುವುದು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ 6 ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

ಅರ್ಜಿ ಎಲ್ಲಿ ಸಲ್ಲಿಸಬೇಕು:

ಅರ್ಹ ಅರ್ಜಿದಾರರು ನಿಮ್ಮ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2023.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 

ನಿಗಮದ ವೆಬ್ಸೈಟ್ ಲಿಂಕ್: Click here
ಸಹಾಯವಾಣಿ ಸಂಖ್ಯೆ: 080-2990 4350, 2990 4268

ಅಥವಾ ಆಯಾ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಒಂದುಬದ ವರ್ಗಗಳ ಅಭಿವೃದ್ಧಿ ನಿಗಮ ರವರ ಕಚೇರಿಯವರನ್ನು ಸಂಪರ್ಕಿಸುವುದು.

Most Popular

Latest Articles

Related Articles