ಪ್ರತಿ ದಿನ ನಿಮ್ಮ ಸ್ಥಳದ ಮಳೆ ಮುನ್ಸೂಚನೆ ತಿಳಿಯಬೇಕೆ? ಈ ಆ್ಯಪ್ ಬಳಕೆ ಮಾಡಿ.

ಪ್ರತಿ ದಿನ ನಿಮ್ಮ ಸ್ಥಳದ ಮಳೆ ಮುನ್ಸೂಚನೆ ತಿಳಿಯಬೇಕೆ? ಈ ಆ್ಯಪ್ ಬಳಕೆ ಮಾಡಿ.

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ಪ್ರತಿಯೊಬ್ಬರಿಗೂ ತಾವು ನೆಲೆಸಿರುವ ಸ್ಥಳದ ಮತ್ತು ತಾವು ಪ್ರಯಾಣ ಬೆಳೆಸುವ ಸ್ಥಳದ ಹವಾಮಾನ ಮುನ್ಸೂಚನೆಯನ್ನು ಸುಲಭವಾಗಿ ಹೇಗೆ ತಿಳಿಯಬೇಕು? ಮತ್ತು ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಸಮರ್ಪಕವಾಗಿ ಹವಾಮಾನ ಮುನ್ಸೂಚನೆ ಪಡೆದು ಅದಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಕೈಗೊಳ್ಳಲು ಹವಾಮಾನ/ಮಳೆ ಮುನ್ಸೂಚನೆ ನೀಡುವ ಪರಿಣಾಮಕಾರಿ ಮೊಬೈಲ್ ಅಪ್ಲಿಕೇಶನ್ ಮತ್ತು ಇತರೆ ಮೂಲಗಳ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

1. SACHET ಅಪ್ಲಿಕೇಶನ್:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಇದಾಗಿದೆ. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸ್ಥಳದ ಮತ್ತು ದೇಶದ ವಿವಿಧ ಭಾಗ ಮಳೆ, ಬಿಸಿ ಗಾಳಿ, ಮಿಂಚು-ಸಿಡಿಲು, ಅತೀ ವೇಗದ ಗಾಳಿಯ ಮುನ್ಸೂಚನೆಯನ್ನು ಸ್ಥಳೀಯ ಭಾಷೆಯಲ್ಲಿ ಪಡೆಯಬವುದಾಗಿದೆ.

ಈ ಅಪ್ಲಿಕೇಶ ಬಳಕೆ ಮಾಡುವ ವಿಧಾನ:

https://play.google.com/store/apps/details?id=com.cdotindia.capsachet ಈ ಲಿಂಕ್ ಮೇಲೆ ಕ್ಲಿಕ್ ಮಾಡಿ  ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇಲ್ಲಿ ಕೇಳುವ ಅನುಮತಿಯನ್ನು ಅನುಮೋದಿಸಿ ನಿಮ್ಮ ಸ್ಥಳವನ್ನು ಅಯ್ಕೆ ಮಾಡಿಕೊಂಡು ನಿರಂತರವಾಗಿ ಮಳೆ, ಬಿಸಿ ಗಾಳಿ, ಮಿಂಚು-ಸಿಡಿಲು, ಅತೀ ವೇಗದ ಗಾಳಿಯ ಮುನ್ಸೂಚನೆಯನ್ನು 3 ಗಂಟೆಯ ಮುಂಚಿತವಾಗಿ ನೊಟಿಪಿಕೇಶ ಮೂಲಕ ಪಡೆಯಬವುದಾಗಿದೆ.

ಇದರ ಜೊತೆಗೆ ನಿಮ್ಮ ಸ್ಥಳದ ಪ್ರಸ್ತುತ ತಾಪಮಾನದ ಮಾಹಿತಿ, ತೇವಾಂಶ, ಶೇಕಡಾವಾರು ಮುಂಗಾರು ಮತ್ತು ಮುಂದಿನ 7 ದಿನದ ಹವಾಮಾನ ಮುನ್ಸೂಚನೆಯನ್ನು ನೋಡಬವುದು.

ಇದನ್ನೂ ಓದಿ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲಾತಿ ಮಾಹಿತಿ.

2. https://saishekharbb.blogspot.com:

ಮಂಗಳೂರು ಜಿಲ್ಲೆಯ ಸಾಯಿಶೇಖರ್ ಬಿ ಎನ್ನುವವರು https://saishekharbb.blogspot.com ಈ ಜಾಲತಾಣದ ಮೂಲಕ ಪ್ರತಿನಿತ್ಯ ಮುಂಗಾರು ಮಾರುತಗಳ ಚಲನೆ ಸ್ಥಿತಿ , ವಾಯುಭಾರ ಕುಸಿತದ ವಿವರ ಮತ್ತು ರಾಜ್ಯದ ಜಿಲ್ಲಾವಾರು ಮಳೆ ಮುನ್ಸೂಚನೆಯನ್ನು ಅಂಕಣಗಳ ಮೂಲಕ ರೈತರಿಗೆ ತಿಳಿಸುತ್ತಿದ್ದಾರೆ ನೀವು ಈ ವೆಬ್ಸೈಟ್ ಭೇಟಿ ಮಾಡಿ ಮಳೆ ಮುನ್ಸೂಚನೆ ಮಾಹಿತಿಯನ್ನು ಪಡೆಯಬವುದು.

3. windy ಅಪ್ಲಿಕೇಶನ್:

https://play.google.com/store/apps/details?id=com.windyty.android ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ ಮಳೆ ಮಾರುತಗಳ ಚಲನೆ ಮತ್ತು ಮಳೆ ಬರುವ ಸಾಧ್ಯತೆ, ತಾಪಮಾನ, ಗಾಳಿಯ ವೇಗ ಇತ್ಯಾದಿ ಮಾಹಿತಿಯನ್ನು ತಿಳಿಯಬವುದು.

4. ವರುಣ ಮಿತ್ರ

ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರುಣ ಮಿತ್ರ ಸಹಾಯವಾಣಿ ಇದಾಗಿದ್ದು, ಆಂಡ್ರಾಯ್ಡ್ ಮೊಬೈಲ್/ಸ್ಕ್ರಿನ್ ಟಚ್ ಮೊಬೈಲ್ ಹೊಂದಿಲ್ಲದವರು/ಬಳಕೆ ಮಾಡಲು ಬರದವರು ನೇರವಾಗಿ 92433454333 ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರು, ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾಯತ್ ಹೆಸರನ್ನು ತಿಳಿಸಿ ನಿಮ್ಮ ಭಾಗದ ಮಳೆ ಮುನ್ಸೂಚನೆ ವಿವರವನ್ನು ಪಡೆಯಬವುದು.