Bangalore weather-ವಾಯುಭಾರ ಕುಸಿತ: ಡಿಸೆಂಬರ್ 17 ರ ನಂತರ ಈ ಭಾಗಗಳಲ್ಲಿ ಮಳೆ ಸಾಧ್ಯತೆ!

Karnataka weathr forecast:ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರು ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ತಿಳಿಸಲಾಗಿದೆ.

Bangalore weather-ವಾಯುಭಾರ ಕುಸಿತ: ಡಿಸೆಂಬರ್ 17 ರ ನಂತರ ಈ ಭಾಗಗಳಲ್ಲಿ ಮಳೆ ಸಾಧ್ಯತೆ!
Bangalore weather report

ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರು ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ತಿಳಿಸಲಾಗಿದೆ.

ಈ ನಡುವ ಶ್ರೀಲಂಕ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದಾಗಿ ರಾಜ್ಯದ ಕೇಲವು ಭಾಗಳಲ್ಲಿ ಮಳೆಯಾಗುವ ಸಾಧ್ಯೆತೆಯಿದ್ದು ಹಲವು ಜಿಲ್ಲೆಗಳಲ್ಲಿ ಮೋಡ ಮುಚ್ಚಿದ ವಾತಾವರಣ ಇರುತ್ತದೆ.

ಇದನ್ನೂ ಓದಿ: Crop loan-ರಾಜ್ಯ ಸರಕಾರದಿಂದ ರೈತರ ಸಾಲದ ಬಡ್ಡಿ ಮನ್ನಾ! ಈ ಪಟ್ಟಿಯಲ್ಲಿರುವವರಿಗೆ ಪ್ರಯೋಜನ

Bangalore weather-ನಾಳೆ ಬೆಳಗ್ಗೆ(17.12.2023) 8-00 ಗಂಟೆವರೆಗಿನ ರಾಜ್ಯದ ಹವಾಮಾನ ಮುನ್ಸೂಚನೆ ವಿವರ ಹೀಗಿದೆ:

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇರುತ್ತದೆ. 

ಚಿಕ್ಕಮಗಳೂರು, ಕೊಡಗು, ಹಾಸನ, ಜಿಲ್ಲೆಗಳ ಅಲ್ಲಲ್ಲಿ ಸಹ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ರಾಮನಗರ, ಬೆಂಗಳೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, , ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. 

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

Cyclone news-ಡಿಸೆಂಬರ್ 17 ರ ನಂತರ ಈ ಭಾಗಗಳಲ್ಲಿ ಮಳೆ ಸಾಧ್ಯತೆ:

ಶ್ರೀಲಂಕಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆಯು ಪಥ ಬದಲಿಸುವ ಲಕ್ಷಣಗಳಿದ್ದು, ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆ ಇದೆ. ಇದರಿಂದ ಡಿಸೆಂಬರ್ 17ರಿಂದ ದಕ್ಷಿಣ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇರುತ್ತದೆ(ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ)

Next 7 days weather forecast-16-12-2023 ರಿಂದ 24-12-2023 ರ ವರೆಗಿನ ಮಳೆ ಮುನ್ಸೂಚನೆ:

ಇದನ್ನೂ ಓದಿ: HSRP number plate: ಫೆಬ್ರವರಿ 2024ರ ಒಳಗಾಗಿ ನಿಮ್ಮ ಬೈಕ್, ವಾಹನಗಳಿಗೆ ಈ ರೀತಿಯ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕ ಮಳೆ ಮುನ್ಸೂಚನೆ ಪ್ರಕಾರ ಈ ಮೇಲಿನ ನಕ್ಷೆಯಲ್ಲಿ ನೀಲಿ ಬಣ್ಣದಿಂದ ಗುರುತಿಸಿದ ಭಾಗಗಳಲ್ಲಿ ಮಳೆ ಮುನ್ಸೂಚನೆಯನ್ನು ನೀಡಿದ್ದು ಉಳಿದ ಭಾಗಗಳಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣದಿಂದ ಕೂಡಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Annabhagya amount-ಈ ಪಟ್ಟಿಯಲ್ಲಿರುವವರಿಗೆ ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!