Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!

January 4, 2026 | Siddesh
Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!
Share Now:

ನಮ್ಮ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಯಶಸ್ವಿನಿ ಯೋಜನೆಯನ್ನು(Yashaswini Card Application) ಜಾರಿಗೆ ತರಲಾಗಿದ್ದು 2025-26 ನೇ ಸಾಲಿನಲ್ಲಿ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಬಹುತೇಕ ಜನರಿಗೆ ಯಶಸ್ವಿನಿ ಯೋಜನೆಯ(Yashaswini Yojane Application) ಕುರಿತು ಮಾಹಿತಿಯಿದ್ದು ಇದರ ಪ್ರಯೋಜನವನ್ನು ಪಡೆಯಲು ಪ್ರತಿ ವರ್ಷ ನಿಗದಿತ ಶುಲ್ಕವನ್ನು ಪಾವತಿಸಿ ಕಾರ್ಡನ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಬೇಕಾಗುತ್ತದೆ ಇಂದಿನ ಅಂಕಣದಲ್ಲಿ ಸಾರ್ವಜನಿಕರು ಯಶಸ್ವಿನಿ ಕಾರ್ಡ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ನೋಂದಣಿ ಮಾಡಿಕೊಳ್ಳಲು ಎಷ್ಟು ಶುಲ್ಕವನ್ನು ಪಾವತಿಸಬೇಕು? ಯಾರೆಲ್ಲೆ ನೋಂದಣಿ ಮಾಡಿಕೊಳ್ಳಲು ಅರ್ಹರು? ಎನ್ನುವ ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

ಕರ್ನಾಟಕ ರಾಜ್ಯ ಸರಕಾರದಿಂದ ಸಹಕಾರ ಇಲಾಖೆಯ ಮೂಲಕ ಸಾರ್ವಜನಿಕರಿಗೆ ಅತೀ ಕಡಿಮೆ ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡಿ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಲು "ಯಶಸ್ವಿನಿ ಯೋಜನೆಯನ್ನು/Yashaswini Scheme" ಅನುಷ್ಥಾನ ಮಾಡಲಾಗುತ್ತಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾರ್ವಕನಿಕರು ಅನುಸರಿಸಬೇಕಾದ ಅವಶ್ಯಕ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

Yashaswini Yojane-2025-26ನೇ ಸಾಲಿಗೆ ಮುಂದುವರೆಸಿ ಅಧಿಕೃತ ಆದೇಶ ಪ್ರಕಟ:

2025-26ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿಯನ್ನು ಮಾಡಿಕೊಳ್ಳಲು ಸಹಕಾರಿ ಸಂಘಗಳಿಗೆ ಈ ಯೋಜನೆಯನ್ನು ಮುಂದುವರೆಸಿರುವ ಬಗ್ಗೆ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ರಂಗನಾಥ ಜಿ ಅವರು ಅಧಿಕೃತ ಆದೇಶವನ್ನು ಹೊರಡಿಸಿ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

Yashaswini Card Last Date-ನೋಂದಣಿ ಅವಧಿ:

ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿಯನ್ನು ಮಾಡಿಕೊಳ್ಳಲು ದಿನಾಂಕ: 03 ಜನವರಿ 2026 ರಿಂದ ಪ್ರಾರಂಭವಾಗಿ ದಿನಾಂಕ: 31 ಮಾರ್ಚ 2026 ರವರೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Yashaswini Scheme Eligibility-ಯಶಸ್ವಿನಿ ಕಾರ್ಡ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಯಶಸ್ವಿನಿ ಯೋಜನೆಯಡಿ ನಿಗದಿತ ಶುಲ್ಕವನ್ನು ಪಾವತಿ ಮಾಡಿ ನೋಂದಣಿಯನ್ನು ಮಾಡಿಕೊಂಡು ಯಶಸ್ವಿನಿ ಕಾರ್ಡ ಅನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಹೀಗಿದೆ:

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರು ರಾಜ್ಯದಲ್ಲಿರುವ ಯಾವುದೇ ರೀತಿಯ ಸಹಕಾರಿ ಸಂಘದಲ್ಲಿ ಸದಸ್ಯರಾಗಿರಬೇಕು/ ಸಹಕಾರ ಸಂಘ/ಸೌಹಾರ್ದ ಸಹಕಾರಿಗಳು/ಸಹಕಾರ ಬ್ಯಾಂಕುಗಳು ಮತ್ತು ಗ್ರಾಮೀಣ ಸ್ವ-ಸಹಾಯ ಗುಂಪುಗಳಲ್ಲಿರುವ ಸದಸ್ಯರು ಕನಿಷ್ಠ 03 ತಿಂಗಳುಗಳ ಮುಂಚೆ ಸದಸ್ಯತ್ವವನ್ನು ಹೊಂದಿರಬೇಕು

ಆರ್ಥಿಕವಾಗಿ ಅಭಿವೃದ್ದಿಯನ್ನು ಹೊಂದಿರುವವರು ಮತ್ತು ಕೇಂದ್ರ, ರಾಜ್ಯ ಸರಕಾರದ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸಲು ಬರುವುದಿಲ್ಲ.

ಅರ್ಜಿದಾರರು ಖಾಸಗಿ ಕಂಪನಿ ಅಥವಾ ಇನ್ನಿತರೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಮಾಸಿಕ ರೂ.30,000/-ಕ್ಕಿಂತ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

Yashaswini Yojane

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

Yashaswini Card Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ಸಾರ್ವಜನಿಕರು ಯಶಸ್ವಿನಿ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯಶಸ್ವಿನಿ ಕಾರ್ಡ ಸದಸ್ಯತ್ವ ನೋಂದಣಿಗಾಗಿ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ/ಸೂಸೈಟಿ ಅಥವಾ ನಿಮ್ಮ ಹಳ್ಳಿಯ KMF ಹಾಲಿನ ಡೈರಿ ಕಚೇರಿಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents For Yashaswini Card- ನೋಂದಣಿ ಮಾಡಿಕೊಳ್ಳಲು ಅವಶ್ಯಕ ದಾಖಲಾತಿಗಳು:

ಯಶಸ್ವಿನಿ ಯೋಜನೆಯಡಿ ಸಾರ್ವಜನಿಕರು ನೋಂದಣಿಯನ್ನು ಮಾಡಿಕೊಳ್ಳಲು ಒದಗಿಸಬೇಕಾದ ಅವಶ್ಯಕ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ ಪ್ರತಿ/Aadhar
  • ಪೋಟೋ/Photo
  • ಬ್ಯಾಂಕ್ ಪಾಸ್ ಬುಕ್/Bank Pass Book
  • ಕುಟುಂಬದ ರೇಶನ್ ಕಾರ್ಡ/Ration Card
  • ಮೊಬೈಲ್ ನಂಬರ್/Mobile

ಇದನ್ನೂ ಓದಿ: Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!

Yashashvini Card Fee-ಯಶಸ್ವಿನಿ ಕಾರ್ಡ ನೋಂದಣಿ ಶುಲ್ಕ:

ಕುಟುಂಬ ಒಂದಕ್ಕೆ ವಾರ್ಷಿಕ ರೂ.500/-ಗಳ ಶುಲ್ಕ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಕ್ಕೆ ಪ್ರತಿಯೊಬ್ಬ ಪ್ರತಿಯೊಬ್ಬ ಸದಸ್ಯರಿಗೆ ರೂ.100/- ಶುಲ್ಕ ಪಾವತಿ ಮಾಡಬೇಕು.

ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿಗಿ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಸದ್ದು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರದಿಂದಲೇ ವೆಚ್ಚ ಭರಿಸಲಾಗುತ್ತದೆ.

ಇದನ್ನೂ ಓದಿ: Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

Yashaswini Card Benefits- ಯಶಸ್ವಿನಿ ಕಾರ್ಡ ಮೂಲಕ ಯಾವೆಲ್ಲ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು?

ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರ್ತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುವಡಿಸಿ ಇತರ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು,

ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಗಳಿಗಾಗಲಿ ಅಥವಾ ಫಲಾನುಭವಿಗಳಿಗಾಗಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದಿಲ್ಲ.

ಎರಡು ಜೀವಂತ ಮಕ್ಕಳು ಅಥವಾ ಎರಡು ಹರಿಗೆಗೆ ಮಾತ್ರ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ದೊರೆಯುತ್ತದೆ.

ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ(Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುವುದು. ಉನ್ನತ ವಾರ್ಡ್/ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನುಸದರಿ ಫಲಾನುಭವಿಗಳೇ ಭರಿಸತಕ್ಕದ್ದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: